ಭಾರತ- ಬಾಂಗ್ಲಾ ಟೆಸ್ಟ್ ಸರಣಿಗೆ ಹೆಚ್ಚೇನು ದಿನ ಬಾಕಿ ಇಲ್ಲ. ಕೆಲವೇ ವಾರಗಳಲ್ಲಿ ಸರಣಿ ಆರಂಭವಾಗಲಿದ್ದು, ರೋಹಿತ್ ಪಡೆ ಸುಲಭವಾಗಿ ಬಾಂಗ್ಲಾ ಹುಲಿಗಳನ್ನ ಬೇಟೆಯಾಡೋ ಲೆಕ್ಕಾಚಾರದಲ್ಲಿದೆ. ಆದ್ರೆ, ಅದಕ್ಕೂ ಮುನ್ನ ಟೀಮ್ ಇಂಡಿಯಾದ ಸೆಲೆಕ್ಷನ್ಗೆ ದೊಡ್ಡ ತಲೆನೋವು ಸೃಷ್ಟಿಯಾಗಿದೆ. ಈ ಕಗ್ಗಂಟನ್ನ ಹೇಗೆ ಬಗೆಹರಿಸಬೇಕು ಅನ್ನೋದೆ ಅಜಿತ್ ಅಗರ್ಕರ್ ಆ್ಯಂಡ್ ಟೀಮ್ಗೆ ತಿಳಿಯದಾಗಿದೆ.
ಟೀಮ್ ಇಂಡಿಯಾದ 15 ಸ್ಲಾಟ್ಗೆ 22 ಆಟಗಾರರ ರೇಸ್.!
ಸೆಪ್ಟೆಂಬರ್ 19 ರಿಂದ ಭಾರತ ಹಾಗೂ ಬಾಂಗ್ಲಾದೇಶ ನಡುವೆ ಟೆಸ್ಟ್ ಸರಣಿ ಆರಂಭಗೊಳ್ಳಲಿದೆ. ಎರಡು ಪಂದ್ಯಗಳ ಟೆಸ್ಟ್ ಕದನಕ್ಕೆ ಭಾರತ ಆತಿಥ್ಯ ವಹಿಸಿದ್ದು, ಆಯ್ಕೆ ಸಮಿತಿ ಇನ್ನಷ್ಟೇ ತಂಡವನ್ನ ಪ್ರಕಟಿಸಬೇಕಿದೆ. ಈ ಸರಣಿಯ ತಂಡದಲ್ಲಿ 9 ಪ್ಲೇಯರ್ಸ್ ಸ್ಲಾಟ್ ಫಿಕ್ಸ್ ಆಗಿದೆ. ಆದ್ರೆ, ಇನ್ನುಳಿದ 6 ಸ್ಥಾನಕ್ಕಾಗಿ 13 ಮಂದಿ ಮಧ್ಯೆ ಮೆಗಾ ಫೈಟ್ ಏರ್ಪಟ್ಟಿದೆ. ಇದು ಕ್ಯಾಪ್ಟನ್ ರೋಹಿತ್ ಶರ್ಮಾ ಹಾಗೂ ಹೆಡ್ ಕೋಚ್ ಗೌತಮ್ ಗಂಭೀರ್, ಸೆಲೆಕ್ಷನ್ ಕಮಿಟಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಇದನ್ನೂ ಓದಿ:ಕೆಪಿಸಿಸಿ ನಾಯಕರಿಗೆ AICC ನಾಯಕರ ಸೂಚನೆ: ಫೋನ್ ಕರೆಯಲ್ಲಿ ಹೈಕಮಾಂಡ್ ನಾಯಕರು ಹೇಳಿದ್ದೇನು?!
ಓಪನರ್ ಸ್ಥಾನಕ್ಕೆ ಜೈಸ್ವಾಲ್-ಗಿಲ್ ಮೆಗಾ ಫೈಟ್..!
ಆರಂಭಿಕನಾಗಿ ಕ್ಯಾಪ್ಟನ್ ರೋಹಿತ್ ಶರ್ಮಾ ಆಡುವುದು ಕನ್ಫರ್ಮ್. ರೋಹಿತ್ ಜೊತೆಗಾರನಾಗಿ ಆಡಲು ಯಶಸ್ವಿ ಜೈಸ್ವಾಲ್ ಹಾಗೂ ಶುಭ್ಮನ್ ಗಿಲ್ ನಡುವೆ ಫೈಟ್ ಇದೆ. ಜೈಸ್ವಾಲ್ ಹಿಂದಿನ ಸರಣಿಗಳಲ್ಲಿ ಉತ್ತಮವಾಗಿ ಆಡಿದ್ದು, ಆಯ್ಕೆಗಾರರ ನಂಬಿಕೆ ಉಳಿಸಿಕೊಂಡಿದ್ದಾರೆ. ಒಂದು ವೇಳೆ ಗಿಲ್ಗೆ ಓಪನಿಂಗ್ ಸ್ಥಾನ ಮಿಸ್ ಆದ್ರೆ 3ನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಇಂಗ್ಲೆಂಡ್ ವಿರುದ್ಧ ಇದೇ ಸ್ಲಾಟ್ನಲ್ಲಿ ಆಡಿದ್ರು.
ಕೊಹ್ಲಿ ಎಂಟ್ರಿ..ಮಧ್ಯಮ ಕ್ರಮಾಂಕದ ಆಯ್ಕೆ ತಲೆನೋವು..!
ಇಂಗ್ಲೆಂಡ್ ಸರಣಿಯಿಂದ ವಿಶ್ರಾಂತಿ ಪಡೆದಿದ್ದ ಕಿಂಗ್ ಕೊಹ್ಲಿ ಬಾಂಗ್ಲಾ ಸಿರೀಸ್ನಲ್ಲಿ ಕಣಕ್ಕಿಳಿಯಲಿದ್ದಾರೆ. 4ನೇ ಸ್ಲಾಟ್ನಲ್ಲಿ ಅವರು ದರ್ಬಾರ್ ನಡೆಸಲಿದ್ದಾರೆ. ಇವರ ಸ್ಥಾನದಲ್ಲಿ ಆಡಿದ್ದ ಸರ್ಫರಾಜ್ ಮಧ್ಯಮ ಕ್ರಮಾಂಕದಲ್ಲಿ ಕೆಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಜೊತೆ ಪೈಪೋಟಿಗೆ ಇಳಿಯಲಿದ್ದಾರೆ. ಈ ತ್ರಿಮೂರ್ತಿಗಳಲ್ಲಿ ಯಾರನ್ನ 5ನೇ ಸ್ಲಾಟ್ಗೆ ಆಯ್ಕೆ ಮಾಡಬೇಕು ? ಯಾರನ್ನ ಡ್ರಾಪ್ ಮಾಡ್ಬೇಕು ಅನ್ನೋದು ಆಯ್ಕೆ ಸಮಿತಿಗೆ ದೊಡ್ಡ ಸವಾಲಾಗಿದೆ.
ಸ್ಪಿನ್ ಕೋಟಾದಲ್ಲಿ ಸ್ಥಾನ ಪಡೆಯಲು ತೀವ್ರ ಪೈಪೋಟಿ
ರವೀಂದ್ರ ಜಡೇಜಾ ಹಾಗೂ ಅಕ್ಷರ್ ಪಟೇಲ್ ಸ್ಪಿನ್ ಆಲ್ರೌಂಡರ್ಗಳಾಗಿ, ಸ್ಪೆಷಲಿಸ್ಟ್ ಸ್ಪಿನ್ನರ್ ಆಗಿ ಆರ್.ಅಶ್ವಿನ್ ಸ್ಥಾನ ಪಡೆಯೋದು ಬಹುತೇಕ ಫಿಕ್ಸ್. ಇವ್ರ ಹೊರತಾಗಿ ಕುಲ್ದೀಪ್ ಯಾದವ್ ಹಾಗೂ ವಾಷಿಂಗ್ಟನ್ ಸುಂದರ್ ನಡುವೆ ಸ್ಥಾನಕ್ಕಾಗಿ ಫೈಟ್ ಇದೆ. ಇಬ್ಬರಲ್ಲಿ ಉತ್ತಮರ ಆಯ್ಕೆ ಕಠಿಣವೆನಿಸಿದೆ.
ಎರಡು ಸ್ಥಾನಕ್ಕೆ ಆರು ಬೌಲರ್ಸ್ ನಡುವೆ ಕಾದಾಟ..!
ಜಸ್ಪ್ರೀತ್ ಬೂಮ್ರಾ ಬಾಂಗ್ಲಾ ಸರಣಿಯಿಂದ ರೆಸ್ಟ್ ಪಡೆಯೋ ಸಾಧ್ಯತೆ ಇದೆ. ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ವೇಗದ ಬೌಲಿಂಗ್ ವಿಭಾಗದ ಜವಾಬ್ದಾರಿ ಹೆಗಲಿಗೇರಲಿದೆ. ಇವರ ಜೊತೆ ಅರ್ಷ್ದೀಪ್ ಸಿಂಗ್, ಖಲೀಲ್ ಅಹ್ಮದ್, ಆವೇಶ್ ಖಾನ್, ಮುಕೇಶ್ ಕುಮಾರ್ ಹಾಗೂ ಆಕಾಶ್ ದೀಪ್ ಆಶಾವಾದಿಗಳಾಗಿದ್ದಾರೆ. ಆದ್ರೆ ಈ ಪೈಕಿ ಯಾರಿಗೆ ಚಾನ್ಸ್ ಸಿಗುತ್ತೆ ಅನ್ನೋದು ಯಕ್ಷಪ್ರಶ್ನೆ.
ದುಲೀಪ್ ಟ್ರೋಫಿಯಲ್ಲಿ ಸಿಗಲಿದೆ ಸ್ಪಷ್ಟ ಚಿತ್ರಣ..!
ಸದ್ಯಕ್ಕೆ ಬಾಂಗ್ಲಾ ಎದುರಿನ ಟೆಸ್ಟ್ ಸರಣಿ ಟೀಮ್ ಇಂಡಿಯಾ ಆಯ್ಕೆ ಜಟಿಲವಾಗಿದೆ. ಹಲವು ಸ್ಲಾಟ್ನಲ್ಲಿ ಸ್ಥಾನಕ್ಕಾಗಿ ತೀವ್ರ ಸ್ಪರ್ಧೆ ಇದೆ. ಯಾರನ್ನ ಆಯ್ಕೆ ಮಾಡ್ಬೇಕು ಅನ್ನೋ ಗೊಂದಲ ಆಯ್ಕೆ ಸಮಿತಿಗೆ ಇದೆ. ಸೆ. 5ರಿಂದ ದೇಶಿ ಕ್ರಿಕೆಟ್ ಟೂರ್ನಿ ದುಲಿಫ್ ಟ್ರೋಫಿ ಆರಂಭಗೊಳ್ಳಲಿದೆ. ಟೆಸ್ಟ್ ಆಡುವ ಬಹುತೇಕ ಆಟಗಾರರು ಇದ್ರಲ್ಲಿ ಆಡಲಿದ್ದಾರೆ. ಈ ಟೂರ್ನಿಯ ಪರ್ಫಾಮೆನ್ಸ್ ಆಧಾರದಲ್ಲಿ ಆಟಗಾರರಿಗೆ ಟೀಮ್ ಇಂಡಿಯಾ ಡೋರ್ ಓಪನ್ ಆಗಲಿದೆ.