spot_img
spot_img

THE BEAST CAR : ಡೇಟೋನಾ 500 ಮೋಟಾರ್ ರೇಸ್ಗೆ ಜೀವಕಳೆ ತುಂಬಿದ ಟ್ರಂಪ್ ಕಾರ್

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

The Beast Car :

ಅಮೆರಿಕದ ಅಧ್ಯಕ್ಷರ THE BEAST CAR​ ರೇಸ್​ವೊಂದರ ಲ್ಯಾಪ್​ನಲ್ಲಿ ಭಾಗವಹಿಸಿ ಪ್ರೇಕ್ಷಕರನ್ನು ಹುರಿದುಂಬಿಸಿತು. ಏರ್ ಫೋರ್ಸ್ ಒನ್ ವಿಮಾನ ರೇಸಿಂಗ್ ಮೈದಾನವನ್ನು ಪ್ರದಕ್ಷಿಣೆ ಹಾಕಿತು. THE BEAST CAR ಇದು ಹಲವು ವಿಶೇಷತೆಗನ್ನು ಹೊಂದಿದೆ.

ಶ್ವೇತಭವನ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಟ್ರಂಪ್ ತಮ್ಮ ಮೊಮ್ಮಗಳು ಕೆರೊಲಿನಾ ಜೊತೆ ಇರುವುದನ್ನು ತೋರಿಸಲಾಗಿದೆ. ಅಷ್ಟೇ ಅಲ್ಲ, ಅಧ್ಯಕ್ಷರ ವಿಮಾನವಾದ ಏರ್ ಫೋರ್ಸ್ ಒನ್ ಕೂಡ ಡೇಟೋನಾ 500 ಮೈದಾನವನ್ನು ಒಂದು ರೌಂಡ್​ ಹಾಕಿ ಪ್ರೇಕ್ಷರನ್ನು ರೋಮಾಂಚನಗೊಳಿಸಿತು.

ಜನರನ್ನು ಉತ್ಸಾಹಗೊಳಿಸುವಲ್ಲಿ ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್‌ಗಿಂತ ಮತ್ತೊಬ್ಬ ಮಾಸ್​ ಲೀಡರ್​ ಇಲ್ಲವೆಂದೇ ಹೇಳಬಹುದು. ಇತ್ತೀಚೆಗೆ ಇಂತಹದ್ದೇ ಒಂದು ಘಟನೆ ನಡೆದಿದೆ. ಅಮೆರಿಕ ಅಧ್ಯಕ್ಷರು ತಮ್ಮ ತವರು ರಾಜ್ಯವಾದ ಫ್ಲೋರಿಡಾದಲ್ಲಿ ಪ್ರತಿಷ್ಠಿತ ‘ಡೇಟೋನಾ 500’ ಮೋಟಾರ್ ರೇಸ್ ಆರಂಭಕ್ಕೆ ತಮ್ಮ ಮೋಟಾರ್‌ಕೇಡ್ ಕಾರು ‘ದಿ ಬೀಸ್ಟ್’ ಅನ್ನು ಕಳುಹಿಸಿದ್ದರು.

ಅಧ್ಯಕ್ಷರ ಕಾರು ರೇಸ್​ ಟ್ರ್ಯಾಕ್​ನಲ್ಲಿ ಎರಡು ರೌಂಡ್​ ಹಾಕಿ ಪ್ರೇಕ್ಷಕರನ್ನು ಹುರಿದುಂಬಿಸಿತು.ಟ್ರಂಪ್ ಈ ಸ್ಪರ್ಧೆಗೆ ವೆಸ್ಟ್ ಪಾಮ್ ಬೀಚ್‌ನಿಂದ ತೆರಳಿದ್ದರು. ಅವರ ಜೊತೆ ಅವರ ಮಗ ಎರಿಕ್, ಮೊಮ್ಮಗ ಲ್ಯೂಕ್, ಸಾರಿಗೆ ಸಚಿವ ಸಿಯಾನ್ ಡಫ್ಟಿ ಮತ್ತು ಆಂತರಿಕ ಕಾರ್ಯದರ್ಶಿ ಡೌಗ್ ಬರ್ಗ್ಮ್ ಇದ್ದರು. ಇದಲ್ಲದೆ, ಕಾಂಗ್ರೆಸ್‌ನ ಹಲವಾರು ಸದಸ್ಯರು ಸಹ ಟ್ರಂಪ್ ಅವರೊಂದಿಗೆ ಪ್ರಯಾಣಿಸಿದರು. ನಂತರ ಅಧ್ಯಕ್ಷರ ಕಾರು ಮತ್ತು ಬೆಂಗಾವಲು ಪಡೆ ರೇಸ್ ಟ್ರ್ಯಾಕ್‌ನಲ್ಲಿ ಎರಡು ಸುತ್ತು ಹಾಕಿತು.

THE BEAST CAR “ಡೇಟೋನಾ 500 ರೇಸ್ ಜೀವನದ ವೇಗ, ಅಡ್ರಿನಾಲಿನ್ ರಶ್ ಮತ್ತು ರೇಸಿಂಗ್‌ನ ರೋಮಾಂಚನವನ್ನು ಪ್ರೀತಿಸುವವರನ್ನು ಒಟ್ಟುಗೂಡಿಸುತ್ತದೆ. ರೇಸಿಂಗ್ ಟ್ರ್ಯಾಕ್‌ನಲ್ಲಿ ಎಂಜಿನ್‌ಗಳ ಘರ್ಜನೆ, ಸ್ಟ್ಯಾಂಡ್‌ಗಳಲ್ಲಿ ಹಾರುವ ಧ್ವಜಗಳು, ವೇಗ​, ಶಕ್ತಿ ದಿ ಮೇಕ್ ಅಮೆರಿಕ ಗ್ರೇಟ್ ಎಗೇನ್‌ಗೆ ನೀಡುವ ಗೌರವ ಎಂದು ಟ್ರಂಪ್​ ಹೇಳಿದರು.

ಡೇಟೋನಾ 500 ಅಮೆರಿಕದ NASCAR (ನ್ಯಾಷನಲ್ ಅಸೋಸಿಯೇಷನ್ ​​ಫಾರ್ ಸ್ಟಾಕ್ ಕಾರ್ ಆಟೋ ರೇಸಿಂಗ್) ನಲ್ಲಿ ಅತ್ಯಂತ ಪ್ರತಿಷ್ಠಿತ ರೇಸ್ ಆಗಿದೆ. 2020 ರಲ್ಲಿ ಟ್ರಂಪ್ ಎರಡನೇ ಅವಧಿಗೆ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುತ್ತಿದ್ದಾಗ ಅದನ್ನು ವೀಕ್ಷಿಸಲು ಸ್ವತಃ ಬಂದಿದ್ದರು.

Special Features of ‘The Beast’ Car:

ಬೀಸ್ಟ್‌ನ ವಿಂಡೋಗಳು ಐದು ಇಂಚು ದಪ್ಪ ಮತ್ತು ಡೋರ್​ಗಳು 8 ಇಂಚು ದಪ್ಪವಾಗಿವೆ. ಈ ವಿಂಡೋಗಳನ್ನು ಪಾಲಿಕಾರ್ಬೊನೇಟ್‌ನಿಂದ ತಯಾರಿಸಲಾಗುತ್ತದೆ. ಡ್ರೈವರ್​ ವಿಂಡೋ ಕೇವಲ 3 ಇಂಚು ಮಾತ್ರ ತೆರೆದುಕೊಳ್ಳುತ್ತದೆ. ಬೇರೆ ಯಾವುದೇ ಕಿಟಕಿಗಳು ಓಪನ್​ ಆಗುವುದಿಲ್ಲ.

ಕಾರಿನ ಎಲ್ಲಾ ವಿಂಡೋಗಳು ಪೂರ್ಣ ಬುಲೆಟ್ ಪ್ರೂಫ್​ ಆಗಿವೆ​. ಅವು ರಾಸಾಯನಿಕ ಮತ್ತು ಜೈವಿಕ ದಾಳಿಗಳನ್ನು ಸಹ ತಡೆದುಕೊಳ್ಳಬಲ್ಲವು.   ‘ದಿ ಬೀಸ್ಟ್’ ಎಂಬುದು ಅಮೆರಿಕದ ಅಧ್ಯಕ್ಷರು ಪ್ರಯಾಣಿಸುವ ಕಾರು. ಇದನ್ನು ಕ್ಯಾಡಿಲಾಕ್ ಒನ್ ಎಂದೂ ಕರೆಯುತ್ತಾರೆ. ಇದು ಮೊದಲ ಕಾರು.

1963ರಲ್ಲಿ ಆಗಿನ ಅಧ್ಯಕ್ಷ ಜಾನ್ ಎಫ್. THE BEAST CAR ಕೆನಡಿಯವರ ಹತ್ಯೆಯ ನಂತರ ಅಮೆರಿಕ ಸರ್ಕಾರವು ಅಧ್ಯಕ್ಷರ ಕಾರನ್ನು ಹೆಚ್ಚು ಸುರಕ್ಷಿತವಾಗಿಸಲು ಬಯಸಿತು. ಅಧ್ಯಕ್ಷರು ಯಾವುದೇ ದೇಶಕ್ಕೆ ಹೋದರೂ ಬೀಸ್ಟ್​ ಅಲ್ಲಿಗೆ ಕಾಲಿಡಲೇಬೇಕು.

ಉಕ್ಕು, ಅಲ್ಯೂಮಿನಿಯಂ, ಟೈಟಾನಿಯಂ ಮತ್ತು ಸೆರಾಮಿಕ್‌ನಿಂದ ಮಾಡಲ್ಪಟ್ಟ ಈ ಕಾರು ಬಾಂಬ್ ದಾಳಿಯನ್ನು ಸಹ ತಡೆದುಕೊಳ್ಳಬಲ್ಲದು.ಡ್ರೈವರ್​ ಕ್ಯಾಬಿನ್ ಸರಿಯಾದ ಕಮ್ಯುನಿಕೇಶನ್​ ಮತ್ತು ಜಿಪಿಎಸ್ ಟ್ರ್ಯಾಕಿಂಗ್ ಸಿಸ್ಟಮ್​ ಹೊಂದಿರುತ್ತದೆ. ಇದರರ್ಥ ಕಾರು ಎಲ್ಲಿಗೆ ಹೋದರೂ ಅದರ ಮೇಲೆ ನಿಗಾವಹಿಸಬಹುದು. ಸಾಮಾನ್ಯ ಕಾರು ಚಾಲಕರು ಈ ಕಾರ್​ ಅನ್ನು ಚಲಾಯಿಸಲು ಸಾಧ್ಯವಾಗುವುದೇ ಇಲ್ಲ.

ಬೀಸ್ಟ್ ಡ್ರೈವರ್​ಗೆ ಅಮೆರಿಕ ಸೀಕ್ರೆಟ್ ಸರ್ವಿಸ್ ಮುಂಚಿತವಾಗಿ ತರಬೇತಿ ನೀಡಲಾಗುತ್ತದೆ. ಅವರು ನಿಯಮಿತವಾಗಿ ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗುತ್ತಾರೆ. ಕಷ್ಟಕರ ಸಂದರ್ಭಗಳಲ್ಲಿ 180 ಡಿಗ್ರಿ ‘ಜೆ-ಟರ್ನ್’ ಹೊಂದಿರುವ ಕಾರನ್ನು ತಪ್ಪಿಸುವುದು ಹೇಗೆ ಎಂಬುದರ ಬಗ್ಗೆ ಚಾಲಕನಿಗೆ ತರಬೇತಿ ನೀಡಲಾಗುತ್ತದೆ. ಈ ವಾಹನವು ಅಧ್ಯಕ್ಷರ ಸೀಟ್​ ಹತ್ತಿರ ಸ್ಯಾಟಲೈಟ್​ ಫೋನ್ ಅನ್ನು ಹೊಂದಿದೆ. ಇದರ ಮೂಲಕ ಅಧ್ಯಕ್ಷರು.. ಉಪಾಧ್ಯಕ್ಷರು ಮತ್ತು ಪೆಂಟಗಾನ್‌ಗೆ ಡೈರೆಕ್ಟ್​ ಕಾಲ್​ ಮಾಡಿ ಮಾತನಾಡಬಹುದಾಗಿದೆ.

ತುರ್ತು ಸಂದರ್ಭಗಳಲ್ಲಿ ಅಗತ್ಯವಿರುವ ಪ್ಯಾನಿಕ್ ಬಟನ್ ಜೊತೆಗೆ ಆಮ್ಲಜನಕ ಪೂರೈಕೆಯೂ ಇದೆ. ಅಧ್ಯಕ್ಷರ ಬ್ಲಡ್​ ಗ್ರೂಪ್​ಗೆ ಹೊಂದಿಕೆಯಾಗುವ ಬ್ಲಡ್​ ಬ್ಯಾಗ್​ಗಳು ಸಹ ಲಭ್ಯವಿರುತ್ತವೆ. ಫ್ಯೂಯಲ್​ ಟ್ಯಾಂಕ್ ಅನ್ನು ಸಹ ಅಪ್​ಡೇಟ್​ ಮಾಡಲಾಗಿದ್ದು, ಅದು ಸ್ಫೋಟಗೊಳ್ಳದಂತೆ ರೂಪಿಸಲಾಗಿದೆ.

ಟೈರ್‌ಗಳನ್ನು ಸಹ ಅತ್ಯಾಧುನಿಕ ತಂತ್ರಜ್ಞಾನದಿಂದ ತಯಾರಿಸಲಾಗುತ್ತದೆ. ಇವು ಮುರಿಯುವುದಿಲ್ಲ ಅಥವಾ ಪಂಕ್ಚರ್ ಆಗುವುದಿಲ್ಲ. ಹಾನಿಗೊಳಗಾಗಿದ್ದರೂ ಸಹ ಒಳಗಿನ ಉಕ್ಕಿನ ರಿಮ್‌ಗಳೊಂದಿಗೆ ಚಲಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.

ಇದನ್ನು ಓದಿರಿ : Skipping Deworming Because You Feel Fine? Here’s Why That Is A Dangerous Mistake

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

STOCK MARKET: ಸೆನ್ಸೆಕ್ಸ್ 425 ಅಂಶ ಕುಸಿತ, 22,795ಕ್ಕಿಳಿದ ನಿಫ್ಟಿ

Mumbai News: ಎನ್ಎಸ್ಇ ನಿಫ್ಟಿ 50 ಕೂಡ 127.25 ಪಾಯಿಂಟ್ ಅಥವಾ ಶೇಕಡಾ 0.51 ರಷ್ಟು ಕುಸಿದು 22,795.90 ರಲ್ಲಿ ಕೊನೆಗೊಂಡಿದೆ. ನಿಫ್ಟಿ 50 ದಿನದ...

PRE BUDGET MEETING:ಮುಂಬರುವ 2025-26ರ ರಾಜ್ಯ ಬಜೆಟ್ನಲ್ಲಿ ಕಾಸಿಯಾದ ನಿರೀಕ್ಷೆಗಳೇನು?

Bangalore News : ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಣಿಜ್ಯ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಜೊತೆಗೆ BUDGET ಪೂರ್ವ ಸಭೆ ನಡೆಸಿ...

TRAINS KUMBH MELA: ಇಲ್ಲಿ ತನಕ 3 ಕೋಟಿಗೂ ಹೆಚ್ಚು ಭಕ್ತರ ರೈಲು ಯಾನ!!

Vijayawada (Andhra Pradesh) News: ಫೆಬ್ರವರಿ 26 ರಂದು ಕೊನೆಗೊಳ್ಳುವ ಕುಂಭಮೇಳ ಕಣ್ತುಂಬಿಕೊಳ್ಳಲು ಭಕ್ತರ ದಂಡು ಪ್ರಯೋಗರಾಜ್​ ಗೆ ಆಗಮಿಸುತ್ತಿದೆ. ಭಾರತೀಯ ರೈಲ್ವೇಸ್​ ಇದುವರೆಗೂ 3.09...

AYODHYA SHRI RAM TEMPLE:ತಡರಾತ್ರಿವರೆಗೂ ರಾಮನ ದರ್ಶನಕ್ಕೆ ಅವಕಾಶ

Ayodhya (Uttar Pradesh) News: ಭಗವಾನ್ ರಾಮನ ಶಿಶು ರೂಪವಾದ ರಾಮ್ ಲಲ್ಲಾನನ್ನು ನೋಡಲು ದೇಶದ ಮೂಲೆಮೂಲೆಗಳಿಂದ ಭಕ್ತರು AYODHYA ಆಗಮಿಸುತ್ತಿದ್ದಾರೆ. ಶುಕ್ರವಾರ ಮುಂಜಾನೆ 5...