spot_img
spot_img

ರಾಜ್ಯದಲ್ಲಿ 64% ಬಿಪಿಎಲ್‌ ಕಾರ್ಡ್ ಬಡವರು

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಶಿವಮೊಗ್ಗ: ದೇಶದಲ್ಲಿ ಬಿಪಿಎಲ್‌ ಕಾರ್ಡ್‌ ಎಂದರೆ ಅದು ಅಕ್ಕಿಯನ್ನಷ್ಟೇ ನೀಡುವ ಕಾಗದದ ತುಂಡಲ್ಲ. ಬದಲಿಗೆ, ಆರೋಗ್ಯ, ವಸತಿ ಸೇರಿದಂತೆ ಇನ್ನಿತರ ಅಂಶಗಳನ್ನು ಜೋಡಿಸಲಾಗಿದೆ. ಹೀಗಾಗಿ, ಬಿಪಿಎಲ್‌ ಕಾರ್ಡಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಈ ಕಾರ್ಡು ಹೊಂದಿರುವ ವ್ಯಕ್ತಿಗೆ ಆಸ್ಪತ್ರೆಗಳಲ್ಲಿ ಪಡೆಯುವ ಚಿಕಿತ್ಸೆಯಲ್ಲಿಶೇ .80ರಷ್ಟು ರಿಯಾಯಿತಿ ನೀಡಲಾಗುತ್ತದೆ.

ಬಿಪಿಎಲ್‌ ಕಾರ್ಡ್‌ ರದ್ದು ಎಂದ ತಕ್ಷಣ ಯಾಕೆ ದೊಡ್ಡ ಸುಂಟರಗಾಳಿಯೇ ಏಳುತ್ತದೆ ? ಇದಕ್ಕೆ ಪರಿಹಾರವೇನು ?ಇದು ಅರ್ಥವಾಗಬೇಕಾದರೆ, ಈ ಅಂಕಿ-ಸಂಖ್ಯೆಯನ್ನು, ಅದರ ಹಿಂದಿನ ತರ್ಕವನ್ನು ಪರಿಶೀಲಿಸಬೇಕು. ಲಭ್ಯ 2011ರ ಜನಗಣತಿ ಪ್ರಕಾರ ರಾಜ್ಯದ ಜನಸಂಖ್ಯೆ 6,11,30,704. ಈ ಪೈಕಿ ಬಿಪಿಎಲ್‌ ಇಲ್ಲವೇ ಎಪಿಎಲ್‌ ಪಡಿತರ ಚೀಟಿ ಹೊಂದಿರುವವರ ಸಂಖ್ಯೆ 5,23,68,525 ! ಅಂದರೆ ಶೇ.85.67ರಷ್ಟು ಜನ ಪಡಿತರ ಫಲಾನುಭವಿಗಳು.

ಒಂದೆಡೆ ನೀತಿ ಆಯೋಗವೇ ಕರ್ನಾಟಕದಲ್ಲಿ ಬಡವರ ಸಂಖ್ಯೆ ಕಡಿಮೆಯಾಗಿದೆ ಎಂದು ಬೆನ್ನುತಟ್ಟಿದರೆ, ಇನ್ನೊಂದೆಡೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಪ್ರಕಾರ, ರಾಜ್ಯದಲ್ಲಿ ಶೇ.64ರಷ್ಟು ಜನ ‘ಬಡತನ ಸೂಚಕ’ ಬಿಪಿಎಲ್‌ ಇಲ್ಲವೇ ಅಂತ್ಯೋದಯ ಕಾರ್ಡ್‌ಗಳನ್ನು ಹೊಂದಿದ್ದಾರೆ. ಒಂದು ರಾಜ್ಯದಲ್ಲಿ ಇಷ್ಟೊಂದು ಸಂಖ್ಯೆಯ ಬಡವರು ಇರು ಹೇಗೆ ಸಾಧ್ಯ ?
ಅಂದರೆ, ನಕಲಿ ಕಾರ್ಡ್‌ದಾರರು ಹೆಚ್ಚಿದ್ದಾರೆ ಹಾಗೂ ಬಡತನ ನಿಗದಿಯ ಮಾನದಂಡಗಳೇ ಅವೈಜ್ಞಾನಿಕ ಎನ್ನುತ್ತಾರೆ ತಜ್ಞರು.

ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ (ಎಚ್‌ಆರ್‌ಎಂಎಸ್‌)ಯ ದತ್ತಾಂಶದ ಪ್ರಕಾರ, ರಾಜ್ಯದಲ್ಲಿ 5.12 ಲಕ್ಷ ಸರಕಾರಿ ನೌಕರರು, ವಿವಿಧ ನಿಗಮಗಳಲ್ಲಿಅಂದಾಜು 2 ಲಕ್ಷ ಸೇರಿ ಒಟ್ಟು 7.12 ಲಕ್ಷಕ್ಕೂ ಹೆಚ್ಚು ನೌಕರರಿದ್ದಾರೆ. ಅಲ್ಲದೇ ವಿವಿಧೆಡೆ ಗುತ್ತಿಗೆ ಆಧಾರದ ಮೇಲೆಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ತೆರಿಗೆ ಪಾವತಿದಾರ ನೌಕರರ ಎಲ್ಲ ಮಾಹಿತಿಗಳು ಪಾರದರ್ಶಕವಾಗಿರುವುದರಿಂದ ಅಂಥವರು ಬಿಪಿಎಲ್‌ ಕಾರ್ಡ್‌ ಹೊಂದಿದ್ದರೂ ಅದನ್ನು ಪತ್ತೆ ಹಚ್ಚಿ ರದ್ದುಪಡಿಸುಬಹುದಾಗಿದೆ. ಆದರೆ, ಇಲಾಖೆ, ನಿಗಮಗಳು, ಕಂಪನಿಗಳಲ್ಲಿಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವವರು ಸರಾಸರಿ ಮಾಸಿಕ 16-20 ಸಾವಿರ ರೂ. ಸಂಬಳ ಪಡೆದರೂ ವಾರ್ಷಿಕ ವರಮಾನ 4.80 ಲಕ್ಷದಿಂದ 6 ಲಕ್ಷದವರೆಗೆ ಆಗುತ್ತದೆ. ಆದರೆ, ಸಾರ್ವಜನಿಕ ಪಡಿತರ ವಿತರಣಾ ಪದ್ಧತಿ ಅಡಿ ಆದ್ಯತೇತರ ಕುಟುಂಬಗಳನ್ನು ಗುರುತಿಸಲು ಇರುವ ಮಾನದಂಡಗಳಲ್ಲೇ ಸಾಕಷ್ಟು ಲೋಪಗಳಿವೆ.

ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷದೊಳಗಿರಬೇಕೆಂಬ ಮಾನದಂಡ ವಿಧಿಸಿದ್ದು, ಖಾಸಗಿ ಕಂಪನಿಯಲ್ಲಿಕೆಲಸ ಮಾಡುವ ಗುತ್ತಿಗೆ ನೌಕರನೂ ವಾರ್ಷಿಕ 4 ಲಕ್ಷ ರೂ. ಮೇಲೆ ವರಮಾನ ಹೊಂದಿರುತ್ತಾರೆ. ಮಾಸಿಕ 16 ಸಾವಿರ ರೂ. ಸಂಬಳದಲ್ಲಿಈಗಿನ ಹಣದುಬ್ಬರದ ಕಾಲದಲ್ಲಿಬದುಕು ಸಾಗಿಸಲು ಸಾಧ್ಯವೇ ಎಂಬುದು ಪ್ರಜ್ಞಾವಂತರ ಪ್ರಶ್ನೆಯಾಗಿದೆ. ಹೀಗಾಗಿ, ಈ ಮಾನದಂಡವೇ ಅವೈಜ್ಞಾನಿಕವಾಗಿದೆ ಎಂಬ ಮಾತುಗಳೂ ನಿರಂತರವಾಗಿ ಕೇಳಿಬರುತ್ತಿವೆ. ಆದರೂ ಸರಕಾರಗಳು ಇದರೆಡೆಗೆ ಗಮನಹರಿಸುವ ಪ್ರಯತ್ನವನ್ನೇ ಮಾಡಿಲ್ಲ. ಪರಿಣಾಮ ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದರೂ ಅನೇಕರು ಬಿಪಿಎಲ್‌ ಕಾರ್ಡು ಪಡೆಯಲು ಸಾಧ್ಯವಾಗುತ್ತಿಲ್ಲ.

-ಬಿಪಿಎಲ್‌ ಕಾರ್ಡ್‌ ಜತೆಗಿನ ಆರೋಗ್ಯ ಸೇವೆ, ವಸತಿ ಸೌಲಭ್ಯಗಳನ್ನು ಡಿಲಿಂಕ್‌ ಮಾಡಬೇಕು.
-ಎಚ್‌ಆರ್‌ಎಂಎಸ್‌, ಐಟಿ ರಿಟರ್ನ್ಸ್ ಮೂಲಕ ಅನರ್ಹರನ್ನು ಸುಲಭವಾಗಿ ಪತ್ತೆಹಚ್ಚುವುದು
-ಗ್ರಾಮ ಪಂಚಾಯಿತಿ ಹಂತದಲ್ಲಿ ಆರ್‌ಐ, ಪಿಡಿಒ ಸೇರಿದಂತೆ ಇತರರು ಪ್ರಮಾಣ ಪತ್ರಗಳನ್ನು ನೀಡುವಾಗ ಎಚ್ಚರಿಕೆವಹಿಸಬೇಕು.

-ಕಾಸಿಗಾಗಿ ಪಡಿತರ ಚೀಟಿ, ಆದಾಯ ಪ್ರಮಾಣ ಪತ್ರ ನೀಡುವ ವ್ಯವಸ್ಥೆ ಬದಲಾಗಬೇಕು.
-ಬಿಪಿಎಲ್‌ ಕಾರ್ಡು ಹೊಂದಿದ ಸರಕಾರಿ ನೌಕರರ ವಿರುದ್ಧ ದಂಡದ ಬದಲು ಕಠಿಣ ಕ್ರಮಕೈಗೊಳ್ಳಬೇಕು.
ಅರ್ಹತೆ ಇಲ್ಲದಿದ್ದರೂ ನಕಲಿ ದಾಖಲೆ ಹಾಗೂ ಅಫಿಡವಿಟ್‌ ಸಲ್ಲಿಸುವುದು
– ಕಂದಾಯ ಇಲಾಖೆ ನೀಡುವ ಆದಾಯ ಪ್ರಮಾಣ ಪತ್ರದಲ್ಲೂ ಸಾಕಷ್ಟು ಲೋಪಗಳಿವೆ.
-ಹಣ ನೀಡಿದರೆ, ಎಷ್ಟು ಬೇಕೋ ಅಷ್ಟು ವಾರ್ಷಿಕ ವರಮಾನ ನಮೂದಾಗುತ್ತದೆ.

ಸರಕಾರಿ ಸವಲತ್ತಿಗೆ ಮುಗಿಬೀಳುವ ಮಾನಸಿಕತೆಯಿಂದಾಗಿ ಸಾರ್ವಜನಿಕರಲ್ಲಿ ಮೌಲ್ಯಗಳು ಕಳೆದುಹೋಗಿವೆ. ಆದರೆ, ಅದು ನಮ್ಮ ದುಡ್ಡು ಎಂಬ ಕಲ್ಪನೆಯೇ ಜನರಲ್ಲಿಲ್ಲ. ಸಾರ್ವಜನಿಕರು ಮತ್ತು ನಾಯಕರು ಇಬ್ಬರೂ ಹಾಗೇಯೇ ಆಗಿದ್ದಾರೆ. ಹೀಗಾಗಿ, ಸರಕಾರ ಇಂಥ ವಿಚಾರಗಳಲ್ಲಿ ರೋಗದ ಲಕ್ಷಣಗಳಿಗೆ ಚಿಕಿತ್ಸೆ ನೀಡದೇ ರೋಗಕ್ಕೆ ಚಿಕಿತ್ಸೆ ನೀಡಬೇಕು ಎಂದು ಚಂದ್ರಪೂಜಾರಿ,ನಿವೃತ್ತ ಪ್ರಾಧ್ಯಾಪಕ, ಹಂಪಿ ವಿವಿ ಇವರು ಹೇಳಿದ್ದಾರೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

ಮೀನುಗಾರಿಕೆಗೆ ಕೇಂದ್ರದಿಂದ ₹4,969 ಕೋಟಿ ಅನುದಾನ

ನವದೆಹಲಿ: 4,969.62 ಕೋಟಿ ರೂ.ಗಳ ಪ್ರಸ್ತಾವನೆಗಳಿಗೆ ಕೇಂದ್ರದ ಮೀನುಗಾರಿಕೆ ಇಲಾಖೆ ಅನುಮೋದನೆ ನೀಡಿದೆ. ಸಣ್ಣ ಮೀನುಗಾರ ಸಮುದಾಯಗಳು ಹಾಗೂ ಸಾಂಪ್ರದಾಯಿಕ ಮೀನುಗಾರರ ಅಭಿವೃದ್ಧಿಗಾಗಿ ಮತ್ತು ಅವರ...

ಚಂದ್ರಶೇಖರ ಸ್ವಾಮೀಜಿ ವಿರುದ್ಧ ಎಫ್.ಐ.ಆರ್. : ಸಿದ್ದರಾಮಯ್ಯ

ಬೆಂಗಳೂರು : ಚಂದ್ರಶೇಖರ ಸ್ವಾಮೀಜಿ ಅವರ ಪ್ರಕರಣದಲ್ಲಿ ಪೊಲೀಸರು ಕಾನೂನಿನ ದೃಷ್ಟಿಯಲ್ಲಿ ಏನು ಮಾಡಬೇಕೋ ಅದನ್ನು ಮಾಡುತ್ತಾರೆ. ಕಾನೂನಿನ ಚೌಕಟ್ಟಿನೊಳಗೆ ಬಂದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಇಲ್ಲವಾದರೆ...

ಶಾಂತಿ, ಸೌಹಾರ್ದತೆ ಕಾಪಾಡಬೇಕು : ಸಂಭಲ್ ಜಾಮಾ ಮಸೀದಿ

ಹೊಸದಿಲ್ಲಿ: ಸಂಭಲ್ ಜಾಮಾ ಮಸೀದಿಯ ಆವರಣದಲ್ಲಿನ ಸಮೀಕ್ಷೆಗೆ ಸುಪ್ರೀಂಕೋರ್ಟ್ ತಡೆ ನೀಡಿದ್ದು, ಶಾಂತಿ ಮತ್ತು ಸೌಹಾರ್ದತೆ ಕಾಪಾಡುವಂತೆ ಹೇಳಿದೆ. ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಅಲಹಾಬಾದ್...

99.17 crore released to Karnataka

The central government has taken steps to globally develop major tourist destinations that are not so popular in...