Haveri News:
ಹಾವೇರಿ ಜಿಲ್ಲಾ ಪಂಚಾಯತ್ ದಿಟ್ಟ ನಿರ್ಧಾರಕ್ಕೆ ಮಂಗಳಮುಖಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಸುಮಾರು 10 ಜನ ಮಂಗಳಮುಖಿಯರು ನಿರ್ವಹಣೆ ಮಾಡಲಿರುವ TRANSGENDERS IN AKKA CAFEಗೆ ಗ್ರಾಹಕರು ಹೇಗೆ ಸ್ಪಂಧಿಸುತ್ತಾರೆ ಎಂಬ ಅತಂಕ ಜಿಲ್ಲಾಡಳಿತ ಮತ್ತು ಮಂಗಳಮುಖಿಯರಿಗಿತ್ತು. ಆದರೆ ಈಗ ಆ ಆತಂಕ ಮಾಯವಾಗಿದೆ.
ಮಂಗಳಮುಖಿಯರು ನಿರ್ವಹಣೆ ಮಾಡುತ್ತಿರುವ ಅಕ್ಕ ಕೆಫೆಗೆ ನಿರೀಕ್ಷೆಗೆ ಮೀರಿ ಗ್ರಾಹಕರು ಆಗಮಿಸುತ್ತಿದ್ದಾರೆ. ಜಿಲ್ಲಾ ಪಂಚಾಯತ್ ದಿಟ್ಟ ನಿರ್ಧಾರ ಕೈಗೊಂಡು ರಾಜ್ಯದಲ್ಲಿ ಪ್ರಥಮ ಬಾರಿಗೆ ಸರ್ಕಾರದ ಅಕ್ಕ ಕೆಫೆಯನ್ನು ನಿರ್ವಹಣೆ ಮಾಡಲು ಮಂಗಳಮುಖಿಯರಿಗೆ ಅವಕಾಶ ನೀಡಿತ್ತು.
Mangalmukhyas are dumbfounded by the response of customers:
ಜಿಲ್ಲಾಡಳಿತ ಕಚೇರಿಗೆ ವಿವಿಧ ಕೆಲಸ ಕಾರ್ಯಗಳಿಗೆ ಬರುವ ದೂರ ದೂರದ ಗ್ರಾಮಗಳ ಜನರು ಊಟದ ಸಮಯದಲ್ಲಿ ಇಲ್ಲಿಗೆ ಬಂದು ಭೋಜನ ಸವಿಯುತ್ತಾರೆ. ಇಲ್ಲಿ 70 ರೂಪಾಯಿಗೆ ಫುಲ್ ಮೀಲ್ಸ್ ನೀಡಲಾಗುತ್ತಿದೆ. ಇದರಿಂದ ಬಡವರು ಜಿಲ್ಲಾಡಳಿತದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ನೌಕರರು ಮತ್ತು ಸರ್ಕಾರಿ ನೌಕರರು ಈTRANSGENDERS IN AKKA CAFEಯಲ್ಲಿ ಆಹಾರ ಸೇವಿಸುತ್ತಾರೆ. ಇದಲ್ಲದೇ ಪಾರ್ಸಲ್ ಸೇವೆ ಸಹ ಇದ್ದು, ಪಾರ್ಸಲ್ ಕಟ್ಟಿಸಿಕೊಂಡು ಹೋಗುತ್ತಾರೆ.
ಗ್ರಾಹಕರ ಈ ಸ್ಪಂದನೆಗೆ ಮಂಗಳಮುಖಿಯರೇ ಮೂಕವಿಸ್ಮಿತರಾಗಿದ್ದಾರೆ. ಮಂಗಳಮುಖಿಯರು ನಿರ್ವಹಣೆ ಮಾಡುವ ಈ ಕೆಫೆಯಲ್ಲಿ ರುಚಿ ಮತ್ತು ಶುಚಿಗೆ ಮೊದಲ ಆದ್ಯತೆ ನೀಡಲಾಗಿದೆ. TRANSGENDERS IN AKKA CAFE ಯಾವುದೇ ಕೃತಕ ಬಣ್ಣ ರುಚಿಕಾರಕ ರಸಾಯನಿಕಗಳನ್ನು ಬಳಸದೇ ಇಲ್ಲಿ ಆಹಾರ ತಯಾರಿಸಲಾಗುತ್ತಿದೆ.
First there was fear :
ಅಭೂತಪೂರ್ವ ಸ್ಪಂದನೆ ಸಿಕ್ಕಿದೆ ಎಂದು ಈ ರೀತಿಯ ದಿಟ್ಟ ನಿರ್ಧಾರ ಕೈಗೊಂಡ ಜಿಲ್ಲಾ ಪಂಚಾಯತ್ ಕಾರ್ಯಕ್ಕೆ ಮಂಗಳಮುಖಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೊದ ಮೊದಲು ಅಕ್ಕ ಕೆಫೆಗೆ ಬರುವ ಗ್ರಾಹಕರು ನಮ್ಮನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ಭಯವಿತ್ತು. ಆದರೆ ಈಗ ಎಲ್ಲವೂ ಸುಲಭವಾಗಿದೆ. ಇಲ್ಲಿಗೆ ಬರುವ ಗ್ರಾಹಕರು ಸಹ ಮಂಗಳಮುಖಿಯರು ತಯಾರಿಸುವ ಆಹಾರ ಪದಾರ್ಥಗಳ ರುಚಿಗೆ ಮನಸೋತಿದ್ದಾರೆ.
ಇದರಿಂದ ತಮಗೆ ಗ್ಯಾಸ್ಟ್ರಿಕ್ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ನಿವಾರಣೆಯಾಗಿವೆ ಎಂದು ಗ್ರಾಹಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Unexpected Response:
“ನಾವು ಈ ಮೊದಲು ಭಿಕ್ಷೆ ಮತ್ತು ಸೆಕ್ಸ್ ವರ್ಕ್ ಮಾಡಿ ಜೀವನ ಸಾಗಿಸುತ್ತಿದ್ದೆವು. ಎಲ್ಲರಿಂದ ನಿರ್ಲಕ್ಷ್ಯಕ್ಕೆ ತುತ್ತಾಗಿದ್ದೆವು. ಅಲ್ಲದೆ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗ ಈ ಅಕ್ಕ ಕೆಫೆ ನಮ್ಮನ್ನು ಮುಖ್ಯವಾಹಿನಿಗೆ ತರುವಲ್ಲಿ ಯಶಸ್ವಿಯಾಗಿದೆ.
ಈ ಮೊದಲು ಇಲ್ಲಿಗೆ ಗ್ರಾಹಕರು ಆಗಮಿಸುತ್ತಾರೋ ಇಲ್ಲವೋ? ನಾವು ತಯಾರಿಸುವ ಆಹಾರ ಸೇವಿಸುತ್ತಾರೋ ಇಲ್ಲವೋ ಎಂಬ ಆತಂಕ ನಮ್ಮಲ್ಲಿತ್ತು. ಆದರೆ ಇದೀಗ ನಮ್ಮ ಅಕ್ಕ ಕೆಫೆಗೆ ನಿರೀಕ್ಷೆಗೆ ಮೀರಿ ಗ್ರಾಹಕರು ಆಗಮಿಸುತ್ತಿದ್ದಾರೆ.
ಒಂದು ವೇಳೆ ನಮಗೆ ಪೂರೈಕೆ ಮಾಡಲಾರದಷ್ಟು ಬೇಡಿಕೆ ಇರುತ್ತೆ. ಆದರೂ ಸಹ ಹೆಚ್ಚು ಒತ್ತಡಕ್ಕೆ ಒಳಗಾಗದೇ ಪೂರೈಕೆ ಮಾಡುತ್ತಿದ್ದೇವೆ. ನಮ್ಮ ಬದುಕಿಗೆ ಗೌರವ ತಂದುಕೊಟ್ಟ ಜಿಲ್ಲಾಡಳಿತ ಸರ್ಕಾರದ ಕಾರ್ಯಕ್ಕೆ ಅಭಿನಂದನೆ” ಎಂದು ಮಂಗಳಮುಖಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Maintaining quality till the end:
“ಇದೇ ಗುಣಮಟ್ಟವನ್ನು ಕೊನೆಯವರೆಗೂ ನಾವು ಕಾಯ್ದುಕೊಂಡು ಹೋಗುತ್ತೇವೆ. ಪ್ರತಿಯೊಬ್ಬ ಗ್ರಾಹಕನು ನಮಗೆ ದೇವರ ಸಮಾನ. ಯಾವುದೇ ಕೃತಕ ಬಣ್ಣ ರುಚಿಕಾರಕ ರಸಾಯನಿಕ ಬಳಸದೇ ರುಚಿಕಟ್ಟಾದ ಆಹಾರ ತಯಾರಿಸುತ್ತಿದ್ದೇವೆ. ಈ ರೀತಿ ತಯಾರಿಸಿದ ಆಹಾರವನ್ನು ಶುಚಿಯಾಗಿ ಪೂರೈಸುತ್ತೀವೆ.
ಅಕ್ಕ ಕೆಫೆಯನ್ನ ಸ್ವಚ್ಛವಾಗಿಟ್ಟುಕೊಂಡಿದ್ದು, ಗ್ರಾಹಕರು ಸಹ ನಮ್ಮ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದಾಗ ಜೀವನ ಸಾರ್ಥಕವಾದಂತೆ ಭಾಸವಾಗುತ್ತದೆ” ಎನ್ನುತ್ತಾರೆ ಇಲ್ಲಿಯ ಮಂಗಳಮುಖಿಯರು.
ಇದನ್ನು ಓದಿರಿ : Heart health is high;ಹಲಸಿನ ಹಣ್ಣು ತಿಂದ್ರೆ ಆರೋಗ್ಯಕ್ಕೆ 10 ಪ್ರಯೋಜನ.