spot_img
spot_img

MAHAKUMBH : ಆ ಅಘೋರಿ ಭವಿಷ್ಯವೇ ನಿಜವಾಯ್ತಾ?

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

MAHAKUMBH :

ಉತ್ತರ ಪ್ರದೇಶದ ದೇವ ಪ್ರಯಾಗದಲ್ಲಿ MAHAKUMBH ನಡೆಯುತ್ತಿದೆ. ಕಳೆದ 30 ದಿನಗಳ ಅಂತರದಲ್ಲಿ 7 ಅಗ್ನಿ ದುರಂತ ಎದುರಾಗಿವೆ. ಈ ಹಿಂದೆ ಹೀಗೆ ಆಗಿತ್ತಾ? ಆ ಅಘೋರಿ ಒಬ್ಬರ ಭವಿಷ್ಯವಾಣಿಯಂತೆಯೇ ನಡೆಯುತ್ತಿದೆಯೇ? ಅಷ್ಟಕ್ಕೂ ಆ ಅಘೋರಿ ನಾಗಾ ಸಾಧು ನುಡಿದ ಭವಿಷ್ಯ ಎಂಥದ್ದು ಗೊತ್ತಾ? ಆ ವಿವರ ಇಲ್ಲಿದೆ ನೋಡಿ.

Aghori prediction.. Will the pile of cloth fall?

MAHAKUMBHದಲ್ಲಿ ಈ ಓರ್ವ ಅಘೋರಿ ಸಾಧು ಅಚ್ಚರಿ ಮೂಡಿಸುತ್ತಿದ್ದಾರೆ. ಮಿಂಚು ಹರಿಯುವ ಘಳಿಗೆಯಲ್ಲಿ ಕಾಣಿಸಿಕೊಳ್ಳುವ ಈ ಅಘೋರಿ ಸಾಧು ಬೆಚ್ಚಿಬೀಳಿಸುವ ಭವಿಷ್ಯವಾಣಿ ನುಡಿದಿದ್ದಾರೆ. ಇದೀಗ ಆಧ್ಯಾತ್ಮದ ರಾಜಧಾನಿ ದೇವ ಪ್ರಯಾಗದಲ್ಲಿ ಇದೇ ವಿಚಾರ ಚರ್ಚೆ ಆಗುತ್ತಿದೆ.

ಮಾ ಗಂಗೆಯ ಬಗ್ಗೆ ಬೆಚ್ಚಿಬೀಳಿಸೋ ಭವಿಷ್ಯವಾಣಿ ನುಡಿದಿದ್ದಾರೆ. ಇದೇ ಭವಿಷ್ಯ ಇದೀಗ 13 ಅಖಾಡಗಳನ್ನೂ ಚಿಂತೆಗೀಡುಮಾಡಿತ್ತು. ಇದಕ್ಕೆ ಪೂರಕ ಎನ್ನುವಂತೆಯೇ ಇದೀಗ MAHAKUMBHದಲ್ಲಿ ಮೂವತ್ತು ದಿನಗಳ ಅಂತರದಲ್ಲಿ ಏಳು ಸಲ ಅಗ್ನಿ ಪ್ರಮಾದ ಎದುರಾಗಿದೆ. ಮಹಾಕುಂಭಮೇಳದಲ್ಲಿ ಏಳು ದಿನಗಳಲ್ಲಿ ಅಗ್ನಿ ಪ್ರಮಾದ ಎದುರಾಗಿದ್ದು ವಿಲಕ್ಷಣ ಸಂಗತಿಗಳನ್ನು ಹೇಳುತ್ತಿದೆ.

ಜನವರಿ 19ರಂದು ಮೊದಲ ಸಲ ಗೀತಾ ಪ್ರೆಸ್ ಕ್ಯಾಂಪ್ ಅಗ್ನಿ ಪ್ರಮಾದಕ್ಕೆ ಬಲಿ ಆಗಿ ಸುಟ್ಟು ಹೋಯ್ತು. ದೇವ ಪ್ರಯಾಗದ ಸ್ಮಶಾನ ಘಾಟ್​​ನಲ್ಲಿನ ಕಾಗೆಗಳ ಮರ್ಮರ ಕಾಲಪುರುಷ ಅಘೋರಿ ಕಿವಿಗೆ ಬಿದ್ದಿದ್ದು ಹೀಗೆ ಎನ್ನಲಾಗುತ್ತಿದೆ.. ಅಂತ್ಯವಿಲ್ಲದ ಮಾರಣಹೋಮ ನಡೆಯಲಿದೆ. ಭೂಮಿ ತನ್ನ ಶ್ವಾಸವನ್ನೇ ಬದಲಿಸೋ ದಿನ ಬರುತ್ತದೆ. ಇದಕ್ಕೂ ಮುನ್ನವೇ ಇಡೀ ನೀಲಾಕಾಶ ಕಪ್ಪಾಗಲಿದೆ ಅನ್ನೋ ಇದೇ ಸುಳಿವನ್ನು ಆಧರಿಸಿಯೇ ನಾಗಾ ಸಾಧು ಈ ಭವಿಷ್ಯವಾಣಿ ನುಡಿದಿದ್ರು.

ಮುಂದಿನ ಕುಂಭಮೇಳದ ಹೊತ್ತಿಗೆ ದೇವ ಪ್ರಯಾಗದ ಚಿತ್ರಣವೇ ಬದಲಾಗಲಿದೆ. ಅಷ್ಟೇ ಅಲ್ಲ, ಮಾ ಗಂಗೆ ಕೂಡ ತನ್ನ ದಿಕ್ಕು ದೆಸೆಗಳನ್ನೇ ಬದಲಿಸಿಕೊಳ್ಳಲಿದೆ. ಕಣ್ಣಿಗೆ ಕಾಣದೇ ಇದ್ದ ಸರಸ್ವತಿ ನದಿ ಉಕ್ಕಿ ಹರಿಯಲಿದೆ ಅನ್ನೋ ಕಾರ್ಣಿಕ ನುಡಿದಿದ್ರು. ಸದ್ಯದ ಅಗ್ನಿ ಪ್ರಮಾದಗಳು ಕಾರ್ಣಿಕ ನಿಜವಾಗ್ತಿದ್ಯಾ ಅನ್ನೋ ಅನುಮಾನ ಮೂಡಿಸುತ್ತಿದೆ. ಜನವರಿ 30ರಂದು ಛತ್ನಾಗ್ ಘಾಟ್​ ಬಳಿಯ ಟೆಂಟ್​ ಸಿಟಿ ಸುಟ್ಟು ಬೂದಿ ಆಯ್ತು.

ಫೆಬ್ರವರಿ 7ರಂದು ಶಂಕರಾಚಾರ್ಯ ಮಾರ್ಗದಲ್ಲಿದ್ದ ಸೆಕ್ಟರ್​ 18ರಲ್ಲಿ ಅಗ್ನಿ ದುರಂತ ಸಂಭವಿಸಿತ್ತು. ಫೆಬ್ರವರಿ 13ರಂದು ಮತ್ತೊಂದು ಅಗ್ನಿ ಪ್ರಮಾದ ಕಾಣಿಸಿಕೊಂಡಿತ್ತು. ಫೆಬ್ರವರಿ 15ರಂದು ಅಗ್ನಿ ದುರಂತ ಕಂಡಿತ್ತಾದ್ರೂ ಯಾವುದೇ ಸಮಸ್ಯೆ ಆಗಲಿಲ್ಲ.

ಇದೀಗ ಫೆಬ್ರವರಿ 17ರಂದು ಎರಡು ಕಡೆ ಅಗ್ನಿ ಅವಘಡ ಸಂಭವಿಸಿದೆ. ಸೆಕ್ಟರ್​8 ಹಾಗೂ ಸೆಕ್ಟರ್ 18ರ ಬಜರಂಗಿದಾಸ್ ಮಾರ್ಗದಲ್ಲಿ ಅಗ್ನಿಪ್ರಮಾದ ಕಾಣಿಸಿಕೊಂಡಿತ್ತು. ಇದೆಲ್ಲವೂ ಆ ಅಘೋರಿ ಭವಿಷ್ಯವಾಣಿಯನ್ನೇ ನೆನಪಿಸುತ್ತಿವೆ.

ಇದನ್ನು ಓದಿರಿ : Kadiyam Nurseries Steal Spotlight As 135-Year-Old Rare Trees Arrive From Abroad

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

STOCK MARKET: ಸೆನ್ಸೆಕ್ಸ್ 425 ಅಂಶ ಕುಸಿತ, 22,795ಕ್ಕಿಳಿದ ನಿಫ್ಟಿ

Mumbai News: ಎನ್ಎಸ್ಇ ನಿಫ್ಟಿ 50 ಕೂಡ 127.25 ಪಾಯಿಂಟ್ ಅಥವಾ ಶೇಕಡಾ 0.51 ರಷ್ಟು ಕುಸಿದು 22,795.90 ರಲ್ಲಿ ಕೊನೆಗೊಂಡಿದೆ. ನಿಫ್ಟಿ 50 ದಿನದ...

PRE BUDGET MEETING:ಮುಂಬರುವ 2025-26ರ ರಾಜ್ಯ ಬಜೆಟ್ನಲ್ಲಿ ಕಾಸಿಯಾದ ನಿರೀಕ್ಷೆಗಳೇನು?

Bangalore News : ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಣಿಜ್ಯ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಜೊತೆಗೆ BUDGET ಪೂರ್ವ ಸಭೆ ನಡೆಸಿ...

TRAINS KUMBH MELA: ಇಲ್ಲಿ ತನಕ 3 ಕೋಟಿಗೂ ಹೆಚ್ಚು ಭಕ್ತರ ರೈಲು ಯಾನ!!

Vijayawada (Andhra Pradesh) News: ಫೆಬ್ರವರಿ 26 ರಂದು ಕೊನೆಗೊಳ್ಳುವ ಕುಂಭಮೇಳ ಕಣ್ತುಂಬಿಕೊಳ್ಳಲು ಭಕ್ತರ ದಂಡು ಪ್ರಯೋಗರಾಜ್​ ಗೆ ಆಗಮಿಸುತ್ತಿದೆ. ಭಾರತೀಯ ರೈಲ್ವೇಸ್​ ಇದುವರೆಗೂ 3.09...

AYODHYA SHRI RAM TEMPLE:ತಡರಾತ್ರಿವರೆಗೂ ರಾಮನ ದರ್ಶನಕ್ಕೆ ಅವಕಾಶ

Ayodhya (Uttar Pradesh) News: ಭಗವಾನ್ ರಾಮನ ಶಿಶು ರೂಪವಾದ ರಾಮ್ ಲಲ್ಲಾನನ್ನು ನೋಡಲು ದೇಶದ ಮೂಲೆಮೂಲೆಗಳಿಂದ ಭಕ್ತರು AYODHYA ಆಗಮಿಸುತ್ತಿದ್ದಾರೆ. ಶುಕ್ರವಾರ ಮುಂಜಾನೆ 5...