Tel Aviv (Israel) News:
ಕದನ ವಿರಾಮದ ನಿಯಮದಂತೆ ತನ್ನ ಪ್ರಜೆಗಳನ್ನು ಬಿಡುಗಡೆ ಮಾಡಲು ISRAELI ಹಮಾಸ್ಗೆ ಸೂಚನೆ ನೀಡಿದೆ. ISRAELI ಒತ್ತೆಯಾಳುಗಳನ್ನು ಬಿಡುಗಡೆ ಮಾಡುವಲ್ಲಿ ವಿಳಂಬ ಮತ್ತು ನಿರಾಕರಣೆ ತೋರುತ್ತಿರುವ ಹಮಾಸ್ ಉಗ್ರರಿಗೆ ಕೊನೆಯ ಗಡುವು ನೀಡಿದ್ದಾರೆ.
ಶನಿವಾರ ಮಧ್ಯಾಹ್ನದೊಳಗೆ ಒತ್ತೆ ಇಟ್ಟುಕೊಂಡಿರುವ ನಮ್ಮವರನ್ನು ಬಿಡುಗಡೆ ಮಾಡದೇ ಹೋದಲ್ಲಿ ಕದನ ವಿರಾಮ ಉಲ್ಲಂಘನೆ ಆರೋಪದ ಮೇಲೆ ಮರು ದಾಳಿ ಆರಂಭಿಸಲಾಗುವುದು. ಹಮಾಸ್‌ನ ಅಂತಿಮ ಸೋಲಿನವರೆಗೂ ಹೋರಾಟ ನಡೆಸಲಾಗುವುದು ಎಂದು ಗುಡುಗಿದ್ದಾರೆ. ಒಪ್ಪಂದದ ಪ್ರಕಾರ ನಮ್ಮ ಒತ್ತೆಯಾಳುಗಳನ್ನು ಬಿಡುಗಡೆ ಮಾಡದಿದ್ದರೆ, ಕದನ ವಿರಾಮದಿಂದ ಹೊರಬಂದು ಮರು ಯುದ್ಧ ನಡೆಸಲು ಸಿದ್ಧ ಎಂದು ಹಮಾಸ್ ಉಗ್ರರಿಗೆ ISRAELI ಪ್ರಧಾನಿ ಬೆಂಜಮಿನ್ ನೆತನ್ಯಾಹು ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ಮತ್ತೊಂದು ಪೋಸ್ಟ್‌ನಲ್ಲಿ, “ಹಮಾಸ್ ಉಗ್ರರು ಶನಿವಾರ ಮಧ್ಯಾಹ್ನದೊಳಗೆ ನಮ್ಮ ಒತ್ತೆಯಾಳುಗಳನ್ನು ಕಳುಹಿಸದಿದ್ದರೆ, ಕದನ ವಿರಾಮ ಕೊನೆಗೊಳ್ಳುತ್ತದೆ. ಹಮಾಸ್‌ನ ಅಂತಿಮ ಸೋಲಿನವರೆಗೂ ಐಡಿಎಫ್ ತೀವ್ರ ಹೋರಾಟ ಪುನರಾರಂಭಿಸಲಿದೆ ಎಂದು ಸಚಿವ ಸಂಪುಟದಲ್ಲಿ ಸರ್ವಾನುಮತದ ಅಂಗೀಕರಿಸಲಾಗಿದೆ ಎಂದು ತಿಳಿಸಿದ್ದಾರೆ.ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ISRAELI ಪ್ರಧಾನಿ, ಕದನ ವಿರಾಮದ ವೇಳೆ ಒಪ್ಪಿದಂತೆ ಉಭಯರ ಕಡೆಯಿಂದ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು. ಆದರೆ, ಹಮಾಸ್ ಉಲ್ಲಂಘಿಸುತ್ತಿದೆ. ಹೀಗಾಗಿ, ಗಾಜಾ ಪಟ್ಟಿಯ ಸುತ್ತಲೂ ಮತ್ತು ಒಳಗೆ ಸೇನೆಯನ್ನು ಸಜ್ಜುಗೊಳಿಸಲು ಸೂಚನೆ ನೀಡಲಾಗಿದೆ ಎಂದು ಬರೆದುಕೊಂಡಿದ್ದಾರೆ.
Warning from US President too:ಇತ್ತ ಹಮಾಸ್, ISRAELI ನೀಡಿದ ಶನಿವಾರದ ಗಡುವನ್ನು ನಿರ್ಲಕ್ಷಿಸಿತ್ತು. ಮುಂದಿನ ಸೂಚನೆ ಬರುವವೆಗೆ ಒತ್ತೆಯಾಳುಗಳ ಬಿಡುಗಡೆ ವಿಳಂಬವಾಗಲಿದೆ ಎಂದು ಘೋಷಿಸಿತ್ತು. ಇದಕ್ಕೀಗ ISRAELI ಕಟುವಾಗಿಯೇ ಪ್ರತಿಕ್ರಿಯೆ ನೀಡಿದೆ.ಪ್ಯಾಲೆಸ್ಟೈನಿಯನ್ನರು ಗಾಜಾ ಪಟ್ಟಿಗೆ ಮರಳಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರೋಧಿಸಿದ್ದರು.
ಯುದ್ಧ ಪೂರ್ಣ ಪ್ರಮಾಣದಲ್ಲಿ ಮುಗಿಯುವವರೆಗೂ ಜನರು ಗಾಜಾ ಪಟ್ಟಿ ಪ್ರವೇಶಿಸಬಾರದು. ಎಲ್ಲ ಒತ್ತೆಯಾಳುಗಳನ್ನು ಹಮಾಸ್ ನಿಗದಿತ ಕಾಲಾವಧಿಯಲ್ಲಿ ಬಿಡುಗಡೆ ಮಾಡಬೇಕು ಎಂದು ಸೂಚನೆ ನೀಡಿದ್ದರು. ISRAELI ಮತ್ತು ಹಮಾಸ್ ಉಗ್ರರ ನಡುವೆ ಒಂದು ವರ್ಷಕ್ಕೂ ಅಧಿಕ ಅವಧಿಯಿಂದ ನಡೆಯುತ್ತಿದ್ದ ಯುದ್ಧಕ್ಕೆ ಕಳೆದ ತಿಂಗಳು ಕದನ ವಿರಾಮ ಘೋಷಿಸಲಾಗಿತ್ತು. ಅದರಂತೆ ಉಭಯ ಪಡೆಗಳು ತಮ್ಮಲ್ಲಿರುವ ಯುದ್ಧ ಕೈದಿಗಳು/ ಒತ್ತೆಯಾಳುಗಳನ್ನು ಪರಸ್ಪರ ಬಿಡುಗಡೆ ಮಾಡಬೇಕು ಎಂದು ಷರತ್ತು ವಿಧಿಸಲಾಗಿತ್ತು.
ಇದನ್ನು ಓದಿರಿ :Consulate General of India with French President Emmanuel Macron