spot_img
spot_img

ಜೊಮ್ಯಾಟೊಗೆ 803 ಕೋಟಿ ರೂಪಾಯಿಯ ತೆರಿಗೆ ನೋಟಿಸ್​

spot_img
spot_img

Share post:

ಜೊಮ್ಯಾಟೊ ಸದ್ಯ ಭಾರತದ ಬೃಹತ್​ ನಗರಗಳಲ್ಲಿ ತನ್ನ ಗ್ರಾಹಕರು ಬೇಡಿದ ಆಹಾರವನ್ನು ಮನೆ ಮನೆಗೆ ತಲುಪಿಸುವ ಒಂದು ಆ್ಯಪ್​. ನಿತ್ಯ ಲಕ್ಷಾಂತರ ಮಂದಿಗೆ ಆರ್ಡರ್ ಮಾಡಿದ ಕೆಲವೇ ಗಂಟೆಗಳಲ್ಲಿ ಆಹಾರ ಪೂರೈಸಿ ತನ್ನದೇ ಆದ ದೈತ್ಯ ಸಾಮ್ರಾಜ್ಯವನ್ನು ಕಟ್ಟಿಕೊಂಡಿರುವ ಕಂಪನಿಗಳಲ್ಲಿ ಒಂದು.

ಈ ಜೊಮ್ಯಾಟೊ ಕಂಪನಿಗೆ ಈಗ ಸರಿಯಾಗಿ ಜಿಎಸ್​ಟಿ ಕಟ್ಟದ ಕಾರಣದಿಂದಾಗಿ 803 ಕೋಟಿ ರೂಪಾಯಿ ಪಾವತಿ ಮಾಡುವಂತೆ ನೋಟಿಸ್ ಹೋಗಿದೆ.

ಜೊಮ್ಯಾಟೊ ಕಂಪನಿಗೆ ಡಿಸೆಂಬರ್ 12,2024ರಂದು ನೋಟೀಸ್ ತಲುಪಿದೆ. 29 ಅಕ್ಟೋಬರ್ 2019 ರಿಂದ 31 ಮಾರ್ಚ್​ 2022ರವರೆಗೆ ನಡೆದ ವ್ಯವಹಾರದ ಕುರಿತು ನೋಟಿಸ್ ಹೋಗಿದೆ. ಸಿಜಿಎಸ್​ಟಿ ಮತ್ತು ಸೆಂಟ್ರಲ್ ಎಕ್ಸೈಸ್​, ಥಾಣೆ ಕಮಿಷನರೇಟ್ ಮಹಾರಾಷ್ಟ್ರ ಒಟ್ಟು 401 ಕೋಟಿ70 ಲಕ್ಷ 14 ಸಾವಿರ 706 ರೂಪಾಯಿ ಜಿಎಸ್​ಟಿ ಹಾಗೂ ದಂಡ ಹಾಗೂ ಬಡ್ಡಿ ಸೇರಿ ಒಟ್ಟು 803.4 ಕೋಟಿ ರೂಪಾಯಿ ಜೊಮ್ಯಾಟೊ ಪಾವತಿಸಬೇಕಿದೆ ಎಂದು ಸ್ಪಷ್ಟಿಕರಣ ನೀಡಿದೆ.

ಡಿಲವೆರಿ ಚಾರ್ಜಸ್​ ಮೇಲೆ ಇರುವ ಜಿಎಸ್​ಟಿಯನ್ನು ಕಟ್ಟದ ಕಾರಣ ಈ ಒಂದು ನೋಟಿಸ್​ ಜೊಮ್ಯಾಟೊಗೆ ಹೋಗಿದೆ.ಈ ಬಗ್ಗೆ ಮಾತನಾಡಿರುವ ಸಂಸ್ಥೆ ನಾವು ಈ ಬಗ್ಗೆ ನಾವು ಸಂಬಂಧಪಟ್ಟ ಮಂಡಳಿಗೆ ಮೇಲ್ಮನವಿ ಸಲ್ಲಿಸಲಿದ್ದೇವೆ ಎಂದು ಹೇಳಿದೆ.

ಈ ಬಗ್ಗೆ ಮಾತನಾಡಿರುವ ಜೊಮ್ಯಾಟೊ ವಕ್ತಾರರು ನಾವು ನಮ್ಮ ಕಾನೂನು ಸಲಹೆಗಾರರು ಹಾಗೂ ತೆರಿಗೆ ಸಲಹೆಗಾರೊಂದಿಗೆ ಚರ್ಚಿಸಿ ಮುಂದಿನ ನಡೆಯನ್ನು ನಿರ್ಧರಿಸಲಿದ್ದೆವೆ. ಈಗಾಗಲೇ ಈ ವಿಚಾರ ಕುರಿತು ಸಂಬಂಧಪಟ್ಟ ಮಂಡಳಿಗೆ ಮೇಲ್ಮನವಿಯನ್ನು ಸಲ್ಲಿಸಿಲು ಸಜ್ಜಾಗಿದ್ದೇವೆ ಎಂದು ಹೇಳಿದ್ದಾರೆ.

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...