spot_img
spot_img

13 ವರ್ಷದ ವೈಭವ್ ಸೂರ್ಯವಂಶಿ​ IPL​ನಲ್ಲಿ ಆಡಲು ಅರ್ಹ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

13 ವರ್ಷದ ವೈಭವ್ ಸೂರ್ಯವಂಶಿ ಇತ್ತೀಚಿಗೆ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಕ್ರಿಕೆಟ್ ಲೋಕದ ಗಮನ ಸೆಳೆದಿದ್ದರು. ಹರಾಜಿನಲ್ಲಿ ಮಾರಾಟವಾದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆ ಇದಕ್ಕೆ ಕಾರಣ. ಬಿಹಾರದ ಸಮಸ್ತಿಪುರದ ಈ ಬಾಲಕ 1.10 ಕೋಟಿ ರೂ.ಗೆ ಹರಾಜಾಗಿದ್ದಾರೆ. ರಾಜಸ್ಥಾನ್ ರಾಯಲ್ಸ್ ಇವರನ್ನು ಖರೀದಿಸಿದೆ.
ಆದರೆ, ಈಗ ಕ್ರಿಕೆಟ್ ಅಭಿಮಾನಿಗಳು ವೈಭವ್‌ ವಯಸ್ಸಿನ ಕುರಿತು ಚರ್ಚಿಸುತ್ತಿದ್ದಾರೆ. ಐಪಿಎಲ್‌ನಲ್ಲಿ ಆಡಲು ವಯಸ್ಸಿನ ಮಿತಿ ಇದೆಯೇ? ಎಂದು ಅವರು ಕೇಳುತ್ತಿದ್ದಾರೆ. ಐಪಿಎಲ್‌ನಲ್ಲಿ ಅಧಿಕೃತವಾಗಿ ಆಡಲು ಕನಿಷ್ಠ ವಯಸ್ಸಿನ ಅವಶ್ಯಕತೆ ಇಲ್ಲ. ಆಟಗಾರರ ಲಭ್ಯತೆಯ ನಿರ್ಧಾರಗಳನ್ನು ಫ್ರಾಂಚೈಸಿಗಳ ವಿವೇಚನೆಗಳಿಗೆ ಬಿಡಲಾಗುತ್ತದೆ.
ಪ್ರಸ್ತುತ 13 ವರ್ಷ, 8 ತಿಂಗಳ ವಯಸ್ಸಿನ ವೈಭವ್ ಸೂರ್ಯವಂಶಿ, 2025ರ ಐಪಿಎಲ್ ಸೀಸನ್​ನ ಆರಂಭದ ವೇಳೆಗೆ 14 ವರ್ಷಕ್ಕೆ ಕಾಲಿಡಲಿದ್ದಾರೆ. ಮುಂದಿನ ಸೀಸನ್​ನಲ್ಲಿ ರಾಜಸ್ಥಾನ ತಂಡ ಅವರನ್ನು ಕಣಕ್ಕಿಳಿಸುವ ಸಾಧ್ಯತೆಗಳು ತೀರಾ ಕಡಿಮೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟ್‌ ಪಂದ್ಯಗಳನ್ನು ಆಡಲು ಕನಿಷ್ಠ 15 ವರ್ಷ ತುಂಬಿರಬೇಕು. ಈ ನಿಯಮವನ್ನು 2020ರಲ್ಲಿ ಜಾರಿಗೆ ತರಲಾಗಿದೆ. ಹೀಗಿದ್ದರೂ ಅಸಾಧಾರಣ ಸಂದರ್ಭಗಳಲ್ಲಿ ಕ್ರಿಕೆಟ್ ಮಂಡಳಿಗಳು ತಮ್ಮ ದೇಶವನ್ನು ಪ್ರತಿನಿಧಿಸಲು 15 ವರ್ಷದೊಳಗಿನ ಆಟಗಾರರನ್ನು ಅನುಮತಿಸಲು ICCಯಿಂದ ವಿಶೇಷ ಅನುಮತಿ ಕೋರಬಹುದು.
ಆದರೆ ರಾಜಸ್ಥಾನದ ಕೋಚಿಂಗ್ ತಂಡದಲ್ಲಿ ರಾಹುಲ್ ದ್ರಾವಿಡ್ ಮತ್ತು ಕುಮಾರ ಸಂಗಕ್ಕಾರ ಅವರಂಥ ದಿಗ್ಗಜ ಆಟಗಾರರೊಂದಿಗೆ ಡ್ರೆಸ್ಸಿಂಗ್ ರೂಮ್‌ನಲ್ಲಿ ತೊಡಗಿಸಿಕೊಂಡಿರುವುದು ವೈಭವ್ ವೃತ್ತಿಜೀವನಕ್ಕೆ ತುಂಬಾ ಸಹಕಾರಿಯಾಗಲಿದೆ.
1996 ಮತ್ತು 2005ರ ನಡುವೆ ಪಾಕಿಸ್ತಾನ ತಂಡದಲ್ಲಿ 7 ಟೆಸ್ಟ್ ಮತ್ತು 16 ಏಕದಿನ ಪಂದ್ಯಗಳನ್ನಾಡಿರುವ ಹಸನ್ ರಜಾ, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿರುವ ಅತ್ಯಂತ ಕಿರಿಯ ಆಟಗಾರ. ಇವರು 14 ವರ್ಷ ಮತ್ತು 227 ದಿನಗಳ ವಯಸ್ಸಿನಲ್ಲಿ ಮೊದಲ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ್ದರು. ಆಗ ಐಸಿಸಿ ನಿಯಮಾವಳಿಗಳು ಇರಲಿಲ್ಲ ಎಂಬುದು ಗಮನಾರ್ಹ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

SHOBHA YATRA – ಜೈನ ಸಮುದಾಯದ ಅದ್ಧೂರಿ ಶೋಭಾಯಾತ್ರೆಗೆ ಶ್ರೀ ಸಿದ್ದಲಿಂಗ ಸ್ವಾಮೀಜಿಗಳಿಂದ ಚಾಲನೆ

Tumkur News: ತುಮಕೂರಿನಲ್ಲಿ ಜೈನ ಸಮುದಾಯದ ಅದ್ಧೂರಿ ಶೋಭಾಯಾತ್ರೆಗೆ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಚಾಲನೆ ನೀಡಿದರು.ನಗರದ ಮಹಾವೀರ ಭವನದ ಬಳಿಯಿಂದ ಹೊರಟ ಶೋಭಾಯಾತ್ರೆಯಲ್ಲಿ ಅಭಿನವ ಶ್ರೀಗಳನ್ನು...

VEGETABLE FARMERS PROBLEMS – ಮಾಯಕೊಂಡದಲ್ಲಿ ಕುಸಿದ ಬೆಳೆ-ಬೆಲೆ

Davangere News: ಜಿಲ್ಲೆಯ ಮಾಯಕೊಂಡ ಒಂದು ಕಾಲದಲ್ಲಿ ತರಕಾರಿ ಬೆಳೆಗೆ ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧಿ ಗಳಿಸಿತ್ತು. ಆದರೆ ಈಗ ಬೆಳೆ-ಬೆಲೆ ಎರಡೂ ಇಲ್ಲ. ಹಾಗಾಗಿ, ರೈತರು ರೋಸಿ...

Palace Flower Show : ಅರಮನೆ ಫಲಪುಷ್ಪ ಪ್ರದರ್ಶನಕ್ಕೆ ಸಚಿವ ಡಾ. ಹೆಚ್‌ ಸಿ ಮಹದೇವಪ್ಪ ಚಾಲನೆ

Mysore News: ಮೈಸೂರು ಅರಮನೆ ಮಂಡಳಿ ವತಿಯಿಂದ ಅರಮನೆ ಆವರಣದಲ್ಲಿ ಆಯೋಜಿಸಲಾಗಿದ್ದ “ಅರಮನೆ ಫಲಪುಷ್ಪ ಪ್ರದರ್ಶನ-2024” ಕಾರ್ಯಕ್ರಮ, ಛಾಯಾಚಿತ್ರ ಪ್ರದರ್ಶನ, ಬೊಂಬೆ ಮನೆ ಹಾಗೂ ಕುಸ್ತಿ...

INDIA FOREST INCREASED – ಭಾರತದಲ್ಲಿ 1,445 ಚದರ ಕಿ.ಮೀ ಅರಣ್ಯ ಹೆಚ್ಚಳ

INDIA FOREST NEWS : ಭಾರತದ ಅರಣ್ಯ ಸ್ಥಿತಿಗತಿ ವರದಿ ಪ್ರಕಾರ ದೇಶದಲ್ಲಿ ಅರಣ್ಯ ಸಂಪತ್ತು ವೃದ್ಧಿಸಿರುವುದು ಸಕಾರಾತ್ಮಕ ಬೆಳವಣಿಗೆಯಾದರೆ, ಪರಿಸರ ಸೂಕ್ಷ್ಮ ಪ್ರದೇಶ ಪಶ್ಚಿಮ...