spot_img
spot_img

7 ವರ್ಷಗಳಲ್ಲಿ 19 ಸಾವಿರ ಎಕರೆ ಅಕ್ರಮ ಅಫೀಮು ಬೆಳೆ ನಾಶ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಇಂಫಾಲ್: ಮಣಿಪುರದಲ್ಲಿ 19 ಸಾವಿರ ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ಅಫೀಮು ಬೆಳೆಯನ್ನು ನಾಶಪಡಿಸಲಾಗಿದೆ.

ಮಣಿಪುರ ಪೊಲೀಸರು ಸೇರಿದಂತೆ ವಿವಿಧ ಕಾನೂನು ಜಾರಿ ಸಂಸ್ಥೆಗಳು 2017ರಿಂದ 2024ರ ನಡುವೆ ರಾಜ್ಯದ 12 ಜಿಲ್ಲೆಗಳ 19,135.60 ಎಕರೆ ಪ್ರದೇಶದಲ್ಲಿ ಅಕ್ರಮವಾಗಿ ಬೆಳೆಯಲಾದ ಅಫೀಮು ಬೆಳೆಯನ್ನು ನಾಶಪಡಿಸಿವೆ ಎಂದು ಅಧಿಕೃತ ವರದಿಯೊಂದು ಸೋಮವಾರ ತಿಳಿಸಿದೆ.

ಮಣಿಪುರ ರಿಮೋಟ್ ಸೆನ್ಸಿಂಗ್ ಅಪ್ಲಿಕೇಶನ್ ಸೆಂಟರ್ (ಮಾರ್ಸಾಕ್) ಸಿದ್ಧಪಡಿಸಿದ ವರದಿಯ ಪ್ರಕಾರ, ಪರ್ವತಮಯ ಕಾಂಗ್ ಪೋಕ್ಪಿ ಜಿಲ್ಲೆಯಲ್ಲಿ, ಕಳೆದ ಏಳು ವರ್ಷಗಳಲ್ಲಿ (2017-2024) ಅತ್ಯಧಿಕ 4,454.4 ಎಕರೆ ಅಕ್ರಮ ಅಫೀಮು ಬೆಳೆಯನ್ನು ನಾಶಪಡಿಸಲಾಗಿದೆ.

ಉಖ್ರುಲ್​ನಲ್ಲಿ 3,348 ಎಕರೆ ಮತ್ತು ಚುರಾಚಂದ್ ಪುರದಲ್ಲಿ 2,713.8 ಎಕರೆ ಅಫೀಮು ಬೆಳೆ ನಾಶ ಪಡಿಸಲಾಗಿದೆ. ಮಾರ್ಸಾಕ್ ಇದು ಮಣಿಪುರ ಸರ್ಕಾರದ ಯೋಜನಾ ಇಲಾಖೆಯ ಅಡಿಯಲ್ಲಿ ಕೆಲಸ ಮಾಡುವ ಸ್ವಾಯತ್ತ ಸರ್ಕಾರಿ ಸಂಸ್ಥೆಯಾಗಿದೆ.

2021-22ರಲ್ಲಿ ಚಂದೇಲ್, ಚುರಾಚಂದ್ ಪುರ, ಕಾಮ್ ಜಾಂಗ್, ಕಾಂಗ್ ಪೋಕ್ಪಿ, ನೋನಿ, ಸೇನಾಪತಿ, ತಮೆಂಗ್ಲಾಂಗ್, ತೆಂಗ್ನೌಪಾಲ್, ಉಖ್ರುಲ್ ಈ ಒಂಬತ್ತು ಜಿಲ್ಲೆಗಳ 28,598.91 ಎಕರೆ ಪ್ರದೇಶದಲ್ಲಿ ಅಕ್ರಮ ಅಫೀಮು ಬೆಳೆಯಲಾಗಿತ್ತು. ಇದು 2023-24ರಲ್ಲಿ 11,288.1 ಎಕರೆಗೆ ಇಳಿದಿದೆ.

ಒಟ್ಟಾರೆಯಾಗಿ, 2022-2023 ರ ವರ್ಷಕ್ಕೆ ಹೋಲಿಸಿದರೆ 2023-2024 ರಲ್ಲಿ ರಾಜ್ಯದಲ್ಲಿ ಅಫೀಮು ಗಸಗಸೆ ಕೃಷಿಯು ಶೇಕಡಾ 32.13 ರಷ್ಟು ಕಡಿಮೆಯಾಗಿದೆ ಎಂದು ವರದಿ ತಿಳಿಸಿದೆ. 2021 ಮತ್ತು 2023 ರ ನಡುವೆ ಅಕ್ರಮ ಗಸಗಸೆ ಕೃಷಿಯಲ್ಲಿ ಎಕರೆವಾರು ಶೇಕಡಾ 60 ರಷ್ಟು ಕುಸಿತ ಕಂಡುಬಂದಿದೆ.

ಇತರ ಜಿಲ್ಲೆಗಳಾದ ತೆಂಗ್ನೌಪಾಲ್​ನಲ್ಲಿ 2,575 ಎಕರೆ, ಚಂದೇಲ್​ನಲ್ಲಿ 1,982.5 ಎಕರೆ, ಸೇನಾಪತಿಯಲ್ಲಿ 1,682 ಎಕರೆ ಮತ್ತು ಇಂಫಾಲ್ ಪೂರ್ವ ಜಿಲ್ಲೆಗಳಲ್ಲಿ 737.9 ಎಕರೆ ಅಫೀಮು ಬೆಳೆ ನಾಶಪಡಿಸಲಾಗಿದೆ. ರಾಜ್ಯದ 16 ಜಿಲ್ಲೆಗಳ ಪೈಕಿ 12 ಜಿಲ್ಲೆಗಳು ಹೆಚ್ಚಾಗಿ ಪರ್ವತ ಪ್ರದೇಶಗಳಲ್ಲಿವೆ.

ವರದಿಯ ಪ್ರಕಾರ ಅಕ್ರಮವಾಗಿ ಅಫೀಮು ಬೆಳೆಯಲಾದ 19,135.60 ಎಕರೆ ಪೈಕಿ 2020-21 ರಲ್ಲಿ 4,652 ಎಕರೆ ಮತ್ತು 2022-23 ರಲ್ಲಿ 4,305.10 ಎಕರೆ ಬೆಳೆ ನಾಶಪಡಿಸಲಾಗಿದೆ.

ಮಾರ್ಚ್ 29, 2022 ರಂದು ನಡೆದ ಮಾದಕವಸ್ತು ವಿರೋಧಿ ಕಾರ್ಯಪಡೆಯ ಮೊದಲ ಸಭೆಯ ನಂತರ ಕೈಗೊಂಡ ಕ್ರಮದ ಪ್ರಕಾರ, ಮಾರ್ಸಾಕ್ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (ಜಿಪಿಎಸ್) ಮತ್ತು ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನಗಳನ್ನು ಬಳಸಿಕೊಂಡು ಮಣಿಪುರದ ಬಹುತೇಕ ಜಿಲ್ಲೆಗಳಲ್ಲಿ ಅಫೀಮು ಗಸಗಸೆ ಕೃಷಿ ಪ್ರದೇಶಗಳ ವಾರ್ಷಿಕ ಮೇಲ್ವಿಚಾರಣೆ ನಡೆಸುತ್ತಿದೆ ಎಂದು ವರದಿ ತಿಳಿಸಿದೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

C T RAVI ARREST ISSUE – ಸಿ.ಟಿ ರವಿ ಫೇಕ್ ಎನ್ಕೌಂಟರ್ ಮಾಡುವ ಉದ್ದೇಶ ಪೊಲೀಸರಿಗೆ ಇತ್ತಾ?

Hubli News: "ತರಾತುರಿಯಲ್ಲಿ ಸಿ. ಟಿ. ರವಿ‌ ವಿರುದ್ಧ ಎಫ್​ಐಆರ್ ಮಾಡಲಾಗಿದೆ. ಕಾಮನ್ ಸೆನ್ಸ್ ಬೇಡ್ವಾ ಬೆಳಗಾವಿ ಕಮಿಷನರ್​ಗೆ. ಬೆಳಗಾವಿ ಕಮಿಷನರ್ ಅನ್​ಫಿಟ್ ಇದ್ದಾರೆ" ಎಂದು...

PM MODI TO ATTEND CHRISTMAS – ಪ್ರಧಾನಿ ಮೋದಿ ನಾಳೆ ಕ್ರಿಸ್ಮಸ್ ಆಚರಣೆಯಲ್ಲಿ ಭಾಗಿ

New Delhi News: ಸೋಮವಾರದಂದು ಪ್ರಧಾನಿ ನರೇಂದ್ರ ಮೋದಿ ಕ್ರಿಸ್​ಮಸ್ ಆಚರಣೆ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಕ್ಯಾಥೊಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾ (ಸಿಬಿಸಿಐ) ಸೋಮವಾರ ಸಂಜೆ...

BANDIPUR FOREST – ಬಂಡೀಪುರ ರಾತ್ರಿ ಸಂಚಾರ ನಿಷೇಧ ಸಮಸ್ಯೆ

BANDIPUR NEWS : ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ (BTR) ಮೂಲಕ ಹಾದು ಹೋಗುವ 24.7 ಕಿ.ಮೀ ವ್ಯಾಪ್ತಿಯಲ್ಲಿ ರಾತ್ರಿ ಸಂಚಾರ ನಿಷೇಧಕ್ಕೆ ಸಂಬಂಧಿಸಿದ ಸಮಸ್ಯೆಗಳು...

JAYADEVA HOSPITAL – ನೂತನ ಜಯದೇವ ಆಸ್ಪತ್ರೆ ಸಿಎಂ ಸಿದ್ದರಾಮಯ್ಯ ಉದ್ಘಾಟನೆ

Kalaburagi News: ಹೃದ್ರೋಗ ಆಸ್ಪತ್ರೆಯನ್ನು ಉದ್ಘಾಟಿಸುವ ಮುನ್ನ ಸಿದ್ದರಾಮಯ್ಯ, ಆಸ್ಪತ್ರೆಯ ನೀಲಿ ನಕಾಶೆಯನ್ನು ವೀಕ್ಷಿಸಿದರು. ಆಸ್ಪತ್ರೆಯನ್ನು ವಿಕ್ಷೀಸಿದ ಸಿದ್ದರಾಮಯ್ಯ ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆಯವರೊಂದಿಗೆ...