ಬೆಂಗಳೂರು : ರಾಜ್ಯದ ಎಲ್ಲಾ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ (Primary schools) “100 ದಿನಗಳ ಓದುವ ಆಂದೋಲನ” (Reading Program) ಕಾರ್ಯಕ್ರಮವನ್ನು ಇದೇ ನವಂಬರ್ 4 ರಿಂದ ಫೆಬ್ರವರಿ 11, 2025 ರವರೆಗೆ ಅನುಷ್ಠಾನಗೊಳಿಸುವಂತೆ ಶಾಲಾ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸುವುದರೊಂದಿಗೆ ಭಾಷಾ ಕೌಶಲ್ಯವನ್ನು ಅಭಿವೃದ್ಧಿಗೊಳಿಸುವ ಉದ್ದೇಶದಿಂದ 01 ರಿಂದ 08ನೇ ತರಗತಿಯ ವಿದ್ಯಾರ್ಥಿಗಳಿಗೆ 100 ದಿನಗಳ ಓದುವ ಆಂದೋಲನವನ್ನು ರಾಜ್ಯವ್ಯಾಪಿ ಎಲ್ಲಾ ಬಾಲವಾಟಿಕ/ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ 3 ಗುಂಪುಗಳಲ್ಲಿ ಅನುಷ್ಠಾನಗೊಳಿಸಲು 2023-24ನೇ ಸಾಲಿನ ನಲ್ಲಿ ಯೋಜಿಸಲಾಗಿದೆ.
NIPUN ಭಾರತ ಮಿಷನ್‌ನ ಆಶಯದಂತೆ FLN ಚಟುವಟಿಕೆಗಳನ್ನು ನಿರ್ವಹಿಸುವುದರ ಮೂಲಕ ಮಕ್ಕಳಲ್ಲಿ ಓದುವ, ಬರೆಯುವ ಹಾಗೂ ಅರ್ಥೈಸಿಕೊಳ್ಳುವ ಹಾಗೂ ಸಂತೋಷದಿಂದ ಭಾಷಾ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಬೇಕಾಗಿದೆ.
ಯೋಜಿಸಿರುವಂತೆ ಕೈಗೊಳ್ಳಬೇಕಾಗಿರುವ ಕಾರ್ಯ ಚಟುವಟಿಕೆಗಳ ವಿವರಗಳನ್ನೊಳಗೊಂಡ ವೇಳಾಪಟ್ಟಿಯನ್ನು ಮತ್ತು ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಸಂಬಂಧ ಸವಿವರ ಮಾರ್ಗಸೂಚಿಯನ್ನು ಈ ಸುತ್ತೋಲೆಯೊಂದಿಗೆ ಲಗತ್ತಿಸಿದ್ದು, ಶಾಲಾ ಶಿಕ್ಷಕರು ಅದರಂತೆ ವ್ಯವಸ್ಥಿತವಾಗಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಂತೆ ತಿಳಿಸಿದೆ.
ಉಪನಿರ್ದೇಶಕರು(ಆಡಳಿತ),ಶಾಲಾ ಶಿಕ್ಷಣ ಇಲಾಖೆ, ಇವರು ತಮ್ಮ ಕಛೇರಿಯ ಎಲ್ಲಾ ಅಧಿಕಾರಿಗಳಿಗೂ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸುವುದು. ತಮ್ಮ ಜಿಲ್ಲೆಯ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೂ ಸೂಕ್ತ ಸೂಚನೆ ನೀಡಿ ಶಾಲೆಗಳಲ್ಲಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳುವುದು.
ರಾಜ್ಯದ ಎಲ್ಲಾ ಸಿಟಿಇ ಪ್ರಾಂಶುಪಾಲರು ಹಾಗೂ ಅಧಿಕಾರಿವರ್ಗದವರು ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಎಲ್ಲಾ ಅನುಷ್ಠಾನ ಅಧಿಕಾರಿಗಳು ಶಾಲಾ ಭೇಟಿ ಸಂದರ್ಭದಲ್ಲಿ ಈ ಕಾರ್ಯಕ್ರಮದ ಅನುಷ್ಠಾನವನ್ನು ಅವಲೋಕಿಸುವುದು.
ಉಪನಿರ್ದೇಶಕರು(ಅಭಿವೃದ್ಧಿ), ಶಾಲಾ ಶಿಕ್ಷಣ ಇಲಾಖೆ, ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರು ಡಯಟ್ ಇವರುಗಳು ಶಾಲೆಗಳಲ್ಲಿ ಈ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಸಕ್ರಿಯವಾಗಿ ಪಾಲ್ಗೊಂಡು ಸೂಕ್ತ ಸೂಚನೆ ಹಾಗೂ ಮಾರ್ಗದರ್ಶನ ನೀಡುವುದು.
ಉಪನಿರ್ದೇಶಕರು(ಅಭಿವೃದ್ಧಿ) ಶಾಲಾ ಇಲಾಖೆರವರು ಡಯಟ್ ಉಪನ್ಯಾಸಕರುಗಳನ್ನು ಪ್ರತಿ ತಾಲ್ಲೂಕಿಗೆ ಒಬ್ಬರಂತೆ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸುವುದು.
ನೋಡಲ್ ಅಧಿಕಾರಿಗಳು ಓದುವ ಆಂದೋಲನದಲ್ಲಿ ಪ್ರತಿವಾರವು ಪಾಲ್ಗೊಂಡ ಮೂರು ಗುಂಪುಗಳ ಪಗತಿಯ ವರದಿ ಹಾಗೂ ಕಾರ್ಯಕ್ರಮಕ್ಕೆ ಸಂಬಂಧಿಸಿದ ಉತ್ತಮವಾದ ಫೋಟೋ ಮತ್ತು ವಿಡಿಯೋಗಳನ್ನು
ಉಪನಿರ್ದೇಶಕರು(ಅಭಿವೃದ್ಧಿ) ಶಾಲಾ ಇಲಾಖೆರವರು ಡಯಟ್ ಉಪನ್ಯಾಸಕರುಗಳನ್ನು ಪ್ರತಿ ತಾಲ್ಲೂಕಿಗೆ ಒಬ್ಬರಂತೆ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸುವುದು.
ನೋಡಲ್ ಅಧಿಕಾರಿಗಳು ಓದುವ ಆಂದೋಲನದಲ್ಲಿ ಪ್ರತಿವಾರವು ಪಾಲ್ಗೊಂಡ ಮೂರು ಗುಂಪುಗಳ ಪಗತಿಯ ವರದಿ ಹಾಗೂ ಕಾರ್ಯಕ್ರಮಕ್ಕೆ ಸಂಬಂಧಿಸಿದ ಉತ್ತಮವಾದ ಫೋಟೋ ಮತ್ತು ವಿಡಿಯೋಗಳನ್ನು https://docs.google.com/spreadsheets/d/1SMeKqUyKPCmOrkAY89XK79n RudxeS1aGZR 4cL8uYaU/edit?usp=sharing are ಕ್ರಮವಹಿಸುವುದು.
ಸದರಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸಿ ವಿದ್ಯಾರ್ಥಿಗಳಲ್ಲಿ ಓದುವ *ಹವ್ಯಾಸವನ್ನು ಹೆಚ್ಚಿಸಲು ಅವಕಾಶ ಕಲ್ಪಿಸಲು ಸೂಚಿಸಿದೆ.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now