Prayagraj News:
ದಿನ ಪೂರ್ತಿ ಸಂಗಮ ಪ್ರದೇಶ ಜನರಿಂದ ತುಂಬಿರಲಿದೆ. ಇದರ ನಡುವೆ ಕರ್ನಾಟಕದ ಬೇರೆ ಬೇರೆ ಮಠದ ಮಠಾಧೀಶರು ಅಮೃತ ಸ್ನಾನ ಮಾಡಿದ್ದಾರೆ.ಇಂದು Vasant Panchami ಹಿನ್ನೆಲೆಯಲ್ಲಿ ಮಹಾ ಕುಂಭಮೇಳದಲ್ಲಿ ಮೂರನೇ ಅಮೃತ ಸ್ನಾನ ಮಾಡಲಾಗುತ್ತಿದೆ.
ನಸುಕಿನಿಂದಲೇ ಲಕ್ಷಾಂತರ ಭಕ್ತರು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಲು ಆರಂಭಿಸಿದ್ದಾರೆ.Vasant Panchamiಯ ಶುಭದಿನದಂದು ಕರ್ನಾಟಕದ ಮಠಾಧೀಶರು ಅಮೃತ ಸ್ನಾನ ಮಾಡಿದರು. ಈ ವೇಳೆ ಕೆಲ ಮಹಿಳಾ ಸಾಧುಗಳು ಕೂಡ ಭಾಗಿಯಾಗಿದ್ದರು. ಅರೈಯಲ್ ಘಾಟ್ನಿಂದ ಬೋಟ್ನಲ್ಲಿ ತ್ರಿವೇಣಿ ಸಂಗಮಕ್ಕೆ ಸ್ವಾಮೀಜಿಗಳ ತಂಡ ತೆರಳಿತ್ತು.
ಇಂದು Vasant Panchami ಪಂಚಮಿಯಾದ್ದರಿಂದ ರಾಜ್ಯದ ಸುತ್ತೂರು ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಸಂಗಮದಲ್ಲಿ ರಾಜ್ಯದ ಸ್ವಾಮೀಜಿಗಳು ಅಮೃತ ಸ್ನಾನ ಮಾಡಿದರು. ಬಸವಕಲ್ಯಾಣದಿಂದ ಮಲೆ ಮಹಾದೇಶ್ವರ ಬೆಟ್ಟದವರೆಗೆ 25ಕ್ಕೂ ಹೆಚ್ಚು ಸ್ವಾಮೀಜಿಗಳು ಅಮೃತ ಸ್ನಾನ ಮಾಡಿದರು.ಇವತ್ತು ವಸಂತ ಪಂಚಮಿ ಇರುವ ಹಿನ್ನೆಲೆಯಲ್ಲಿ ಅಮೃತ ಸ್ನಾನ ಮಾಡಿದ್ದಾರೆ.
ನಾಡಿನ ಸಮಸ್ತ ಜನರಿಗೆ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದಾರೆ. ಇನ್ನು 2025ರ ಮಹಾ ಕುಂಭಮೇಳ ಯಶಸ್ವಿಯಾಗಿ ಸಾಗುತ್ತಿದ್ದು ಈಗಾಗಲೇ 35 ಕೋಟಿಗೂ ಅಧಿಕ ಭಕ್ತರು ಭೇಟಿ ನೀಡಿದ್ದು ಇನ್ನು ಜನರು ಬರುತ್ತಲೇ ಇದ್ದಾರೆ.ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಉತ್ತರ ಪ್ರದೇಶದ ಪ್ರಯಾಗರಾಜ್ನ ಮಹಾ ಕುಂಭಮೇಳಕ್ಕೆ ಕರ್ನಾಟಕದಿಂದಲೂ ಮಠಾಧೀಶರು, ಸಂತರು ಭೇಟಿ ನೀಡಿದ್ದಾರೆ.
ಇದನ್ನು ಓದಿರಿ :Recruitment of Deputy Engineer Posts in BEL : ಆದ್ರೆ ಈ ನಗರಗಳಲ್ಲಿ ಉದ್ಯೋಗಕ್ಕೆ ನೇಮಕ.