Mysore News:
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಸತ್ಯ ಪಿಕ್ಚರ್ಸ್ ಮೂಲಕ ರಾಜ್ಯಾದ್ಯಂತ 200ಕ್ಕೂ ಅಧಿಕ ಟಾಕೀಸ್ಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಹುಬ್ಬಳ್ಳಿಯ ಮೃದುಲಾ ಸಿನಿಮಾದ ನಾಯಕಿ. ಲಂಡನ್ನಲ್ಲಿ ನೆಲೆಸಿರುವ ಕರ್ನಾಟಕದ ಮಂಜುನಾಥ್ ವಿಶ್ವಕರ್ಮ ಹಾಗೂ ಕಿರಣ್ ಬರ್ತೂರ್ ಸಿನಿಮಾ ನಿರ್ಮಿಸಿದ್ದಾರೆ” ಎಂದು ಹೇಳಿದರು.
‘ಫಸ್ಟ್ ರ್ಯಾಂಕ್ ರಾಜು’ ಖ್ಯಾತಿಯ ನಟ ಗುರುನಂದನ್ ಅಭಿನಯದ ‘RAJU JAMES BOND’ ಸಿನಿಮಾ ಫೆ.14ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ಈ ಕುರಿತು ಚಿತ್ರದ ನಿರ್ದೇಶಕ ದೀಪಕ್ ಮಧುವನಹಳ್ಳಿ ಮಾಹಿತಿ ನೀಡಿದ್ದಾರೆ. RAJU JAMES BOND ನಟ ಗುರುನಂದನ್ ಮಾತನಾಡಿ, ಈ ಹಿಂದೆ ನಾನು ಮಾಡಿದ ಚಿತ್ರಗಳಿಗಿಂತಲೂ ಈ ಚಿತ್ರದ ಪಾತ್ರ ವಿಭಿನ್ನವಾಗಿದೆ.
ಸಂಡೂರು ಹಾಗೂ ವಿದೇಶದಲ್ಲಿಯೂ ಚಿತ್ರೀಕರಿಸಲಾಗಿದೆ. RAJU JAMES BOND ಈಗಾಗಲೇ ಚಿತ್ರದ ಟ್ರೇಲರ್, ಗೀತೆಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರವಿಶಂಕರ್, ಸಾಧು ಕೋಕಿಲ, ಅಚ್ಯುತ್ ಕುಮಾರ್, ಚಿಕ್ಕಣ್ಣ, ಜೈಜಗದೀಶ್, ತಬಲಾ ನಾಣಿ, ಮಂಜುನಾಥ್ ಹೆಗಡೆ, ವಿಜಯ್ ಚೆಂಡೂರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ಎಂದರು.
RAJU JAMES BOND ನಿರ್ಮಾಪಕ ಕಿರಣ್ ಬರ್ತೂರ್ ಮಾತನಾಡಿ, ಹಳ್ಳಿಯ ಹುಡುಗ ರಾಜು, ಓದಿ ವಿದ್ಯಾವಂತನಾಗಿ ಬ್ಯಾಂಕ್ ಮ್ಯಾನೇಜರ್ ಆಗಬೇಕೆಂದು ಹೊರಡುತ್ತಾನೆ. ಹಾಗಂತ ಬ್ಯಾಂಕ್ ಮ್ಯಾನೇಜರ್ ಆಗಿ ಕೆಲಸ ಮಾಡುವುದು ಆತ ಅಂದುಕೊಂಡಷ್ಟು ಸುಲಭವಾಗಿರಲ್ಲ.
ಆತನ ಮುಂದೆ ಹಲವಾರು ಸಂದಿಗ್ಧ ಪರಿಸ್ಥಿತಿಗಳು ಎದುರಾಗುತ್ತವೆ. ಆತ ಅದನ್ನೆಲ್ಲ ನಿಭಾಯಿಸಿ ಹೇಗೆ ಹಳ್ಳಿ ಜನರ ಪಾಲಿಗೆ ಜೇಮ್ಸ್ ಬಾಂಡ್ ಆಗುತ್ತಾನೆ ಎನ್ನುವುದು ಚಿತ್ರದ ಒನ್ಲೈನ್ ಸ್ಟೋರಿ ಎಂದರು. ನಾಯಕಿ ಮೃದುಲಾ ಮಾತನಾಡಿ, “ನಾನು ಮೂಲತಃ ಹುಬ್ಬಳ್ಳಿಯ ಹುಡುಗಿ. ಇದು ನನ್ನ ಮೊದಲ ಸಿನಿಮಾ. ಟೀಚರ್ ಪಾತ್ರ. ಚಿತ್ರದಲ್ಲಿ ನಾಯಕನಿಗೆ ಬದುಕಿನ ಪಾಠ ಹೇಳಿಕೊಟ್ಟಿದ್ದೇನೆ” ಎಂದು ತಿಳಿಸಿದರು.
ಇದನ್ನು ಓದಿರಿ : within 6 Months Climate Finance Should Be Ready ?