New Delhi News:
ಬಿಜೆಪಿ ಇತ್ತೀಚೆಗೆ ನಡೆದ ಎಲ್ಲಾ ಚುನಾವಣೆಗಳಲ್ಲೂ ವಿಜಭೇರಿ ಭಾರೀಸುತ್ತಿದೆ. ರಾಜಸ್ಥಾನ ಮಧ್ಯಪ್ರದೇಶ, ಹರಿಯಾಣ ಹೀಗೆ ಕಳೆದ ಎರಡು ವರ್ಷಗಳಲ್ಲಿ ನಡೆದ ಎಲ್ಲಾ ವಿಧಾನಸಭೆಗಳ ಚುನಾವಣೆಯಲ್ಲೂ ಹೆಚ್ಚಿನ ಗೆಲುವು ಬಿಜೆಪಿಯ ಪಾಲಿಗೆ ಬಂದಿದೆ. ಆಗೆಲ್ಲಾ ಪ್ರಧಾನಿ NARENDRA MODI ವಿಜಯದ ಭಾಷಣ ಮಾಡಲು ದೆಹಲಿಯ ಬಿಜೆಪಿ ಪ್ರಧಾನ ಕಚೇರಿಗೆ ಬರುತ್ತಿದ್ದರು ಮತ್ತು ವಿಜಯೋತ್ಸವದ ಭಾಷಣ ಮಾಡುತ್ತಿದ್ದರು, ಈಗ ಮೊದಲ ಬಾರಿ ದೆಹಲಿ ಚುನಾವಣೆಯ ವಿಜಯದ ಬಗ್ಗೆ ಭಾಷಣ ಮಾಡಲು ದೆಹಲಿಯ ಬಿಜೆಪಿ ಪ್ರಧಾನ ಕಚೇರಿಗೆ ಕೆಲವೇ ಗಂಟೆಗಳಲ್ಲಿ ಬರಲಿದ್ದಾರೆ.
ಬಿಜೆಪಿಗೆ ಗೆಲುವು ಫಿಕ್ಸ್ ಎಂಬುದು ಸ್ಪಷ್ಟವಾಗಿದೆ. ಈಗಾಗಲೇ ಬಿಜೆಪಿ ಕಚೇರಿ ಎದುರು ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದ್ದು. ವಿಜಯೋತ್ಸವ ಆಚರಿಸಲಿದ್ದಾರೆ. ಈಗಾಗಲೇ ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಬಹುಮತ ದಾಟಿಕೊಂಡು ಹೋಗಿದೆ.
70 ಕ್ಷೇತ್ರಗಳಲ್ಲಿ 45 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು. ಇನ್ನೇನು ಕೆಲವೇ ಗಂಟೆಗಳಲ್ಲಿ ಪ್ರಧಾನಿ NARENDRA MODI ಕಾರ್ಯಕರ್ತರನ್ನು ಉದ್ದೇಶಿಸಿ ಗೆಲುವಿನ ಸಂಭ್ರಮದ ಬಗ್ಗೆ ಮಾತನಾಡಲಿದ್ದಾರೆ. ದೆಹಲಿಯಲ್ಲಿರುವ ಬಿಜೆಪಿಯ ಪ್ರಧಾನ ಕಚೇರಿಗೆ ಬರಲಿರುವ ಮೋದಿ ವಿಜಯೋತ್ಸವದ ಭಾಷಣ ಮಾಡಲಿದ್ದಾರೆ.
ಇದನ್ನು ಓದಿರಿ :MPC Lowers Repo Rate To 6.25 Per Cent After 5 Years, RBI Chief Says Indian Economy Strong