Bangalore News:
ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ ಪ್ರಯಾಣದ ದರ ಹೆಚ್ಚಳದ ಬೆನ್ನಲ್ಲೇ ಬೆಂಗಳೂರು ನಗರದ ಸಾರ್ವಜನಿಕ ಸಾರಿಗೆಗಳಲ್ಲಿ ಪ್ರಮುಖ ಸಾರಿಗೆ ಸಂಸ್ಥೆಯಾದ ”ನಮ್ಮ ಮೆಟ್ರೋ” ಪ್ರಯಾಣ ದರವನ್ನು ಸಹ ಪರಿಷ್ಕರಣೆ ಮಾಡಲಾಗಿದೆ. METRO FARE HIKEಯು ಇಂದಿನಿಂದಲೇ ಜಾರಿಗೆ ಬರಲಿದೆ.
Here is the revised ticket price:
ಮೊದಲ 2 ಕಿಲೋ ಮೀಟರ್ ಪ್ರಯಾಣಕ್ಕೆ 10 ರೂಪಾಯಿ, 2 ರಿಂದ 4 ಕಿಲೋಮೀಟರ್ ಪ್ರಯಾಣಕ್ಕೆ 20 ರೂಪಾಯಿ, 4 ರಿಂದ 6 ಕಿಲೋಮೀಟರ್ ಪ್ರಯಾಣಕ್ಕೆ 30 ರೂಪಾಯಿ ದರ ಪರಿಷ್ಕರಣೆ ಮಾಡಲಾಗಿದೆ. 30 ಕಿಲೋಮೀಟರ್ಗಿಂತ ಹೆಚ್ಚಿನ ದೂರದ ಪ್ರಯಾಣಕ್ಕೆ 90 ರೂಪಾಯಿ ದರ ನಿಗದಿಪಡಿಸಲಾಗಿದೆ.
METRO FARE HIKE ದರ ಪರಿಷ್ಕರಣೆಯನ್ನು ಮೆಟ್ರೋ ಸಂಸ್ಥೆಯ ಆರ್ಥಿಕ ಸುಸ್ಥಿರತೆ ಮತ್ತು ಪ್ರಯಾಣಿಕರಿಗೆ ಬೆಲೆ ಕೈಗೆಟುಕುವಂತಿರಬೇಕೆನ್ನುವ ದೃಷ್ಟಿಯಲ್ಲಿ ಸಮತೋಲನ ಕಾಯ್ದುಕೊಂಡು ಟಿಕೆಟ್ ಬೆಲೆ ಹೆಚ್ಚಳ ಮಾಡಲಾಗಿದೆ ಎಂದು ಮೆಟ್ರೋ ಸಂಸ್ಥೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಹೇಳಿದ್ದಾರೆ.
METRO FARE HIKE ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಮೆಟ್ರೋ ಪ್ರಯಾಣ ದರ ನಿಗದಿ ಸಮಿತಿ ಕಳೆದ ಡಿಸೆಂಬರ್ 16 ರಂದು ಮಾಡಿದ ಶಿಫಾರಸ್ಸುಗಳ ಪ್ರಕಾರ ಈ ದರ ನಿಗದಿಪಡಿಸಲಾಗಿದೆ ಎಂದು ಬಿಎಂಆರ್ಸಿಎಲ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರತಿ ಭಾನುವಾರ ಮತ್ತು ರಾಷ್ಟ್ರೀಯ ರಜಾ ದಿನಗಳಂದು ಸ್ಮಾರ್ಟ್ ಕಾರ್ಡ್ಗಳ ಮೇಲೆ ಶೇಕಡ 10 ರಷ್ಟು ರಿಯಾಯಿತಿಯನ್ನು ನೀಡಲಾಗುತ್ತದೆ. ಈ ಮೊದಲು ಕನಿಷ್ಠ 10 ರಿಂದ ಗರಿಷ್ಠ 60 ರೂವರೆಗೆ ಟಿಕೆಟ್ ದರ ಇತ್ತು. ಈಗ ದರ ಪರಿಷ್ಕರಣೆಯಿಂದ ಕನಿಷ್ಠ 10 ರಿಂದ 90 ರೂವರೆಗೆ ಏರಿಸಲಾಗಿದೆ.
ಸ್ಮಾರ್ಟ್ ಕಾರ್ಡಗಳಿಗೆ ನೀಡಲಾಗುತ್ತಿದ್ದ ಶೇಕಡಾ 5 ರಷ್ಟು ಡಿಸ್ಕೌಂಟ್ ಅನ್ನು ಮುಂದುವರಿಸಲಾಗಿದೆ. ಆದರೆ ಸ್ಮಾರ್ಟ್ ಕಾರ್ಡ್ನಲ್ಲಿ ಕನಿಷ್ಟ ಹಣವನ್ನು 90 ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ ಎಂದು ಮೆಟ್ರೂ ಸಂಸ್ಥೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನು ಓದಿರಿ : MPC Lowers Repo Rate To 6.25 Per Cent After 5 Years, RBI Chief Says Indian Economy Strong