ಸಾತಂತ್ರ ಬಂದಾಗಿನಿಂದ ದೇಶದ 17 ಮಹಿಳಾ ಮುಖ್ಯಮಂತ್ರಿಯಾಗಿದ್ದಾರೆ. ಅತಿಶಿ ಸಂಪುಟದಲ್ಲಿ ಸುಲ್ತಾನ್ ಮಿರ್ಜಾ ಕ್ಷೇತ್ರ ಶಾಸಕ ಮುಕೇಶ್ ಅಹ್ಲಾವಾತ್ ಹೊಸಬರಾಗಿದ್ದಾರೆ. ಗೋಪಾಲ್ ರೈ, ಕೈಲಾಶ್ ಗೆಹ್ಲೋಟ್, ಸೌರಾಬ್ ಭಾರದ್ವಾಜ್ ಮತ್ತು ಇಮ್ರಾನ್ ಹುಸೈನ್ ಅವರೊಂದಿಗೆ 4 ಸಚಿವರೊಂದಿಗೆ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದೆ.
ಇದನ್ನೂ ಓದಿ : ವಂಚನೆ ಮಾಡಿದ ಬ್ಯಾಂಕ್ ಸಿಬ್ಬಂದಿಯೂ ಸೇರಿ 14 ಜನರು ; 74 ಕೋಟಿ ರೂಪಾಯಿಗಳು.!
ನವದೆಹಲಿ: ಹಿರಿಯ ಎಎಪಿ ಶಾಸಕಿ ಅತಿಶಿ ದೆಹಲಿಯ ಮುಖ್ಯಮಂತ್ರಿಯಾಗಿ ರಾಜ್ ನಿವಾಸದಲ್ಲಿ ಇಂದು ಪದಗ್ರಹಣ ಮಾಡಿದರು. ಅವರು ಐವರು ಸಂಪುಟದ ಸಹೋದ್ಯೋಗಿಗಳು ಕೂಡಾ ಪ್ರಮಾಣ ವಚನ ಸ್ವೀಕರಿಸಿದರು. ಸುಷ್ಮಾ ಸ್ವರಾಜ್, ಶೀಲಾ ದೀಕ್ಷಿತ್ ನಂತರ ಅತಿಶಿ ದೆಹಲಿಯ 3ನೇ ಸಿಎಂ ಆಗಿದ್ದಾರೆ. ಮಮತಾ ಬ್ಯಾನರ್ಜಿ ನಂತರ ಎರಡನೇ ಹಾಲಿ ಮಹಿಳಾ ಮುಖ್ಯಮಂತ್ರಿಯಾಗಿದ್ದಾರೆ.
ಅರವಿಂದ್ ಕೇಜ್ರಿವಾಲ್ ರಾಜೀನಾಮೆ ಹಿನ್ನಲೆಯಲಲಿ ಸರಳವಾಗಿ ಪದ ಗ್ರಹಣ ಸಮಾರಂಭ ನಡೆಯಿತು. ಸೆಪ್ಟೆಂಬರ್ 26-27 ರಂದು ಎರಡು ದಿನ ದೆಹಲಿ ವಿಧಾನಸಭೆಯ ವಿಶೇಷ ಅಧಿವೇಶನವನ್ನು ಆಡಳಿತರೂಢ AAP ಕರೆದಿದ್ದು, ನೂತನವಾಗಿ ಆಯ್ಕೆಯಾಗರುವ ಮುಖ್ಯಮಂತ್ರಿ ಬಹುಮತವನ್ನು ಸಾಬೀತುಪಡಿಸಲಿದ್ದಾರೆ. ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನಾ ಅತಿಶಿ, ಕೇಜ್ರಿವಾಲ್ ನಿವಾಸಕ್ಕೆ ಮಾತುಕತೆಗಾಗಿ ತೆರಳಿದಿದ್ದರು. ಮಾತುಕತೆ ಬಳಿಕ ಅತಿಶಿ ಮತ್ತಿತರ ಸಚಿವರು, ಪಕ್ಷದ ರಾಷ್ಟ್ರೀಯ ಸಂಚಾಲಕರೊಂದಿಗೆ ರಾಜ್ ನಿವಾಸಕ್ಕೆ ತೆರಳಿದರು.
ಇದನ್ನೂ ಓದಿ : ಅತ್ಯಾಚಾರ, ಲೈಂಗಿಕ ಕಿರುಕುಳ ಮತ್ತು ಕ್ರಿಮಿನಲ್ ಬೆದರಿಕೆ ಪ್ರಕರಣ : BJP ಶಾಸಕ.!
ದೆಹಲಿ ಕ್ಯಾಬಿನೆಟ್ ಮುಖ್ಯಮಂತ್ರಿ ಸೇರಿದಂತೆ ಗರಿಷ್ಠ 7 ಸಚಿವರನ್ನು ಹೊಂದಬಹುದು. ಆದರೆ, ಎಎಪಿ ಇಲ್ಲಿಯವರೆಗೂ 6 ಸಚಿವರನ್ನು ಮಾತ್ರ ಹೆಸರಿಸಿದೆ. ಏಳನೇ ಸಚಿವರ ಹೆಸರನ್ನು ಇನ್ನೂ ಘೋಷಿಸಿಲ್ಲ. ಆರಂಭದಲ್ಲಿ ಅತಿಶಿ ಮಾತ್ರ ಪ್ರಮಾಣವಚನ ಸ್ವೀಕರಿಸಬೇಕೆಂದು AAP ನಿರ್ಧರಿಸಿತ್ತು. ಆದರೆ ತದನಂತರ ಅವರ ಮಂತ್ರಿಮಂಡಲವೂ ಪ್ರಮಾಣವಚನ ಸ್ವೀಕರಿಸಲಿದೆ ಎಂದು ಹೇಳಲಾಯಿತು.
ದಲಿತ ಸಮುದಾಯಕ್ಕೆ ಸೇರಿದ ಅಹ್ಲಾವತ್ ಮೊದಲ ಬಾರಿಗೆ ಶಾಸಕರಾಗಿದ್ದು, ಸಮಾಜ ಕಲ್ಯಾಣ ಸಚಿವ ರಾಜ್ ಕುಮಾರ್ ಆನಂದ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಅವರು ಸೇರ್ಪೆಡೆಯಾಗಿದ್ದಾರೆ. ಆನಂದ್ ಏಪ್ರಿಲ್‌ನಲ್ಲಿ ಕೇಜ್ರಿವಾಲ್ ಸರ್ಕಾರ ಮತ್ತು ಎಎಪಿಗೆ ರಾಜೀನಾಮೆ ನೀಡಿದ್ದರು. ತರುವಾಯ 2024 ರ ಲೋಕಸಭೆ ಚುನಾವಣೆಗೂ ಮುನ್ನಾ ಬಿಜೆಪಿ ಸೇರಿದ್ದರು. ಅಹ್ಲಾವಾತ್ ಪ್ರಸ್ತುತ ಪಕ್ಷದ ರಾಜಸ್ಥಾನ ಘಟಕದ ಸಹ-ಪ್ರಭಾರಿಯಾಗಿದ್ದಾರೆ.
ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಹವಣಿಸುತ್ತಿರುವ ಎಎಪಿಗೆ ನಿರ್ಣಾಯಕ ಘಟ್ಟದಲ್ಲಿ ಅತಿಶಿ ಮುಖ್ಯಮಂತ್ರಿಯಾಗಿದ್ದು, ಸಾರ್ವಜನಿಕರ ಕಲ್ಯಾಣಕ್ಕಾಗಿ ಬಾಕಿ ಉಳಿದಿರುವ ಯೋಜನೆಗಳನ್ನು ತ್ವರಿತವಾಗಿ ಅನುಷ್ಟಾನಗೊಳಿಸಬೇಕಾದ ಹೊಣೆ ಅವರ ಮೇಲಿದೆ.