Annual and Lifetime Toll Passages News:
TOLLಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಆದಷ್ಟು ಬೇಗ ಮಹತ್ವದ ನಿರ್ಧಾರ ಕೈಗೊಳ್ಳಲಿದೆ. ಈ ನಿಯಮದಿಂದ ವಾಹನ ಸವಾರರು TOLL ಬಗೆಗಿನ ಚಿಂತನೆ ಕಡಿಮೆಯಾಗಬಹುದಾಗಿದೆ.ಇನ್ನು ಹೊಸ ನಿಮಯದ ಪ್ರಕಾರ ಸರ್ಕಾರವು ಖಾಸಗಿ ವಾಹನಗಳಿಗೆ TOLL ಪಾಸ್‌ಗಳನ್ನು ಪರಿಚಯಿಸಬಹುದಾಗಿದೆ.
ಮಾಹಿತಿ ಪ್ರಕಾರ, ಈ TOLL ಪಾಸ್ ಬಂದ ನಂತರ ಜನರು ವರ್ಷಕ್ಕೊಮ್ಮೆ ಕೇವಲ 3,000 ರೂ. ಪಾವತಿಸುವ ಮೂಲಕ ಎಲ್ಲಿ ಬೇಕಾದರಲ್ಲಿ ಪ್ರಯಾಣಿಸಬಹುದಾಗಿದೆ. ಇದರ ಜೊತೆ ಸರ್ಕಾರ ಲೈಫ್ಟೈಮ್ ಪಾಸ್ ನೀಡುವ ಬಗ್ಗೆಯೂ ಆಲೋಚಿಸುತ್ತಿದೆ. TOLLಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಸ ನಿಯಮ ತರಲು ಚಿಂತನೆ ನಡೆಸುತ್ತಿದೆ.
ಒಂದು ವೇಳೆ ಈ ಹೊಸ ನಿಯಮ ಜಾರಿಗೆ ಬಂದ್ರೆ, ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳ TOLLಗೇಟ್ ಬಳಿ ವಾಹನಗಳ ಸರತಿ ಸಾಲುಗಳು ಅಥವಾ ದಟ್ಟಣೆ ಇರುವುದಿಲ್ಲ. ಅಷ್ಟೇ ಅಲ್ಲ, ಫಾಸ್ಟ್‌ಟ್ಯಾಗ್ ಕಾರ್ಡ್‌ನಿಂದ ಪದೇ ಪದೇ ಹಣವನ್ನು ಕಡಿತಗೊಳಿಸಲಾಗುವುದಿಲ್ಲ.
How will the new fasttag rule be?ಇದಲ್ಲದೇ ಸರ್ಕಾರವು ಕೇವಲ ಒಂದು ವರ್ಷಕ್ಕೆ ಮಾತ್ರವಲ್ಲದೆ, ಲೈಫ್ಟೈಮ್ TOLL ಪಾಸ್ ಅನ್ನು ಪರಿಚಯಿಸುವ ಬಗ್ಗೆ ಯೋಚಿಸುತ್ತಿದೆ. 30 ಸಾವಿರ ರೂ.ಗಳನ್ನು ಒಮ್ಮೆ ಪಾವತಿಸಿದರೆ 15 ವರ್ಷಗಳವರೆಗೆ TOLL ಪಾಸ್ ಸೌಲಭ್ಯ ದೊರೆಯಲಿದೆ.
ಈ TOLL ಪಾಸ್ ನಿಯಮದ ಮೂಲಕ ಭಾರತ ಸರ್ಕಾರವು TOLL ಸಂಗ್ರಹವನ್ನು ಸುಲಭಗೊಳಿಸಲು ಬಯಸುತ್ತದೆ. ಈ ಹೊಸ ನಿಯಮ ಜಾರಿಗೆ ಬಂದ ಬಳಿಕ TOLL ಬೂತ್‌ಗಳಲ್ಲಿ ವಾಹನಗಳ ದೀರ್ಘ ಸರತಿ ಸಾಲುಗಳು ಸಹ ನಿಲ್ಲುತ್ತವೆ ಅಥವಾ ವಾಹನ ದಟ್ಟಣೆಯೂ ಕಂಡು ಬರುವುದಿಲ್ಲ.
ಒಂದೇ ಬಾರಿ ಹಣ ಪಾವತಿಸುವ ಮೂಲಕ ಇಡೀ ವರ್ಷಕ್ಕೆ TOLL ಪಾಸ್‌ಗಳನ್ನು ನೀಡಲು ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ. ವರ್ಷಕ್ಕೊಮ್ಮೆ ಕೇವಲ 3 ಸಾವಿರ ರೂಪಾಯಿ ಠೇವಣಿ ಇಡುವುದರಿಂದ ಯಾವುದೇ ರಾಷ್ಟ್ರೀಯ ಹೆದ್ದಾರಿ ಮತ್ತು ಎಕ್ಸ್‌ಪ್ರೆಸ್‌ವೇಯಲ್ಲಿ ವಾಹನವನ್ನು ತೆಗೆದುಕೊಂಡು ಹೋಗಲು TOLL ಪಾವತಿಸುವ ಅವಶ್ಯಕತೆಯಿಲ್ಲ. ಈ ಪ್ರಸ್ತಾವನೆಯು TOLL ಶುಲ್ಕವನ್ನು ಅಗ್ಗಗೊಳಿಸುವುದಲ್ಲದೆ, TOLL ಗೇಟ್‌ನಲ್ಲಿ ಸಂಚಾರವನ್ನು ಮತ್ತಷ್ಟು ಸುಲಭಗೊಳಿಸುತ್ತದೆ.
Nitin Gadkari said:ಕೇಂದ್ರ ಸರ್ಕಾರ ಈ ನಿಯಮಗಳನ್ನು ಜಾರಿಗೊಳಿಸಿದರೆ.. ಫಾಸ್ಟ್‌ಟ್ಯಾಗ್ ಖಾತೆದಾರರು ಮಾಸಿಕ ಮತ್ತು ವಾರ್ಷಿಕ ಟೋಲ್ ಪಾಸ್ ಯೋಜನೆಯ ಪ್ರಕಾರ ಅನ್ಲಿಮಿಟೆಡ್ ಎಂಟ್ರಿ ಪಡೆಯಬಹುದು, ಯಾವುದೇ ರಾಷ್ಟ್ರೀಯ ಹೆದ್ದಾರಿ ಮತ್ತು ಎಕ್ಸ್‌ಪ್ರೆಸ್‌ವೇಯಲ್ಲಿ ಅಡೆತಡೆಯಿಲ್ಲದೆ ಚಾಲನೆ ಮಾಡಲು ಅನುವು ಮಾಡಿಕೊಡುತ್ತದೆ.
ಖಾಸಗಿ ವಾಹನಗಳಿಂದ TOLL ಸಂಗ್ರಹಿಸಲು ಮಾಸಿಕ ಮತ್ತು ವಾರ್ಷಿಕ ಟೋಲ್ ಪಾಸ್‌ಗಳ ಸೌಲಭ್ಯವನ್ನು ಸರ್ಕಾರ ಒದಗಿಸಬಹುದು. ಒಟ್ಟು TOLL ಸಂಗ್ರಹದ ಶೇಕಡಾ 26 ರಷ್ಟು ಖಾಸಗಿ ವಾಹನಗಳಿಂದಲೇ ಬರುತ್ತದೆ. ಆದರೆ TOLL ಸಂಗ್ರಹದ ಶೇ. 74 ರಷ್ಟು ವಾಣಿಜ್ಯ ವಾಹನಗಳಿಂದಲೇ ಆಗುತ್ತದೆ ಎಂದು ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಕಳೆದ ತಿಂಗಳು ಹೇಳಿದ್ದರು.
ಇದನ್ನು ಓದಿರಿ :YASHASVI JAISWAL:ಪಾದಾರ್ಪಣೆ ಪಂದ್ಯದಲ್ಲೇ ಅಲ್ಪ ಮೊತ್ತಕ್ಕೆ ಕುಸಿದ ಜೈಸ್ವಾಲ್.