Prayagraj, Uttar Pradesh News:
ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ರಾಜಕೀಯ ನಾಯಕರು ಮಹಾಕುಂಭದಲ್ಲಿ ಪುಣ್ಯ ಸ್ನಾನ ಮಾಡಿ, ಸಾಧು ಸಂತರ ಆಶೀರ್ವಾದ ಪಡೆದುಕೊಂಡಿದ್ದಾರೆ. ಈಗ ಅರ್ಥ ಸಚಿವರ ಸರದಿ. ಕುಟುಂಬದ ಸದಸ್ಯರೊಂದಿಗೆ ಮಹಾಕುಂಭಕ್ಕೆ ಆಗಮಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇದೊಂದು ಅದ್ಬುತ ಕ್ಷಣ ಎಂದು ಹೇಳಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿ ಸಂಸದ TEJASVI SURYA, ಕೇಂದ್ರ ಸಚಿವ ರಾಮ್ ಮೋಹನ್ ನಾಯ್ಡು ಮತ್ತು ಶಿವಸೇನಾ ಸಂಸದ ಶ್ರೀಕಾಂತ್ ಶಿಂಧೆ ಸೇರಿದಂತೆ ಪ್ರಮುಖ ರಾಜಕೀಯ ಗಣ್ಯರು ಬುಧವಾರ ಪ್ರಯಾಗ್ರಾಜ್ ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿ, ಸಾಧು – ಸಂತರ ಆಶೀರ್ವಾದ ಪಡೆದುಕೊಂಡರು.
A wonderful spiritual union:
ಶಿವಸೇನಾ ಸಂಸದ ಶ್ರೀಕಾಂತ್ ಶಿಂಧೆ ಮಾತನಾಡಿ, ಜೀವಮಾನದಲ್ಲಿ ಒಮ್ಮೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದಕ್ಕೆ ತಮ್ಮ ಕೃತಜ್ಞತೆ ಸಲ್ಲಿಸಿದರು.
144 ವರ್ಷಗಳಿಗೆ ಒಮ್ಮೆ ಬರುವ ಮಹಾಕುಂಭದಲ್ಲಿ ಭಾಗಿಯಾಗಿದ್ದು ನನ್ನ ಅದೃಷ್ಟ. ಕೋಟ್ಯಂತರ ಜನರು ಪವಿತ್ರ ಸ್ನಾನ ಮಾಡಲು ಆಗಮಿಸುತ್ತಿದ್ದು, ಇದು ನಿಜವಾದ ಅದ್ಬುತ ಅಧ್ಯಾತ್ಮಿಕ ಸಂಗಮವಾಗಿದೆ ಎಂದರು.
Nowhere in the world has such a great fair been held:
ಮತ್ತೊಂದು ಕಡೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ TEJASVI SURYA ಕೂಡ ನೂರಾರು ಕಾರ್ಯಕರ್ತರೊಂದಿಗೆ ಪ್ರಯಾಗ್ರಾಜ್ಗೆ ಆಗಮಿಸಿ, ಪುಣ್ಯ ಸ್ನಾನ ಮಾಡಿ ಪುನೀತರಾದರು .
ಇಷ್ಟು ದೊಡ್ಡ ಮಟ್ಟ ಧಾರ್ಮಿಕ ಕಾರ್ಯಕ್ರಮವನ್ನು ವಿಶ್ವದಲ್ಲಿ ಎಲ್ಲಿಯೂ ಆಯೋಜಿಸಿಲ್ಲ. ಮಹಾಕುಂಭ ದೇಶಾದ್ಯಂತ ಜನರನ್ನು ಒಟ್ಟಿಗೆ ಸೇರಿಸುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
I was lucky enough to be involved in Aquarius:
ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಮಾತನಾಡಿ, ತಲೆಮಾರುಗಳಿಂದಲೂ ಈ ಸಂಪ್ರದಾಯ ಮುಂದುವರೆದುಕೊಂಡು ಬಂದಿದೆ .
ಮಹಾಕುಂಭದಲ್ಲಿ ಭಾಗವಹಿಸಲು ನಾನು ಅದೃಷ್ಟ ಮಾಡಿದ್ದೇನೆ . ಇಲ್ಲಿನ ಶಕ್ತಿ ಮತ್ತು ಸಕಾರಾತ್ಮಕತೆ ನಂಬಲು ಅಸಾಧ್ಯ ಎಂದು ತಿಳಿಸಿದರು.
ಇದನ್ನು ಓದಿರಿ : Homegrown Festival 2025 Will Be An Adventurous Playground of Creativity And Culture