spot_img
spot_img

JEE MAINS RESULT 2025 : 100ಕ್ಕೆ 100ರಷ್ಟು ಅಂಕ ಪಡೆದ 14 ವಿದ್ಯಾರ್ಥಿಗಳು

spot_img
spot_img

Share post:

Patna, Bihar News:

ಈ ಬಾರಿ 14 ವಿದ್ಯಾರ್ಥಿಗಳು ಶೇ 100ಕ್ಕೆ 100ರಷ್ಟು ಅಂಕಗಳನ್ನು ಗಳಿಸಿದ್ದಾರೆ. ಕರ್ನಾಟಕದ ಕುಶಾಗ್ರ ಗುಪ್ತಾ 100ಕ್ಕೆ 100 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

JEE MAINS RESULT 2025 ರ ಜನವರಿ ಅವಧಿಯ ಫಲಿತಾಂಶಗಳು ಬಿಡುಗಡೆಯಾಗಿದ್ದು, 14 ವಿದ್ಯಾರ್ಥಿಗಳು ಶೇ 100ಕ್ಕೆ 100ರಷ್ಟು ಅಂಕಗಳನ್ನು ಪಡೆದುಕೊಂಡು ಟಾಪರ್​ ಆಗಿ ಹೊರ ಹೊಮ್ಮಿದ್ದಾರೆ. ಕರ್ನಾಟಕದ ಕುಶಾಗ್ರ ಗುಪ್ತಾ ಸಹ 100ಕ್ಕೆ ನೂರು ಅಂಕ ಪಡೆದು ಲಿಸ್ಟ್​​ ನಲ್ಲಿ ತಮ್ಮ ಹೆಸರನ್ನೂ ನಮೂದಿಸಿಕೊಂಡಿದ್ದಾರೆ.

Here is the list of 14 toppers:

| 1 | 250310009213 | ಆಯುಷ್​ ಸಿಂಗಲ್​ | ರಾಜಸ್ಥಾನ

| 2 | 250310034720 | ಕುಶಾಗ್ರ ಗುಪ್ತಾ | ಕರ್ನಾಟಕ

| 3 | 250310133572 | ದಕ್ಷ | ದೆಹಲಿ (NCT)

| 4 | 250310143408 | ಹರ್ಷಾ ಜಾ | ದೆಹಲಿ (NCT)

| 5 | 250310150634 | ರಜಿತ್​ ಗುಪ್ತಾ | ರಾಜಸ್ಥಾನ

| 6 | 250310210195 | ಶ್ರೇಯಸ್​ ಲೋಹಿಯಾ | ಉತ್ತರಪ್ರದೇಶ

| 7 | 250310236696 | ಸಕ್ಷಮ್​ ಜಿಂದಾಲ್​ | ರಾಜಸ್ಥಾನ

| 8 | 250310254844 | ಸೌರವ್​ | ಉತ್ತರಪ್ರದೇಶ

| 9 | 250310299968 | ವಿಶಾದ್​ ಜೈನ್​ | ಮಹಾರಾಷ್ಟ್ರ

| 10 | 250310312145 | ಅರ್ನವ್​ ಸಿಂಗ್​ | ರಾಜಸ್ಥಾನ

| 11 | 250310391420 | ಶಿವನ್​ ವಿಕಾಶ ತೋಹಸಿನ್​ವಾಲ್ | ಗುಜರಾತ್

| 12 | 250310564942 | ಸಾಯಿ ಮನೋಜ್ಞ ಗುತಿಕೊಂಡ | ಆಂಧ್ರಪ್ರದೇಶ

| 13 | 250310569571 | ಓಂ ಪ್ರಕಾಶ ಬೆಹ್ರಾ | ರಾಜಸ್ಥಾನ

| 14 | 250310746461 | ಬಾನಿ ಬ್ರಾತಾ ಮಾಜಿ | ತೆಲಂಗಾಣ

JEE MAINS RESULT 2025  ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪಾಣಿನಿ ಗಮನಾರ್ಹ ಸಾಧನೆ ಮಾಡುವ ಆತನ ಶೈಕ್ಷಣಿಕ ಉತ್ಕೃಷ್ಟತೆ ಸಾಬೀತಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಬಿಹಾರದ ಪಾಣಿನಿ ಶರ್ಮಾ ಶೇ 99.9942 ಅಂಕ ಗಳಿಸುವ ಮೂಲಕ ಬಿಹಾರ ರಾಜ್ಯದ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

23ರ ಅಖಿಲ ಭಾರತ ಶ್ರೇಣಿಯೊಂದಿಗೆ (AIR) ಪಾಣಿನಿ ಹಾಜಿಪುರ, ವೈಶಾಲಿ ಜಿಲ್ಲೆ ಸೇರಿದಂತೆ ಇಡೀ ಬಿಹಾರ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ. ಸಂಜಯ್ ಶರ್ಮಾ ಮತ್ತು ನಿಭಾ ಕುಮಾರಿಯವರ ಮಗನಾದ ಪಾಣಿನಿ ತನ್ನ ಶಾಲಾ ಶಿಕ್ಷಣವನ್ನು ಪಾಟ್ನಾದಲ್ಲಿ ಪೂರ್ಣಗೊಳಿಸಿದ್ದರು.

ಖಗೋಳವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರದಲ್ಲಿ ತೀವ್ರ ಆಸಕ್ತಿ ಹೊಂದಿರುವ ಪಾಣಿನಿ ಯಾವಾಗಲೂ ಅಸಾಧಾರಣವಾದ ವಿದ್ಯಾರ್ಥಿ ಎಂದು ಅವರ ತಂದೆ ಸಂತಸ ಹಂಚಿಕೊಂಡಿದ್ದಾರೆ. ಪಾಣಿನಿ ಯಾವಾಗಲೂ ಖಗೋಳಶಾಸ್ತ್ರದ ಬಗ್ಗೆ ಆಳವಾದ ಉತ್ಕಟತೆಯನ್ನು ಹೊಂದಿದ್ದಾರೆ.

ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ. JEE ಮೇನ್ಸ್ ಯಶಸ್ಸು ಅವರ ಕಿರೀಟಕ್ಕೆ ಮತ್ತೊಂದು ಗರಿಯಷ್ಟೇ ಎಂದು ಪಾಣಿನಿಯ ತಂದೆ ಸಂಜಯ್ ಶರ್ಮಾ ಮಗನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಪಾಣಿನಿ, ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ 2024 ರ ಖಗೋಳವಿಜ್ಞಾನ ಮತ್ತು ಆಸ್ಟ್ರೋಫಿಸಿಕ್ಸ್ 17 ನೇ ಅಂತರರಾಷ್ಟ್ರೀಯ ಒಲಂಪಿಯಾಡ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದರು. ಅಷ್ಟೇ ಅಲ್ಲ OCSC 2023 (ಖಗೋಳಶಾಸ್ತ್ರ ಮತ್ತು ಖಗೋಳ ಭೌತಶಾಸ್ತ್ರ)ಕ್ಕೆ ಕೂಡಾ ಆಯ್ಕೆಯಾಗಿ ಗಮನ ಸೆಳೆದಿದ್ದರು ಅದೂ ಅಲ್ಲದೇ.

JEE MAINS RESULT 2025  INPHO, INCHO ಮತ್ತು INAO ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಈ ವೇಳೆ ಅವರು ಖಗೋಳಶಾಸ್ತ್ರ ವನ್ನು ಅವರ ವಿಶೇಷತೆಯಾಗಿ ಆಯ್ಕೆ ಮಾಡಿಕೊಂಡು ಅಭ್ಯಾಸ ನಡೆಸಿದ್ದರು. JEE MAINS RESULT 2025 ರ ಪರೀಕ್ಷೆಯಲ್ಲಿ ಒಟ್ಟು 13,11,544 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. 12,58,136 (ಶೇ 95.93) ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.

ಜನವರಿ 22-24 ಮತ್ತು ಜನವರಿ 28-29 ರಂದು ದೇಶದ 304 ನಗರಗಳ 618 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಈ ಬಾರಿ 14 ವಿದ್ಯಾರ್ಥಿಗಳು ಶೇ 100ಕ್ಕೆ 100ರಷ್ಟು ಅಂಕಗಳನ್ನು ಗಳಿಸಿದ್ದಾರೆ. ಪಾಣಿನಿ ಜೊತೆಗೆ, ಬಿಹಾರದ ಮತ್ತೊಬ್ಬ ವಿದ್ಯಾರ್ಥಿ ಅಭಿಷೇಕ್ ಕುಮಾರ್ ಶೇ 99.8738 ಶೇಕಡಾ ಅಂಕ ಗಳಿಸುವ ಮೂಲಕ ಬಿಹಾರಕ್ಕೆ ಹೆಮ್ಮೆ ತಂದಿದ್ದಾರೆ.

ಈ ಇಬ್ಬರ ಅಸಾಧಾರಣ ಸಾಧನೆಯು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಬಿಹಾರದ ವಿದ್ಯಾರ್ಥಿಗಳ ಹೆಚ್ಚುತ್ತಿರುವ ಪ್ರಾಬಲ್ಯವನ್ನು ಒತ್ತಿ ಹೇಳುತ್ತಿದೆ. JEE MAINS RESULT 2025  ರಲ್ಲಿ ಬಿಹಾರದ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ವಿಶೇಷವಾಗಿ ಪಾಣಿನಿ ಶರ್ಮಾ ಅವರ ರಾಜ್ಯ – ಪ್ರಮುಖ ಸಾಧನೆಯು ಈ ಪ್ರದೇಶದ ವಿದ್ಯಾರ್ಥಿಗಳ ಸಮರ್ಪಣೆ, ಕಠಿಣ ಪರಿಶ್ರಮ ಮತ್ತು ಹೆಚ್ಚುತ್ತಿರುವ ಶೈಕ್ಷಣಿಕ ಉತ್ಕೃಷ್ಟತೆಯನ್ನು ಪ್ರತಿಬಿಂಬಿಸುತ್ತದೆ.

ಇದನ್ನು ಓದಿರಿ : PM Modi Meets US VP JD Vance, Wife Usha And Their Kids In Paris

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...