Darshan News:
DARSHAN ನಿನ್ನೆ ಬಿಡುಗಡೆ ಮಾಡಿದ ವಿಡಿಯೋ ನೋಡಿ ಅವರ ಪ್ರೀತಿಯ ಸೆಲೆಬ್ರಿಟಿಗಳಿಗೆ ಸಂಕ್ರಾಂತಿ ಶುರುವಾಗಿದೆ. ದರ್ಶನ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳೋದಿಲ್ಲ ಅಂತ ಹೇಳಿದ್ರು DARSHAN ಅವರ ಮಾತುಗಳು ಆ ಬೇಸರವನ್ನೆಲ್ಲ ಮರೆಸಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಪ್ರೀತಿಯ ಸೆಲೆಬ್ರಿಟಿಗಳಿಗೆ ಕ್ಷಮೆ ಕೇಳಿ ಧನ್ಯವಾದ ಹೇಳಿದ್ದಾರೆ. ತಮ್ಮ ಅಭಿಮಾನಿ ಬಳಗಕ್ಕೆ ಸಂದೇಶ ಕೊಟ್ಟಿರುವ ದರ್ಶನ್ ಅವರ ವಿಡಿಯೋ ಸಖತ್ ವೈರಲ್ ಆಗಿದೆ. ದರ್ಶನ್ ಫ್ಯಾನ್ಸ್ ಎಂದಿನಂತೆ ತಮ್ಮ ನೆಚ್ಚಿನ ನಟನ ಮಾತುಗಳಿಗೆ ಖುಷಿಯಾಗಿ ಮೆರೆಸಲು ಆರಂಭಿಸಿದ್ದಾರೆ.
ದರ್ಶನ್ ಅವರ ಖಡಕ್ ದರ್ಶನದ ಬಳಿಕ ಡೆವಿಲ್ ಚಿತ್ರತಂಡ ಮತ್ತೊಂದು ಸರ್‌ಪ್ರೈಸ್ ಘೋಷಣೆ ಮಾಡಿದೆ. ದರ್ಶನ್ ಹುಟ್ಟುಹಬ್ಬದ ದಿನ ಅಂದ್ರೆ ಇದೇ ಫೆಬ್ರವರಿ 16ರಂದು ದರ್ಶನ್ ಅವರ ಟೀಸರ್ ಬಿಡುಗಡೆ ಆಗಲಿದೆ. ಈ ಮೂಲಕ ಡೆವಿಲ್ ಶೂಟಿಂಗ್ ಆದಷ್ಟು ಬೇಗ ಶುರುವಾಗಲಿರೋ ಹಿಂಟ್ ಸಹ ದರ್ಶನ್ ಅವರಿಂದ ಸಿಕ್ಕಿದೆ.
ನಿರ್ದೇಶಕ ಮಿಲನಾ ಪ್ರಕಾಶ್ – ದರ್ಶನ್ ಕಾಂಬಿನೇಷನ್‌ನ ಡೆವಿಲ್ ಸಿನಿಮಾ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ. ದರ್ಶನ್ ವಿಡಿಯೋ ಬಿಡುಗಡೆಯಾದ ಮೇಲೆ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಸ್ಯಾಂಡಲ್‌ವುಡ್ ಕ್ವೀನ್ ರಕ್ಷಿತಾ ಪ್ರೇಮ್ ಅವರ ಸಹೋದರ ರಾಣಾ ಮದುವೆಗೆ ದರ್ಶನ್ ಕುಟುಂಬ ಸಮೇತರಾಗಿ ಬಂದಿದ್ದಾರೆ. ಮದುವೆಯ ಆರತಕ್ಷತೆಗೆ ದರ್ಶನ್ ಖಡಕ್ ಆಗಿ ಎಂಟ್ರಿ ಕೊಟ್ಟ ವಿಡಿಯೋಗಳು ಸಖತ್ ವೈರಲ್ ಆಗಿದೆ.
ಇದನ್ನು ಓದಿರಿ : How To Manage Social Media Anxiety And Take A Digital Detox