Abhishek Bachchan News:
ವೃತ್ತಿಜೀವನದ ಆರಂಭದಲ್ಲಿ ಬಿಗ್ ಬಿ ಪುತ್ರ ABHISHEK BACHCHAN ಹೆಸರು ಕೆಲ ನಟಿಯೊಂದಿಗೆ ಕೇಳಿಬಂತಾದರೂ 2007ರ ಏಪ್ರಿಲ್ 7ರಂದು ಅತಿಲೋಕ ಸುಂದರಿ ಐಶ್ವರ್ಯಾ ರೈ ಅವರೊಂದಿಗೆ ಹಸೆಮಣೆ ಏರಿದರು. ದಂಪತಿಗೆ ಆರಾಧ್ಯ ಎಂಬ ಮಗಳಿದ್ದಾಳೆ.
ಫೆಬ್ರವರಿ 5. ಬಾಲಿವುಡ್ ನಟ ABHISHEK BACHCHAN ಅವರಿಗೆ ಬಹಳ ವಿಶೇಷವಾದ ದಿನ. ಹೌದು, ಇಂದು ಜೂನಿಯರ್ ಬಚ್ಚನ್ ತಮ್ಮ 49ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಕುಟುಂಬಸ್ಥರು, ಆಪ್ತರು, ಸಿನಿರಂಗದ ಸ್ನೇಹಿತರೂ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ.
Entered Film Industry in 2000:
ಇಂಡಿಯನ್ ಸಿನಿಮಾ ಲೆಜೆಂಡ್ ಅಮಿತಾಭ್ ಬಚ್ಚನ್ ಪುತ್ರನಾಗಿ ABHISHEK BACHCHAN 1976ರ ಫೆಬ್ರವರಿ 5ರಂದು ಮುಂಬೈನಲ್ಲಿ ಜನಿಸಿದರು. 2000ರಲ್ಲಿ ರೆಫ್ಯೂಜಿ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದರು. ತಮ್ಮ ಚೊಚ್ಚಲ ಚಿತ್ರದಲ್ಲಿ ನಟಿ ಕರೀನಾ ಕಪೂರ್ ಅವರೊಂದಿಗೆ ತೆರೆ ಹಂಚಿಕೊಂಡರು. ಕರೀನಾ ಅವರ ಅಕ್ಕ ಕರೀಷ್ಮಾ ಕಪೂರ್ ಅವರೊಂದಿಗೆ ಮದುವೆ ನಿಗದಿಯಾಯ್ತಾದರೂ ಇದು ಕೈಗೂಡಲಿಲ್ಲ.
Abhishek Bachchan Love Rumors:
ರೆಫ್ಯೂಜಿ ನಂತರ, ABHISHEK BACHCHAN ಐಶ್ವರ್ಯಾ ಅವರೊಂದಿಗೆ ಧಾಯ್ ಅಕ್ಷರ್ ಪ್ರೇಮ್ ಕೆ (2000) ಚಿತ್ರದಲ್ಲಿ ಕೆಲಸ ಮಾಡಿದ್ದರು. ಇದಾದ ನಂತರ ಅಭಿಷೇಕ್, ರಾಣಿ ಮುಖರ್ಜಿ ಅವರೊಂದಿಗೆ ಬಸ್ ಇತ್ನಾ ಸ ಖ್ವಾಬ್ ಹೈ ಚಿತ್ರದಲ್ಲಿ ಕೆಲಸ ಮಾಡಿದ್ರು. ಹೀಗೆ ಕೆಲ ಚಿತ್ರಗಳ ನಂತರ, ಅವರ ಹೆಸರು ರಾಣಿ ಮುಖರ್ಜಿ ಅವರೊಂದಿಗೆ ತಳುಕು ಹಾಕಿಕೊಂಡಿತು.
2002ರಲ್ಲಿ, ಕರೀಷ್ಮಾ ಮತ್ತು ABHISHEK BACHCHAN ಕಾಂಬಿನೇಷನ್ನ ಚೊಚ್ಚಲ ಚಿತ್ರ ‘ಹಾನ್ ಮೈನೆ ಭಿ ಪ್ಯಾರ್ ಕಿಯಾ ಹೈ’ ಬಿಡುಗಡೆಯಾಯಿತು. ಸಿನಿಮಾ ಸೂಪರ್ ಹಿಟ್ ಆಯಿತು. ಅಭಿಷೇಕ್ ಮತ್ತು ಕರೀಷ್ಮಾ ಜೋಡಿ ಪಾಪ್ಯುಲರ್ ಆಗಿ, ಜನರು ಅವರ ಬಗ್ಗೆ ಮಾತನಾಡಲು ಪ್ರಾರಂಭಿಸಿದರು.
ಅಭಿಷೇಕ್ ಮತ್ತು ಕರೀಷ್ಮಾ ಅವರ ಸ್ನೇಹ ಮದುವೆ ಹಂತ ಕೂಡಾ ತಲುಪಿತು. ಆದ್ರೆ ಅದ್ಯಾಕೋ ನಿರೀಕ್ಷೆ ಕೈಗೂಡಲಿಲ್ಲ. ಅಭಿಷೇಕ್ ಮತ್ತು ಕರೀಷ್ಮಾ ‘ಹಾನ್ ಮೈನೆ ಭಿ ಪ್ಯಾರ್ ಕಿಯಾ ಹೈ’ ನಂತರ ಯಾವುದೇ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿಲ್ಲ.
Aish Entry to Abhi Life:
ಕರೀಷ್ಮಾ ಜೊತೆಗೆ, ಅಭಿಷೇಕ್ ಬಚ್ಚನ್ ಹೆಸರು ರಾಣಿ ಮುಖರ್ಜಿ ಅವರೊಂದಿಗೂ ಸುದ್ದಿಯಲ್ಲಿತ್ತು. ಆದರೆ ವೈಯಕ್ತಿಕ ಕಾರಣಗಳಿಂದ ಮದುವೆ ಸಾಧ್ಯವಾಗಲಿಲ್ಲ. ನಂತರ, ಅಭಿಷೇಕ್ ಬಚ್ಚನ್ ಹೆಸರು ಐಶ್ವರ್ಯಾ ರೈ ಜೊತೆ ತಳುಕು ಹಾಕಿಕೊಳ್ಳಲು ಪ್ರಾರಂಭಿಸಿತು.
‘ಧಾಯ್ ಅಕ್ಷರ್ ಪ್ರೇಮ್ ಕೆ’ ನಂತರ, ಅಭಿಷೇಕ್-ಐಶ್ ಜೋಡಿ 2003ರಲ್ಲಿ ಕುಚ್ ನಾ ಕಹೋ, 2006ರಲ್ಲಿ ಉಮ್ರಾವ್ ಜಾನ್ ಮತ್ತು 2007ರ ಸೂಪರ್ ಹಿಟ್ ಗುರು ಸಿನಿಮಾದಲ್ಲಿ ಕಾಣಿಸಿಕೊಂಡರು. ಗುರು ಸಿನಿಮಾ 2007ರ ಜನವರಿ 12 ರಂದು ಬಿಡುಗಡೆಯಾಯಿತು. ಸಿನಿಮಾ ಸೂಪರ್ ಹಿಟ್ ಆದ ನಾಲ್ಕು ತಿಂಗಳ ಬಳಿಕ, ಅಭಿ ಐಶ್ 2007ರ ಏಪ್ರಿಲ್ 7ರಂದು ಹಸೆಮಣೆ ಏರಿದರು.
ಮದುವೆಯಾದ 3 ವರ್ಷಗಳ ನಂತರ, ಮಣಿರತ್ನಂ ಅವರ ರಾವಣ್ ಚಿತ್ರದಲ್ಲಿ ಸ್ಕ್ರೀನ್ ಶೇರ್ ಮಾಡಿದ್ದರು. ಇದಾದ ನಂತರ ಈ ಜೋಡಿ ಮತ್ತೆ ಬೆಳ್ಳಿತೆರೆಯಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿಲ್ಲ.ಅದೇನೇ ವದಂತಿಗಳು ಹರಡಿದ್ದರೂ ಪ್ರಬುದ್ಧತೆಯಿಂದ, ಮಾದರಿ ದಾಂಪತ್ಯ ಜೀವನ ನಡೆಸುತ್ತಿರುವ ಜನಪ್ರಿಯ ತಾರಾ ದಂಪತಿಗೆ ಆರಾಧ್ಯ ಎಂಬ ಮಗಳಿದ್ದಾಳೆ.
ಇದನ್ನು ಓದಿರಿ : India Developing Its Own AI Chip, Plans Generative AI Model With 18,693 GPUs