ಬೆಂಗಳೂರು: ನಮ್ಮ ಮೆಟ್ರೋದಲ್ಲಿ (Namma Metro) ಪ್ರಯಾಣಿಸುವವರು ಇನ್ನು ಮುಂದೆ ನೆಟ್‌ವರ್ಕ್ ಸಮಸ್ಯೆಯಿಂದ ಕಿರಿಕಿರಿ ಅನುಭವಿಸುವುದು ತಪ್ಪಲಿದ್ದು, 5ಜಿ ನೆಟ್‌ವರ್ಕ್ (5G Network) ಬಳಸಿ ತಡೆಯಿಲ್ಲದ ಇಂಟರ್‌ನೆಟ್ (Internet) ಪಡೆಯಬಹುದು, ಈ ಕುರಿತು ಸೇವಾದಾರರಿಗಾಗಿ ಬಿಎಂಆರ್‌ಸಿಎಲ್ (BMRCL) ಟೆಂಡರ್ ಆಹ್ವಾನಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎರಡು ವರ್ಷದಿಂದಲೂ 5ಜಿ ಸೇವೆಯನ್ನು ಒದಗಿಸುವ ಕುರಿತು ನಮ್ಮ ಮೆಟ್ರೋ ಹಂತದಲ್ಲಿ ಚರ್ಚೆಗಳು ನಡೆದಿದ್ದರೂ ಅಂತಿಮ ತೀರ್ಮಾನವಾಗಿರಲಿಲ್ಲ. ಈಗ ನಮ್ಮ ಮೆಟ್ರೋ 5ಜಿ ಸೇವೆ ನೀಡುವ ಸಂಬಂಧ ಟೆಂಡರ್ ಪ್ರಕ್ರಿಯೆಗಳನ್ನು ಆರಂಭಿಸಿದೆ. ಟೆಂಡರ್ ಪ್ರಕ್ರಿಯೆಗೆ ನಿಗದಿತ ಅವಧಿಯಿದ್ದು ಮುಂದಿನ ವರ್ಷದಲ್ಲಿ ಇದು ಜಾರಿಯಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಮೆಟ್ರೋದಲ್ಲಿ ನಿತ್ಯ ಪ್ರಯಾಣ ಮಾಡುವವರಿಗೆ ನೆಟ್‌ವರ್ಕ್ ಸೇವೆ ಇದ್ದರೂ ಅದು ಸಮರ್ಪಕವಾಗಿರಲಿಲ್ಲ. ಈಗ 5ಜಿ ಸೇವೆಯನ್ನು ಕೆಲವು ಖಾಸಗಿ ದೂರ ಸಂಪರ್ಕ ಇಲಾಖೆಗಳು ಆರಂಭಿಸಿವೆ. ಇದರಿಂದಾಗಿ ನೆಟ್‌ವರ್ಕ್ ಸಮಸ್ಯೆ ಪರಿಹರಿಸಲು ಬಿಎಂಆರ್‌ಸಿಎಲ್ ಮುಂದಾಗಿದೆ. ನೆಟ್‌ವರ್ಕ್ ಸೆಲ್‌ಗಳ ಅಳವಡಿಕೆ ಮೂಲಕವೂ ಟೆಲಿಕಾಂ ಕಂಪನಿಗಳಿಂದ ಬಾಡಿಗೆ ಪಡೆದು ಆದಾಯ ಗಳಿಸಿಕೊಳ್ಳಲು ಟೆಂಡರ್ ಪ್ರಕ್ರಿಯೆ ನಡೆಸುತ್ತಿದೆ.
ಇದನ್ನು ಬಳಸಿಕೊಂಡು ಪ್ರಯಾಣಿಗರಿಗೆ ಸೌಲಭ್ಯ ನೀಡುವುದು ಇದರ ಹಿಂದಿರುವ ಉದ್ದೇಶ. ‘ನಮ್ಮ ಮೆಟ್ರೋ’ ಪಿಲ್ಲರ್‌ಗಳಲ್ಲಿ ನೆಟ್‌ವರ್ಕ್ ಸೆಲ್ ಅಳವಡಿಸಲು ಟೆಂಡರ್ ಪ್ರಕ್ರಿಯೆಯೂ ಶುರುವಾಗಿದೆ. ಈಗಾಗಲೇ ಮೆಟ್ರೋದಲ್ಲಿ 5ಜಿ ನೆಟ್ ವರ್ಕ್‌ನ ಸೇವೆ ಇದ್ದರೂ ನೆಟ್‌ವರ್ಕ್ ಸಮಸ್ಯೆ ಹೆಚ್ಚಿದೆ. ಮೆಟ್ರೋದಲ್ಲಿ ಸಂಚರಿಸುವ ಹಲವರು ಅಲ್ಲಿಯೇ ಕೆಲಸ ಮಾಡುತ್ತಾ ಇಲ್ಲವೇ ಆನ್‌ಲೈನ್ ಮೀಟಿಂಗ್‌ಗಳಲ್ಲೂ ಭಾಗವಹಿಸುತ್ತಾರೆ. ಈ ವೇಳೆ ಸಮಸ್ಯೆ ಎದುರಿಸಿದ ಕುರಿತು ಬಿಎಂಆರ್‌ಸಿಎಲ್‌ಗೆ ದೂರು ನೀಡಿದ್ದಾರೆ.
ಈ ಸೆಲ್‌ಗಳು ಮೆಟ್ರೋ ಕಾರಿಡಾರ್ ಹಾಗೂ ಸುತ್ತಮುತ್ತ ಸೀಮಿತ ಪ್ರದೇಶದಲ್ಲಿ ನೆಟ್‌ವರ್ಕ್ ಅನ್ನು ಸಮರ್ಪಕ ಹಾಗೂ ಅನಿಮಿಯತವಾಗಿ ಒದಗಿಸಲಿವೆ ಎನ್ನುವುದು ಮೆಟ್ರೋ ಅಧಿಕಾರಿಗಳು ನೀಡುವ ವಿವರಣೆ.
ನಮ್ಮ ಮೆಟ್ರೋ ಹಂತ-1 ಪೂರ್ವ-ಪಶ್ಚಿಮ, ಉತ್ತರ-ದಕ್ಷಿಣ ಮಾರ್ಗದಲ್ಲಿ, ರೀಚ್-5, ರೀಚ್-6 ಮಾರ್ಗದ ಉದ್ದಕ್ಕೂ ಎಲಿವೇಟೆಡ್ ಸೆಕ್ಷನ್‌ನಲ್ಲಿ 5ಜಿ ಚಿಕ್ಕಸೆಲ್‌ಗಳನ್ನು ಅಳವಡಿಕೆ ಮಾಡಲು ಟೆಂಡರ್ ಕರೆದಿದೆ. ಏಕ ಹಂತದಲ್ಲಿ ದ್ವಿ-ಲಕೋಟೆ ಪದ್ಧತಿಯಡಿಯಲ್ಲಿ ಸೂಕ್ತ, ಅರ್ಹ, ಅನುಭವುಳ್ಳವರು, ಪ್ರತಿಷ್ಠಿತರು ಇ-ಟೆಂಡರ್ ಸಲ್ಲಿಸಬಹುದು ಎಂದು ಹೇಳಿದೆ.
ಬಿಎಂಆರ್‌ಸಿಎಲ್ ವ್ಯಾಪ್ತಿಯಲ್ಲಿ 5ಜಿ ಮೊಬೈಲ್ ಕವರೇಜ್ ಒದಗಿಸಲು ಟೆಲಿಕಾಂ ಕಂಪನಿಗಳು ಉಪಕರಣ ನಿಯೋಜಿಸಲು, ಕಾರ್ಯಾಚರಣೆ ನಡೆಸಲು ಮೆಟ್ರೋ ಪಿಲ್ಲರ್‌ಗಳ ನಡುವಿನ ಸ್ಥಳವನ್ನು ನೀಡಲಾಗುತ್ತದೆ. ಆಸಕ್ತ ಕಂಪನಿಗಳು ಇ-ಟೆಂಡರ್ ಸಲ್ಲಿಕೆ ಮಾಡಲು ಕೊನೆಯ ದಿನಾಂಕ 2025ರ ಜನವರಿ 29 ಮಧ್ಯಾಹ್ನ 3 ಗಂಟೆ. 2025ರ ಜನವರಿ 30ರ ಮಧ್ಯಾಹ್ನ 3 ಗಂಟೆಗೆ ಟೆಂಡರ್ ತೆರೆಯಲಾಗುತ್ತದೆ. ಆಸಕ್ತರು ವಿವರಗಳಿಗೆ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಎಂದು ಜಾಹೀರಾತಿನಲ್ಲಿ ಉಲ್ಲೇಖಿಸಲಾಗಿದೆ.
ವೈಟ್‌ಫೀಲ್ಡ್ ಮೆಟ್ರೋ ನಿಲ್ದಾಣದಿಂದ ಪ್ರಾರಂಭವಾಗಿ ಚಲ್ಲಘಟ್ಟ ಟರ್ಮಿನಲ್‌ವರೆಗೆ (43.49 ಕಿ.ಮೀ.) ಹಾಗೂ ಉತ್ತರ-ದಕ್ಷಿಣ ಕಾರಿಡಾರ್ ಮಾದಾವರದಲ್ಲಿ ಪ್ರಾರಂಭವಾಗಿ ಸಿಲ್ಕ್ ಇನ್‌ಸ್ಟಿಟ್ಯೂಟ್‌ವರೆಗೆ (33.5 ಕಿ.ಮೀ.) ಮತ್ತು ಎಲೆಕ್ಟ್ರಾನಿಕ್ ಸಿಟಿ ಮಾರ್ಗ ಆರ್.ವಿ.ರಸ್ತೆ – ಬೊಮ್ಮನಹಳ್ಳಿ ಹಾಗೂ ಗೊಟ್ಟಿಗೆರೆ – ನಾಗವಾರ ಮಾರ್ಗದ ಎತ್ತರಿಸಿದ ಮಾರ್ಗದಲ್ಲಿ ಮಾರ್ಗ 5ಜಿ ಸ್ಮಾಲ್ ಸೆಲ್‌ಗಳ ಉಪಕರಣಗಳನ್ನು ಅಳವಡಿಸುವಂತೆ ಟೆಲಿಕಾಂ ಕಂಪನಿಗಳಿಂದ ಬಿಡ್ ಅನ್ನು ಬಿಎಂಆರ್‌ಸಿಎಲ್ ಆಹ್ವಾನಿಸಿದೆ.
WhatsApp Group
Join Now
Telegram Group
Join Now
Instagram Account
Follow Now
Facebook Page
Follow Now