Inside Roadster News:
ಎಲೆಕ್ಟ್ರಿಕ್ ಬೈಕ್ ವಾಹನ ತಯಾರಕ ಓಲಾ ತನ್ನ ಎಲೆಕ್ಟ್ರಿಕ್ ಬೈಕ್ಗಳನ್ನು ಇಂದು (ಫೆ.5) ರೋಡಿಗಿಳಿಸಿದೆ. ಓಲಾ ರೋಡ್ಸ್ಟರ್ ಸೀರಿಸ್ನ ಎರಡು ಹೊಸ ಮಾಡೆಲ್ಗಳನ್ನು ದೇಶಿಯ ಮಾರುಕಟ್ಟೆಗೆ ಪರಿಚಯಿಸಿದೆ. ಇತ್ತೀಚೆಗೆ ಥರ್ಡ್ ಜನರೇಶನ್ ಪ್ಲಾಟ್ಫಾರ್ಮ್ನಲ್ಲಿ ನಿರ್ಮಿಸಲಾದ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದ ಕಂಪನಿಯು ಇತ್ತೀಚೆಗೆ ರೋಡ್‌ಸ್ಟರ್ ಎಕ್ಸ್ ಮತ್ತು ರೋಡ್‌ಸ್ಟರ್ ಎಕ್ಸ್+ ಎಂಬ ಎಲೆಕ್ಟ್ರಿಕ್ ಬೈಕ್ಗಳನ್ನು ಬಿಡುಗಡೆ ಮಾಡಿದೆ. ಅವು ವಿಭಿನ್ನ ಬ್ಯಾಟರಿ ರೂಪಾಂತರಗಳಲ್ಲಿ ಲಭ್ಯ ಇವೆ.
ಅವುಗಳ ಬೆಲೆ ರೂ. 74,999 (ಎಕ್ಸ್ ಶೋ ರೂಂ) ರಿಂದ OLA ROADSTER SERIES LAUNCHED ಪ್ರಾರಂಭವಾಗುತ್ತದೆ. ಇಂದಿನಿಂದ ಬುಕಿಂಗ್ ಶುರುವಾಗಿದ್ದು, ಮುಂದಿನ ತಿಂಗಳಿಂದ ಡೆಲಿವರಿ ಆರಂಭಗೊಳ್ಳಲಿದೆ ಎಂದು ಕಂಪನಿಯ ಸಿಇಒ ಭವಿಶ್ ಅಗರ್ವಾಲ್ ಬಹಿರಂಗಪಡಿಸಿದ್ದಾರೆ.
OLA Roadster X :
ಕಂಪನಿಯು ಮಧ್ಯಮ ಶ್ರೇಣಿಯ 3.5kWh ಬ್ಯಾಟರಿ ರೂಪಾಂತರದ ಬೆಲೆಯನ್ನು ರೂ. 84,999 ನಿಗದಿಪಡಿಸಿದೆ. ಸಿಂಗಲ್ ಚಾರ್ಜ್‌ನಲ್ಲಿ ಗರಿಷ್ಠ 201 ಕಿಲೋಮೀಟರ್ ಪ್ರಯಾಣಿಸಬಹುದು ಮತ್ತು ಇದರ ಗರಿಷ್ಠ ವೇಗ ಗಂಟೆಗೆ 118 ಕಿಲೋಮೀಟರ್ ಎಂದು ಕಂಪನಿ ಹೇಳಿಕೊಂಡಿದೆ.
ರೋಡ್‌ಸ್ಟರ್ ಎಕ್ಸ್ ಮೂರು ಬ್ಯಾಟರಿ ಪ್ಯಾಕ್‌ಗಳನ್ನು ಹೊಂದಿದೆ. ಕಂಪನಿಯು 2.5kWh ಬ್ಯಾಟರಿ ಹೊಂದಿರುವ ಮೂಲ ರೂಪಾಂತರದ ಬೆಲೆಯನ್ನು 74,999 ರೂ.ಗಳಿಗೆ ಘೋಷಿಸಿದೆ. ಇದು ಸಿಂಗಲ್ ಚಾರ್ಜ್‌ನಲ್ಲಿ 144 ಕಿಲೋ ಮೀಟರ್ ವ್ಯಾಪ್ತಿಯನ್ನು ಹೊಂದಿದ್ದು, ಗಂಟೆಗೆ 105 ಕಿಲೋ ಮೀಟರ್ ಗರಿಷ್ಠ ವೇಗವನ್ನು ಪಡೆಯಲಿದೆ. ಕಂಪನಿಯು 4.5kWh ರೂಪಾಂತರದ ಬೆಲೆಯನ್ನು 94,999 ರೂ.ಗಳಿಗೆ ನಿಗದಿಪಡಿಸಿದೆ.
ಸಿಂಗಲ್ ಚಾರ್ಜ್‌ನಲ್ಲಿ ಗರಿಷ್ಠ 259 ಕಿಲೋ ಮೀಟರ್ ಪ್ರಯಾಣಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಕಂಪನಿಯು ಹೇಳಿಕೊಂಡಿರುವ ಪ್ರಕಾರ, ಇದರ ಗರಿಷ್ಠ ವೇಗ ಗಂಟೆಗೆ 125 ಕಿಲೋ ಮೀಟರ್ ಆಗಿದೆ. ಈ ಬೈಕ್‌ಗಳು ಓಲಾ ಮೂವ್‌ಓಎಸ್ 5 ನೊಂದಿಗೆ ಕಾರ್ಯನಿರ್ವಹಿಸುತ್ತವೆ.
ಈ ಬೈಕ್ಗಳಿಗೆ 4.3 ಇಂಚಿನ LCD ಸ್ಕ್ರೀನ್ ಅನ್ನು ಅಳವಡಿಸಿದ್ದಾರೆ. ಇದರಲ್ಲಿ ಸ್ಪೋರ್ಟ್ಸ್, ನಾರ್ಮಲ್ ಮತ್ತು ಇಕೋ ಎಂಬ ಮೂರು ಮಾದರಿಗಳಿವೆ. ಎಬಿಎಸ್ ಮತ್ತು ಡಿಸ್ಕ್ ಬ್ರೇಕ್‌ಗಳಂತಹ ಸೌಲಭ್ಯಗಳು ಸೇರಿದಂತೆ ಇನ್ನು ಅನೇಕ ಫೀಚರ್ಗಳನ್ನು ಈ ಬೈಕ್ನಲ್ಲಿ ಕಾಣಬಹುದಾಗಿದೆ.
OLA Roadster X+ :
ಈ ಎರಡೂ ಮೋಟಾರ್‌ಸೈಕಲ್‌ಗಳ ಗರಿಷ್ಠ ವೇಗ ಗಂಟೆಗೆ 125 ಕಿ. ಮೀ. ಇದೆ. ಇದು ಕ್ರೂಸ್ ಕಂಟ್ರೋಲ್ ಮತ್ತು ರಿವರ್ಸ್ ಮೋಡ್‌ನಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಸೆರಾಮಿಕ್ ವೈಟ್, ಗ್ರೀನ್, ಇಂಡಸ್ಟ್ರಿಯಲ್ ಸಿಲ್ವರ್, ಸ್ಟೆಲ್ಲರ್ ಬ್ಲೂ ಮತ್ತು ಆಂಥ್ರಾಸೈಟ್ ಕಲರ್ ಆಪ್ಷನ್ಗಳಲ್ಲಿ ಈ ಬೈಕ್‌ಗಳು ಲಭ್ಯ ಇವೆ.
ರೋಡ್‌ಸ್ಟರ್ ಎಕ್ಸ್ ಪ್ಲಸ್ ಎರಡು ಬ್ಯಾಟರಿ ಪ್ಯಾಕ್‌ಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಕಂಪನಿಯು 4.5kWh ಬ್ಯಾಟರಿ ರೂಪಾಂತರದ ಬೆಲೆಯನ್ನು 1,04,999 ರೂ.ಗಳಿಗೆ ನಿಗದಿಪಡಿಸಿದೆ. ಇದರ IDC ರೇಂಜ್ 259 ಕಿ.ಮೀ. ಮೈಲೇಜ್ ನೀಡಲಿದೆ. 9.1kWh ರೂಪಾಂತರದ ಬೆಲೆ 1,54,999 ರೂ.
ಕಂಪನಿಯು ತನ್ನ IDC ರೇಂಜ್ 501 ಕಿ.ಮೀ. ನೀಡುವುದಾಗಿ ಘೋಷಿಸಿದೆ. ಲಾಂಚಿಂಗ್ ವೇಳೆ ಓಲಾ ಎಲೆಕ್ಟ್ರಿಕ್ ಪ್ರತಿ ಮಾದರಿಯ ಮೇಲೆ ರೂ. 15 ಸಾವಿರ ರಿಯಾಯಿತಿಯನ್ನು ನೀಡುತ್ತಿದೆ ಎಂದು ತಿಳಿಸಿದೆ. ಈ ಬೆಲೆಗಳು ಕೇವಲ ಏಳು ದಿನಗಳವರೆಗೆ ಮಾತ್ರ ಮಾನ್ಯವಾಗಿರುತ್ತವೆ ಎಂದು ಸ್ಪಷ್ಟಪಡಿಸಲಾಗಿದೆ. ಅದಾದ ನಂತರ ಬೆಲೆ ಹೆಚ್ಚಾಗಲಿದೆ.
ಇದನ್ನು ಓದಿರಿ : Economic Survey 2024-25: Will Local Governments Allow Suggested Interventions