spot_img
spot_img

CAPSICUM CROP : ಕ್ಯಾಪ್ಸಿಕಂ ಬೆಳೆಗೆ ಭರಪೂರ ಆದಾಯ

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Davangere News:

ಹೆಚ್ಚು ಲಾಭಗಳಿಸುವ ಪರಿಕಲ್ಪನೆಯಿಂದ ರೈತರು ಅಡಕೆ ಹಿಂದೆ ಬಿದ್ದು ಇನ್ನಿತರೆ ಬೆಳೆಗಳನ್ನು ಬೆಳೆಯುವುದನ್ನೇ ಮರೆತುಬಿಟ್ಟಿದ್ದಾರೆ. ಆದರೇ ಇದಕ್ಕೆ ತದ್ವಿರುದ್ಧ ಎಂಬಂತೆ ಚನ್ನಗಿರಿ ತಾಲೂಕಿನ ನೀತಿಗೆರೆ ಗ್ರಾಮದ ನಿವೃತ್ತ ವಲಯ ಅರಣ್ಯಾಧಿಕಾರಿ ಒಂದು ಎಕರೆ ಜಮೀನಿನಲ್ಲಿ ಬಣ್ಣ ಬಣ್ಭದ ಕ್ಯಾಪ್ಸಿಕಂ ಬೆಳೆದಿದ್ದಾರೆ.

Capsicum crop is harvested nine times:

ಇದೇ ಬೆಳೆಯಿಂದ ಲಕ್ಷಾಂತರ ಆದಾಯಗಳಿಸುತ್ತಿದ್ದಾರೆ. ಇವರು ಬೆಳೆದ ಕ್ಯಾಪ್ಸಿಕಂಗೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಇದೆ. ನೀತಿಗೆರೆ ಗ್ರಾಮದ ನಿವೃತ್ತ ವಲಯ ಅರಣ್ಯಧಿಕಾರಿ ವೀರೇಶ್ ನಾಯ್ಕ್ ಅವರು ಕೃಷಿಕರಾಗಿ ಗುರುತಿಸಿಕೊಂಡಿದ್ದಾರೆ. ಇವರು ಒಂದು ಎಕರೆ ಜಮೀನಿನಲ್ಲಿ ಬೆಳೆದ ಹಳದಿ, ಕೆಂಪು ಬಣ್ಣ ಬಣ್ಣದ CAPSICUM CROP ಹೆಚ್ಚು ಸುದ್ದಿ ಮಾಡುತ್ತಿದೆ. 35 ಲಕ್ಷ ಖರ್ಚು ಮಾಡಿ ಸುಸಜ್ಜಿತವಾದ ಪಾಲಿ ಹೌಸ್ ಮಾಡಿದ್ದು, ಹಳದಿ ಹಾಗೂ ಕೆಂಪು ಎರಡು ಬಣ್ಣದ CAPSICUM CROP ಬೆಳೆದು ಯಶ ಕಂಡಿದ್ದಾರೆ. ಈ ಬೆಳೆ ಹಾಕಿ ಕೇವಲ ಮೂರು ತಿಂಗಳಾಗಿದ್ದು, ಅದೃಷ್ಟ ಎಂಬಂತೆ ಒಂಬತ್ತು ಬಾರಿ ಕ್ಯಾಪ್ಸಿಕಂ ಬೆಳೆ ಕಟಾವು ಮಾಡಲಾಗಿದೆ.

200 per kg:

“ಪ್ರತಿ ವಾರಕ್ಕೆ ಒಂದು ಬಾರಿ CAPSICUM CROP ಕಟಾವು ಮಾಡುವ ಇವರಿಗೆ ಒಮ್ಮೆಲೇ 2-3 ಕ್ವಿಂಟಾಲ್​​ ಫಸಲು ಕೈ ಸೇರುತ್ತಿದೆ. ಕಟಾವು ಮಾಡಿದ ಫಸಲನ್ನು ಹಳದಿ ಬೇರೆ ಕೆಂಪು ಕ್ಯಾಪ್ಸಿಕಂ ಬೇರೆ ಮಾಡಿ ಬಾಕ್ಸ್​​ಗೆ ತುಂಬಿ ಚೆನ್ನೈ (ಮದ್ರಾಸ್​​), ದೆಹಲಿ, ಕೋಲಾರ, ಬೆಂಗಳೂರು ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಪ್ರಸ್ತುತ ಪ್ರತಿ ಕೆ.ಜಿ.ಗೆ 200 ರೂ. ರಂತೆ CAPSICUM CROP ಮಾರಾಟ ಮಾಡಲಾಗುತ್ತಿದೆ” ಎಂದು ವೀರೇಶ್ ನಾಯ್ಕ್ ತಿಳಿಸಿದ್ದಾರೆ. ‌

ವೀರೇಶ್​​ ನಾಯ್ಕ್​​ ಅವರು ಇಲ್ಲಿ ತನಕ 9 ಬಾರಿ ಕ್ಯಾಪ್ಸಿಕಂ ಕಟಾವು ಮಾಡಿದ್ದು, ಇಲ್ಲಿ ತನಕ ಒಟ್ಟು 14 ಲಕ್ಷ ಆದಾಯ ತಂದುಕೊಟ್ಟಿದೆ. ಇನ್ನೂ ಕೂಡ ಬೆಳೆಯಿಂದ 30 ರಿಂದ 35 ಲಕ್ಷ ಆದಾಯ ಬರುವ ನಿರೀಕ್ಷೆಯಲ್ಲಿ ವೀರೇಶ್ ನಾಯ್ಕ್ ಇದ್ದಾರೆ.

ಮಧ್ಯವರ್ತಿಗಳು CAPSICUM CROP ಅನ್ನು ಗಲ್ಫ್ ದೇಶಗಳು ಸೇರಿದಂತೆ ಇಂಗ್ಲೆಂಡ್, ಅಮೆರಿಕ , ಉತ್ತರ ಕೊರಿಯಾಕ್ಕೆ ಕಳುಹಿಸುತ್ತಾರೆ ಎಂದು ವೀರೇಶ್ ಮಾಹಿತಿ ನೀಡಿದ್ದಾರೆ.

14 months crop, 11 thousand plants:

ಕ್ಯಾಪ್ಸಿಕಂ 14 ತಿಂಗಳ ಬೆಳೆಯಾಗಿದೆ.‌ 35 ಲಕ್ಷ ಖರ್ಚು ಮಾಡಿ ಪಾಲಿ ಹೌಸ್ ಮಾಡಿ ಮೂರು ತಿಂಗಳಿಂದ ಒಂದು ಎಕರೆಯಲ್ಲಿ ಬೆಳೆಯುತ್ತಿದ್ದೇನೆ. 11 ಸಾವಿರ ಗಿಡವಿದ್ದು ಅರ್ಧ ಎಕರೆ ಕೆಂಪು ಕ್ಯಾಪ್ಸಿಕಂ, ಇನ್ನುಳಿದ ಅರ್ಧ ಎಕರೆ ಹಳದಿ ಕ್ಯಾಪ್ಸಿಕಂ ಬೆಳೆದಿದ್ದೇವೆ.

ಬೆಳೆ ಹಾಕಿ ಕೇವಲ ಮೂರು ತಿಂಗಳಾಗಿದೆ.‌ ಈ ಬೆಳೆಗೆ ರಿಜ್ವಾನ್ ಸೀಡ್ಸ್ (ಬೀಜಗಳ) ಬಳಕೆ‌ ಮಾಡಲಾಗಿದೆ. ಫಸಲನ್ನು ಪ್ರತಿ ಒಂದು ವಾರಕ್ಕೆ ಒಂದು ಬಾರಿ ಕಟಾವು ಮಾಡಲಾಗುತ್ತದೆ. ಪ್ರತಿ ಗಿಡಕ್ಕೆ ಡ್ರಿಪ್ ಮೂಲಕ ನೀರು ಹಾಯಿಸಲಾಗುತ್ತಿದೆ. ಅಲ್ಲದೇ ಫಸಲು ಚೆನ್ನಾಗಿ ಬರಲು ಬೋರಾನ್, ಮೆಗ್ನೀಸಿಯಂ, ಫೀಪ್ಟಿ ಹಾಲ್ ಸೇರಿದ್ದಂತೆ ಕೊಟ್ಟಿಗೆ ಗೊಬ್ಬರವನ್ನೂ ಕೂಡ ಬಳಕೆ ಮಾಡಲಾಗಿದೆ.

ಪ್ರತಿ ಕಟಾವಿಗೆ 01-03 ಟನ್ ಬೆಳೆ ತೆಗೆದಿದ್ದೇನೆ. ಇಲ್ಲಿ ತನಕ 14 ಲಕ್ಷ ಆದಾಯ ಗಳಿಸಿದ್ದೇನೆ ಎಂದು ವೀರೇಶ್ ನಾಯ್ಕ್ ಅವರು ತಿಳಿಸಿದ್ದಾರೆ.

Service in Uttara Kannada, Dandeli, Channagiri:

ವೀರೇಶ್​ ನಾಯ್ಕ್ ಅವರು ವಲಯ ಅರಣ್ಯಧಿಕಾರಿ ಕರ್ತವ್ಯದಿಂದ ನಿವೃತ್ತಿ ಆಗಿ ಐದು ವರ್ಷಗಳೇ ಆಗಿವೆ. ಉತ್ತರ ಕನ್ನಡ, ದಾಂಡೇಲಿ, ಚನ್ನಗಿರಿಯಲ್ಲಿ ಸೇವೆ ಸಲ್ಲಿಸಿರುವ ಅವರು ನಿವೃತ್ತಿ ನಂತರ ತಮಗೆ ಸೇರಿದ ಎಂಟು ಎಕರೆ ಜಮೀನಿನಲ್ಲಿ ಕೃಷಿ ಮಾಡಬೇಕು ಎಂದು ಪಣ ತೊಟ್ಟು ಕ್ಯಾಪ್ಸಿಕಂ ಬೆಳೆದಿದ್ದಾರೆ.

ಜತೆಗೆ ಜೇನು ಸಾಕಾಣಿಕೆ, ಹೈನುಗಾರಿಕೆ ಜತೆಗೆ ಸೀತಾಫಲ, ಮಾವು, ಚೆರ್ರಿ ಹಣ್ಣು ಮುಂತಾದ ಹಲವು ಬಗೆಯ ಹಣ್ಣಿನ ಗಿಡಗಳನ್ನು ನೆಟ್ಟಿದ್ದಾರೆ. ಹಸು, ಕುರಿ, ಮೊಲ, ಸಾಕಾಣಿಕೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಇನ್ನು ಫಾರ್ಮ್​ ಹೌಸ್​ನಲ್ಲಿ​ ಸ್ಥಳೀಯ 50 ಜನರಿಗೆ ಕೆಲಸ ಕೊಟ್ಟಿದ್ದಾರೆ.

ಕ್ಯಾಪ್ಸಿಕಂ ನೋಡಿಕೊಳ್ಳಲು 10 ಜನ ಕೆಲಸ ಮಾಡುತ್ತಿದ್ದಾರೆ. ಬೆಳೆಗೆ ಇಂಡಿ ಗೊಬ್ಬರ, ಕುರಿ ಗೊಬ್ಬರ ಬಳಕೆ‌ ಮಾಡಿದ್ದೇನೆ. ನಾನು ಪಕ್ಕಾ ಕೃಷಿಕ” ಎಂದು ಹೃಷ ವ್ಯಕ್ತಪಡಿಸಿದರು.  ಬೆಳೆ ಯಶಸ್ವಿಯಾಗಲು ಕೆಲಸಗಾರ ರಂಗಪ್ಪ ಅವರ ಶ್ರಮ ಕೂಡ ಹೆಚ್ಚಿದೆ. “ಇದನ್ನು ಮಾಡಲು ಬಲು ಕಷ್ಟಪಟ್ಟಿದ್ದೇವೆ. ಇದರದ್ದು ದೊಡ್ಡ ಕಥೆ ಇದೆ. ದಿನಕ್ಕೆ ಎರಡು ಬಾರಿ ನೀರು ಬಿಡುತ್ತೇನೆ. ಡ್ರಿಪ್ ಮೂಲಕ ನೀರು ಹಾಯಿಸಲಾಗುತ್ತದೆ.

10-20 ನಿಮಿಷ ನೀರು ಬಿಟ್ಟರೆ ಸಾಕು. ಇಲ್ಲಿ ಎಲ್ಲೂ ಗೊಬ್ಬರ ಸಿಗದೇ ಇದ್ದಾಗ ಸಾಹೇಬರು ಕಡೂರು, ಬೆಂಗಳೂರು ತನಕ ಹೋಗಿ ತರುತ್ತಾರೆ. ಕುರಿ ಗೊಬ್ಬರ ಕೂಡ ಬಳಕೆ ಮಾಡಲಾಗಿದೆ” ಎಂದು ಕೆಲಸದಾತ ರಂಗಪ್ಪ ತಿಳಿಸಿದರು.

ಇದನ್ನು ಓದಿರಿ : Uttar Pradesh: Two Mumbai-bound Trains Receive Bomb Threats, Nothing Suspicious Found

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

KL RAHUL SACRIFICE:ಕನ್ನಡಿಗ ಕೆ.ಎಲ್.ರಾಹುಲ್ ತ್ಯಾಗಕ್ಕೆ ಫ್ಯಾನ್ಸ್ ಮೆಚ್ಚುಗೆ

KL Rahul: ಹೌದು, ಬಾಂಗ್ಲಾ ನೀಡಿದ್ದ 228 ರನ್​ಗಳ ಗುರಿ ಬೆನ್ನತ್ತಿದ ಭಾರತ ಉತ್ತಮ ಆರಂಭ ಪಡೆದಿದ್ದರೂ ಬಳಿಕ ರೋಹಿತ್​ ಶರ್ಮಾ (41), ವಿರಾಟ್​ ಕೊಹ್ಲಿ...

HUAWEI MATE XT TRI FOLD PHONE:ಇದರ ಬೆಲೆ 2 ಬುಲೆಟ್ ಬೈಕ್ಗಳಿಗೆ ಸಮ!

Huaveli Re-Launched Ultimate Design News: ಇತ್ತೀಚೆಗೆ ಪ್ರಪಂಚದಾದ್ಯಂತ ಆಯ್ದ ಮಾರುಕಟ್ಟೆಗಳಲ್ಲಿ ಪರಿಚಯಿಸಲಾಗಿದೆ. ಆದ್ರೆ ಇದರ ಬೆಲೆ ಎರಡು ರಾಯಲ್​ ಎನ್​ಫೀಲ್ಡ್​ಗೆ ಸಮ. ರಾಯಲ್​ ಎನ್‌ಫೀಲ್ಡ್...

PAYTM SOLAR SOUND BOX:ಸೂರ್ಯನ ಬೆಳಕಿನಿಂದಲೇ ಚಾರ್ಜ್ ಆಗುತ್ತೆ ‘ಪೇಟಿಎಂ ಸೌಂಡ್ಬಾಕ್ಸ್’

Paytm Solar SoundBoss News: ಇತ್ತೀಚೆಗೆ PAYTMನ ಪೋಷಕ ಕಂಪನಿ 'ಒನ್97 ಕಮ್ಯುನಿಕೇಷನ್ಸ್' ಮತ್ತೊಂದು ವಿಷಯದೊಂದಿಗೆ ಸುದ್ದಿಯಲ್ಲಿದೆ. ವ್ಯಾಪಾರಿಗಳಿಗಾಗಿ ದೇಶದ ಮೊದಲ ಸೌರಶಕ್ತಿ ಚಾಲಿತ 'ಸೋಲಾರ್​...

UNSAFE MEDICINES:9 ಔಷಧಗಳ ನಿರ್ಬಂಧಿಸುವಂತೆ ಕೇಂದ್ರಕ್ಕೆ ಸಚಿವ ಗುಂಡೂರಾವ್ ಪತ್ರ

Bangalore News: ಈ ಕುರಿತು ನಡ್ಡಾರಿಗೆ 9 MEDICINES ಕಂಪನಿಗಳ ಅಸುರಕ್ಷಿತ MEDICINES ವಿವರಗಳನ್ನು ಉಲ್ಲೇಖಿಸಿ ದಿನೇಶ್ ಗುಂಡೂರಾವ್ ಫೆ.20ರಂದು ಪತ್ರ ಬರೆದಿದ್ದಾರೆ.ವಿವಿಧ 9 MEDICINES...