Bangalore News:
ಎಂಜಿ ರೋಡ್ನಿಂದ ಶಿವಾಜಿನಗರ ಮೆಟ್ರೋ ಸ್ಟೇಷನ್ವರೆಗೆ ಸುರಂಗ ಮಾರ್ಗದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಇಂದು ಟಿಬಿಎಂ ಮಷಿನ್ (TBM ಸುರಂಗ ಕೊರೆಯುವ ಯಂತ್ರ) ಸುರಂಗ ಕೊರೆದು ಹೊರ ಬರಲಿದೆ. ಅಂಡರ್ ಗ್ರೌಂಡ್ METRO ಕಾಮಗಾರಿಗಾಗಿ 9 ಟಿಬಿಎಂ ಮೆಷಿನ್ಗಳನ್ನು ಭೂಮಿಗಿಳಿಸಲಾಗಿತ್ತು.
ಟ್ರಾಫಿಕ್ನಿಂದ ಬೇಸತ್ತು ಹೋಗಿರುವ ಬೆಂಗಳೂರು ಜನರಿಗೆ ಮತ್ತೊಂದು ಗುಡ್ನ್ಯೂಸ್ ಸಿಕ್ಕಿದೆ. ಬಹು ನಿರೀಕ್ಷೆಯ ನಮ್ಮ ಮೆಟ್ರೋದ ಪಿಂಕ್ ಲೈನ್ ಓಪನ್ ಆಗಲಿದೆ. ಬೆಂಗಳೂರಿನ ಅತಿ ಉದ್ದದ ಭೂಗತ ಮೆಟ್ರೋ ಮಾರ್ಗವನ್ನು ಹೊಂದಿರುವ ಪಿಂಕ್ ಲೈನ್ ಯೋಜನೆ ಇದೆ.
ಪಿಂಕ್ ಲೈನ್ 2 ಹಂತಗಳನ್ನು ಹೊಂದಿದೆ. 21.26 ಕಿಲೋ ಮೀಟರ್ ಉದ್ದದ ಈ ಮಾರ್ಗ ಕಾಳೇನ ಅಗ್ರಹಾರ, ನಾಗವಾರ ನಡುವೆ ಬರೋಬ್ಬರಿ 12 ಭೂಗತ ನಿಲ್ದಾಣಗಳು ಹಾಗೂ 6 ಎತ್ತರಿಸಿದ ನಿಲ್ದಾಣಗಳಿವೆ. ಅದರಲ್ಲಿ ಈಗಾಗಲೇ 8 ಟಿಬಿಎಂ ಮೆಷಿನ್ ಸುರಂಗ ಕೊರೆದು ಹೊರಗೆ ಬಂದಿವೆ.
ಉಳಿದಿರುವ ಒಂದು ಟಿಬಿಎಂ ಮೆಷಿನ್ ಮಾತ್ರ ಇಂದು ಹೊರ ಬರಲಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಇದನ್ನು ಓದಿರಿ : ACTOR PRAKASH RAJ : ‘ನಾನು ಧರ್ಮವಿರೋಧಿಯಲ್ಲ, ಆದ್ರೆ ಕುಂಭ ಮೇಳಕ್ಕೆ ಹೋಗಲ್ಲ’