spot_img
spot_img

TESLA LIKELY TO ENTER INDIA:ಬೆಲೆ ಎಷ್ಟು ಗೊತ್ತಾ?

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

New Delhi News:

ಬರ್ಲಿನ್​ನ ಗಿಗಾ ಫ್ಯಾಕ್ಟರಿಯಿಂದ ಸಂಪೂರ್ಣವಾಗಿ ನಿರ್ಮಾಣ ಮಾಡಿರುವ ವೈ ಮಾಡೆಲ್​ ಇವಿ ಕಾರನ್ನು ಆಮದು ಮಾಡಿ ಇಲ್ಲಿನ ಮಾರುಕಟ್ಟೆಗೆ ಪರಿಚಯಿಸಲಿದೆ. ಈ ಫ್ಯಾಕ್ಟರಿಯಲ್ಲಿ ಯುರೋಪಿಯನ್​ ಸೌಲಭ್ಯದಲ್ಲಿ ಬಲಗೈಚಾಲಿತ ಚಾಲನೆ ಹೊಂದಿರುವ ಎಲೆಕ್ಟ್ರಿಕ್​ ಎಸ್​ಯುವಿ ಉತ್ಪಾದನೆ ಮಾಡಲಾಗುತ್ತಿದೆ. ಈ ವರ್ಷಾಂತ್ಯದೊಳಗೆ ಭಾರತದ ವಾಹನ ಮಾರುಕಟ್ಟೆಗೆ TESLA ಪ್ರವೇಶಿಸುವ ಸಾಧ್ಯತೆ ಹೆಚ್ಚಿದೆ.

ಸಂಪೂರ್ಣವಾಗಿ ಜೋಡಿಸಿದ ಎಲೆಕ್ಟ್ರಿಕ್​ ವಾಹನವನ್ನು ಕಂಪನಿ ಆಮದು ಮಾಡಲಿದೆ. ಆರಂಭದಲ್ಲಿ ದುಬಾರಿ ಬೆಲೆಯ ಮಾಡೆಲ್​ ಬಿಡುಗಡೆಗೆ ಯೋಜಿಸಿದ್ದು, ಬಳಿಕ ಕಡಿಮೆ ದರದ ವಾಹನವನ್ನು ಮಾರುಕಟ್ಟೆಗೆ ತರಲು ಚಿಂತಿಸಿದೆ.ಶಾಂಘೈನಲ್ಲೂ ಕೂಡ ರೈಟ್​ ಹ್ಯಾಂಡ್​ ಡ್ರೈವ್‌ ಮಾಡೆಲ್​ 3 ಕಾರುಗಳನ್ನು ಉತ್ಪಾದನೆ ಮಾಡಲಾಗುತ್ತಿದೆ. ಆದರೆ, ಚೀನಾ ಕಾರುಗಳು ಆಮದಾಗುವ ಸಾಧ್ಯತೆ ಕಡಿಮೆ ಇದೆ. ಉದ್ಯಮ ತಜ್ಞರ ಪ್ರಕಾರ, TESLA ವಾಹನವನ್ನು ಭಾರತದಲ್ಲಿ ಸ್ಥಳೀಯವಾಗಿ ಜೋಡಿಸುವ ಕೆಲಸ ಮಾಡುವುದಿಲ್ಲ.

ಆದರೆ, ಭವಿಷ್ಯದಲ್ಲಿ ಈ ನಿರ್ಧಾರ ಬದಲಾಗಬಹುದು.ಭಾರತದ ಆಮದು ಸುಂಕ ಪರಿಷ್ಕರಣೆಯ ಬಳಿಕ TESLA ಮಾಡೆಲ್​ ವೈ ಇವಿ ಕಾರು 60ರಿಂದ 70 ಲಕ್ಷ ರೂ ಮೌಲ್ಯ ಹೊಂದಿರುವ ಸಾಧ್ಯತೆ ಇದೆ. ದೇಶವು ಸದ್ಯ 40,000 ಡಾಲರ್​ಗಿಂತ ಹೆಚ್ಚಿನ ಬೆಲೆಯ ಹೈ ಎಂಡ್ ಕಾರುಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಶೇ.110ರಿಂದ ಶೇ.70ರಷ್ಟು ಇಳಿಸಿದೆ.ವಿಶ್ವದ ಶ್ರೀಮಂತ ವ್ಯಕ್ತಿಯಾಗಿರುವ TESLA ಮಾಲೀಕ ಎಲೋನ್ ಮಸ್ಕ್​ ಭಾರತದ ಮಾರುಕಟ್ಟೆಯಲ್ಲಿ ಭಾರತೀಯರ ಕೈಗೆಟುಕುವ ದರದ ಕಾರನ್ನು ಅಭಿವೃದ್ಧಿಪಡಿಸುವ ಯೋಚನೆ ಹೊಂದಿದ್ದು, ಇದು ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ.

ಮಹಾರಾಷ್ಟ್ರದ ಪುಣೆಯಲ್ಲಿ ಕಚೇರಿ ಹೊಂದಿರುವ TESLA, ಇದೀಗ ಮುಂಬೈನಲ್ಲಿನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್​​ನಲ್ಲಿ ಹಾಗೂ ದೆಹಲಿಯ ಏರೋಸಿಟಿಯಲ್ಲಿ ತನ್ನ ಮೊದಲ ಶೋರೂಂ ಆರಂಭಿಸಲು ಸ್ಥಳಕ್ಕಾಗಿ ಹುಡುಕಾಟ ಆರಂಭಿಸಿದೆ. ಈ ನಡುವೆ ಸಂಸ್ಥೆ ಮುಂಬೈನಲ್ಲಿ 13 ಹುದ್ದೆಗಳಿಗೆ ನೇಮಕಾತಿಗೆ ಮುಂದಾಗಿದೆ. ಈ ಕುರಿತು ಕಂಪನಿ ಲಿಂಕ್ಡಿನ್​ನಲ್ಲೂ ಪ್ರಕಟಿಸಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಿದೆ.

 

ಇದನ್ನು ಓದಿರಿ :Adani Portfolio Maintains Double-Digit Growth, Achieves Record EBITDA For 12 Months Ending Dec’24

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

TRAINS KUMBH MELA: ಇಲ್ಲಿ ತನಕ 3 ಕೋಟಿಗೂ ಹೆಚ್ಚು ಭಕ್ತರ ರೈಲು ಯಾನ!!

Vijayawada (Andhra Pradesh) News: ಫೆಬ್ರವರಿ 26 ರಂದು ಕೊನೆಗೊಳ್ಳುವ ಕುಂಭಮೇಳ ಕಣ್ತುಂಬಿಕೊಳ್ಳಲು ಭಕ್ತರ ದಂಡು ಪ್ರಯೋಗರಾಜ್​ ಗೆ ಆಗಮಿಸುತ್ತಿದೆ. ಭಾರತೀಯ ರೈಲ್ವೇಸ್​ ಇದುವರೆಗೂ 3.09...

AYODHYA SHRI RAM TEMPLE:ತಡರಾತ್ರಿವರೆಗೂ ರಾಮನ ದರ್ಶನಕ್ಕೆ ಅವಕಾಶ

Ayodhya (Uttar Pradesh) News: ಭಗವಾನ್ ರಾಮನ ಶಿಶು ರೂಪವಾದ ರಾಮ್ ಲಲ್ಲಾನನ್ನು ನೋಡಲು ದೇಶದ ಮೂಲೆಮೂಲೆಗಳಿಂದ ಭಕ್ತರು AYODHYA ಆಗಮಿಸುತ್ತಿದ್ದಾರೆ. ಶುಕ್ರವಾರ ಮುಂಜಾನೆ 5...

GRAPE CULTIVATION IN UNIVERSITY:ತೋಟದಲ್ಲಿ ನಡೆದಾಡುತ್ತಾ 65 ಬಗೆ ಬಗೆಯ ಹಣ್ಣುಗಳ ರುಚಿ ಸವಿಯಿರಿ!

Hyderabad News: ಅವಳಿ ನಗರದ ಎಲ್ಲೆಡೆಯಿಂದ GRAPE ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮೈದಾನದೆಲ್ಲಡೆ ಸುತ್ತಾಡಲು ಮತ್ತು ಹಣ್ಣಿನ ಸುವಾಸನೆ ಆನಂದಿಸಲು ಅವಕಾಶ ಕಲ್ಪಿಸಲಾಗಿದೆ. ದೇಶಾದ್ಯಂತ...

ED SLAPS PENALTY ON BBC WS INDIA:FDI ನಿಯಮ ಉಲ್ಲಂಘನೆ

New Delhi News: ಬ್ರಿಟಿಷ್ ಬ್ರಾಡ್‌ಕಾಸ್ಟರ್‌ನ ಮೂವರು ನಿರ್ದೇಶಕರಿಗೆ, ಜಾರಿ ನಿರ್ದೇಶನಾಲಯವು ತಲಾ 1.14 ಕೋಟಿ ರೂ.ಗಿಂತ ಹೆಚ್ಚು ದಂಡ ವಿಧಿಸಿದೆ. ವಿದೇಶಿ ವಿನಿಮಯ ನಿರ್ವಹಣಾ...