spot_img
spot_img

13.5 ಕೋಟಿ ರೂ. ವಶಕ್ಕೆ ಪಡೆದ ಜಾರಿ : ನಿರ್ದೇಶನಾಲಯ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ನವದೆಹಲಿ: ಮುಂಬೈ, ಅಹಮದಾಬಾದ್​ ಸೇರಿ ಹಲವೆಡೆ ನಡೆಸಿದ ದಾಳಿಯಲ್ಲಿ ಇಡಿ ಭಾರಿ ಮೊತ್ತದ ಹಣವನ್ನು ವಶಕ್ಕೆ ಪಡೆದಿದೆ.
ಶುಕ್ರವಾರ ಜಾರಿ ನಿರ್ದೇಶನಾಲಯ ಭರ್ಜರಿ ಕಾರ್ಯಾಚರಣೆ ನಡೆಸಿದೆ. ಅಹಮದಾಬಾದ್​ ಮತ್ತು ಮುಂಬೈನ 7 ಕಡೆಗಳಲ್ಲಿ ದಾಳಿ ನಡೆಸಿರುವ ಇಡಿ ಅಧಿಕಾರಿಗಳು ಬರೋಬ್ಬರಿ ಹದಿಮೂರುವರೆ ಕೋಟಿ ರೂಪಾಯಿ (13.5 ಕೋಟಿ ರೂ.) ಅಕ್ರಮ ಹಣವನ್ನು ವಶಕ್ಕೆ ಪಡೆದಿದೆ.
ವಶಪಡಿಸಿಕೊಂಡ ಹಣವು ಮಹಾರಾಷ್ಟ್ರದ ಮಾಲೆಗಾಂವ್​ನ ನಾಶಿಕ್​ ಮರ್ಚೆಂಟ್​ ಕೋ-ಆಪರೇಟಿವ್​ ಬ್ಯಾಕ್​ (NAMCO) ಪ್ರಕರಣಕ್ಕೆ ಸಂಬಂಧಿಸಿದ್ದು ಎಂದು ವರದಿಯಾಗಿದೆ. NAMCO ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ನಿರ್ವಹಿಸಲಾದ ಖಾತೆಗಳ ಮೂಲಕ ಮಾಡಿದ “ಡೆಬಿಟ್ ವಹಿವಾಟುಗಳ” ಹಣದ ಜಾಡಿನ ಬಗ್ಗೆ ಇಡಿ ನಡೆಸಿದ ತನಿಖೆಯಲ್ಲಿ ಹೆಚ್ಚಿನ ಮೊತ್ತವನ್ನು 21 ಅಕೌಂಟ್​ಗಳಿಗೆ ವರ್ಗಾಯಿಸಲಾಗಿದೆ ಎಂದು ಗೊತ್ತಾಗಿದೆ. NAMCO ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ನಿರ್ವಹಿಸಲಾದ ಖಾತೆಗಳ ಮೂಲಕ ಮಾಡಿದ “ಡೆಬಿಟ್ ವಹಿವಾಟುಗಳ” ಬಗ್ಗೆ ಇಡಿ ತನಿಖೆ ನಡೆಸಿದಾಗ ಈ ಅಂಶ ಬಯಲಾಗಿದೆ. “ಅಲ್ಲದೆ ನೂರಾರು ಕೋಟಿಗಳಷ್ಟು ದೊಡ್ಡ ಮೊತ್ತವನ್ನು ವಿವಿಧ ಡಮ್ಮಿ ಘಟಕಗಳ ಖಾತೆಗಳಿಂದ ನಗದು ರೂಪದಲ್ಲಿ ತೆಗೆಯಲಾಗಿದೆ ಮತ್ತು ಅಹಮದಾಬಾದ್, ಮುಂಬೈ ಮತ್ತು ಸೂರತ್‌ನಲ್ಲಿರುವ ಅಂಗಡಿಗಳು ಮತ್ತು ಹವಾಲಾ ಆಪರೇಟರ್‌ಗಳಿಗೆ ಆ ಹಣವನ್ನು ವಿತರಿಸಲಾಗಿದೆ.” ಇದು ನವೆಂಬರ್‌ನಲ್ಲಿ ಈ ಪ್ರಕರಣದಲ್ಲಿ ನಡೆಸಿದ ಶೋಧ ಕಾರ್ಯಾಚರಣೆಯ ಮುಂದುವರಿದ ಭಾಗವಾಗಿದೆ ಎಂದು ಜಾರಿ ನಿರ್ದೇಶನಾಲಯ ಮಾಹಿತಿ ನೀಡಿದೆ.
ಇಡಿಯ ಮುಂಬೈ ವಲಯದ ತಂಡ ಈ ಶೋಧ ಕಾರ್ಯಾಚರಣೆ ನಡೆಸಿದೆ. “ಈ ಖಾತೆಗಳಲ್ಲಿ ನೂರಾರು ಕೋಟಿ ರೂಪಾಯಿಗಳ ವಹಿವಾಟುಗಳನ್ನು ಹೆಚ್ಚಾಗಿ ಆನ್‌ಲೈನ್ ಬ್ಯಾಂಕಿಂಗ್ ಚಾನಲ್‌ಗಳ ಮೂಲಕ ಜಮಾ ಮಾಡಲಾಗಿದೆ ಮತ್ತು ನಂತರ ವಿವಿಧ ಸಂಸ್ಥೆಗಳು ಮತ್ತು ಕಂಪನಿಗಳಿಗೆ ವರ್ಗಾಯಿಸಿರುವುದು ಬಯಲಾಗಿದೆ” ಎಂದು ಇಡಿ ಹೇಳಿದೆ.
ಜಾರಿ ನಿರ್ದೇಶನಾಲಯ (ಇಡಿ ದೆಹಲಿ, ಎನ್‌ಸಿಆರ್ ಮತ್ತು ಮುಂಬೈನಲ್ಲಿ ಶಿಲ್ಪಿ ಕೇಬಲ್ ಟೆಕ್ನಾಲಜೀಸ್ ಲಿಮಿಟೆಡ್ (ಎಸ್‌ಸಿಟಿಎಲ್) ಮತ್ತು ಅದರ ಪ್ರವರ್ತಕರಿಗೆ ಸೇರಿದ ಅನೇಕ ಸ್ಥಳಗಳಲ್ಲಿ ದಾಳಿ ನಡೆಸಿದ್ದು, 1.88 ಕೋಟಿ ರೂಪಾಯಿ ನಗದು ಮತ್ತು 2.28 ಕೋಟಿ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡಿದೆ ಎಂದು ಇಡಿ ವಲಯ ಕಚೇರಿ ತಿಳಿಸಿದೆ.
ಅಧಿಕಾರಿಗಳ ಪ್ರಕಾರ, ದೆಹಲಿ ವಲಯ ಕಚೇರಿಯು ಡಿಸೆಂಬರ್ 4 ರಂದು ಶಿಲ್ಪಿ ಕೇಬಲ್ ಟೆಕ್ನಾಲಜೀಸ್ ಲಿಮಿಟೆಡ್ (SCTL), ಆಗಿನ ಪ್ರವರ್ತಕರು ಮತ್ತು ನಿರ್ದೇಶಕರಾದ ಮನೀಶ್ ಗೋಯೆಲ್, ವಿಶಾಲ್ ಗೋಯೆಲ್ ಮತ್ತು ಇತರರಿಗೆ ಸೇರಿದ ದೆಹಲಿ, NCR ಮತ್ತು ಮುಂಬೈನ 18 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಿತ್ತು.
ಶೋಧದ ವೇಳೆ 1.88 ಕೋಟಿ ಮೌಲ್ಯದ ವಿವರಿಸಲಾಗದ ನಗದು, ಚಿನ್ನಾಭರಣಗಳು ರೂ. 2.28 ಕೋಟಿ ಮತ್ತು ಪ್ರವರ್ತಕರು ಹಲವಾರು ಕಂಪನಿಗಳ ಮೂಲಕ ಹೊಂದಿರುವ ಆಸ್ತಿ ಮತ್ತು ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ ವಿವಿಧ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ಮಾಹಿತಿ ನೀಡಿದೆ.

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

RAVI BASRUR : ‘ಪ್ರತಿಭೆಗಳನ್ನು ಪ್ರೋತ್ಸಾಹಿಸಿ, ನಿಮ್ಮ ಹೆಸರೇಳಿ ಬದುಕೊಳ್ತಾರೆ’

Bagalkote News: ಸಿದ್ದನಕೊಳ್ಳ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀ ಸಿದ್ದಶ್ರೀ ರಾಷ್ಟ್ರೀಯ ಉತ್ಸವ ಮತ್ತು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಮಾರಂಭ ಜರುಗಿತು. ಜ್ಯೋತಿ ಬೆಳಗಿಸುವ ಮೂಲಕ ಶಾಸಕ...

BUS FIRE INCIDENT : ಹೊತ್ತಿ ಉರಿದ ಬಸ್, ತೆಲಂಗಾಣದ ಓರ್ವ ಸಾವು

Mathura (Uttar Pradesh) News: ಉತ್ತರಪ್ರದೇಶದ ಮಥುರಾದಲ್ಲಿ ತೆಲಂಗಾಣದ 50ಕ್ಕೂ ಹೆಚ್ಚು ಜನರಿದ್ದ BUS​ವೊಂದು ಬೆಂಕಿಗಾಹುತಿಯಾಗಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ.ತೆಲಂಗಾಣದ ಜನರಿಂದ ತುಂಬಿದ್ದ ಬಸ್​ವೊಂದು ಮಥುರಾದಲ್ಲಿ...

NEW PRESIDENT FOR KPCC : ಕೆಪಿಸಿಸಿಗೆ ಪೂರ್ಣ ಪ್ರಮಾಣದ ಹೊಸ ಅಧ್ಯಕ್ಷರನ್ನು ಆದಷ್ಟು ಬೇಗ ನೇಮಕ ಮಾಡಲಿ

Bangalore News: ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ನನ್ನನ್ನು ನಾನು NEW PRESIDENT FOR KPCC ಎಂದು ಮಾಡಿ ಎಂದು ಹೇಳಿಲ್ಲ. ನಾವುಗಳೆಲ್ಲ ಸಚಿವರಾದ...

HOMEOWNERS NOTE TO THIEVES : ಸಂಕ್ರಾಂತಿಗೆ ಊರಿಗೆ ಹೋಗುವಾಗ ಜಾಣತನ ಮೆರೆದ ಮನೆ ಮಾಲೀಕ

Hyderabad News: ಈ ರೀತಿಯ ವಿಚಿತ್ರ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುವ ಜೊತೆಗೆ ಮನೆ ಮಾಲೀಕನ ಹಾಸ್ಯ ಮತ್ತು ಬುದ್ದಿವಂತಿಕೆಗೆ ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ.ಇಂತಹುದೇ...