New Delhi News:
ಲಾಸ್ ಏಂಜಲೀಸ್‌ನ ಕ್ರಿಪ್ಟೋ ಡಾಟ್ ಕಾಮ್ ಅರೆನಾದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಸತ್ಕರಿಸಲಾಗಿದೆ. ರೆಕಾರ್ಡಿಂಗ್ ಅಕಾಡೆಮಿ ಆಯೋಜಿಸಿದ ಅತಿದೊಡ್ಡ ಸಂಗೀತ ಪ್ರಶಸ್ತಿಯ 67 ನೇ ಆವೃತ್ತಿ ಇದಾಗಿದೆ.ಭಾರತೀಯ- ಅಮೆರಿಕನ್ ಗಾಯಕಿ ಮತ್ತು ಉದ್ಯಮಿ CHANDRIKA ಟಂಡನ್ ಅವರಿಗೆ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ಒಲಿದು ಬಂದಿದೆ.
ಆಂಬಿಯೆಂಟ್ ಅಥವಾ ಚಾಂಟ್ ಆಲ್ಬಂ ವಿಭಾಗದಲ್ಲಿ ‘ತ್ರಿವೇಣಿ’ ಆಲ್ಬಂಗಾಗಿ ಅವರಿಗೆ ಗ್ರ್ಯಾಮಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.ಟಂಡನ್ ಪೆಪ್ಸಿಕೋದ ಮಾಜಿ ಸಿಇಒ ಇಂದ್ರಾ ನೂಯಿ ಅವರ ಹಿರಿಯ ಸಹೋದರಿಯಾಗಿದ್ದಾರೆ. ದಕ್ಷಿಣ ಆಫ್ರಿಕಾದ ಫ್ಲೌಟಿಸ್ಟ್ ವೂಟರ್ ಕೆಲ್ಲರ್‌ಮ್ಯಾನ್ ಮತ್ತು ಜಪಾನಿನ ಸೆಲಿಸ್ಟ್ ಎರು ಮಾಟ್ಸುಮೊಟೊ ಅವರೊಂದಿಗೆ CHANDRIKA ಈ ಪ್ರಶಸ್ತಿ ಗೆದ್ದಿದ್ದಾರೆ.
ಅಸಾಧಾರಣ ಸಂಗೀತ ದಿಗ್ಗಜ್ಜರನ್ನು ಹಿಂದಿಕ್ಕಿ ಪ್ರಶಸ್ತಿ ಪಡೆದಿರುವುದು ಆನಂದವನ್ನುಂಟು ಮಾಡಿದೆ ಎಂದು CHANDRIKA ಅವರು ಖುಷಿ ವ್ಯಕ್ತಪಡಿಸಿದ್ದಾರೆ.ಪ್ರಶಸ್ತಿ ಸಮಾರಂಭದಲ್ಲಿ ಮಾತನಾಡಿದ ಅವರು, ಇದೊಂದು ಅದ್ಭುತ ಕ್ಷಣವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ನಾವು ಈ ಪ್ರಶಸ್ತಿ ಗೆದ್ದಿರುವುದು ನಿಜವಾಗಿಯೂ ನಮಗೆ ವಿಶೇಷ ಕ್ಷಣವಾಗಿದೆ.
This is the Triveni Sangam:ಭಾರತೀಯ ಶಾಸ್ತ್ರೀಯ ಸಂಗೀತ, ಹೊಸ ಯುಗದ ವಾತಾವರಣ ಮತ್ತು ಜಾಗತಿಕ ಸಂಪ್ರದಾಯಗಳ ಸಾಮರಸ್ಯದ ಮಿಶ್ರಣದಿಂದ ಕೂಡಿದೆ.
ಟಂಡನ್ ಅವರು ಕೆನಡಿ ಸೆಂಟರ್, ಲಿಂಕನ್ ಸೆಂಟರ್ ಮತ್ತು ಯುರೋಪ್ ಮತ್ತು ಭಾರತದಾದ್ಯಂತ ವಿಶ್ವ ಸಂಸ್ಕೃತಿ ಉತ್ಸವಗಳಂತಹ ಸ್ಥಳಗಳಲ್ಲಿ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆಮೂರು ಪವಿತ್ರ ಭಾರತೀಯ ನದಿಗಳಾದ ಗಂಗಾ, ಯಮುನಾ ಮತ್ತು ಸರಸ್ವತಿಗಳ ಸಂಗಮ ಎಂಬ ಹೆಸರಿನಂತೆಯೇ, ‘ತ್ರಿವೇಣಿ’ ವೈವಿಧ್ಯಮಯ ಸಂಸ್ಕೃತಿಗಳನ್ನು ಪ್ರತಿನಿಧಿಸುವ ಮೂವರು ಕಲಾವಿದರಾದ ಟಂಡನ್, ಕೆಲ್ಲರ್‌ಮ್ಯಾನ್ ಮತ್ತು ಮಾಟ್ಸುಮೊಟೊ ಅವರ ಸಹಯೋಗದಿಂದ ಕೂಡಿದೆ.
ಆ ಹಾಡುಗಳೆಂದರೆ, ಪಥ್‌ವೇ ಟು ಲೈಟ್, ಚಾಂಟ್ ಇನ್ ಎ, ಜರ್ನಿ ವಿಥ್ ಇನ್, ಈಥರ್ಸ್ ಸೆರೆನೇಡ್, ಆನಿಸೆಂಟ್ ಮೂನ್, “ಓಪನ್ ಸ್ಕೈ”, ಮತ್ತು “ಸೀಕಿಂಗ್ ಶಕ್ತಿ.ಆಗಸ್ಟ್ 30, 2024 ರಂದು ಈ ಆಲ್ಬಂ ಬಿಡುಗಡೆಯಾಯಿತು, ‘ತ್ರಿವೇಣಿ’ ಯಲ್ಲಿನ ಏಳು ಟ್ರ್ಯಾಕ್‌ಗಳಲ್ಲಿ ಪ್ರತಿಯೊಂದೂ ತನ್ನದೇ ಆದ ಕಥೆಗಳನ್ನು ಹೇಳುತ್ತವೆ.
ಇದನ್ನು ಓದಿರಿ :INDIA VS ENGLAND 5TH T20:ಇಂಗ್ಲೆಂಡ್ ವಿರುದ್ದ ಗೆದ್ದು ಕೊನೆಗೂ 13 ವರ್ಷದ ಹಳೆ ಸೇಡು ತೀರಿಸಿಕೊಂಡ ಭಾರತ!