spot_img
spot_img

2024 ROUNDUP : ದಾವಣಗೆರೆ ಜಿಲ್ಲೆಯಲ್ಲಿ ನಡೆದ ಘಟನಾವಳಿಗಳು

spot_img
spot_img

Share post:

Davangere News:

ಹೊಸ ವರ್ಷಕ್ಕೆ ಕೆಲವೇ ದಿನಗಳು ಬಾಕಿ. 2025ರ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಜನ ಸಜ್ಜಾಗಿದ್ದಾರೆ. ಈ ಹಿನ್ನೆಲೆಯಲ್ಲಿ 2024ರಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ನಡೆದ ಪ್ರಮುಖ ಘಟನೆಗಳನ್ನು ಒಮ್ಮೆ ಮೆಲುಕು ಹಾಕೋಣ. ‌

Old age problem for massage:

ಎರಡು ತಿಂಗಳಿನಿಂದ ಮಾಸಾಶನ ಬಾರದಿದ್ದಕ್ಕೆ ನಂದಿತಾವರೆಯ ಗಿರಿಜಮ್ಮ ತೆವಳಿಕೊಂಡು ಕುಣೆಬೆಳಕೆರೆ ಗ್ರಾಮಕ್ಕೆ ಬಂದಿದ್ದರು. ಇದು ರಾಜ್ಯದಲ್ಲಿ ಭಾರೀ ಸುದ್ದಿಯಾಗಿತ್ತು.‌ ಕಾಲಿಲ್ಲದ ವೃದ್ಧೆಯೊಬ್ಬರು ಮಾಸಾಶನದ ಹಣಕ್ಕಾಗಿ 2 ಕಿಲೋ ಮೀಟರ್ ತೆವಳಿಕೊಂಡೇ ಬಂದಿದ್ದ ಘಟನೆ ಹರಿಹರ ತಾಲೂಕಿನ ಕುಣಿಬೆಳಕೆರೆ ಗ್ರಾಮದಲ್ಲಿ ನಡೆದಿತ್ತು.

Clean Survey Award:

ಕೇಂದ್ರ ಸರ್ಕಾರದ 2023ರ ಸ್ವಚ್ಛ ಸರ್ವೇಕ್ಷಣೆ ಸಮೀಕ್ಷೆಯಲ್ಲಿ ದಾವಣಗೆರೆ 6ನೇ ಸ್ಥಾನ ಗಿಟ್ಟಿಸಿಕೊಂಡಿತ್ತು. ರಾಜ್ಯದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ನಗರಗಳ ಪಟ್ಟಿಯ ಸ್ವಚ್ಛತೆಯ ವಿಚಾರದಲ್ಲಿ ರಾಜ್ಯಗಳ ರ‍್ಯಾಂಕ್​ನಲ್ಲಿ ದಾವಣಗೆರೆ 6ನೇ ಸ್ಥಾನ ಪಡೆದುಕೊಂಡಿತ್ತು. ಅಲ್ಲದೇ ಇದೇ ಮೊದಲ ಬಾರಿಗೆ ದಾವಣಗೆರೆ ಗಾರ್ಬೇಜ್ ಫ್ರೀ ಸಿಟಿಗಳ ಪಟ್ಟಿಯಲ್ಲಿ ಸ್ಟಾರ್ ರೇಟಿಂಗ್ ಅನ್ನೂ ಸಹ ಪಡೆದುಕೊಂಡಿದೆ. ಸ್ವಚ್ಛತೆಯಲ್ಲಿ ರಾಷ್ಟ್ರ ಮಟ್ಟದಲ್ಲಿ 169ನೇ ಸ್ಥಾನ ಪಡೆದುಕೊಂಡಿದೆ.

Detection of Counterfeit Network:

ಥೇಟ್ ಅಸಲಿ ನೋಟಿನಂತೆ ನಕಲಿ (ಖೋಟಾ) ನೋಟುಗಳನ್ನು ಪ್ರಿಂಟ್ ಮಾಡುತ್ತಿದ್ದ ಒಟ್ಟು ಆರು ಜನರನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದರು. ಬಂಧಿತರಿಂದ ಒಟ್ಟು 7.70 ಲಕ್ಷ ರೂ ಮೊತ್ತದ ಖೋಟಾ ನೋಟುಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಹರೀಶ್​(29), ಕುಬೇರಪ್ಪ(58), ಸಂದೀಪ(30), ಮನೋಜ್ ಗೌಡ(21), ಜೆ.ರುದ್ರೇಶ(39), ಕೃಷ್ಣನಾಯ್ಕ(28) ಎಂಬುವರನ್ನು ಬಂಧಿಸಿ ಜೈಲಿಗಟ್ಟಲಾಗಿತ್ತು.

Students who cleaned the toilet:

ದಾವಣಗೆರೆ ತಾಲೂಕಿನ ಮೆಳ್ಳೆಕಟ್ಟೆ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ಕೈಯಲ್ಲಿ ಶೌಚಾಲಯ ಸ್ವಚ್ಛಗೊಳಿಸಿ ಪೋಷಕರು ಆಕ್ರೋಶಕ್ಕೆ ಗುರಿಯಾಗಿದ್ದರು. ಮಕ್ಕಳ ಕೈಯಲ್ಲಿ ಶೌಚಾಲಯ ಸ್ವಚ್ಛಗೊಳಿಸಬಾರದೆಂಬ ಆದೇಶದ ಹೊರತು ಶೌಚಾಲಯ ಸ್ವಚ್ಛಗೊಳಿಸಿದ್ದರು. ಅದರ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದ್ದರಿಂದ ತಡಮಾಡದೇ ಶಾಲೆಯ ಬಳಿ ಜಮಾಯಿಸಿದ ಗ್ರಾಮಸ್ಥರು, ಶೌಚಾಲಯ ಸ್ವಚ್ಛ ಮಾಡಿದ್ದಾರೆಂದ ಹೇಳುವ ಶಿಕ್ಷಕಿಗೆ ಹಿಡಿಶಾಪ ಹಾಕಿದ್ದರು. ಘಟನೆ ಬಳಿಕ ಶಿಕ್ಷಕಿಯನ್ನು ಅಮಾನತು ಮಾಡಲಾಗಿತ್ತು.

Chincholi farmer who grew garlic:

ಯಾದಗಿರಿ ಜಿಲ್ಲೆಯ ಚಿಂಚೋಳ್ಳಿಯ ರೈತ ಹೊನ್ನಪ್ಪಗೌಡ ಶರಣಪ್ಪಗೌಡ ತಾರನಾಳ್ ಎಂಬವರು ದಾವಣಗೆರೆ ಮಾರುಕಟ್ಟೆಯಲ್ಲಿ ಐವತ್ತು ಚೀಲ ಬೆಳ್ಳುಳ್ಳಿ ಮಾರಾಟ ಮಾಡಿ ಒಟ್ಟು 16.2500 ಹಣ ಪಡೆದಿದ್ದರು. ಲಕ್ಷಾಂತರ ಲಾಭ ಗಳಿಸಿದ್ದಕ್ಕೆ ರೈತ ಸಂತಸ ವ್ಯಕ್ತಪಡಿಸಿದ್ದರು.

Gr.Pt. Fighting with a dead body near:

ಸ್ಮಶಾನ ಜಾಗ ನೀಡುವಂತೆ ಅಗ್ರಹಿಸಿ ಮೃತದೇಹವನ್ನು ಗ್ರಾಮ ಪಂಚಾಯಿತಿ ಕಚೇರಿಯಲ್ಲಿಟ್ಟು ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದರು. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕಂಸಾಗರದಲ್ಲಿ ಈ ಘಟನೆ ನಡೆದಿತ್ತು. ಕಂಸಾಗರ ಗ್ರಾಮ ಪಂಚಾಯತಿ ಕಚೇರಿಗೆ ದೌಡಾಯಿಸಿದ ಗ್ರಾಮಸ್ಥರು ಹಾಗು ಮೃತರ ಸಂಬಂಧಿಕರು ಪಂಚಾಯಿತಿಯಲ್ಲಿ ಮೃತದೇಹ ಇರಿಸಿ ಪ್ರತಿಭಟನೆ ಮಾಡಿ ಸ್ಮಾಶಾನಕ್ಕೆ ಸ್ಥಳ ನಿಗದಿ ಮಾಡುವಂತೆ ಮನವಿ ಮಾಡಿದ್ದರು.

Empty Shanti Sagar (Sulekere):

ಬರಗಾಲದ ಹಿನ್ನೆಲೆಯಲ್ಲಿ ಶಾಂತಿಸಾಗರ (ಸೂಳೆಕೆರೆ) ಖಾಲಿಯಾಗಿ ನೀರು ತಳಮಟ್ಟಕ್ಕೆ ಸೇರಿತ್ತು. ಕೆರೆಯಲ್ಲಿರುವ ಕುದುರೆ ಕಲ್ಲು ಎಂಬ ತೂಬಿನ ಕೆಳಗೆ ನೀರು ಇಳಿದಿದ್ದರಿಂದ ಈ ಬಾರಿ ಕ್ಷಾಮ ಕಟ್ಟಿಟ್ಟ ಬುತ್ತಿ ಎಂದು ಜನ ಮಾತನಾಡಿಕೊಳ್ಳುತ್ತಿದ್ದರು. ಸಾಕಷ್ಟು ಹಳ್ಳಿಗೆ ನೀರಿನ ಪ್ರಮುಖ ಸೆಲೆಯಾಗಿರುವ ಶಾಂತಿಸಾಗರದಲ್ಲಿ ಕೇವಲ 20 ದಿನಗಳಗಾಗುವಷ್ಟು ಮಾತ್ರ ನೀರಿದೆ ಎಂಬ ಆಘಾತಕಾರಿ ವಿಚಾರವನ್ನು ಅಂದಿನ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ ಹೊರಹಾಕಿದ್ದರು.

Lok Sabha Elections:

ಲೋಕಸಭಾ ಚುನಾವಣೆಯಲ್ಲಿ ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್​ ನಡುವೆ ಬಿಗ್​ ಫೈಟ್​ ನಡೆದಿತ್ತು. ಬಿಜೆಪಿಯಿಂದ ಜಿಎಂ ಸಿದ್ದೇಶ್ವರ್ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ್ ಸ್ಪರ್ಧಿಸಿದ್ದರೆ, ಕಾಂಗ್ರೆಸ್​ನಿಂದ ಸಚಿವ ಎಸ್.​ಎಸ್.ಮಲ್ಲಿಕಾರ್ಜುನ ಅವರ ಪತ್ನಿ ಡಾ.‌ಪ್ರಭಾ ಮಲ್ಲಿಕಾರ್ಜುನ್‌ ಕಣದಲ್ಲಿದ್ದರು. ಎರಡೂ ರಾಷ್ಟ್ರೀಯ ಪಕ್ಷಗಳಿಂದ ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿದ್ದರಿಂದ ತಿವ್ರ ಕುತೂಹಲ ಮೂಡಿಸಿತ್ತು. ಆದರೆ, ಬಿಜೆಪಿ ಭದ್ರಕೋಟೆಯಾದ ದಾವಣಗೆರೆಯನ್ನು ಕಾಂಗ್ರೆಸ್ ಪಕ್ಷ ಭೇಧಿಸಿತು.

Vinay Kumar Deprived of Ticket:

ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಜಿ.ಬಿ.ವಿನಯ್ ಕುಮಾರ್​ಗೆ ಟಿಕೆಟ್ ಕೈ ತಪ್ಪಿದ್ದರಿಂದ ಪಕ್ಷೇತರಾಗಿ ಸ್ಪರ್ಧಿಸಿದ್ದರು. ಟಿಕೆಟ್ ತಪ್ಪಿದ್ದಕ್ಕಾಗಿ ಕುಟುಂಬ ರಾಜಕಾರಣದ ವಿರುದ್ಧ ಗುಡುಗಿದ್ದ ಅವರು, ಲೋಕಸಭಾ ಚುನಾವಣೆಯಲ್ಲಿ 40 ಸಾವಿರ ಮತಗಳನ್ನು ಪಡೆದು ಪರಾಜಿತರಾದರು.‌

Boy dies after eating Panipuri :

ಪಾನಿಪೂರಿ ಸೇವಿಸಿ 19 ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಹರಿಹರ ತಾಲೂಕಿನ ಮಲೆಬೆನ್ನೂರಿನಲ್ಲಿ ನಡೆದಿತ್ತು. ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಉಪವಾಸ ಇದ್ದ ಮಕ್ಕಳು, ಉಪವಾಸ ಅಂತ್ಯ ಮಾಡಿ ಜಾಮೀಯಾ ಮಸೀದಿ ಬಳಿ ಪಾನಿಪೂರಿ ಸೇವಿಸಿದ್ದರು. ಪಾನಿಪೂರಿ ಸೇವಿಸಿದ ಕೆಲವೇ ಗಂಟೆಯಲ್ಲಿ ಎಲ್ಲಾ ಮಕ್ಕಳಿಗೆ ಇದ್ದಕ್ಕಿದ್ದಂತೆ ವಾಂತಿ ಭೇದಿ, ಹೊಟ್ಟೆ ನೋವು ಆರಂಭವಾಗಿತ್ತು.‌ ಹಜರತ್ ಬಿಲಾಲ್ (6) ಪಾನಿಪೂರಿ ಸೇವಿಸಿ ಅಸ್ವಸ್ಥನಾಗಿ ಸಾವನ್ನಪ್ಪಿದ.

Tension in police station:

ಚನ್ನಗಿರಿ ಪೊಲೀಸರ ವಶದಲ್ಲಿದ್ದ ವ್ಯಕ್ತಿ ಅನಾರೋಗ್ಯದಿಂದ ಮೃತಪಟ್ಟಿದ್ದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ನಡೆದಿತ್ತು. ಮೃತ ವ್ಯಕ್ತಿಯ ಸಂಬಂಧಿಕರು ಇದು ಲಾಕಪ್ ಡೆತ್, ಪೊಲೀಸರೇ ಸಾವಿಗೆ ಕಾರಣ ಎಂದು ಆರೋಪಿಸಿದ್ದರು. ಚನ್ನಗಿರಿಯ ಟಿಪ್ಪು ನಗರದ ನಿವಾಸಿ ಆದಿಲ್ (30) ಮೃತ ವ್ಯಕ್ತಿ. ತಮ್ಮವನನ್ನು ಕಳೆದುಕೊಂಡ ಅದಿಲ್ ಸಂಬಂಧಿಕರು ಠಾಣೆಗೆ ನುಗ್ಗಿ ಹಾನಿಗೊಳಿಸಿದ್ದರು. ಘಟನೆಯಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

Three killed by cylinder blast:

ಸಿಲಿಂಡರ್ ಸ್ಫೋಟದಿಂದ ಗಂಭೀರ ಗಾಯಗೊಂಡಿದ್ದ ಐವರಲ್ಲಿ ಮೂವರು ಮೃತಪಟ್ಟರು. ಮಲ್ಲೇಶಪ್ಪ (64), ಲಲಿತಮ್ಮ (58) ಪಾರ್ವತಮ್ಮ (40) ಮೃತರು. ಘಟನೆಯಲ್ಲಿ ಪಕ್ಕದ ಮನೆಯ ಪಾರ್ವತಮ್ಮ, ಇವರ ಪುತ್ರ ಪ್ರವೀಣ್‌ ಹಾಗೂ ಸೊಸೆ ಸೌಭಾಗ್ಯ ಗಾಯಗೊಂಡಿದ್ದರು.

A Retired Teacher’s Lonely Struggle:

ಪಿಂಚಣಿಗಾಗಿ, ಡಿಡಿಪಿಐ ಕಚೇರಿ ಬಳಿ ನಿವೃತ್ತ ಶಿಕ್ಷಕಿ ಪದ್ಮಾವತಿ ಎಂಬುವರು ಏಕಾಂಗಿ ಹೋರಾಟ ಮಾಡಿದ್ದರು.‌ ನಿವೃತ್ತ ಶಿಕ್ಷಕಿಯಾದ ನಾನು ಕಳೆದ 34 ವರ್ಷಗಳಲ್ಲಿ ವಿಧಾನಸೌಧಕ್ಕೆ 298 ಬಾರಿ ಭೇಟಿ ನೀಡಿರುವೆ. ಇಂದಿಗೂ ಭೇಟಿ ನೀಡುತ್ತಲೇ ಇರುವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದರು.

A coffee grown farmer:

ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹರಪನಹಳ್ಳಿ ತಾಲೂಕಿನ ಕಣವಿ ಗ್ರಾಮದಲ್ಲಿ ದಂಪತಿಯೊಬ್ಬರು ಸಮೃದ್ಧವಾಗಿ ಕಾಫಿ ಬೆಳೆದು ಗಮನ ಸೆಳೆದಿರು. ಬಿಳಿಚೋಡು ಹನುಮಂತಪ್ಪ ಹಾಗೂ ಕಮಲಮ್ಮ ದಂಪತಿ ಮಲೆನಾಡಿನ ಬೆಳೆಯನ್ನ ಬಯಲು ಸೀಮೆಯಲ್ಲಿ ಸಮೃದ್ಧವಾಗಿ ಬೆಳೆದು ಮಾದರಿಯಾದರು.

Youngster selected for Bengaluru Bulls Kabaddi Team:

ಬೆಂಗಳೂರು ಬುಲ್ಸ್ ಕಬಡ್ಡಿ ತಂಡಕ್ಕೆ ದಾವಣಗೆರೆಯಿಂದ ಚಂದ್ರನಾಯ್ಕ್ ಎಂಬ ಯುವಕ ಆಯ್ಕೆಯಾಗಿದ್ದು 2024ರ ಪ್ರಮುಖ ಸುದ್ದಿಗಳಲ್ಲಿ ಒಂದು. ಉತ್ತಮ್ಮ‌ ಕ್ರೀಡಾ ಪಟುವಾಗಿರುವ ಚಂದ್ರನಾಯ್ಕ್, ವಿಶ್ವವಿದ್ಯಾಲಯ ಹಂತ, ಖೇಲೋ ಇಂಡಿಯಾ ನ್ಯಾಷನಲ್ಸ್​ನಲ್ಲೂ ಭಾಗಿಯಾಗಿದ್ದ. ಟ್ಯಾಲೆಂಟೆಡ್ ಆಟಗಾರ ಕೂಡ ಹೌದು. ಇದಲ್ಲದೆ ಅಂಡರ್ 24 ಯುವ ಕಬಡ್ಡಿಯಲ್ಲಿ ‘ಕಾಜಿರಂಗ ರೈಸೋಸ್’ ಎಂಬ ತಂಡದ ನಾಯಕನಾಗಿ ಗಮನ ಸೆಳೆದಿದ್ದನು.

‘Kali’ left Tagaru lovers:

‘ಬೆಳ್ಳೂಡಿ ಕಾಳಿ’ ಎಂಬ ಟಗರು ಅಭಿಮಾನಿಗಳನ್ನು ಅಗಲಿತು. ವಾರದಿಂದ ಅನಾರೋಗ್ಯಕ್ಕೆ ತುತ್ತಾಗಿ ಅಕಾಲಿಕವಾಗಿ ಮೃತಪಟ್ಟ ಬೆಳ್ಳೂಡಿ ಕಾಳಿ ಟಗರು ಕಣದಲ್ಲಿ ಸೋತಿರುವ ಇತಿಹಾಸವೇ ಇಲ್ಲ!. ಬೆಳ್ಳೂಡಿ ಗ್ರಾಮದ ಈ ಟಗರು ಸಾವಿರಾರು ಕುರಿಗಳನ್ನು ಕಣದಲ್ಲಿ ಸೋಲಿಸಿದ ಶ್ರೇಯಸ್ಸು ಇದಕ್ಕೆ ಸಲ್ಲುತ್ತದೆ. ಗ್ರಾಮ‌ ನಿವಾಸಿ ರಾಘವೇಂದ್ರ ಹಾಗೂ ಮೋಹನ್ ಅವರಿಗೆ ಸೇರಿದ ಟಗರು, ಒಂದು ವಾರದಿಂದ ಅನಾರೋಗ್ಯಕ್ಕೆ ತುತ್ತಾಗಿ ದಾವಣಗೆರೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು.

 

 

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...