Smartphone and Electrical News:
ಫೋನ್ ಮತ್ತು ಇತರ ಎಲೆಕ್ಟ್ರಾನಿಕ್ ಉತ್ಪನ್ನಗಳ ಬೆಲೆಗಳು ಕಡಿಮೆ ಆಗಬಹುದು ಎನ್ನಲಾಗುತ್ತಿದೆ. ಟೆಕ್ ಕ್ಷೇತ್ರ ಆಮದು ಸುಂಕ ಕಡಿಮೆ ಮಾಡುವಂತೆ ಆಗ್ರಹ ಮಾಡಿದೆ. ಹೀಗಾಗಿ ಹೊಸ smartphones ಖರೀದಿಸುವ ಜನರಿಗೆ ಸರ್ಕಾರ ಸ್ವಲ್ಪ ರಿಲೀಫ್ ನೀಡಬಹುದು.ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಬಜೆಟ್ ಮಂಡಿಸಲಿದ್ದಾರೆ. ಹಣದುಬ್ಬರದಿಂದ ಬಳಲುತ್ತಿರುವ ಜನರಿಗೆ ಬಜೆಟ್‌ನಿಂದ ಪರಿಹಾರ ಸಿಗುವ ನಿರೀಕ್ಷೆ ಇದೆ. ಟೆಕ್ ಕ್ಷೇತ್ರ ಕೂಡ ಭಾರೀ ದೊಡ್ಡ ನಿರೀಕ್ಷೆಯಲ್ಲಿದೆ.
ಮೊಬೈಲ್ smartphones ಕಂಪನಿಗಳು ಆಮದು ಸುಂಕ ಕಡಿಮೆ ಮಾಡಲು ಸರ್ಕಾರವನ್ನು ಒತ್ತಾಯಿಸಿದ್ದವು. ಆಮದು ಸುಂಕ ಕಮ್ಮಿ ಇದ್ದರೆ ಜನರಿಗೆ ಕಡಿಮೆ ಬೆಲೆಗೆ ಫೋನ್ಗಳು ಸಿಗುತ್ತವೆ. smartphonesಗಳು ಮಾತ್ರವಲ್ಲದೇ, ಇಯರ್ ಫೋನ್, ಮೌಸ್, ಕಂಪ್ಯೂಟರ್, ಕೀಬೋರ್ಡ್, ಲ್ಯಾಪ್ಟಾಪ್, ಐಪ್ಯಾಡ್ ಸೇರಿದಂತೆ ಅನೇಕ ವಸ್ತುಗಳ ಬೆಲೆ ಕಡಿಮೆಯಾಗುವ ನಿರೀಕ್ಷೆ ಇದೆ.
Other electronic items are cheaper..?ಎಲೆಕ್ಟ್ರಾನಿಕ್ ವಸ್ತುಗಳ ಘಟಕಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡಬೇಕೆಂದು ಒತ್ತಾಯ ಮಾಡಿವೆ. ಒಂದು ವೇಳೆ ಸರ್ಕಾರ ಅಂತಹ ನಿರ್ಧಾರಗಳನ್ನು ತೆಗೆದುಕೊಂಡರೆ ಸ್ಮಾರ್ಟ್ ಟಿವಿ ಸೇರಿದಂತೆ ಅನೇಕ ವಸ್ತುಗಳ ಬೆಲೆ ಕಡಿಮೆ ಆಗಲಿದೆ.
ಮೊಬೈಲ್ ಹೊರತುಪಡಿಸಿ ಇತರ ಎಲೆಕ್ಟ್ರಾನಿಕ್ ವಸ್ತುಗಳು ಕೂಡ ಬಜೆಟ್ ನಂತರ ಕಡಿಮೆ ಆಗಬಹುದು. ಫೋನ್ ಕಂಪನಿಗಳಂತೆ ಇಂಡಿಯನ್ ಸೆಲ್ಯುಲರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ ಕೂಡ ಸರ್ಕಾರಕ್ಕೆ ಬೇಡಿಕೆ ಇಟ್ಟಿದೆ.
ಇದನ್ನು ಇದಿರಿ :Indian Derby Day 2025 – Celebrating Horse Racing At Mahalaxmi Race Course In Mumbai