spot_img
spot_img

87 ರಸ್ತೆಗಳು ಬಂದ್​​, ಸಂಚಾರ ಅಸ್ತವ್ಯಸ್ತ: ಹಿಮಾಚಲ ಪ್ರದೇಶ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಚಳಿಗಾಲದ ಋತುವಿನ ಮೊದಲ ಹಿಮಪಾತವಾಗಿದೆ. ಇದರಿಂದ ಎಲ್ಲೆಂದರಲ್ಲಿ ಮಂಜುಗಡ್ಡೆ ಆವರಿಸಿದ್ದು, ರಾಜ್ಯದ ವಿವಿಧೆಡೆ 87 ರಸ್ತೆಗಳು ಬಂದ್​​ ಆಗಿ ಸಂಚಾರಕ್ಕೆ ತೊಂದರೆಯಾಗಿದೆ.
ಹಿಮಾಚಲ ಪ್ರದೇಶವು ಋತುವಿನ ಮೊದಲ ಹಿಮಪಾತ ಅನುಭವಿಸಿದೆ. ಶಿಮ್ಲಾ, ಕಿನ್ನೌರ್‌, ಕಂಗ್ರಾ, ಲಾಹೌಲ್, ಸ್ಪಿಟಿ, ಕುಲು ಮತ್ತು ಚಂಬಾದಲ್ಲಿ ಭಾರೀ ಹಿಮಪಾತವಾಗಿದೆ. ಮನಾಲಿಯ ರೋಹ್ಟಾಂಗ್ ಪಾಸ್ ಬಳಿಯ ಅಟಾರಿ-ಲೇಹ್ ರಾಷ್ಟ್ರೀಯ ಹೆದ್ದಾರಿ ಸೇರಿ ರಾಜ್ಯದ 87 ರಸ್ತೆಗಳು ಬಂದ್​ ಆಗಿವೆ.
ಶಿಮ್ಲಾ ಸಮೀಪದ ಪ್ರವಾಸಿ ತಾಣಗಳಾದ ಕುಫ್ರಿ, ಫಾಗು, ಚಾನ್ಸೆಲ್, ನರ್ಕಂಡ ಮತ್ತು ಚುರ್ಧಾರ್ ಶ್ರೇಣಿಗಳು ಸೇರಿದಂತೆ ಎತ್ತರದ ಪರ್ವತ ಪ್ರದೇಶಗಳಲ್ಲಿ ಭಾನುವಾರ ಸಂಜೆಯಿಂದಲೇ ಹಿಮಪಾತ ಶುರುವಾಗಿದೆ. ಕಳೆದ ಮೂರು ತಿಂಗಳಿನಿಂದ ಭಣಗುಡುತ್ತಿದ್ದ ಈ ಪ್ರದೇಶಗಳಿಗೆ ಮಂಜುಗಡ್ಡೆ ಹಾಸಿನಿಂದಾಗಿ ಹೊಸ ಮೆರಗು ಬಂದಿದೆ. ಸಹಜವಾಗಿಯೇ ಇದು ಪ್ರವಾಸಿಗರನ್ನು ಸೆಳೆಯಲಿದೆ. ಜೊತೆಗೆ ರೈತರು, ಸೇಬು ಬೆಳೆಗಾರರು ಮತ್ತು ಹೋಟೆಲ್ ಉದ್ಯಮಿಗಳಿಗೆ ಇದು ಸುಗ್ಗಿ ತರಲಿದೆ.
ಭಾನುವಾರ ಸಂಜೆಯಿಂದ ಲಾಹೌಲ್‌ನಲ್ಲಿ ಹಿಮಪಾತ ಉಂಟಾಗಿ 490 ವಾಹನಗಳಲ್ಲಿ ಸಿಲುಕಿಕೊಂಡಿದ್ದ ಸುಮಾರು 800 ಜನರನ್ನು ರಕ್ಷಿಸಲಾಗಿದೆ. ಹಿಮ ಮತ್ತು ಜಾರು ರಸ್ತೆಗಳಿಂದಾಗಿ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಪ್ರತಿಕೂಲ ಹವಾಮಾನದ ಹೊರತಾಗಿಯೂ, ಪರೀಕ್ಷೆಗಳಿಂದಾಗಿ ಶಿಮ್ಲಾದ ಶಾಲೆಗಳು ತೆರೆದಿವೆ. ಹಿಮಪಾತದಿಂದಾಗಿ ತಾಪಮಾನವೂ ಇಳಿದಿದೆ. ಎತ್ತರದ ಪ್ರದೇಶಗಳು ಕೊರೆಯುವ ಚಳಿ ಅನುಭವಿಸಿವೆ. ಕನಿಷ್ಠ ತಾಪಮಾನವು 12 ರಿಂದ 18 ಡಿಗ್ರಿಗಳಷ್ಟಿದೆ. ಟಬೊದಲ್ಲಿ ಕನಿಷ್ಠ -12.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಹಿಮಗಡ್ಡೆಯಿಂದಾಗಿ ಶಿಮ್ಲಾದಲ್ಲಿ ಅತೀ ಹೆಚ್ಚು ಅಂದರೆ 58 ರಸ್ತೆಗಳು ಮುಚ್ಚಿವೆ. ಕಿನ್ನೌರ್‌ನಲ್ಲಿ 17, ಕಂಗ್ರಾದಲ್ಲಿ 6, ಲಾಹೌಲ್ ಮತ್ತು ಸ್ಪಿತಿಯಲ್ಲಿ ಎರಡು, ಕುಲು ಮತ್ತು ಚಂಬಾ ಜಿಲ್ಲೆಗಳಲ್ಲಿ ತಲಾ ಒಂದು ರಸ್ತೆ ಮುಚ್ಚಲ್ಪಟ್ಟಿವೆ. 457 ವಿದ್ಯುತ್​ಪರಿವರ್ತಕಗಳು ನಿಷ್ಕ್ರಿಯವಾದ್ದರಿಂದ ಹಲವು ಭಾಗಗಳಲ್ಲಿ ಕತ್ತಲೆ ಆವರಿಸಿದೆ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (SEOC) ತಿಳಿಸಿದೆ.
ಕೊಕ್ಸರ್‌ನಲ್ಲಿ 6.7 ಸೆಂ.ಮೀ ಹಿಮ ದಾಖಲಾಗಿದ್ದರೆ, ಖದ್ರಾಲಾ 5 ಸೆಂ.ಮೀ., ಸಾಂಗ್ಲಾ 3.6 ಸೆಂ.ಮೀ., ಕೀಲಾಂಗ್ 3 ಸೆಂ.ಮೀ., ನಿಚಾರ್ ಮತ್ತು ಶಿಮ್ಲಾದಲ್ಲಿ 2.5 ಸೆಂ.ಮೀ. ಹಿಮ ಬಿದ್ದಿದೆ. ಇಳಿಜಾರು ಬೆಟ್ಟ ಪ್ರದೇಶಗಳಾದ ಕಂದಘಾಟ್, ಕಸೌಲಿ, ಜುಬ್ಬರಹಟ್ಟಿ ಮತ್ತು ಮಂಡಿಯಲ್ಲಿ ಮಳೆಯಾಗಿದೆ. ಮಳೆಗಾಲದ ಬಳಿಕ ರಾಜ್ಯದ ಹಲವು ಪ್ರದೇಶಗಳು ಮಳೆ ಕೊರತೆ ಅನುಭವಿಸಿವೆ.

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

Coconut price News : ಕೊಬ್ಬರಿ ಬೆಂಬಲ ಬೆಲೆ 422 ರೂ. ಹೆಚ್ಚಳ

New Delhi News : ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ, 2025ನೇ ಋತುವಿಗೆ ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಹೆಚ್ಚಿಸಲು ಶುಕ್ರವಾರ ನಡೆದ ಕೇಂದ್ರ...

BSY News :ಕಲಬುರಗಿ ಜಯದೇವ ಆಸ್ಪತ್ರೆ ಬಿಎಸ್ವೈ ಕನಸಿನ ಕೂಸು

Bangalore News: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು 80ರ ದಶಕದಲ್ಲಿ ಸಚಿವರಾದವರು. ತಾವು(ಪ್ರಿಯಾಂಕ್ ಖರ್ಗೆ) 2016ರಲ್ಲಿ ಸಚಿವರಾದವರು. ಕಲಬುರಗಿಗೆ ತಮ್ಮಿಂದ ಯಾಕೆ ಇಂತಹ ಜನೋಪಯೋಗಿ...

ECO TOURISM : ಮೈಸೂರಿನಲ್ಲಿ ಇಕೋ ಟೂರಿಸಂ ಪ್ರಾರಂಭ

Mysore News: ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಪರಿಸರ (ECO) ಪ್ರವಾಸೋದ್ಯಮ ಯೋಜನೆಯನ್ನು ಜಾರಿ ಮಾಡಲು ಈಗಾಗಲೇ ಪ್ರವಾಸೋದ್ಯಮ ಇಲಾಖೆ ನೀಲನಕ್ಷೆ ತಯಾರಿಸಿದೆ. ಈ ಬಗ್ಗೆ...

NISAR MISSION 2025 : ನಾಸಾ – ಇಸ್ರೋ ಸಿಂಥೆಟಿಕ್ ಅಪರ್ಚರ್ ರಾಡಾರ್ ಮಿಷನ್ ಉಡಾವಣೆಗೆ ಸಿದ್ಧ

Nisar Mission 2025:  ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಾರ್ಚ್ 2025 ರಲ್ಲಿ ನಾಸಾ - ಇಸ್ರೋ...