ಬೀಜಿಂಗ್: ಒಂದು ಬಾಳೆ ಹಣ್ಣಿಗೆ ಅಬ್ಬಬ್ಬಾ ಎಂದರೆ 5 ರಿಂದ 10 ರೂ. ಕೊಡಬಹುದು. ಆದರೆ ಇಲ್ಲೊಬ್ಬ 52 ಕೋಟಿ ರೂ. ಕೊಟ್ಟಿದ್ದಾನೆ. ಬಳಿಕ ಅದನ್ನು ತಿಂದಿದ್ದಾನೆ. ಈ ಸುದ್ದಿ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ (Viral Video) ಆಗಿದೆ.
ಚೀನಾ ಮೂಲದ ಕ್ರಿಪ್ಟೋಕರೆನ್ಸಿ ಉದ್ಯಮಿ ಜಸ್ಟಿನ್ ಸನ್ (Crypto boss named Justin Sun) ಅವರು ಡಕ್ಟ್ ಟೇಪ್ ಮಾಡಿದ ಬಾಳೆಹಣ್ಣನ್ನು (Duct-Tapped Banana) 6.2 ಮಿಲಿಯನ್ ಡಾಲರ್ ಗೆ ಅಂದರೆ ಸರಿಸುಮಾರು 52 ಕೋಟಿ ರೂ. ಗೆ ಖರೀದಿಸಿದ್ದಾರೆ. ಬಳಿಕ ಅದನ್ನು ತಿಂದರು. ಇವರ ಈ ಪಬ್ಲಿಕ್ ಸ್ಟಂಟ್ ಈಗ ಭಾರಿ ವೈರಲ್ ಆಗಿದೆ.
ಹಾಂಗ್‌ಕಾಂಗ್‌ನ ಐಷಾರಾಮಿ ಹೋಟೆಲ್‌ನಲ್ಲಿ ಶುಕ್ರವಾರ ಪತ್ರಕರ್ತರು ಮತ್ತು ಹಲವಾರು ಪ್ರಮುಖ ವ್ಯಕ್ತಿಗಳ ಮುಂದೆ ನಿಂತು ಸನ್ ಬಾಳೆಹಣ್ಣನ್ನು “ಐಕಾನಿಕ್” ಎಂದು ಕರೆದರು. ಮಾತ್ರವಲ್ಲದೆ ಕಲೆ ಮತ್ತು ಕ್ರಿಪ್ಟೋಕರೆನ್ಸಿ ಸಮಾನವಾದದ್ದು ಎಂದು ಹೇಳಿದ್ದಾರೆ.
ಸಾಮಾನ್ಯವಾಗಿ ನಾವು ಅತ್ಯಂತ ದುಬಾರಿ ಮತ್ತು ಜನಪ್ರಿಯ ಕಲಾಕೃತಿಯನ್ನು ಖರೀದಿ ಮಾಡಿದ ಬಳಿಕ ಅದನ್ನು ನಾವು ಗೋಡೆಗಳಿಗೆ ಅಲಂಕಾರಿಕವಾಗಿ ನೇತು ಹಾಕುತ್ತೇವೆ. ಆದರೆ ಜಸ್ಟಿನ್ ಸನ್ ಮಾತ್ರ ಡಕ್ಟ್ ಟೇಪ್ ಮಾಡಿದ ಬಾಳೆಹಣ್ಣನ್ನು ಖರೀದಿ ಮಾಡಿ ತಿಂದರು. ಇದು ಯಾರೂ ಯೋಚಿಸದಂತಹ ಕಾರ್ಯವಾಗಿತ್ತು.
ಜಸ್ಟಿನ್ ಅವರು ಇಟಾಲಿಯನ್ ಕಲಾವಿದ ಮೌರಿಜಿಯೊ ಕ್ಯಾಟೆಲನ್ ಅವರ ವೈರಲ್ ಕಲಾಕೃತಿಯನ್ನು ಖರೀದಿಸಿದರು. ಅದನ್ನು ಹಾಂಗ್ ಕಾಂಗ್‌ನ ಐಷಾರಾಮಿ ಹೋಟೆಲ್‌ನಲ್ಲಿ ಪ್ರದರ್ಶಿಸಿದರು.
ನ್ಯೂಯಾರ್ಕ್‌ನ ಸೋಥೆಬೈಸ್‌ನಲ್ಲಿ ಕಲಾಕೃತಿಗೆ ಭಾರಿ ಮೊತ್ತವನ್ನು ಖರ್ಚು ಮಾಡಿದ ಅನಂತರ ಅವರು ಚೀನಾದ ಪೆನಿನ್ಸುಲಾ ಹೋಟೆಲ್‌ನಲ್ಲಿ ಡಕ್ಟ್ ಟೇಪ್ ಮಾಡಿದ ಬಾಳೆ ಹಣ್ಣನ್ನು ಖರೀದಿ ಮಾಡಿ ಅದನ್ನು ತಿಂದ
ಬಳಿಕ ಮಾತನಾಡಿದ ಅವರು, ಇದು ಇತರ ಬಾಳೆಹಣ್ಣುಗಳಿಗಿಂತ ಉತ್ತಮವಾಗಿದೆ ಎಂದರು.
ಕಾಮಿಡಿಯನ್ ಎಂಬ ಶೀರ್ಷಿಕೆಯ ಕಲಾಕೃತಿಯನ್ನು ಇಟಾಲಿಯನ್ ಕಲಾವಿದ ಮೌರಿಜಿಯೊ ಕ್ಯಾಟೆಲನ್ ರಚಿಸಿದ್ದಾರೆ. ಇತ್ತೀಚಿನ ಸೋಥೆಬಿ ಹರಾಜಿನ ಸಮಯದಲ್ಲಿ ಸನ್ ಅವರು ಕಲಾಕೃತಿಯ ಪರಂಪರೆಯ ಭಾಗವಾಗಿದ್ದ ಬಾಳೆಹಣ್ಣನ್ನು ಸೇವಿಸುವ ಅವರ ಯೋಜನೆಯನ್ನು ಮೊದಲೇ ಘೋಷಿಸಲಾಗಿತ್ತು ಎಂದು ತಿಳಿಸಿದ್ದಾರೆ.