WhatsApp Group
Join Now
Telegram Group
Join Now
Instagram Account
Follow Now
Facebook Page
Follow Now
Ind Was Ban News:
ಇಂದು ಭಾರತ ಮತ್ತು ಬಾಂಗ್ಲಾದೇಶ ತಂಡಗಳ ನಡುವೆ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಎರಡನೇ ಪಂದ್ಯ ನಡೆಯಲಿದೆ.ಟೀಂ ಇಂಡಿಯಾವನ್ನು ರೋಹಿತ್ ಶರ್ಮಾ ಮುನ್ನಡೆಸಿದರೆ, ಬಾಂಗ್ಲಾವನ್ನು ನಜ್ಮುಲ್ ಹೊಸೈನ್ ಶಾಂಟೋ ಮುನ್ನಡೆಸುತ್ತಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಎರಡನೇ ಬಾರಿಗೆ ಈ ತಂಡಗಳು ಮುಖಾಮುಖಿ ಆಗುತ್ತಿವೆ.ಇಂದಿನಿಂದ ಭಾರತ ಐಸಿಸಿ ಚಾಂಪಿಯನ್ಸ್ ಟ್ರೋಫಿ ಅಭಿಯಾನವನ್ನು ಪ್ರಾರಂಭಿಸಲಿದೆ. ಕಳೆದ ಆವೃತ್ತಿಯಲ್ಲಿ ರನ್ನರ್ ಅಪ್ ಆಗಿದ್ದ ಭಾರತ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ. ಉಭಯ ತಂಡಗಳ ನಡುವಿನ ಈ ಪಂದ್ಯ ದುಬೈನ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.
Win for India:ಇದೀಗ ಈ ಪಂದ್ಯದಲ್ಲೂ ಗೆದ್ದು ಅಜೇಯವಾಗಿ ಗೆಲುವಿನ ಓಟ ಮುಂದುವರೆಸಲು IND ಸಜ್ಜಾಗಿದೆ. ಈ ಹಿಂದೆ 2017ರಲ್ಲಿ IND ಮತ್ತು ಬಾಂಗ್ಲಾ ನಡುವೆ ಪಂದ್ಯ ನಡೆದಿತ್ತು. ಇದರಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿತ್ತು.
Head to Head:ದುಬೈನಲ್ಲಿ ಉಭಯ ತಂಡಗಳ ನಡುವೆ ಒಟ್ಟು 12 ಪಂದ್ಯಗಳು ನಡೆದಿದ್ದು, ಅದರಲ್ಲಿ IND 10 ಪಂದ್ಯಗಳಲ್ಲಿ ಗೆದ್ದರೆ, ಬಾಂಗ್ಲಾ ಎರಡು ಪಂದ್ಯಗಳಲ್ಲಿ ಜಯಭೇರಿ ಬಾರಿಸಿದೆ.ಭಾರತ ಮತ್ತು ಬಾಂಗ್ಲಾದೇಶ ನಡುವೆ ಇದುವರೆಗೆ ಒಟ್ಟು 41 ಏಕದಿನ ಪಂದ್ಯಗಳು ನಡೆದಿವೆ. ಇವುಗಳಲ್ಲಿ IND 32 ಪಂದ್ಯಗಳಲ್ಲಿ ಗೆದ್ದು ಪ್ರಾಬಲ್ಯ ಸಾಧಿಸಿದರೇ, ಬಾಂಗ್ಲಾ ಕೇವಲ 8 ಪಂದ್ಯಗಳಲ್ಲಿ ಮಾತ್ರ ಜಯಗಳಿಸಿದೆ. ಒಂದು ಪಂದ್ಯ ರದ್ದಾಗಿದೆ.
IND vs BAN live broadcast, live streaming details:IND ಮತ್ತು ಬಾಂಗ್ಲಾದೇಶ ನಡುವಿನ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ಚಾನೆಲ್ ಮತ್ತು ಡಿಡಿ ಚಾನೆಲ್ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಇದಲ್ಲದೆ, ಜಿಯೋಹಾಟ್ಸ್ಟಾರ್ ವೆಬ್ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ನಲ್ಲಿ ಪಂದ್ಯದ ಲೈವ್ ಸ್ಟ್ರೀಮಿಂಗ್ ಉಚಿತವಾಗಿ ವೀಕ್ಷಿಸಬಹುದು.
Possible Team- India:ರಾಹುಲ್/ರಿಷಭ್ ಪಂತ್, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಅರ್ಷ್ದೀಪ್ ಸಿಂಗ್, ಹರ್ಷಿತ್ ರಾಣಾ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ.ರೋಹಿತ್ ಶರ್ಮಾ (ನಾಯಕ),ಶ್ರೇಯಸ್ ಅಯ್ಯರ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆ.ಎಲ್.
Bangladesh: ಸೌಮ್ಯ ಸರ್ಕಾರ್, ತಂಜಿದ್ ಹಸನ್, ನಜ್ಮುಲ್ ಹೊಸೈನ್ ಶಾಂತೊ (ನಾಯಕ), ಜಾಕಿರ್ ಅಲಿ (ವಿಕೆಟ್ ಕೀಪರ್), ಮುಷ್ಫಿಕರ್ ರಹೀಮ್, ಮಹ್ಮದುಲ್ಲಾ, ಮೆಹದಿ ಹಸನ್ ಮಿರಾಜ್, ತಸ್ಕಿನ್ ಅಹ್ಮದ್, ತಂಜಿಮ್ ಹಸನ್ ಸಾಕಿಬ್, ನಹಿದ್ ರಾಣಾ, ಮುಸ್ತಾಫಿಜುರ್ ರೆಹಮಾನ್, ತೌಹೀದ್ ಹೃದಯ್, ರಿಷದ್ ಹೊಸೈನ್, ಪರ್ವೇಜ್ ಹೊಸೈನ್ ಎಮನ್, ನಸುಮ್ ಅಹ್ಮದ್.
ಇದನ್ನು ಓದಿರಿ :USA Ink History Against Oman; Break India’s 40-Year-Old Record