ಟೆಲಿಕಾಂ ಕಂಪನಿಗಳು ತಮ್ಮ ಪ್ರಿಪೇಯ್ಡ್ ಬಳಕೆದಾರರಿಗೆ ರಿಚಾರ್ಜ್ ಯೋಜನೆಗಳನ್ನು ಪರಿಚಯಿಸುವುದರ ಜೊತೆಗೆ ಕಾಂಪ್ಲಿಮೆಂಟರಿಯಾಗಿ ಓಟಿಟಿ ಚಂದಾದಾರಿಕೆಯನ್ನು ನೀಡುತ್ತಿವೆ. ಅದರಲ್ಲೂ ಏರ್ಟೆಲ್ (Airtel), ವೊಡಾಫೋನ್ ಐಡಿಯಾ (Vodafone Idea), ಜಿಯೋ (Jio) ತನ್ನ ಗ್ರಾಹಕರಿಗಾಗಿ ಈ ಸೇವೆಯ ಪ್ರಯೋಜನವನ್ನು ಒದಗಿಸುತ್ತಾ ಬಂದಿದೆ. ಬಹುತೇಕರು ದುಬಾರಿ ಯೋಜನೆಗಳ ಮೂಲಕ ಓಟಿಟಿ ಸೇವೆಯನ್ನು ಆನಂದಿಸುತ್ತಾರೆ.
ಆದರೆ ಅದಕ್ಕಿಂತಲೂ ಕಡಿಮೆ ಬೆಲೆಗೆ ಉಚಿತ ಓಟಿಟಿ ಪ್ರಯೋಜನವನ್ನು ಪಡೆಯಬಹುದಾಗಿದೆ. 95 ರೂಪಾಯಿ ಮೂಲಕ ಈ ಸೇವೆಯನ್ನು ಪಡೆಯಬಹುದಾಗಿದೆ. ಅಂದಹಾಗೆಯೇ ಕಡಿಮೆ ಬೆಲೆಗೆ ಸಿಗುವ ವಿವಿಧ ಕಂಪನಿಗಳ ಓಟಿಟಿ ಯೋಜನೆಗಳ ಬಗ್ಗೆ ಮಾಹಿತಿ ಇಲ್ಲಿದೆ.
ಏರ್ಟೆಲ್
ಜನಪ್ರಿಯ ಏರ್ಟೆಲ್ 149 ರೂಪಾಯಿ ಯೋಜನೆಯನ್ನು ಅಳವಡಿಸುವ ಮೂಲಕ ಓಟಿಟಿ ಪ್ರಯೋಜನವನ್ನು ನೀಡುತ್ತಿದೆ. ಇದರ ಮೂಲಕ ತಿಂಗಳಿಗೆ 22ಕ್ಕೂ ಹೆಚ್ಚು ಓಟಿಟಿ ಸೇವೆ ಪಡೆಯಬಹುದಾಗಿದೆ.
ಅಂದ ಹಾಗೆಯೇ ಈ ಪ್ಲಾನ್ ಅಳವಡಿಸಿಕೊಂಡರೆ 1GB ಹೆಚ್ಚುವರಿ ಡೇಟಾ ಸಿಗುತ್ತದೆ. ಆದರೆ ಇದರಲ್ಲಿ ಯಾವುದೇ ಕರೆ ಅಥವಾ ಎಸ್ಎಮ್ಎಸ್ ಪ್ರಯೋಜನಗಳಿರುವುದಿಲ್ಲ. ಇದಲ್ಲದೆ, ಎಕ್ಸ್ಸ್ಟ್ರೀಮ್ ಪ್ಲೇ ಪ್ರೀಮಿಯಂ ಚಂದಾದಾರಿಕೆಯನ್ನು 30 ದಿನಗಳವರೆಗೆ ನೀಡುತ್ತದೆ.
ಜಿಯೋ
ರಿಲಯನ್ಸ್ ಜಿಯೋದ 175 ರೂಪಾಯಿ ಯೋಜನೆಯನ್ನ ಅಳವಡಿಸಿಕೊಂಡರೆ 10 ಓಟಿಟಿ ಸೇವೆಯನ್ನು ಪಡೆಯಬಹುದಾಗಿದೆ. ಆದರೆ ಈ ಯೋಜನೆ 28 ದಿನಗಳ ಮಾನ್ಯತೆ ಪಡೆದಿದೆ. 10GB ಡೇಟಾ ಒದಗಿಸುತ್ತದೆ. ಇದಲ್ಲದೆ, ಜಿಯೋ ಸಿನಿಮಾ ಪ್ರೀಮಿಯಂ, ಜಿಯೋ ಟಿವಿ ಅಪ್ಲಿಕೇಶನ್ ಮೂಲಕ ಓಟಿಟಿ ಸೇವೆ ವೀಕ್ಷಿಸುವ ಅವಕಾಶವಿದೆ.
ವೊಡಾಫೋನ್ ಐಡಿಯಾ
ವೊಡಾಫೋನ್ ಐಡಿಯಾ 95 ರೂಪಾಯಿಯ ಪ್ಲಾನ್ ರಿಚಾರ್ಜ್ ಮಾಡಿದರೆ 4GB ಡೇಟಾ ಸಿಗುತ್ತದೆ. 14 ದಿನಗಳ ಮಾನ್ಯತೆ ಹೊಂದಿದೆ. ಗ್ರಾಹಕರು 28 ದಿನಗಳವರೆಗೆ ಸೋನಿಲೈವ್ ಚಂದಾದಾರಿಕೆಯನ್ನು ಪಡೆಯಬಹುದಾಗಿದೆ. ಅಂದಹಾಗೆಯೇ ಈ ಪ್ರೀಮಿಯಂ ಪ್ಯಾಕ್ನಲ್ಲಿ ಯಾವುದೇ ಕರೆ ಅಥವಾ SMS ಪ್ರಯೋಜನ ಸಿಗುವುದಿಲ್ಲ.