spot_img
spot_img

ARYAN KHAN:ಶಾರುಖ್ ಖಾನ್ ತಾಳ್ಮೆ ಪರೀಕ್ಷಿಸಿದ ಮಗ ಆರ್ಯನ್ ಖಾನ್.

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Aryan Khan News:

ಶಾರುಖ್ ಇಂಟ್ರೊಡಕ್ಷನ್​​​ ಸೀನ್​​ನೊಂದಿಗೆ ಟೀಸರ್ ಪ್ರಾರಂಭವಾಗುತ್ತದೆ. ನಿರ್ದೇಶಕರ ಕುರ್ಚಿಯಲ್ಲಿ ಕುಳಿತ ARYAN KHAN​​, ಸೂಪರ್‌ ಸ್ಟಾರ್‌ನ ಶಾಟ್ ಅನ್ನು ಮತ್ತೆ ಮತ್ತೆ ಮಾಡುವಂತೆ ಸೂಚಿಸುತ್ತಾನೆ. ನಿರಂತರ ರೀಟೇಕ್‌ಗಳು ಶಾರುಖ್ ಅವರ ತಾಳ್ಮೆ ಪರೀಕ್ಷಿಸುತ್ತವೆ. ಕೊನೆಗೆ, ಕೋಪಗೊಂಡ ಅವರು, “ಶಟ್​​ ಅಪ್​, ಒನ್​ ಮೋರ್​, ಒನ್​ ಮೋರ್​​.

ಈಗ ನಾನು ಮಾಡುತ್ತೇನೆ, ನೀವೆಲ್ಲರೂ ನೋಡಿ ಕಲಿಯಿರಿ” ಎಂದು ತಿಳಿಸುತ್ತಾರೆ.ಬಾಲಿವುಡ್ ನಟ ಶಾರುಖ್ ಖಾನ್ ಸೋಮವಾರ ‘ನೆಕ್ಸ್ಟ್ ಆನ್ ನೆಟ್‌ಫ್ಲಿಕ್ಸ್ ಈವೆಂಟ್​’ನಲ್ಲಿ ‘ದಿ ಬಾ***ಡ್ಸ್ ಆಫ್ ಬಾಲಿವುಡ್’ (The Ba***ds of Bollywood) ಟೀಸರ್ ಅನಾವರಣಗೊಳಿಸಿದರು. ಈ ಸರಣಿಯು ಕಿಂಗ್​ ಖಾನ್​​ ಪುತ್ರ ARYAN KHAN ಅವರ ಚೊಚ್ಚಲ ನಿರ್ದೇಶನದ ಪ್ರಾಜೆಕ್ಟ್​​ ಆಗಿದೆ.

ತೆರೆಮರೆಯಲ್ಲಿ ನಡೆಯುವ ತಂದೆ-ಮಗನ ಹಾಸ್ಯದ ಒಂದು ನೋಟವನ್ನು ಟೀಸರ್ ತೋರಿಸಿದೆಈ ದೃಶ್ಯದೊಂದಿಗೆ ಟೀಸರ್​ ಮುಕ್ತಾಯಗೊಳ್ಳುತ್ತದೆ. ದೃಶ್ಯ ಹಾಸ್ಯಮಯವಾಗಿದೆ. ಕಾರ್ಯಕ್ರಮದ ಹಾಸ್ಯ ಶೀರ್ಷಿಕೆಯು ನೆಟ್‌ಫ್ಲಿಕ್ಸ್‌ನಲ್ಲಿ ಶೀಘ್ರದಲ್ಲೇ ಬರಲಿರುವ ಕಾಮಿಡಿ ಕ್ಷಣಗಳ ಸುಳಿವು ಒದಗಿಸಿದೆ. ಆದಾಗ್ಯೂ, ಈ ಶೋನ ಕಾಸ್ಟ್​ ಲಿಸ್ಟ್​​ ಅನ್ನು ಗೌಪ್ಯವಾಗಿಡಲಾಗಿದೆ.

ಟೀಸರ್​ನಲ್ಲಿ ಚಿತ್ರತಂಡದ ಹೆಸರು ಬಹಿರಂಗಗೊಳ್ಳುತ್ತದೆ. ಆದ್ರೆ, ಈ ಪ್ರೊಜೆಕ್ಟ್​​ನಲ್ಲಿ ಹೆಚ್ಚಿನ ಸುಳಿವು ಬಿಟ್ಟುಕೊಟ್ಟಿಲ್ಲ.ನಂತರ ಶಾರುಖ್​​ ಖಾನ್ ಪರ್ಫೆಕ್ಟ್​​ ಶಾಟ್ ನೀಡಿದ್ದಾರೆ. ಆದರೆ, ಅಲ್ಲೂ ಹಾಸ್ಯಮಯ ತಿರುವೊಂದನ್ನು ನೀವು ನೋಡಬಹುದು. ನಿರ್ದೇಶಕನ ಜವಾಬ್ದಾರಿ ಹೊತ್ತ ARYAN KHAN, ಕ್ಯಾಮೆರಾ ರೋಲಿಂಗ್​ನಲ್ಲಿಲ್ಲ ಎಂದು ತಿಳಿಸಿದ್ದಾನೆ.

ಕೊನೆಗೆ, ಶಾರುಖ್ ತನ್ನ ಮಗನ ಮೂರ್ಖತನಕ್ಕಾಗಿ ಆತನಿಗೆ ಹೊಡೆಯಲು ಆತನ ಹಿಂದೆ ಓಡಿದ್ದಾರೆ.ಎಲ್ಲರೂ ಆಕರ್ಷಕವಾಗಿ ಕಾಣಿಸಿಕೊಂಡರು. ಈ ಸಂದರ್ಭದಲ್ಲಿ ಶಾರುಖ್, ತಮಗೆ ತೋರಿಸಿದ ಪ್ರೀತಿಯಲ್ಲಿ ಕನಿಷ್ಠ ಅರ್ಧದಷ್ಟನ್ನಾದರೂ ತಮ್ಮ ಮಕ್ಕಳಾದ ಸುಹಾನಾ ಮತ್ತು ARYAN KHAN​​ ಅವರಿಗೆ ತೋರಿಸಿ ಎಂದು ಅಭಿಮಾನಿಗಳು ಮತ್ತು ಮಾಧ್ಯಮದವರಲ್ಲಿ ಕೇಳಿಕೊಂಡರು.

ಶಾರುಖ್ ಖಾನ್ ಹೊರತುಪಡಿಸಿ, ಪತ್ನಿ ಗೌರಿ ಖಾನ್, ಮಕ್ಕಳಾದ ARYAN KHAN ಮತ್ತು ಸುಹಾನಾ ಖಾನ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಾಲಿವುಡ್​ ಕಿಂಗ್​​ ಶಾರುಖ್​ ಖಾನ್​ಗೆ ಪುತ್ರ ARYAN KHAN​ ಆ್ಯಕ್ಷನ್​ ಕಟ್​ ಹೇಳಿರೋದು ಇದೇ ಮೊದಲಲ್ಲ. ಈ ಹಿಂದೆ ತಮ್ಮ ಬ್ರ್ಯಾಂಡ್​ನ ಜಾಹೀರಾತನ್ನು ARYAN KHAN​ ನಿರ್ದೇಶಿಸಿದ್ದರು. ಇದೀಗ ಮತ್ತೊಮ್ಮೆ ವಿಶ್ವಾದ್ಯಂತ ಗಮನ ಸೆಳೆದಿರುವ ಶಾರುಖ್​ ಖಾನ್​ಗೆ ARYAN KHAN ಡೈರೆಕ್ಷನ್​ ಮಾಡಿದ್ದಾರೆ.

 

ಇದನ್ನು ಓದಿರಿ :Honour To The Late Designer Rohit Bal! Sonam Kapoor Tears Up?

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

SAFETY OF WOMEN:ಮಹಿಳೆಯರ ಸುರಕ್ಷತೆಗೆ ಶೂ ಡಿವೈಸ್ ಆವಿಷ್ಕರಿಸಿದ ವಿದ್ಯಾರ್ಥಿ

Alwar (Rajasthan) News​: ದುಷ್ಕರ್ಮಿಗಳ ವಿರುದ್ಧ ರಕ್ಷಣೆ ಪಡೆಯಲು ಶಾಕ್​ ನೀಡುವ ಶೂವನ್ನು ವಿದ್ಯಾರ್ಥಿ ವಿನ್ಯಾಸ ಮಾಡಿದ್ದಾರೆ. ಇದರಿಂದ ಧರಿಸಿದವರಿಗೆ ಯಾವುದೇ ಗಂಭೀರ ಸಮಸ್ಯೆ ಅಥವಾ...

UPCOMING SMARTPHONES IN FEBRUARY:ಈ ತಿಂಗಳು ಮಾರುಕಟ್ಟೆಗೆ ಲಗ್ಗೆಯಿಡುವ ಸ್ಮಾರ್ಟ್ಫೋನ್ಗಳಿವು

  Upcoming Smartphone Launches in February News: ಈ ಫೆಬ್ರವರಿ ತಿಂಗಳಲ್ಲಿ ಸೂಪರ್​ ಫೀಚರ್​ಗಳೊಂದಿಗೆ ಹೊಸ SMARTPHONES​ಗಳನ್ನು ಪರಿಚಯಿಸಲು ಅನೇಕ ಕಂಪೆನಿಗಳು ಕಾತುರವಾಗಿವೆ. ಪ್ರಪಂಚಾದ್ಯದಂತ ಅನೇಕ...

WORLD CANCER DAY: ಕ್ಯಾನ್ಸರ್ ವಿರುದ್ಧ ಹೋರಾಡಿದ ಸೆಲೆಬ್ರಿಟಿಗಳಿವರು.

  Shivarajkumar News : CANCER ವಿರುದ್ಧ ಧೈರ್ಯದಿಂದ ಹೋರಾಡಿ, ಎಷ್ಟೋ ರೋಗಿಗಳಿಗೆ ಬದುಕಿನ ಭರವಸೆ ಮೂಡಿಸಿದ ಸೆಲೆಬ್ರಿಟಿಗಳ ಮಾಹಿತಿ ಇಲ್ಲಿದೆ. ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್ ಇತ್ತೀಚೆಗಷ್ಟೇ CANCER...

KIDNEY FAILURE SYMPTOMS:ನಿಮ್ಮನ್ನು ನಿರಂತರವಾಗಿ ಈ ಸಮಸ್ಯೆಗಳು ಕಾಡುತ್ತಿವೆಯೇ?

Kidney Failure Symptoms News: ಮೂತ್ರಪಿಂಡಗಳು ಹಾನಿಗೊಳಗಾದ ನಂತರ ಡಯಾಲಿಸಿಸ್ ಅಥವಾ ಮೂತ್ರಪಿಂಡ ಕಸಿ ಮಾಡುವುದನ್ನು ಬಿಟ್ಟು ಬೇರೆ ಯಾವುದೇ ದಾರಿಯಿಲ್ಲ. ವೈದ್ಯಕೀಯ ತಜ್ಞರು ತಿಳಿಸುವಂತೆ...