spot_img
spot_img

3 HMPV INFECTED CASES DETECTED : ದೇಶದಲ್ಲಿ 3 ಎಚ್ಎಂಪಿವಿ ಸೋಂಕಿತ ಪ್ರಕರಣಗಳು ಪತ್ತೆ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Hmpv Virus Spread in India News:

ಚೀನಾದಲ್ಲಿ ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (HMPV) ವೇಗವಾಗಿ ಹರಡುತ್ತಿದೆ. ಈ HMPV ವೈರಸ್ ಈಗ ಹಲವು ದೇಶಗಳಲ್ಲಿ ಹರಡಲು ಪ್ರಾರಂಭಿಸಿದೆ. ಈ ವೈರಸ್ ಎಷ್ಟು ಅಪಾಯಕಾರಿ ಎಂಬುದರ ಕುರಿತು ಸಂಶೋಧನೆಗಳು ನಡೆಯುತ್ತಿವೆ. ಇದರಿಂದ ಭಾರತ ಸೇರಿದಂತೆ ಹಲವು ದೇಶಗಳು ಅಲರ್ಟ್‌ ಮೋಡ್‌ನಲ್ಲಿವೆ.

3 HMPV cases detected in the country:

ಈ ಇಬ್ಬರು ಮಕ್ಕಳು ಯಾವುದೇ ಅಂತಾರಾಷ್ಟ್ರೀಯ ಪ್ರಯಾಣ ಮಾಡಿರುವ ಬಗ್ಗೆ ವಿವರವಿಲ್ಲ ಎಂದು ಆರೋಗ್ಯ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಭಾರತದಲ್ಲಿ ಮೂವರು HMPV INFECTED ಒಳಗಾಗಿದ್ದಾರೆ. ಬೆಂಗಳೂರಿನಲ್ಲಿ ಎಂಟು ತಿಂಗಳ ಗಂಡು ಮತ್ತು ಮೂರು ತಿಂಗಳ ಹೆಣ್ಣು ಮಗುವಿಗೆ ಎಚ್‌ಎಂಪಿವಿ ಸೋಂಕು ತಗುಲಿರುವುದು ದೃಢಪಟ್ಟಿದೆ.

ಜೊತೆಗೆ ರಾಜಸ್ಥಾನದ ಡುಂಗರ್‌ಪುರ ನಿವಾಸಿಯಾಗಿರುವ ಅಹಮದಾಬಾದ್‌ನಲ್ಲಿ ಎರಡು ತಿಂಗಳ ಮಗುವಿನಲ್ಲಿ HMPV INFECTED ಪತ್ತೆಯಾಗಿದೆ. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗುವಿನ ಸ್ಥಿತಿ ಸ್ಥಿರ (ನಾರ್ಮಲ್​) ಆಗಿದೆ. ಎಚ್‌ಎಂಪಿವಿ ಜಾಗತಿಕವಾಗಿ ಹರಡುತ್ತಿರುವುದರಿಂದ ಆರೋಗ್ಯ ಅಧಿಕಾರಿಗಳು ಪರಿಸ್ಥಿತಿಯ ಮೇಲ್ವಿಚಾರಣೆ ಮಾಡುತ್ತಿದ್ದಾರೆ.

Ministry of Health Statement:

ಇದಲ್ಲದೇ, ICMR ಮತ್ತು ಇಂಟಿಗ್ರೇಟೆಡ್ ಡಿಸೀಸ್ ಸರ್ವೆಲೆನ್ಸ್ ಪ್ರೋಗ್ರಾಂ (IDSP) ನೆಟ್‌ವರ್ಕ್‌ನಿಂದ ಅಸ್ತಿತ್ವದಲ್ಲಿರುವ ಡೇಟಾದ ಪ್ರಕಾರ, ದೇಶದಲ್ಲಿ ಇನ್ಫ್ಲುಯೆನ್ಸ್​​ ತರಹದ ಅನಾರೋಗ್ಯ (ILI) ಅಥವಾ ತೀವ್ರ ಉಸಿರಾಟದ ಕಾಯಿಲೆ (SARI) ಪ್ರಕರಣಗಳಲ್ಲಿ ಯಾವುದೇ ಅಸಾಮಾನ್ಯ ಹೆಚ್ಚಳ ಕಂಡುಬಂದಿಲ್ಲ. ಪೀಡಿತ ರೋಗಿಗಳಲ್ಲಿ ಯಾರೂ ಅಂತಾರಾಷ್ಟ್ರೀಯ ಟ್ರಾವೆಲ್​ ಹಿಸ್ಟರಿ ಹೊಂದಿಲ್ಲ ಎಂಬುದನ್ನು ಗಮನಿಸಬೇಕಾಗುತ್ತದೆ.

ಭಾರತದಲ್ಲಿ ಮೂರು ಶಿಶುಗಳಲ್ಲಿ HPMV ವೈರಸ್ ಪತ್ತೆಯಾದ ನಂತರ, ಆರೋಗ್ಯ ಸಚಿವಾಲಯವು ಹೇಳಿಕೆ ಬಿಡುಗಡೆ ಮಾಡಿದೆ. ರೋಗಿಗಳಿಗೆ ಅಂತಾರಾಷ್ಟ್ರೀಯ ಪ್ರಯಾಣ ಮಾಡಿರುವ ಕುರಿತು ಯಾವುದೇ ವಿವರವಿಲ್ಲ ಎಂದು ಸ್ಪಷ್ಟಪಡಿಸಿದೆ. ಈಗಾಗಲೇ ಭಾರತ ಸೇರಿದಂತೆ ಪ್ರಪಂಚದಾದ್ಯಂತ HMPV ವೈರಸ್​ ಹಾಗೂ HMPV-ಸಂಬಂಧಿತ ಉಸಿರಾಟದ ಕಾಯಿಲೆಗಳ ಪ್ರಕರಣಗಳು ವಿವಿಧ ದೇಶಗಳಲ್ಲಿ ವರದಿಯಾಗಿವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

Continuous monitoring of the situation:

ದೊರೆತಿರುವ ಮಾಹಿತಿಯನ್ನು ಆಧರಿಸಿ, ಎಲ್ಲ ಪರಿಸ್ಥಿತಿಗಳನ್ನು ಗಮನದಲ್ಲಿರಿಸಿಕೊಂಡು ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ICMR ಕೂಡು HMPV ಹರಡುತ್ತಿರುವ ಕುರಿತಂತೆ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತದೆ.

What is HMPV virus?:

ಆದರೆ, ಚಿಕ್ಕ ಮಕ್ಕಳು ಮತ್ತು ವೃದ್ಧರ ಮೇಲೆ ಹೆಚ್ಚಿನ ಅಪಾಯವನ್ನುಂಟು ಮಾಡುತ್ತದೆ. ರೋಗಲಕ್ಷಣಗಳೆಂದ್ರೆ ಕೆಮ್ಮು, ಜ್ವರ, ಮೂಗಿನ ದಟ್ಟಣೆ ಹಾಗೂ ಉಸಿರಾಟದ ತೊಂದರೆ, ಬ್ರಾಂಕೈಟಿಸ್ ಅಥವಾ ನ್ಯುಮೋನಿಯಾದಂತಹ ತೊಂದರೆಗಳು ಉಂಟಾಗುತ್ತದೆ. ಸಾಮಾನ್ಯವಾಗಿ 3ರಿಂದ 6ದಿನಗಳ ಒಳಗಾಗಿ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ.2001ರಲ್ಲಿ HMPV ವೈರಸ್​ ಮೊದಲು ನೆದರ್‌ಲ್ಯಾಂಡ್ಸ್‌ನಲ್ಲಿ ಪತ್ತೆಯಾಗಿದೆ. ಪ್ರಾಥಮಿಕವಾಗಿ ಉಸಿರಾಟದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.

ಈ ವೈರಸ್ ಎಲ್ಲಾ ವಯಸ್ಸಿನ ಜನರಿಗೆ ಸೋಂಕು ತಗುಲಬಹುದಾಗಿದೆ.HMPV VIRUS SPREAD IN INDIA: HMPV ವೈರಸ್ ಭಾರತದಲ್ಲಿ ಹರಡುತ್ತಿದೆ. ದೇಶದಲ್ಲಿ 3 ಎಚ್​ಎಂಪಿವಿ ಸೋಂಕಿತ ಪಕರಣಗಳು ದೃಢಪಟ್ಟಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

How to prevent HMPV virus?:

ಕೆಮ್ಮುವಾಗ ಅಥವಾ ಸೀನುವಾಗ ನಿಮ್ಮ ಬಾಯಿ, ಮೂಗನ್ನು ಕರವಸ್ತ್ರ ಅಥವಾ ಟಿಶ್ಯೂ ಪೇಪರ್‌ನಿಂದ ಮುಚ್ಚಿಕೊಳ್ಳಿ.

ನಿಮ್ಮ ಕೈಗಳನ್ನು ಸಾಬೂನು ಹಾಗೂ ನೀರು, ಆಲ್ಕೋಹಾಲ್ ಆಧಾರಿತ ಸ್ಯಾನಿಟೈಜರ್‌ನಿಂದ ಆಗಾಗ್ಗೆ ತೊಳೆಯಿರಿ.

ಜ್ವರ, ಕೆಮ್ಮು ಮತ್ತು ಸೀನುವಂತಹ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಿಂದ ದೂರವಿರಿ.

ಸಾಕಷ್ಟು ನೀರು ಕುಡಿಯಿರಿ ಹಾಗೂ ಪೌಷ್ಟಿಕ ಆಹಾರವನ್ನು ಸೇವಿಸಿ.

ಜನದಟ್ಟಣೆ ಇರುವ ಪ್ರದೇಶಗಳಿಗೆ ಹೋಗದೇ ಇರುವುದು ಒಳ್ಳೆಯದು.

Mainly what not to do?:

ಕೈಕುಲುಕ ಬೇಡಿ

ಅನಾರೋಗ್ಯದ ಜನರೊಂದಿಗೆ ನಿಕಟ ಸಂಪರ್ಕ ಹೋಗಬೇಡಿ

ಟಿಶ್ಯೂ ಪೇಪರ್ ಮತ್ತು ನ್ಯಾಪ್ಕಿನ್​ಗಳನ್ನು ಮರುಬಳಕೆ ಮಾಡಬೇಡಿ

ಪದೇ ಪದೇ ಕಣ್ಣು, ಮೂಗು ಮತ್ತು ಬಾಯಿ ಮುಟ್ಟಿಕೊಳ್ಳಬೇಡಿ.

 

 

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

CCI PROBE ON AMAZON FLIPKART : ಫ್ಲಿಪ್ಕಾರ್ಟ್, ಅಮೆಜಾನ್ ವಿರುದ್ಧ ಸಿಸಿಐ ತನಿಖೆ

New Delhi News: AMAZON FLIPKART ವಿರುದ್ಧ ಸ್ಪರ್ಧಾ ಆಯೋಗ ನಡೆಸುತ್ತಿರುವ ತನಿಖೆಯ ವಿರುದ್ಧ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂಕೋರ್ಟ್​ ಕರ್ನಾಟಕದ ಹೈಕೋರ್ಟ್​ಗೆ ವರ್ಗಾಯಿಸಿದೆ.ಇ-ಕಾಮರ್ಸ್​ ಫ್ಲಾಟ್​​ಫಾರ್ಮ್​ಗಳಾದ AMAZON...

CRICKET : ಆಸೀಸ್ ವಿರುದ್ಧ ಒಂದೇ ಒಂದು ಪಂದ್ಯ

Hyderabad News: ಇತ್ತೀಚೆಗೆ ಮುಕ್ತಾಯಗೊಂಡ ಬಾರ್ಡರ್​ ಗವಾಸ್ಕರ್​ ಟ್ರೋಫಿ ಟೆಸ್ಟ್​ ಸರಣಿಯಲ್ಲಿ ಭಾರತದ ಯುವ ಆಟಗಾರ ಒಂದೇ ಒಂದು ಪಂದ್ಯ ಆಡದಿದ್ದರು ಕೋಟಿಗಟ್ಟಲೇ ಸಂಪಾದನೆ ಮಾಡಿದ್ದಾರೆ.ಜಾಹೀರಾತುಗಳಿಂದ...

HARBHAJAN SINGH : ಕನ್ನಡಿಗ ಇರುವ ತನಕ ತಂಡದಲ್ಲಿ ಎಲ್ಲವೂ ಚೆನ್ನಾಗಿತ್ತು,

Hyderabad News: ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್​ ಸರಣಿಯಲ್ಲಿ ಭಾರತ ಕಳಪೆ ಪ್ರದರ್ಶನ ತೋರಿರುವ ಕುರಿತು HARBHAJAN SINGH ​ಅಸಮಾಧಾನ ಹೊರಹಾಕಿದ್ದಾರೆ. ಕಳೆದ ವರ್ಷ ತವರಿನಲ್ಲಿ...

ICC CHAMPIONS TROPHY : ಶಾಕಿಂಗ್ ನ್ಯೂಸ್! ಚಾಂಪಿಯನ್ಸ್ ಟ್ರೋಫಿಗೂ ಮೊದಲೇ ಭಾರತಕ್ಕೆ ಆಘಾತ

Hyderabad News: ICC CHAMPIONS TROPHY ಮೊದಲೇ ಭಾರತ ತಂಡ ಸಂಕಷ್ಟಕ್ಕೆ ಸಿಲುಕಿದ್ದು, ವೇಗದ ಬೌಲರ್​ ಈ ಸರಣಿ ಆಡುವುದು ಅನುಮಾನ ಎನ್ನಲಾಗುತ್ತಿದೆ.ಪಾಕಿಸ್ತಾನ ಇದರ ಆತಿಥ್ಯ...