Patna, Bihar News:
31 ವರ್ಷಗಳ ಬಳಿಕ ಮತ್ತೊಮ್ಮೆ ಬಿಹಾರದಲ್ಲಿ KURMI EKTA RALLY ಯನ್ನು ಆಯೋಜಿಸಲಾಗಿದೆ. 1994ರಲ್ಲಿ ಕುರ್ಮಿ ಚೇತನ ರ್ಯಾಲಿ ಆಯೋಜನೆಗೊಂಡಾಗ ನಿತೀಶ್ ಕುಮಾರ್ ಕೂಡ ಭಾಗವಹಿಸಿದ್ದರು. ಅಲ್ಲಿಂದಲೇ ಬಿಹಾರ ರಾಜಕೀಯದಲ್ಲಿ ನಿತೀಶ್ ತಮ್ಮ ಅಧಿಪತ್ಯ ಸ್ಥಾಪಿಸಿದ್ದರು .
KURMI EKTA RALLY ಗೆ ಬಿಹಾರ ಸಿಎಂ ನಿತೀಶ್ ಕುಮಾರ್ ಮತ್ತು ಅವರ ಮಗನನ್ನೂ ಆಹ್ವಾನಿಸಲಾಗಿತ್ತು ಆದರೆ ಇಬ್ಬರೂ ಗೈರಾಗಿದ್ದಾರೆ. ಇದು ಕುರ್ಮಿ ಸಮುದಾಯದ ಮುಖಂಡರಲ್ಲಿ ನಿರಾಸೆ ಮೂಡಿಸಿದೆ. ಈ ಕುರ್ಮಿ ಏಕತಾ ರ್ಯಾಲಿಯನ್ನು ಬಿಜೆಪಿ ಶಾಸಕ ಕೃಷ್ಣಕುಮಾರ್ ಮಂಟು ಆಯೋಜಿಸಿದ್ದರೂ ಜನತಾದಳ ಯುನೈಟೆಡ್ನ ಹಲವು ನಾಯಕರು ಅದರಲ್ಲಿ ಹಾಜರಿದ್ದರು.
ರ್ಯಾಲಿಗೆ ಸಿಎಂ ನಿತೀಶ್ ಕುಮಾರ್ ಪುತ್ರ ನಿಶಾಂತ್ ಕುಮಾರ್ ಅವರನ್ನು ಆಹ್ವಾನಿಸಿ ರಾಜಕೀಯಕ್ಕೆ ಎಂಟ್ರಿ ಕೊಡಿಸಲು ಜೆಡಿಯು ನಾಯಕರು ಮುಂದಾಗಿದ್ದರು. ಇದೀಗ ನಿತೀಶ್ ಕುಮಾರ್ ಅವರು ಮುಖ್ಯಮಂತ್ರಿಯಾಗಿರುವಾಗ ಮತ್ತೊಮ್ಮೆ ಕುರ್ಮಿ ರ್ಯಾಲಿ ಆಯೋಜಿಸಲಾಗಿದೆ.
ಈ KURMI EKTA RALLY ಸಿಎಂ ಪುತ್ರ ನಿಶಾಂತ್ ಕುಮಾರ್ ಕೂಡ ಬರುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಅದು ಹುಸಿಯಾಗಿದೆ. ಅವರ ಗೈರು ಸಾರ್ವಜನಿಕರನ್ನಲ್ಲದೇ ರಾಜಕೀಯ ರಂಗದಲ್ಲೂ ಬೇರೆ ಬೇರೆ ಅರ್ಥಗಳನ್ನು ಪಡೆದುಕೊಳ್ಳುತ್ತಿದೆ.
1994ರ ಫೆಬ್ರವರಿ 12ರಂದು ಪಾಟ್ನಾದ ಗಾಂಧಿ ಮೈದಾನದಲ್ಲಿ ಕುರ್ಮಿ ಚೇತನ ರ್ಯಾಲಿ ನಡೆಸಲಾಗಿತ್ತು. ನಿತೀಶ್ ಕುಮಾರ್ ಕೂಡ ಭಾಗವಹಿಸಿದ್ದರು. ಇದು ನಿತೀಶ್ ಸಿಎಂ ಗದ್ದುಗೆ ಏರಲು ಹೆಬ್ಬಾಗಿಲು ಆಗಿತ್ತು. KURMI EKTA RALLY ನಂತರ ಬಿಹಾರ ರಾಜಕೀಯದಲ್ಲಿ ನಿತೀಶ್ ಕುಮಾರ್ ಅವರ ಪ್ರಾಬಲ್ಯ ಹೆಚ್ಚಾಗಿತ್ತು.
JDU leaders disappointed by Nishant’s absence:
ನಿಶಾಂತ್ ಕುಮಾರ್ ರ್ಯಾಲಿಗೆ ಗೈರುಹಾಜರಾಗಿದ್ದರಿಂದ ಜನತಾ ದಳದ ಮುಖಂಡರು ಹಾಗೂ ಕಾರ್ಯಕರ್ತರು ತೀವ್ರ ನಿರಾಸೆಗೊಂಡಿದ್ದಾರೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಅವರ ಪುತ್ರ ನಿಶಾಂತ್ ಬರಬೇಕೆಂದು ನಾವು ಬಯಸಿದ್ದೆವು. ಆದರೆ ಅವರು ಬರಲಿಲ್ಲ ಎಂದು ಜನತಾ ದಳ ಯುನೈಟೆಡ್ ನಾಯಕ ಅಭಯ್ ಪಟೇಲ್ ಹೇಳಿದ್ದಾರೆ.
What did the organizers say?:
ಕುರ್ಮಿ ಏಕತಾ ರ್ಯಾಲಿಯ ಆಯೋಜಕ ಹಾಗೂ ಬಿಜೆಪಿ ಶಾಸಕ ಕೃಷ್ಣಕುಮಾರ್ ಮಂಟು, “ನಮ್ಮ ಪಾಲಿನ ಬೇಡಿಕೆಗೆ ನಾವು ರ್ಯಾಲಿ ನಡೆಸುತ್ತಿದ್ದೇವೆ.
ನಾವು ಎಲ್ಲರನ್ನೂ ಆಹ್ವಾನಿಸಿದ್ದೇವೆ. ಇದು ಕಾರ್ಯಕರ್ತರ ಕಾರ್ಯವಾಗಿದೆ” ಎಂದು ಗೈರಿನ ಬಗ್ಗೆ ಅಸಮಾಧಾನದ ಉತ್ತರ ನೀಡಿದ್ದಾರೆ.
Harnath to Nishant contesting election debate:
ಕೆಲ ದಿನಗಳಿಂದ ನಿತೀಶ್ ಕುಮಾರ್ ಪುತ್ರ ನಿಶಾಂತ್ ಕುಮಾರ್ ರಾಜಕೀಯ ಪ್ರವೇಶದ ಬಗ್ಗೆ ಚರ್ಚೆ ನಡೆಯುತ್ತಿದೆ. ನಳಂದ ಜಿಲ್ಲೆಯ ಹರ್ನಾತ್ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಚರ್ಚೆ ನಡೆದಿದೆ.
ಇನ್ನು ಈ ಬಗ್ಗೆ ಮುಖ್ಯಮಂತ್ರಿಯಾಗಲಿ, ನಿಶಾಂತ್ ಆಗಲಿ ಮಾತನಾಡದಿದ್ದರೂ ಸಚಿವ ಶ್ರವಣ್ ಕುಮಾರ್ ಸೇರಿದಂತೆ ಹಲವು ಜೆಡಿಯು ನಾಯಕರು ನಿಶಾಂತ್ ರಾಜಕೀಯಕ್ಕೆ ಬರಲೇಬೇಕು ಎಂದು ಹೇಳಿದ್ದಾರೆ.
ಇದೇ ವೇಳೆ, ಬಿಜೆಪಿ ಮತ್ತು ಎನ್ಡಿಎಯ ಇತರ ನಾಯಕರು ಕೂಡ ಅವರು ರಾಜಕೀಯಕ್ಕೆ ಬಂದರೆ ಸ್ವಾಗತಿಸುತ್ತೇವೆ ಎಂದಿದ್ದಾರೆ.
ಇದನ್ನು ಓದಿರಿ : Drishyam 3 Confirmed! Mohanlal And Jeethu Joseph Reunite For Next Installment In The Franchise