CHAMPIONS TROPHY:
CHAMPIONS TROPHY ಇಂದಿನಿಂದ ಗ್ರ್ಯಾಂಡ್ ಓಪನಿಂಗ್ ಪಡೆದುಕೊಂಡಿವೆ. ಟೂರ್ನಿಯಲ್ಲಿ ಎರಡು ಗ್ರೂಪ್ಗಳನ್ನು ಮಾಡಲಾಗಿದೆ. ಗ್ರೂಪ್-ಎ ನಲ್ಲಿ ಬಾಂಗ್ಲಾ, ಭಾರತ, ಪಾಕ್ ಹಾಗೂ ನ್ಯೂಜಿಲೆಂಡ್ ಇವೆ. ಗ್ರೂಪ್- ಬಿ ನಲ್ಲಿ ಅಫ್ಘಾನ್, ಇಂಗ್ಲೆಂಡ್, ಆಸ್ಟ್ರೇಲಿಯಾ ಹಾಗೂ ಆಫ್ರಿಕಾ ತಂಡಗಳಿವೆ. ಆದರೆ ಈ ಮಿನಿವಿಶ್ವಕಪ್ಗೆ ಶ್ರೀಲಂಕಾ ಹಾಗೂ ವೆಸ್ಟ್ ಇಂಡೀಸ್ ಏಕೆ ಆಯ್ಕೆ ಆಗಿಲ್ಲ ಎನ್ನವುದಕ್ಕೆ ಉತ್ತರ ಇಲ್ಲಿದೆ.
2023ರ ವಿಶ್ವಕಪ್‌ನಲ್ಲಿ ಅಗ್ರ ಏಳು ಕ್ರಮಾಂಕಗಳನ್ನು ಪಡೆದ ಅಫ್ಘಾನಿಸ್ತಾನ ಸೇರಿ 8 ತಂಡಗಳು ಆಯ್ಕೆ ಆಗಿವೆ. ಇನ್ನು ಪಾಕಿಸ್ತಾನವು CHAMPIONS TROPHY ಗೆ ಆತಿಥೇಯ ನೀಡುತ್ತಿರುವುದರಿಂದ ಸ್ವಯಂಚಾಲಿತವಾಗಿ ಅರ್ಹತೆ ಪಡೆದಿದೆ. ಆದರೆ ಶ್ರೀಲಂಕಾ, ವೆಸ್ಟ್ ಇಂಡೀಸ್, ಕೀನ್ಯಾ, ಜಿಂಬಾಬ್ವೆ ಹಾಗೂ ಐರ್ಲೆಂಡ್, ನೆದರ್ಲ್ಯಾಂಡ್ ತಂಡಗಳು ಅರ್ಹತೆ ಪಡೆದಿಲ್ಲ.
ಶ್ರೀಲಂಕಾ ತಂಡ ಇಲ್ಲದೇ ಇದೇ ಮೊದಲ ಬಾರಿಗೆ CHAMPIONS TROPHY ನಡೆಯುತ್ತಿದೆ. 2002ರಲ್ಲಿ ಮಳೆಯ ಕಾರಣದಿಂದ ಶ್ರೀಲಂಕಾ-ಭಾರತ ಟ್ರೋಫಿಯನ್ನು ಹಂಚಿಕೊಂಡಿದ್ದವು. ಇದರ ಜೊತೆಗೆ 2004ರಲ್ಲಿ ಚಾಂಪಿನ್ ಆಗಿದ್ದ ವೆಸ್ಟ್ ಇಂಡೀಸ್ ಕೂಡ 2ನೇ ಬಾರಿಗೆ ಚಾಂಪಿಯನ್ ಟ್ರೋಫಿ (2017, 2025) ತಪ್ಪಿಸಿಕೊಂಡಿರುವುದು ಅಲ್ಲಿನ ಅಭಿಮಾನಿಗಳಿಗೆ ಬೇಸರದ ಸಂಗತಿ ಆಗಿದೆ.
2023ರ ವಿಶ್ವಕಪ್ ಟೂರ್ನಿಗೆ ವಿಶ್ವದ ಒಟ್ಟು 13 ತಂಡಗಳಲ್ಲಿ 10 ತಂಡಗಳು ಆಯ್ಕೆ ಆಗಿದ್ದವು. ಈ ಟೂರ್ನಿಯಲ್ಲಿ ಕೀನ್ಯಾ, ಜಿಂಬಾಬ್ವೆ, ಐರ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಟೂರ್ನಿಗೂ ಮೊದಲೇ ಹೊರಗುಳಿದಿದ್ದವು. ಈಗ ಚಾಂಪಿಯನ್ ಟ್ರೋಫಿ ಆಡುತ್ತಿರುವ 8 ಟೀಮ್ಗಳು ಹಾಗೂ ಶ್ರೀಲಂಕಾ, ನೆದರ್ಲ್ಯಾಂಡ್ ವಿಶ್ವಕಪ್‌ನಲ್ಲಿ ಸ್ಥಾನ ಪಡೆದಿದ್ದವು.
ಚಾಂಪಿಯನ್ ಟ್ರೋಫಿಗೆ ಇವುಗಳ ನೆಟ್ ರನ್ರೇಟ್ ಅನ್ನು ಇಲ್ಲಿ ಗಣನೆಗೆ ತೆಗೆದುಕೊಳ್ಳಲಾಗಿತ್ತು. ರನ್ರೇಟ್ನಲ್ಲಿ ಬಾಂಗ್ಲಾ ವಿರುದ್ಧ ಅರ್ಹತೆ ಪಡೆಯುವಲ್ಲಿ ಶ್ರೀಲಂಕಾ ವಿಫಲವಾಯಿತು. ನೆದರ್ಲ್ಯಾಂಡ್ -1.825, ಬಾಂಗ್ಲಾದ ನೆಟ್ ರನ್ ರೇಟ್ 1.087 ಇದ್ರೆ ಶ್ರಿಲಂಕಾದ ನೆಟ್ ರನ್ ರೇಟ್ -1.419 ಇತ್ತು.
ನೆಟ್ ರೇಟ್ನಲ್ಲಿ ಬಾಂಗ್ಲಾದ ಪರ್ಫಾಮೆನ್ಸ್ ಚೆನ್ನಾಗಿದ್ದ ಕಾರಣ 8ನೇ ಸ್ಥಾನ ಪಡೆದು ಶ್ರೀಲಂಕಾವನ್ನು ಹಿಂದಿಕ್ಕಿ ಆಯ್ಕೆ ಆಗಿದೆ. ಅದರಂತೆ ವೆಸ್ಟ್ ಇಂಡೀಸ್ ವಿಶ್ವಕಪ್ನ ಅರ್ಹತೆ ಪಡೆಯುವಲ್ಲಿ ಮೊದಲೇ ವಿಫಲವಾಗಿತ್ತು. ಇದರಿಂದ ಚಾಂಪಿಯನ್ಸ್ ಟ್ರೋಫಿಗೂ ಅದು ಆಯ್ಕೆ ಆಗಿಲ್ಲ.
ಇದನ್ನು ಓದಿರಿ : RISHAB SHETTY : ಛತ್ರಪತಿ ಶಿವಾಜಿ ಮಹಾರಾಜರ ಪಾತ್ರದಲ್ಲಿ ರಿಷಬ್ ಶೆಟ್ಟಿ