spot_img
spot_img

RCB VS GG HIGHLIGHT : 6,6,6,6,4,4,4.. ರಿಚಾ ಸ್ಫೋಟಕ ಬ್ಯಾಟಿಂಗ್

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

RCB vs GG Highlight:

ವಡೋದರದ ಕೋಟುಂಬಿ ಮೈದಾನದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಆರ್​ಸಿಬಿ ಬೃಹತ್​ ಮೊತ್ತವನ್ನು ಬೆನ್ನಟ್ಟಿ ಯಶಸ್ವಿಯಾಗಿ ಗೆಲುವು ಸಾಧಿಸಿದೆ. RCB VS GG HIGHLIGHT ಇದರೊಂದಿಗೆ 3ನೇ ಆವೃತ್ತಿಯಲ್ಲಿ ಮಂಧಾನ ಪಡೆ ಶುಭಾರಂಭ ಮಾಡಿದೆ. ಗುಜರಾತ್​ ಜೈಂಟ್ಸ್​ ವಿರುದ್ಧ ನಡೆದಿದ್ದ WPL 2025ರ ಮೊದಲ ಪಂದ್ಯದಲ್ಲಿ RCB ಗೆದ್ದು ಶುಭಾರಂಭ ಮಾಡಿದೆ. ಮಹಿಳಾ ಪ್ರೀಮಿಯರ್​ ಲೀಗ್ (WPL 2025)​ 3ನೇ ಆವೃತ್ತಿ ಶುಕ್ರವಾರ ಪ್ರಾರಂಭವಾಗಿದೆ. 2024ರಲ್ಲಿ ಚಾಂಪಿಯನ್​ ಆಗಿದ್ದ RCB ಉದ್ಘಾಟನ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್​ (GG)​ ವಿರುದ್ಧ ಕಾಳಗಕ್ಕೆ ಇಳಿದಿತ್ತು.

Gujarat Giants:

RCB VS GG HIGHLIGHT ಆರಂಭಿಕರಾಗಿ ಬ್ಯಾಟಿಂಗ್​​​ಗೆ ಬಂದ ಮೂನಿ 42 ಸೆತಗಳಲ್ಲಿ 8 ಬೌಂಡರಿ ಸಹಾಯದಿಂದ 56 ರನ್ ಚಚ್ಚಿ ಅರ್ಧಶತಕ ಪೂರ್ಣಗೊಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ನಾಯಕಿ ಆಶ್ಲೇಗ್​ ಗಾರ್ಡನರ್​ 37 ಎಸೆತಗಳಲ್ಲಿ 3 ಬೌಂಡರಿ, 8 ಸಿಕ್ಸರ್​ ಸಿಡಿಸಿ 79 ರನ್​ ಕಲೆ ಹಾಕಿದರು. ಈ ಇಬ್ಬರ ಸ್ಫೋಟಕ ಬ್ಯಾಟಿಂಗ್​ ನಿಂದಾಗಿಗೆ ಗುಜರಾತ್​ ಮಹಿಳಾ ತಂಡ 5 ವಿಕೆಟ್​ ನಷ್ಟಕ್ಕೆ 201 ರನ್​ ಗಳಿಸಿತು.  RCB VS GG HIGHLIGHT ಉಭಯ ತಂಡಗಳ ನುಡವಿನ ಈ ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿದ್ದ ಗುಜರಾತ್​ ಜೈಂಟ್ಸ್​ ಭರ್ಜರಿ ಬ್ಯಾಟಿಂಗ್​ ಮಾಡಿತ್ತು. ನಾಯಕಿ ಆಶ್ಲೆಗ್​ ಗಾರ್ಡನರ್​ ಮತ್ತು ವಿಕೆಟ್​ ಕೀಪರ್​ ಬೆಥ್​ ಮೂನಿ ಸ್ಪೋಟಕ ಪ್ರದರ್ಶನ ನೀಡಿದರು.

Royal Challengers Bangalore:

RCB VS GG HIGHLIGHT ಈ ಬೃಹತ್​ ಗುರಿ ಭೇದಿಸಲು ಮುಂದಾದ ಆರ್​ಸಿಬಿಗೆ ಆರಂಭಿಕ ಹಿನ್ನಡೆ ಆಯ್ತು. ಓನರ್​ ಆಗಿ ಬ್ಯಾಟಿಂಗ್​ ಗೆ ಬಂದ ನಾಯಕಿ ಸ್ಮೃತಿ ಮಂಧಾನ 9ರನ್​, ವ್ಯಾಟ್​ ಹೊಡ್ಜ್​ 4ರನ್​ ಗೆ ತಮ್ಮ ಇನ್ನಿಂಗ್ಸ್​ ಮುಗಿಸಿದರು. ಬಳಿಕ ಬ್ಯಾಟಿಂಗ್​ ಚಾರ್ಜ್ ತೆಗದುಕೊಂಡ ಎಲ್ಲಿಸ್​ ಪೆರಿ 6 ಬೌಂಡರಿ, 2 ಸಿಕ್ಸರ್​ ನೆರವಿನಿಂದ 57 ರನ್​ ಚಚ್ಚಿ ನಿರ್ಗಮಿಸಿದರು.

Richa Ghosh’s explosive batting:

ಎಲ್ಲಿಸ್ ಪೆರಿ ನಿರ್ಗಮಿಸಿದ ಬಳಿಕ ಸಿಡಿದೆದ್ದ ರಿಚಾ ಘೋಷ್​ ಗುಜರಾತ್​ ಬೌಲರ್ ಗಳನ್ನು ಹಿಗ್ಗಾಮುಗ್ಗ ದಂಡಿಸಿದರು. ಕನಿಕಾ ಅಹುಜಾ ಅವರೊಂದಿಗೆ ಸೇರಿ ಅಜೇಯ ಇನ್ನಿಂಗ್ಸ್​ ಆಡಿ ವೇಗವಾಗಿ ಅರ್ಧಶತಕ ಪೂರ್ಣಗೊಳಿಸಿದರು. ಕೇವಲ 27 ಎಸೆಗಳಲ್ಲಿ 64 ರನ್​ ಚಚ್ಚಿದರು. ಇದರಲ್ಲಿ 7 ಬೌಂಡರಿ, 4 ಸಿಕ್ಸರ್​ ಗಳು ಸೇರಿದವು. ಇದರೊಂದಿಗೆ ಗೆಲುವಿನ ನಗಾರಿಯನ್ನು ಬಾರಿಸಿದರು.

Fastest Half Century:

ಆರಂಭದಿಂದಲೆ ಭರ್ಜರಿ ಬ್ಯಾಟ್​ ಬೀಸಿದ ರಿಚಾ ಕೇವಲ 23 ಎಸೆತಗಳಲ್ಲಿ 50 ರನ್​ ಪೂರ್ಣಗೊಳಿಸಿದರು. ಇದರೊಂದಿಗೆ ಮಹಿಳಾ ಪ್ರೀಮಿಯರ್​ ಲೀಗ್​ನಲ್ಲಿ ವೇಗಾವಗಿ ಅರ್ಧಶತಕ ಸಿಡಿಸಿದ 5 ಆಟಗಾರ್ತಿ ಎಂಬ ದಾಖಲೆ ಬರೆದಿದ್ದಾರೆ.

Brilliant bowling by Renuka Singh:

ಆರ್​ಸಿಬಿ ಪರ ರೇಣುಕಾ ಸಿಂಗ್​ ಉತ್ತಮ ಬೌಲಿಂಗ್​ ಮಾಡಿದರು ಇವರು 4 ಓವರ್​ಗಳಲ್ಲಿ 25 ರನ್​ ನೀಡಿ 2 ವಿಕೆಟ್​ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ಉಳಿದಂತೆ ಕನಿಕಾ ಅಹುಜಾ ವೆರ್​ಹ್ಯಾಮ್​, ಪ್ರೇಮಾ ರಾವತ್​ ತಲಾ ಒಂದು ವಿಕೆಟ್​ ಪಡೆದು ಮಿಂಚಿದರು.

ಇದನ್ನು ಓದಿರಿ : Chandrababu Naidu, Nitish Kumar Support Waqf Bill

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

NARGIS FAKHRI MARRIAGE:ವರ ಟೋನಿ ಬಗ್ಗೆ ಇಲ್ಲಿದೆ ಮಾಹಿತಿ

  Nargis marriage news: ಸೂಪರ್​ ಹಿಟ್​ ರಾಕ್‌ಸ್ಟಾರ್, ಮೆ ತೇರಾ ಹೀರೋ ಮತ್ತು ಹೌಸ್‌ಫುಲ್ 3 ಚಿತ್ರಗಳಿಗೆ ಹೆಸರುವಾಸಿಯಾಗಿರುವ ಬಾಲಿವುಡ್ ನಟಿ ನರ್ಗಿಸ್ ಫಕ್ರಿ (Nargis...

THREE BUS EXPLOSION IN ISRAEL:ಉಗ್ರರ ಕೃತ್ಯದ ಶಂಕೆ, ವ್ಯಗ್ರಗೊಂಡ ಇಸ್ರೇಲ್

Bat Yam News: ಒಂದೂವರೆ ವರ್ಷಗಳ ಕಾಲ ನಡೆದ ಯುದ್ದದ ಬಳಿಕ ಕದನ ವಿರಾಮಕ್ಕೆ ಹಮಾಸ್​, ISRAEL​ ಒಪ್ಪಿದ್ದು, ಇದರ ಭಾಗವಾಗಿ ಹಸ್ತಾಂತರ ಪ್ರಕ್ರಿಯೆ ಕೂಡ...

NEW BAT CORONAVIRUS: ಕೋವಿಡ್ ರೀತಿಯ ಮತ್ತೊಂದು ವೈರಸ್ ಬಾವಲಿಯಲ್ಲಿ ಪತ್ತೆ

  Beijing, China News: ಇದು ಜನರಲ್ಲಿ ಆತಂಕ ಮೂಡಿಸಿದೆ. ಈ ಕುರಿತು ಚೀನಾದ ಬ್ಯಾಟ್​ ವುಮೆನ್​ ಎಂದೇ ಖ್ಯಾತಿಯಾಗಿರುವ ವೈರಾಲಾಜಿಸ್ಟ್​​ ಶಿ ಜೆಂಗಾಲಿ ಅಧ್ಯಯನ ನಡೆಸಿದ್ದಾರೆ....

CONTENT CREATORS KUMBH JOURNEY:1500 ಕಿ.ಮೀ ದೂರದ ಪ್ರಯಾಗ್ರಾಜ್ಗೆ ನಯಾಪೈಸೆ ಖರ್ಚಿಲ್ಲದೆ ತಲುಪಿದ ಕಂಟೆಂಟ್ ಕ್ರಿಯೇಟರ್!

New Delhi News: ಮಹಾರಾಷ್ಟ್ರದ ಕಂಟೆಂಟ್​ ಕ್ರಿಯೇಟರ್​ ದಿವ್ಯಾ ಫೋಫಾನಿ ಕುಂಭಮೇಳಕ್ಕೆ ತಾವು ಮುಂಬೈನಿಂದ ಬಂದ ರೀತಿ ಮತ್ತು ಹಾದಿಯ ನಡುವೆ ಜನರು ನೀಡಿದ ನೆರವನ್ನು...