spot_img
spot_img

NAXALITES KILL TWO MEN:ಪೊಲೀಸ್ ಮಾಹಿತಿದಾರರೆಂದು ಇಬ್ಬರು ನಾಗರಿಕರ ಹತ್ಯೆಗೈದ ನಕ್ಸಲರು

spot_img
spot_img

Share post:

WhatsApp Group Join Now
Telegram Group Join Now
Instagram Account Follow Now

Danthewada (Chhattisgarh) News:

ಬಮನ್​ ಕಶ್ಯಪ್​ (29) ಮತ್ತು ಅನಿಸ್​ ರಾಮ್​ ಪೊಯಮ್​ (38) ಕೊಲೆಯಾದವರು. ಇವರು ಬರ್ಸೊರ್​ ಪೊಲೀಸ್​ ಠಾಣಾ ವ್ಯಾಪ್ತಿಯ ತೊಡ್ಮ ಗ್ರಾಮದವರು ಎಂದು ತಿಳಿದು ಬಂದಿದೆ. ಬುಧವಾರ ಇವರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾರೆ ಎಂಬ ಅನುಮಾನದಿಂದ ನಕ್ಸಲರು ಇಬ್ಬರು ನಾಗರಿಕರನ್ನು ಕೊಲೆಗೈದ ಘಟನೆ ಛತ್ತೀಸ್​ಗಢದ ದಂಥೇವಾಡದಲ್ಲಿ ಬುಧವಾರ ನಡೆದಿದೆ.

ಈ ಕುರಿತು ಮಾಹಿತಿ ಸಿಕ್ಕ ಬಳಿಕ ಪೊಲೀಸ್ ತಂಡ ದಂಥೇವಾಡ-ಬಿಜಾಪುರ್​ ಗ್ರಾಮದ ಗಡಿಯಲ್ಲಿ ದಟ್ಟ ಅರಣ್ಯದಲ್ಲಿರುವ ಗ್ರಾಮಕ್ಕೆ ಆಗಮಿಸಿತು. ಕೊಲೆ ಬಗ್ಗೆ ಮತ್ತಷ್ಟು ಮಾಹಿತಿ ದೊರೆಯಬೇಕಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಸಾವನ್ನಪ್ಪಿದ ಕಶ್ಯಪ್​ ಈ ಪ್ರದೇಶದಲ್ಲಿ ಶಿಕ್ಷಾ ದೂತ್​ (ತಾತ್ಕಲಿಕ ಶಿಕ್ಷಕ)ಆಗಿ ಸರ್ಕಾರಿ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಮಾವೋವಾದಿಗಳ ಪೂರ್ವ ಬಸ್ತಾರ್ ವಿಭಾಗದ ಆಮದೈ ಪ್ರದೇಶ ಸಮಿತಿಯ ಕರಪತ್ರಗಳು ಸ್ಥಳದಲ್ಲಿ ಪತ್ತೆಯಾಗಿದೆ. ಅದರಲ್ಲಿ ಇವರು ಪೊಲೀಸ್ ಮಾಹಿತಿದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು NAXALITES ಆರೋಪಿಸಿದ್ದಾರೆ.

ಫೆ 6ರಂದು NAXALITESರು ದಂಥೇವಾಡ ಜಿಲ್ಲೆಯ ಮಾಜಿ ಸರಪಂಚ್​ ಅವರನ್ನು ಕೊಂದಿದ್ದರು. ಫೆ.4ರಂದು 30 ವರ್ಷದ ವ್ಯಕ್ತಿಯನ್ನು ದಂಥೇವಾಡದ ಅರ್ನಪುರ ಪ್ರದೇಶದಲ್ಲಿ ಹತ್ಯೆ ಮಾಡಲಾಗಿತ್ತು. ಪೊಲೀಸರ ಪ್ರಕಾರ, ಬಸ್ತಾರ್​ ಪ್ರದೇಶದಲ್ಲಿ NAXALITES ಹಿಂಸಾಚಾರದ ಪ್ರತ್ಯೇಕ ಘಟನೆಯಲ್ಲಿ 68 ನಾಗರಿಕರ ಹತ್ಯೆ ಮಾಡಲಾಗಿದೆ.ಅಕ್ಟೋಬರ್ 2024ರ ಎನ್‌ಕೌಂಟರ್‌ಗೂ ಮುನ್ನ ಮಾವೋವಾದಿಗಳ ಚಲನವಲನದ ಬಗ್ಗೆ ಕಶ್ಯಪ್ ದಾಂತೇವಾಡ ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದು ಕರಪತ್ರದಲ್ಲಿ ಬರೆಯಲಾಗಿದೆ. ಅಂದು ನಡುವೆ ನಡೆದ ಭೀಕರ ಎನ್​ಕೌಂಟರ್​ನಲ್ಲಿ 38 ಜನ ಮಾವೋಗಳನ್ನು ಹತ್ಯೆ ಮಾಡಲಾಗಿತ್ತು. ಬುಧವಾರ ಕೂಡ ಪ್ರತ್ಯೇಕ ಘಟನೆಯಲ್ಲಿ ಬಸ್ತಾರ್​ ವಿಭಾಗದಲ್ಲಿ 7 ಮಾವೋಗಳ ಹತ್ಯೆ ಮಾಡಲಾಗಿದೆ.

 

ಇದನ್ನು ಓದಿರಿ :Odisha Approves Key Industrial Projects, Move Likely To Create Over 12,000 Job Opportunities

WhatsApp Group Join Now
Telegram Group Join Now
Instagram Account Follow Now
Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

TRAINS KUMBH MELA: ಇಲ್ಲಿ ತನಕ 3 ಕೋಟಿಗೂ ಹೆಚ್ಚು ಭಕ್ತರ ರೈಲು ಯಾನ!!

Vijayawada (Andhra Pradesh) News: ಫೆಬ್ರವರಿ 26 ರಂದು ಕೊನೆಗೊಳ್ಳುವ ಕುಂಭಮೇಳ ಕಣ್ತುಂಬಿಕೊಳ್ಳಲು ಭಕ್ತರ ದಂಡು ಪ್ರಯೋಗರಾಜ್​ ಗೆ ಆಗಮಿಸುತ್ತಿದೆ. ಭಾರತೀಯ ರೈಲ್ವೇಸ್​ ಇದುವರೆಗೂ 3.09...

AYODHYA SHRI RAM TEMPLE:ತಡರಾತ್ರಿವರೆಗೂ ರಾಮನ ದರ್ಶನಕ್ಕೆ ಅವಕಾಶ

Ayodhya (Uttar Pradesh) News: ಭಗವಾನ್ ರಾಮನ ಶಿಶು ರೂಪವಾದ ರಾಮ್ ಲಲ್ಲಾನನ್ನು ನೋಡಲು ದೇಶದ ಮೂಲೆಮೂಲೆಗಳಿಂದ ಭಕ್ತರು AYODHYA ಆಗಮಿಸುತ್ತಿದ್ದಾರೆ. ಶುಕ್ರವಾರ ಮುಂಜಾನೆ 5...

GRAPE CULTIVATION IN UNIVERSITY:ತೋಟದಲ್ಲಿ ನಡೆದಾಡುತ್ತಾ 65 ಬಗೆ ಬಗೆಯ ಹಣ್ಣುಗಳ ರುಚಿ ಸವಿಯಿರಿ!

Hyderabad News: ಅವಳಿ ನಗರದ ಎಲ್ಲೆಡೆಯಿಂದ GRAPE ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮೈದಾನದೆಲ್ಲಡೆ ಸುತ್ತಾಡಲು ಮತ್ತು ಹಣ್ಣಿನ ಸುವಾಸನೆ ಆನಂದಿಸಲು ಅವಕಾಶ ಕಲ್ಪಿಸಲಾಗಿದೆ. ದೇಶಾದ್ಯಂತ...

ED SLAPS PENALTY ON BBC WS INDIA:FDI ನಿಯಮ ಉಲ್ಲಂಘನೆ

New Delhi News: ಬ್ರಿಟಿಷ್ ಬ್ರಾಡ್‌ಕಾಸ್ಟರ್‌ನ ಮೂವರು ನಿರ್ದೇಶಕರಿಗೆ, ಜಾರಿ ನಿರ್ದೇಶನಾಲಯವು ತಲಾ 1.14 ಕೋಟಿ ರೂ.ಗಿಂತ ಹೆಚ್ಚು ದಂಡ ವಿಧಿಸಿದೆ. ವಿದೇಶಿ ವಿನಿಮಯ ನಿರ್ವಹಣಾ...