spot_img
spot_img

ವಾಟ್ಸಾಪ್ ಗ್ರೂಪ್​ ಚಾಟ್​ನಲ್ಲಿ ಹೊಸ ಇನ್ಟ್ರೆಸ್ಟಿಂಗ್​ ಫೀಚರ್

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ವಾಟ್ಸಾಪ್​ನಲ್ಲಿ ಮತ್ತೊಂದು ಹೊಸ ಫೀಚರ್​ ಅನ್ನು ಪರಿಚಯಿಸಲಾಗಿದೆ. ಇದು ಗ್ರೂಪ್ ಚಾಟ್​ಗೆ ಸಂಬಂಧಿಸಿದ್ದಾಗಿದ್ದು, ಬಹಳ ಉಪಯುಕ್ತವಾಗಿದೆ.
ವಾಟ್ಸಾಪ್​ ಬಳಕೆದಾರರಿಗೆ ಸಿಹಿ ಸುದ್ದಿ. ಜನಪ್ರಿಯ ಇನ್​ಸ್ಟಂಟ್​ ಮೆಸೇಜಿಂಗ್​ ಆ್ಯಪ್​ ವಾಟ್ಸಾಪ್​ ಮತ್ತೊಂದು ಹೊಸ ವೈಶಿಷ್ಟ್ಯವನ್ನು ತಂದಿದೆ. ‘ಟೈಪಿಂಗ್ ಇಂಡಿಕೇಟರ್’ ಎಂಬ ಈ ಫೀಚರ್​ ಬಳಕೆದಾರರಿಗೆ ರಿಯಲ್​ ಟೈಂ ಚಾಟ್ ಅನ್ನು ಹೆಚ್ಚು ಸುಲಭಗೊಳಿಸುತ್ತದೆ. ವಿಶೇಷವಾಗಿ ಈ ವೈಶಿಷ್ಟ್ಯದ ಸಹಾಯದಿಂದ ಗ್ರೂಪ್​ ಚಾಟ್‌ನಲ್ಲಿ ಯಾವುದೇ ಗೊಂದಲ ಇರುವುದಿಲ್ಲ. ಕಂಪನಿಯು ಈ ಅಪ್​ಡೇಟ್​ ಬಗ್ಗೆ ಇತ್ತೀಚೆಗೆ ಮಾಹಿತಿ ನೀಡಿದೆ.
ಈ ಫೀಚರ್ ಮೂಲಕ ಸಕ್ರಿಯವಾಗಿ ಚಾಟ್ ಮಾಡುವ ವ್ಯಕ್ತಿ ಯಾವಾಗ ಟೈಪ್ ಮಾಡುತ್ತಿದ್ದಾನೆ ಎಂಬುದನ್ನು ಬಳಕೆದಾರರು ಸುಲಭವಾಗಿ ತಿಳಿದುಕೊಳ್ಳಬಹುದು. ಅಂದರೆ ಈಗ ಯಾರಾದರೂ ಸಂದೇಶವನ್ನು ಟೈಪ್ ಮಾಡುತ್ತಿದ್ದರೆ.. ವಿಜುವಲ್​ ಇಂಡಿಕೇಟರ್ ಜೊತೆಗೆ ಟೈಪಿಂಗ್ ಇಂಡಿಕೇಟರ್ ಕೂಡ ಚಾಟ್ ಪರದೆಯಲ್ಲಿ ಕಾಣಿಸಿಕೊಳ್ಳುತ್ತದೆ. ಇದರೊಂದಿಗೆ, ಬಳಕೆದಾರರು ಯಾರು ಸಂದೇಶವನ್ನು ಟೈಪ್ ಮಾಡುತ್ತಿದ್ದಾರೆ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ಹೀಗಾಗಿ ಇತರರು ಸಹ ಸುಲಭವಾಗಿ ಚಾಟ್ ಮಾಡಬಹುದಾಗಿದೆ.
ಮೆಟಾ-ಮಾಲೀಕತ್ವದ ವಾಟ್ಸಾಪ್​ ಈ ಅಪ್​ಡೇಟ್​ ಬಗ್ಗೆ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಇದರ ಪ್ರಕಾರ.. ಇನ್ನು ಮುಂದೆ ವಾಟ್ಸಪ್​ನಲ್ಲಿ ಮೆಸೇಜ್​ ಟೈಪ್ ಮಾಡುವಾಗ ಟೈಪಿಂಗ್ ಇಂಡಿಕೇಟರ್ ವೈಶಿಷ್ಟ್ಯವು ‘…’ ಎಂಬ ವಿಜುವಲ್​ ಇಂಡಿಕೇಟರ್ ಜೊತೆಗೆ ಕಾಣಿಸಿಕೊಳ್ಳುತ್ತದೆ. ಅದು ಟೈಪಿಂಗ್ ಮಾಡುತ್ತಿರುವ ಬಳಕೆದಾರರ ಪ್ರೊಫೈಲ್ ಇಮೇಜ್‌ನೊಂದಿಗೆ ಚಾಟ್ ಸ್ಕ್ರೀನ್​ನ ಕೆಳಗೆ ಕಾಣಿಸಿಕೊಳ್ಳುತ್ತದೆ ಎಂದು ಕಂಪನಿ ತಿಳಿಸಿದೆ.
ಈ ವೈಶಿಷ್ಟ್ಯವು ಬಳಕೆದಾರರ ಪ್ರೊಫೈಲ್ ಇಮೇಜ್ ಅನ್ನು ಸಹ ತೋರಿಸುತ್ತದೆ. ಇದು ಗ್ರೂಪ್​ ಚಾಟ್ ಬಳಕೆದಾರರಿಗೆ ವಿಶೇಷವಾಗಿ ಉಪಯುಕ್ತವಾಗಿದೆ. ಇದರೊಂದಿಗೆ ಗ್ರೂಪ್ ಚಾಟ್‌ನಲ್ಲಿ ಒಂದೇ ಬಾರಿಗೆ ಎಷ್ಟು ಮಂದಿ ಚಾಟ್ ಮಾಡಿದರೂ ಗೊಂದಲ ಇರುವುದಿಲ್ಲ. ಮೊದಲು ಸಕ್ರಿಯ ಚಾಟ್‌ನಲ್ಲಿ ಯಾರು ಟೈಪ್ ಮಾಡುತ್ತಿದ್ದಾರೆ ಎಂದು ತಿಳಿಯಲು ಮೇಲಿನ ಬ್ಯಾನರ್‌ನಲ್ಲಿ ‘ಟೈಪಿಂಗ್’ ಮಾತ್ರ ಗೋಚರಿಸುತ್ತಿತ್ತು.
ಈ ವೈಶಿಷ್ಟ್ಯದ ಮೊದಲ ಅಪ್​ಡೇಟ್​ ಅನ್ನು ಅಕ್ಟೋಬರ್ ತಿಂಗಳಲ್ಲಿ ಮಾಡಲಾಗಿತ್ತು. ಆ ಸಮಯದಲ್ಲಿ ಇದು ಆಯ್ದ ಬೀಟಾ ಪರೀಕ್ಷಕರಿಗೆ ಮಾತ್ರ ಲಭ್ಯವಿತ್ತು. ಆದರೂ ಈ ‘ಟೈಪಿಂಗ್ ಇಂಡಿಕೇಟರ್’ ವೈಶಿಷ್ಟ್ಯವು ಈಗ ಎಲ್ಲಾ iOS ಮತ್ತು Android ಬಳಕೆದಾರರಿಗೆ ವಾಟ್ಸಾಪ್​ನಲ್ಲಿ ಲಭ್ಯವಿದೆ ಎಂದು ಕಂಪನಿಯು ಘೋಷಿಸಿದೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

UN AID TO GAZA : ಪರಿಹಾರ ಸಾಮಗ್ರಿ ಹೊತ್ತ 1,000 ಟ್ರಕ್ ಗಾಜಾ ಪ್ರವೇಶ

United Nations News: ಕದನ ವಿರಾಮ ಜಾರಿಯಾಗಿದ್ದರಿಂದ ವಿಶ್ವಸಂಸ್ಥೆಯ ಕಾರ್ಯಕರ್ತರು GAZAದೊಳಕ್ಕೆ ಪರಿಹಾರ ಸಾಮಗ್ರಿ ತಲುಪಿಸುವ ಕಾರ್ಯಗಳನ್ನು ಪುನಾರಂಭಿಸಿದ್ದಾರೆ.ಇದಲ್ಲದೆ ಮನೆ ಮಠ ಕಳೆದುಕೊಂಡ ನಿರಾಶ್ರಿತರಾಗಿರುವ GAZA...

HIGH COURT : ಅವಾಚ್ಯ ಪದ ಬಳಕೆ ಆರೋಪ

Bangalore News: ಅವಾಚ್ಯ ಪದ ಬಳಕೆ ಮಾಡಿರುವ ಆರೋಪ ಪ್ರಕರಣದಲ್ಲಿ ವಿಧಾನಪರಿಷತ್​ ಸದಸ್ಯ ಸಿ.ಟಿ.ರವಿ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ HIGH COURT ಮಧ್ಯಂತರ ಆದೇಶ...

FARMER SUCCESS STORY : ದೇಶಿ ಬೀಜಗಳ ಸಂರಕ್ಷಣೆಗೆ ಪಣ, 18 ತಳಿಗಳ ಜೋಳ ಬೆಳೆದ ರೈತ

Belgaum News: ಸಗಣಿ, ಎರೆ ಹುಳು - ಹಸಿರು ಎಲೆಯಂತಹ ಸಾವಯವ ಗೊಬ್ಬರ ಬಳಸಿ ದೇಶಿ ತಳಿಯ 18 ಬಗೆಯ ಜೋಳ ಬೆಳೆದ ರೈತನ ಬಗ್ಗೆ...

CUCUMBER CARROT PANCAKES : ಭರ್ಜರಿ ರುಚಿಯ ಸೌತೆಕಾಯಿ – ಗಜ್ಜರಿ ಪ್ಯಾನ್ ಕೇಕ್ಸ್ ಸಿದ್ಧಪಡಿಸೋದು ಹೇಗೆ ಗೊತ್ತಾ

Carrot Cucumber Pan Cake Recipe: ಸಂಜೆಯ ಸಮಯದಲ್ಲಿ ಅನೇಕರಿಗೆ ಏನನ್ನಾದರೂ ಸ್ನ್ಯಾಕ್ಸ್ ತಿನ್ನಬೇಕು ಅನಿಸುತ್ತದೆ. ಮಕ್ಕಳು ಶಾಲೆಯಿಂದ ಮನೆಗೆ ಬಂದಾಗ ಮಮ್ಮಿ ತಿನ್ನಲು ಏನಾದರೂ...