spot_img
spot_img

ICC CHAMPIONS TROPHY 2025 : 1.8 ಲಕ್ಷ ರೂಪಾಯಿ ಬೆಲೆಯ ಟಿಕೆಟ್ಗಳೂ ಖಾಲಿ!

spot_img
spot_img

Share post:

India vs Pakistan, ICC Champions Trophy-2025:

2023ರಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್​ನಲ್ಲಿ ಉಭಯ ತಂಡಗಳು ಎದುರುಬದುರಾಗಿದ್ದವು. ಇದೀಗ 15 ತಿಂಗಳ ನಂತರ ಎರಡೂ ತಂಡಗಳು ಪರಸ್ಪರ ಸೆಣಸಲಿವೆ. ICC CHAMPIONS TROPHY 2025 ಇದೇ ತಿಂಗಳು, ಫೆಬ್ರವರಿ 19ರಿಂದ ಆರಂಭವಾಗಲಿರುವ ಐಸಿಸಿ ಚಾಂಪಿಯನ್ಸ್​ ಟ್ರೋಫಿಯಲ್ಲಿ ಭಾರತ-ಪಾಕ್​ ನಡುವೆ ಹೈ ವೋಲ್ಟೇಜ್‌ ಮ್ಯಾಚ್ ನಡೆಯಲಿದೆ. ಈ ಬಾರಿಯ ಚಾಂಪಿಯನ್ಸ್​ ಟ್ರೋಫಿಗೆ ಪಾಕಿಸ್ತಾನ ಆತಿಥ್ಯ ವಹಿಸಿಕೊಂಡಿದೆ. ಆದರೆ, ಭಾರತ ಪಾಕ್​ಗೆ ತೆರಳಲು ಹಿಂದೇಟು ಹಾಕುತ್ತಿರುವ ಕಾರಣ ಪಂದ್ಯಾವಳಿಯನ್ನು ಹೈಬ್ರಿಡ್​ ಮಾದರಿಯಲ್ಲಿ ನಡೆಸಲಾಗುತ್ತಿದೆ.

ICC CHAMPIONS TROPHY 2025 ಭಾರತ ಆಡುವ ಎಲ್ಲಾ ಪಂದ್ಯಗಳು ಪಾಕಿಸ್ತಾನದ ಬದಲಿಗೆ ದುಬೈನಲ್ಲಿ ನಡೆಯಲಿವೆ. ಈ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಭಾಗಿಯಾಗುತ್ತಿವೆ. ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ.

ಎ ಗ್ರೂಪ್​ನಲ್ಲಿ ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್​, ಬಾಂಗ್ಲಾದೇಶ ಇವೆ. ಬಿ ಗುಂಪಿನಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್​, ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ ತಂಡಗಳಿವೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕಿರುವ ಕ್ರೇಜ್ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಉಭಯ ತಂಡಗಳ ನಡುವೆ ದ್ವಿಪಕ್ಷೀಯ ಸರಣಿ ರದ್ದಾಗಿ ವರ್ಷಗಳೇ ಕಳೆದಿವೆ. ಸದ್ಯ, ಇತ್ತಂಡಗಳು ಐಸಿಸಿ ಆಯೋಜಿತ ವಿಶ್ವಕಪ್​ನಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ.

Ticket Soldout:

ಭಾರತ-ಪಾಕ್​ ನಡುವಿನ ಮಹತ್ವದ ಪಂದ್ಯಕ್ಕಾಗಿ ಆನ್‌​ಲೈನ್​ನಲ್ಲಿ ಟಿಕೆಟ್​ಗಳನ್ನು ಬಿಡುಗಡೆ ಮಾಡಲಾಗಿತ್ತು. ಆದರೆ, ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಎಲ್ಲಾ ಟಿಕೆಟ್​ಗಳು ಸೋಲ್ಡೌಟ್​ ಆಗಿವೆ.

ಒಂದೂವರೆ ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಟಿಕೆಟ್‌ಗಳಿಗಾಗಿ ಆನ್‌ಲೈನ್‌ನಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಕಾದಿದ್ದು, ಟಿಕೆಟ್​ ಸಿಗದೆ ನಿರಾಶರಾಗಿದ್ದಾರೆ. ಈ ಮೈದಾನದಲ್ಲಿ 25,000 ಸಾವಿರ ಜನರು ಮಾತ್ರ ಕುಳಿತುಕೊಳ್ಳುವ ಸಾಮರ್ಥ್ಯವಿದ್ದ ಕಾರಣ ಹಲವಾರು ಜನರಿಗೆ ಟಿಕೆಟ್​ ಸಿಗಲಿಲ್ಲ.

The ticket price is as follows:

  • ಪ್ಲಾಟಿನಂ ವಿಭಾಗದ ಟಿಕೆಟ್‌ಗಳು 2,000 ದಿರ್ಹಮ್‌ಗಳು ಅಂದರೆ ಭಾರತೀಯ ರೂಪಾಯಿಯಲ್ಲಿ ₹47,434.
  • ಗ್ರ್ಯಾಂಡ್ ಲೌಂಜ್ ವಿಭಾಗದ ಟಿಕೆಟ್‌ಗಳು 5,000 ದಿರ್ಹಮ್‌ಗಳು (₹1.8 ಲಕ್ಷ) ಆಗಿದ್ದರೂ ಅವು ಕೂಡಾ ಬೇಗನೆ ಮಾರಾಟವಾದವು.

India’s matches are as follows:

  • ಮೊದಲ ಪಂದ್ಯ ಬಾಂಗ್ಲಾದೇಶ ವಿರುದ್ದ ಫೆ.20ರಂದು.
  • ಪಾಕಿಸ್ತಾನ ವಿರುದ್ಧ ಫೆ.23ರಂದು.
  • ನ್ಯೂಜಿಲೆಂಡ್​ ವಿರುದ್ದ ಗುಂಪು ಹಂತದ ಕೊನೆಯ ಪಂದ್ಯ ಮಾ.2ರಂದು.

ಇದನ್ನು ಓದಿರಿ : Meet BabyAlpha And BooBoo, The AI Pets Young Chinese Are Buying For Emotional Relief

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...