Kota, Rajasthan News:
ಗಿಳಿ, ಮೈನಾ, ಅಳಿಲುಗಳಂತಹ ಪ್ರಾಣಿಗಳನ್ನು ಅನೇಕ ಮಂದಿ ಸಾಕುವುದು ಸಾಮಾನ್ಯ ಎಂದು ಕೊಂಡಿರುತ್ತಾರೆ. ಆದರೆ, ಇದು ಅಪರಾಧ ಎಂಬುದು ನೆನಪಿರಲಿ ಅನೇಕ ಮಂದಿ ಗಿಳಿ, ಮೈನಾ, ಅಳಿಲು, ಲಂಗೂರ್, ನಕ್ಷತ್ರ ಆಮೆ, ಹಾವುಗಳನ್ನು ಅನೇಕ ಮಂದಿ ಕುಟುಂಬ ಸದಸ್ಯರ ರೀತಿ ಸಾಕುತ್ತಾರೆ.
ಈ ರೀತಿ ಪ್ರಾಣಿಗಳನ್ನು ಸಾಕುವುದು ತಪ್ಪಾಗಿದೆ. ಇದು ಕಾನೂನು ಬಾಹಿರ ಕೂಡಾ ಆಗಿರುತ್ತದೆ. ಮನೆಯಲ್ಲಿ ಗಿಳಿ ಅಥವಾ ಮೈನಾ ಪಕ್ಷಿಗಳನ್ನು ಸಾಕುವುದು ಸಾಮಾನ್ಯ ಅಂತ ತಿಳಿದಿದ್ದರೆ ಅದು ತಪ್ಪು, ಇದರಿಂದ ನಿಮಗೆ ಏಳು ವರ್ಷಗಳ ಶಿಕ್ಷೆ ಆಗಬಹುದು. WILDLIFE PROTECTION ACT ಈ ರೀತಿ ಹೇಳುತ್ತದೆ.
Do not attempt to pet these animals:
ಈ ಕುರಿತು ಮಾತನಾಡಿರುವ ಕೋಟಾದ ಅರಣ್ಯ ವನ್ಯಜೀವಿ ಸಂರಕ್ಷಣಾ ಅಧಿಕಾರಿ ಅನುರಾಗ್ ಭಟ್ನಾಗರ್, ಮನೆಗಳಲ್ಲಿ ಹಲವು ಜಾತಿಯ ಪಕ್ಷಿಗಳನ್ನು ಸಾಕುವುದು WILDLIFE PROTECTION ACT 1972ರ ಅಡಿ ನಿಷೇಧಿಸಲಾಗಿದೆ.
ಇದರಲ್ಲಿ ಗಿಳಿ ಮತ್ತು ಮೈನಾ ಸಾಕುವುದಕ್ಕೆ ಕೂಡ ಅನುಮತಿ ಇಲ್ಲ.ಇಷ್ಟೇ ಅಲ್ಲದೆ ಪ್ರಾಣಿ ಮತ್ತು ಪಕ್ಷಿಗಳ ಉಗುರು, ಮೂಳೆ, ಮಾಂಸ ಮತ್ತು ಕೂದಲು ಸೇರಿದಂತೆ ಇನ್ನಿತರ ವಸ್ತುಗಳನ್ನು ಮನೆಯಲ್ಲಿ ಸಂರಕ್ಷಿಸುವುದು, ಅಥವಾ ಕೊಳ್ಳುವುದು, ಮಾರುವುದು ಕೂಡ ಅಕ್ರಮ ಹಾಗೂ ಅಪರಾಧವಾಗಿದೆ.
ಈ ಸಂಬಂಧ ಯಾವುದೇ ದೂರು ಬಂದರೂ ಕೂಡ ಅದರ ವಿರುದ್ಧ ಕ್ರಮಕ್ಕೆ ಕೈಗೊಳ್ಳಲಾಗುವುದು ಎಂದು ವನ್ಯಜೀವಿ ಸಂರಕ್ಷಣಾ ಅಧಿಕಾರಿ ಎಚ್ಚರಿಕೆ ಜತೆಗೆ ಮುನ್ನೆಚ್ಚರಿಕೆಯನ್ನೂ ನೀಡಿದ್ದಾರೆ. WILDLIFE PROTECTION ACT ಅದೇ ರೀತಿ ನವಿಲು, ಕೋತಿ, ಗೂಬೆ, ಹೆಬ್ಬಾವು , ಗಿಡುಗ, ಜಿಂಕೆ, ಕೊಕ್ಕರೆ, ಆನೆ, ಹಾವು ಸಾಕುವುದನ್ನು ನಿಷೇಧಿಸಲಾಗಿದೆ.
ಅಷ್ಟೇ ಅಲ್ಲದೆ ಮೊಲ ಸಾಕುವುದಕ್ಕೆ ಕೂಡ ಕಾಯ್ದೆ ಅನುಮತಿ ನೀಡುವುದಿಲ್ಲ ಎಂದರು. ಗೊತ್ತಿದ್ದು ಅಥವಾ ಗೊತ್ತಿಲ್ಲದೇ ಈ ರೀತಿ ಪ್ರಾಣಿಗಳನ್ನು ಮನೆಲ್ಲಿ ಸಾಕುವುದು ಅಪರಾಧವಾಗಿದ್ದು, WILDLIFE PROTECTION ACT ಇದಕ್ಕೆ 3 ರಿಂದ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗುವುದು. ಇದರ ಹೊರತಾಗಿ, 25 ಸಾವಿರದವರೆಗೆ ದಂಡ ವಿಧಿಸಲಾಗುವುದು.
Complaint can be submitted:
ಈ ಕುರಿತು ಸಾರ್ವಜನಿಕರಿಗೆ ಮನವಿ ಮಾಡಿರುವ ಡಿಸಿಎಫ್ ಅನುರಾಗ್ ಭಟ್ನಾಗರ್, ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ, ಪಕ್ಷಿ ಅಥವಾ WILDLIFE PROTECTION ACT ವನ್ಯಜೀವಿ ರಕ್ಷಣೆಯನ್ನು ಮಾಡಲಾಗುವುದು. ಈ ರೀತಿ ಅಕ್ರಮವಾಗಿ ಪ್ರಾಣಿ ಮತ್ತು ಪಕ್ಷಿಗಳನ್ನು ಸಾಕುತ್ತಿರುವುದು ಕಂಡು ಬಂದಲ್ಲಿ ಸಾರ್ವಜನಿಕರು ದೂರು ಸಲ್ಲಿಸಬಹುದು.
ಅಂತಹ ಪ್ರಾಣಿ – ಪಕ್ಷಿಗಳ ರಕ್ಷಣೆ ಮಾಡಿ ಸಂಗ್ರಹಾಯಲಕ್ಕೆ ದಾಖಲಿಸಲಾಗುವುದು. ಈ ರೀತಿ ಪ್ರಾಣಿಗಳನ್ನು ಸಾಕಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಇನ್ನು ದೂರುದಾರರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ಭಟ್ನಾಗರ್ ತಿಳಿಸಿದ್ದಾರೆ.
Rescue of 80 parrots and 38 tortoises so far:
ಅಕ್ರಮವಾಗಿ ಗಿಳಿ ಮತ್ತು ಪ್ರಾಣಿಗಳ ಸಾಕಿದ ಕುರಿತು ದೂರು ಸಲ್ಲಿಕೆಯಾಗುತ್ತಿವೆ. ಕಳೆದ ಮೂರ್ನಾಲ್ಕು ತಿಂಗಳಲ್ಲಿ 80 ಗಿಳಿಗಳ ರಕ್ಷಣೆ ಮಾಡಲಾಗಿದೆ. ಅಲ್ಲದೇ, ಮನೆಯಲ್ಲಿ ಅಕ್ರಮವಾಗಿ ಸಾಕಿದ್ದ 38 ಆಮೆಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಪ್ರಕರಣದ ಸಂಬಂಧ ಯಾವುದೇ ದೂರು ದಾಖಲಿಸಿಲ್ಲ. ಕಾರಣ ಅವರಿಗೆ ಗಿಳಿ ಸಾಕುವುದು ಅಪರಾಧ ಎಂಬುದು ತಿಳಿದಿಲ್ಲ. ಕಾನೂನಿನ ಅರಿವಿಲ್ಲದೇ ಈ ರೀತಿ WILDLIFE PROTECTION ACT ನಿಷೇಧಿತ ಪ್ರಾಣಿಗಳನ್ನು ಸಾಕಿದವರಿಗೆ ತಿಳಿ ಹೇಳುವ ಕಾರ್ಯ ಮಾಡಲಾಗುತ್ತಿದೆ ಎಂದು ವನ್ಯಜೀವಿ ಸಂರಕ್ಷಣಾ ಅಧಿಕಾರಿ ಅನುರಾಗ್ ಭಟ್ನಾಗರ್ ಹೇಳಿದ್ದಾರೆ.
Appeal to the people:
ರಕ್ಷಣೆ ಮಾಡಿದ ಅನೇಕ ಗಿಳಿಗಳು ಇಲ್ಲಿಗೆ ಬಂದಾಗ ಸ್ವಚ್ಛಂದವಾಗಿ ಹಾರಾಡುವುದಿಲ್ಲ. ಕಾರಣ ಅವುಗಳನ್ನು ಸಣ್ಣ ಗೂಡಿನಲ್ಲಿ ಕೂಡಿ ಹಾಕಿರುತ್ತಾರೆ. ಅದೊಂದು ರೀತಿ ಶಿಕ್ಷೆ ಆಗಿರುತ್ತದೆ. ಹಲವು ದಿನಗಳ ಕಾಲ ಅವು ಸಣ್ಣ ಗೂಡಿನಲ್ಲಿಯೇ ಇರುವುದರಿಂದ ಹಾರಾಟ ಮರೆತಿರುತ್ತವೆ.
ಇಂತಹ ಸಂದರ್ಭದಲ್ಲಿ ನಾವು ಅವುಗಳನ್ನು ಪ್ರಾಣಿ ಸಂಗ್ರಹಾಲಯದಲ್ಲಿ ಹಾರಾಟಕ್ಕೆ ಪ್ರೋತ್ಸಾಹಿಸುತ್ತೇವೆ, ಅವುಗಳು ಸರಿಯಾಗಿ ಹಾರಾಡಲು ಕಲಿತ ಮೇಲೆ ಅವುಗಳನ್ನು ಪರಿಸರಕ್ಕೆ ಬಿಡುತ್ತೇವೆ ಆದರೆ, ಆಮೆಗಳನ್ನು ಮಾತ್ರ ಸಂಗ್ರಹಾಲಯದಲ್ಲೇ ಇರಿಸಲಾಗುವುದು ಎಂದು ಭಟ್ನಾಗರ್ ವಿವರಣೆ ನೀಡಿದರು.
ಈ ರೀತಿಯಲ್ಲಿ ಮನೆಯಲ್ಲಿ ಅಕ್ರಮವಾಗಿ ಸಾಕಿದ ಪ್ರಾಣಿ – ಪಕ್ಷಿಗಳನ್ನು ವಶಕ್ಕೆ ಪಡೆದ ಬಳಿಕ ಜನರು ಅದನ್ನು ಮಕ್ಕಳು ಹಚ್ಚಿಕೊಂಡಿದ್ದು, ಅವರು ಬೇಸರದಲ್ಲಿದ್ದಾರೆ. ದಯವಿಟ್ಟು ನೀಡುವಂತೆ ಮನವಿ ಮಾಡುತ್ತಾರೆ. ಆದರೆ, ನಾವು ಏನು ಮಾಡಲು ಸಾಧ್ಯವಿಲ್ಲ.
ಅವುಗಳನ್ನು ರಕ್ಷಿಸಿ, ಪ್ರಾಣಿ ಸಂಗ್ರಹಾಲಯಕ್ಕೆ ರವಾನೆ ಮಾಡಲಾಗುವುದು, ಕಾನೂನು ಪಾಲನೆ ನಮ್ಮೆಲ್ಲರ ಜವಾಬ್ದಾರಿ ಎಂದು ಅವರು ತಿಳಿಸಿದ್ದಾರೆ.
ಇದನ್ನು ಓದಿರಿ : Honour To Welcome PM Modi Back To US: Gabbard