ಕೋಲಾರ : ಅಡುಗೆ ಎಣ್ಣೆ, ಇಂಧನ, ಗ್ಯಾಸ್ ಸಿಲಿಂಡರ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಹೊತ್ತಲ್ಲೇ ಜನಸಾಮಾನ್ಯರಿಗೆ ಮತ್ತೊಂದು ಶಾಕ್ ಎದುರಾಗಿದೆ. ನಂದಿನಿ ಹಾಲಿನ ದರ ಕೂಡ ಶೀಘ್ರವೇ ಏರಿಕೆಯಾಗಲಿದೆ ಎಂದು ಹೇಳಲಾಗಿದೆ.
ನಂದಿನಿ ಹಾಲಿನ ದರ ಏರಿಕೆ ಕುರಿತು ಕೋಲಾರ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ, ಕಾಂಗ್ರೆಸ್ ಶಾಸಕ ಕೆ.ವೈ. ನಂಜೇಗೌಡ ಸುಳಿವು ನೀಡಿದ್ದು, ನಂದಿನಿ ಹಾಲಿನ ದರ 5 ರೂ. ಏರಿಸಿ, ಆ ಹಣವನ್ನು ರೈತರಿಗೆ ಕೊಡಲು ಚಿಂತನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಈ ಮೂಲಕ ಶೀಘ್ರದಲ್ಲೇ ನಂದಿನಿ ಹಾಲಿನ ದರ ಏರಿಕೆಯಾಗುವ ಸಾಧ್ಯತೆ ಎಂದು ಹೇಳಲಾಗಿದೆ.
1000 ಮಿ.ಲೀ ಹಾಲಿಗೆ 50 ಮಿಲೀ ಹಾಲನ್ನು ಹೆಚ್ಚುವರಿಯಾಗಿ ಸೇರಿಸಿ ಮಾರಾಟ ಮಾಡಲಾಗುತ್ತದೆ. ಪ್ರಸ್ತುತ ಲೀಟರ್‌ಗೆ 44 ರೂ ಇರುವ ಒಂದು ಲೀ ಹಾಲಿನ ಬೆಲೆಯು ಬುಧವಾರದಿಂದ 46 ರೂ ಆಗಲಿದೆ. ಒಂದು ಲೀಟರ್ ಬದಲು 1050 ಮಿಲೀ ಹಾಲಿನ ಪ್ಯಾಕೆಟ್ ಲಭ್ಯವಾಗಲಿದೆ. ಹಾಗೆಯೇ 22 ರೂ ದರವಿರುವ 500 ಮಿ.ಲೀ ಪ್ಯಾಕೆಟ್ ಹಾಲಿಗೂ 50 ಎಂಎಲ್ ಹೆಚ್ಚುವರಿ ಸೇರಿಸಲಾಗುತ್ತದೆ. ಇನ್ನು ಮುಂದೆ 550 ಮಿಲೀ ಹಾಲು ಲಭ್ಯವಾಗಲಿದ್ದು, 24 ರೂ.ಗೆ ಮಾರಾಟವಾಗಲಿದೆ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭೀಮಾ ನಾಯ್ಕ್, ಕರ್ನಾಟಕ ಹಾಲು ಮಂಡಳಿಯು ದೇಶದಲ್ಲಿ ಹಾಲು ಸಂಗ್ರಹದಲ್ಲಿ ಎರಡನೇ ಸ್ಥಾನದಲ್ಲಿದ್ದು, ದಕ್ಷಿಣ ಭಾರತದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಹೇಳಿದರು. ಪ್ರತಿ ನಿತ್ಯ 98.17 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಸದ್ಯದಲ್ಲಿಯೇ ಇದು 1 ಕೋಟಿ ಲೀಟರ್ ಸಂಗ್ರಹದ ಮೈಲುಗಲ್ಲನ್ನು ತಲುಪಲಿದೆ. ಇದು ಹೊಸ ದಾಖಲೆಯಾಗಲಿದೆ. ಇದಕ್ಕೆ ರಾಜ್ಯದ 27 ಲಕ್ಷ ಹಾಲು ಉತ್ಪಾದಕರು ಕಾರಣ ಎಂದರು.
ಸದ್ಯದ ಶೇಖರಣೆಯಲ್ಲಿ 30 ಲಕ್ಷ ಲೀಟರ್ ಅನ್ನು ಪೌಡರ್‌ಗೆ ಕಳುಹಿಸುತ್ತಿದ್ದೇವೆ. ಇದರಲ್ಲಿ ನಮ್ಮ ಬಂಡವಾಳ ಸ್ವಲ್ಪ ಹಿನ್ನಡೆ ಆಗುತ್ತಿದೆ. ಆದರೆ ಇದರಿಂದಾಗಿ 27 ಲಕ್ಷ ಹಾಲು ಉತ್ಪಾದಕರು ಮತ್ತು ಗ್ರಾಹಕರಿಗೆ ತೊಂದರೆಯಾಗಬಾರದು. ಇಬ್ಬರು ಕೂಡ ನಮಗೆ ಎರಡು ಕಣ್ಣಿನಂತೆ. ಈ ಕಾರಣದಿಂದ ಹಾಲಿನ ದರ ಹೆಚ್ಚಿಸಿದರೂ, ಅದರ ಜತೆಗೆ ಪ್ಯಾಕೆಟ್‌ಗಳಲ್ಲಿನ ಹಾಲಿನ ಪ್ರಮಾಣವನ್ನು ಸಹ ಹೆಚ್ಚಿಸಿದ್ದೇವೆ ಎಂದು ಹೇಳಿದರು.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now