spot_img
spot_img

KIREN RIJIJU WAQF BILL:ವಕ್ಫ್ ತಿದ್ದುಪಡಿ ಮಸೂದೆಗೆ ಚಂದ್ರಬಾಬು, ನಿತೀಶ್, ಮುಸ್ಲಿಮ್ ಸಂಸದರಿಂದ ಬೆಂಬಲ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Srinagar (Jammu-Kashmir) News :

ಬಿಜೆಪಿ ಹೊರತಾಗಿ ಎನ್​ಡಿಎ ಕೂಟದಲ್ಲಿ WAQF ಮಸೂದೆ ತಿದ್ದುಪಡಿಗೆ ಸಮ್ಮತಿ ಇಲ್ಲ ಎಂಬ ವಿಪಕ್ಷಗಳ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ, ಎನ್​ಡಿಎ ಕೂಟದ ಪ್ರಮುಖ ಮಿತ್ರರಾದ ಬಿಹಾರ ಮುಖ್ಯಮಂತ್ರಿ ನಿತೀಶ್​ಕುಮಾರ್​ ನೇತೃತ್ವದ ಜೆಡಿಯು, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷ (ಟಿಡಿಪಿ)ಗಳು ತಮ್ಮ ಬೆಂಬಲ ನೀಡಿದ್ದಾರೆ ಎಂದು ತಿಳಿಸಿದೆ.

ಭಾರೀ ಚರ್ಚಿತ WAQF​ ತಿದ್ದುಪಡಿ ಮಸೂದೆಗೆ ಎನ್​ಡಿಎ ಮಿತ್ರಪಕ್ಷಗಳೆಲ್ಲವೂ ಬೆಂಬಲ ನೀಡಿವೆ. ಮುಸ್ಲಿಮ್​ ನಾಯಕರು ಸಾಮಾಜಿಕ ಒತ್ತಡದ ಹಿನ್ನೆಲೆ ಖಾಸಗಿಯಾಗಿ ಬೆಂಬಲ ಸೂಚಿಸಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.ಸಂಸತ್ತಿನಲ್ಲಿ ಮಂಡಿಸಿರುವ WAQF ತಿದ್ದುಪಡಿ ಮಸೂದೆಗೆ ಎನ್​ಡಿಎ ಮಿತ್ರಪಕ್ಷಗಳು ನೇರವಾಗಿ ಮತ್ತು ವಿಪಕ್ಷಗಳ ಮುಸ್ಲಿಮ್​ ಸಂಸದರು ಖಾಸಗಿಯಾಗಿ ಬೆಂಬಲ ನೀಡಿದ್ದಾಗಿ ಕೇಂದ್ರ ಸರ್ಕಾರ ದೃಢಪಡಿಸಿದೆ.

False information from the opposition about the bill:ನಿತೀಶ್​ಕುಮಾರ್​ ಮತ್ತು ಚಂದ್ರಬಾಬು ನಾಯ್ಡು ಅವರು ಮಸೂದೆ ಕುರಿತು ತಮ್ಮ ಬೆಂಬಲದ ಅಭಿಪ್ರಾಯ ತಿಳಿಸಿದ್ದಾರೆ. ಸಂಸತ್ತಿನಲ್ಲಿ ಮಸೂದೆ ಮಂಡಿಸುವ ಮೂಲಕ WAQF​ ಸಂಸ್ಥೆಯನ್ನು ಪಾರದರ್ಶಕಗೊಳಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ವಿಶ್ವದಲ್ಲಿಯೇ ಅತಿದೊಡ್ಡ WAQF ಆಸ್ತಿ ಭಾರತದಲ್ಲಿದೆ.

ಆದರೆ, ಅದು ಬಡ ಮುಸ್ಲಿಮರು, ಮಹಿಳೆಯರು ಮತ್ತು ಮಕ್ಕಳಿಗೆ ಪ್ರಯೋಜನ ನೀಡುತ್ತಿಲ್ಲ” ಎಂದು ಆರೋಪಿಸಿದರು. ಈ ಬಗ್ಗೆ ಜಮ್ಮು- ಕಾಶ್ಮೀರದ ಶ್ರೀನಗರದಲ್ಲಿ ಶನಿವಾರ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಕಿರಣ್​ ರಿಜಿಜು ಅವರು, WAQF ಮಸೂದೆ ತಿದ್ದುಪಡಿಯ ವಿರುದ್ಧ ವದಂತಿ ಮತ್ತು ತಪ್ಪು ಮಾಹಿತಿಯನ್ನು ಹರಡಲಾಗುತ್ತಿದೆ. ಈ ವಿಚಾರದಲ್ಲಿ ಎನ್​ಡಿಎ ಕೂಟ ಒಗ್ಗಟ್ಟಾಗಿದೆ ಎಂದು ಸ್ಪಷ್ಟಪಡಿಸಿದರು.WAQF ಮಂಡಳಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿದ್ದರೂ, ಎಲ್ಲ ಮುಸ್ಲಿಮರಿಗೆ ಅದು ಲಭ್ಯವಾಗಿಲ್ಲ.

ಪ್ರಸ್ತಾವಿತ ಮಸೂದೆಯು ಆಸ್ತಿಗಳನ್ನು ಕಸಿದುಕೊಂಡು ಬೇರೆಯವರಿಗೆ ನೀಡುವುದಿಲ್ಲ. ದೇಶದ ಸಂವಿಧಾನ ಮತ್ತು ನ್ಯಾಯ ಮತ್ತು ಪಾರದರ್ಶಕತೆಯ ಮೂಲಕ ಆಸ್ತಿಯನ್ನು ದಾಖಲಿಸಲಾಗುವುದು ಎಂದು ಕೇಂದ್ರ ಸಚಿವರು ಸ್ಪಷ್ಟನೆ ನೀಡಿದರು.

Private support of Muslim leaders:ಇನ್ನು, ಜಮ್ಮು- ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ನೀಡುವ ಬಗ್ಗೆ ಮಾತನಾಡಿ, ಸರಿಯಾದ ಸಮಯದಲ್ಲಿ ಕೇಂದ್ರ ಸರ್ಕಾರ ಈ ಬಗ್ಗೆ ನಿರ್ಧಾರ ಪ್ರಕಟಿಸಲಿದೆ. ಪ್ರಧಾನಿ ಮತ್ತು ಗೃಹ ಸಚಿವರು ಈಗಾಗಲೇ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಮಸೂದೆಗೆ ಜಮ್ಮು – ಕಾಶ್ಮೀರದ ವಿವಿಧ ಪಕ್ಷಗಳ ವಿರೋಧವಿದೆ ಎಂದು ಒಪ್ಪಿಕೊಂಡ ಕೇಂದ್ರ ಸಚಿವರು, ಸಾಮಾಜಿಕ ಒತ್ತಡದಿಂದಾಗಿ ವಿವಿಧ ಪಕ್ಷಗಳ ಮುಸ್ಲಿಮ್​ ನಾಯಕರು ಬಹಿರಂಗವಾಗಿ ಮಸೂದೆಗೆ ಬೆಂಬಲ ಘೋಷಿಸುತ್ತಿಲ್ಲ. ಆದರೆ, ಖಾಸಗಿಯಾಗಿ ಅನೇಕ ಸಂಸದರು ಸಹಮತ ವ್ಯಕ್ತಪಡಿಸಿದ್ದಾರೆ. ಸಮುದಾಯದ ಮಹಿಳೆಯರು ಹೆಚ್ಚಿನ ಬೆಂಬಲ ನೀಡಿದ್ದಾರೆ ಎಂದು ತಿಳಿಸಿದರು.

 

ಇದನ್ನು ಓದಿರಿ :Jharkhand Fetches Rs 26,000 Crore Investment With 15,000 Employment

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

GOLD PRICE TODAY:ಸತತ ಏರಿಕೆ ಕಂಡಿದ್ದ ಚಿನ್ನ- ಬೆಳ್ಳಿ ದರದಲ್ಲಿ ಇಳಿಕೆ

Bangalore/Hyderabad News: ನಿರಂತರ ಬೆಲೆ ಏರಿಕೆ ಮೂಲಕ ಆಭರಣ ಪ್ರಿಯರಲ್ಲಿ ನಿರಾಶೆಗೆ ಕಾರಣವಾಗಿದ್ದ GOLDದ ದರದಲ್ಲಿ ಇಂದು ಅಲ್ಪಮಟ್ಟದ ಕುಸಿತ ಕಂಡು ಬಂದಿದೆ.ಗಗನಮುಖಿಯಾಗುತ್ತಾ ಆಭರಣ ಪ್ರಿಯರಿಗೆ...

MYSORE : ಚಾಮುಂಡಿ ಬೆಟ್ಟದಲ್ಲಿ ಭಾರೀ ಬೆಂಕಿ

Mysore News : ಬೆಂಕಿ ಕೆನ್ನಾಲಿಗೆಗೆ ಗಿಡ-ಮರಗಳು ಸುಟ್ಟು ಕರಕಲಾಗಿವೆ. ಬೆಟ್ಟದ ಸುತ್ತ ನೂರಾರು ಎಕರೆಗೆ ಬೆಂಕಿಯ ಕೆನ್ನಾಲಿಗೆ ಆವರಿಸಿದೆ. ಬೆಂಕಿ ನಂದಿಸಲು ಅಗ್ನಿಶಾಮಕ ದಳ...

RCB GIRLS : ಮುಂಬೈ ಟೀಮ್ಗೆ RCB ಗರ್ಲ್ಸ್ ರಾಯಲ್ ಚಾಲೆಂಜ್..

RCB GIRLS : ಗಾರ್ಡನ್​ ಸಿಟಿ ಬೆಂಗಳೂರಲ್ಲಿ ಕ್ರಿಕೆಟ್​ ಕಲರವ ಜೋರಾಗಿದೆ. ಚಿನ್ನಸ್ವಾಮಿ ಮೈದಾನದ ಸುತ್ತ ಕ್ರಿಕೆಟ್​ ಫೀವರ್​​ ಕಾವೇರಿದೆ. ಹೋಮ್​ಗ್ರೌಂಡ್​ನಲ್ಲಿ 3ನೇ ಆವೃತ್ತಿಯ ಮೊದಲ...

OTT ADVISORY : ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಿದ ಅಶ್ಲೀಲತೆ

New Delhi News: ವಿವಿಧ ಪ್ಲಾರ್ಟ್​ಫಾರ್ಮ್​ಗಳಲ್ಲಿ ಪ್ರಸಾರವಾಗುವ ಕಂಟೆಂಟ್​ಗಳಲ್ಲಿ ಅಶ್ಲೀಲತೆ ನಿಯಂತ್ರಿಸಲು ಎಲ್ಲ OTT ADVISORY ಮತ್ತು ಸಾಮಾಜಿಕ ಮಾಧ್ಯಮಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ....