Dhanashree Insta Post News:
ಭಾರತದ ಸ್ಟಾರ್ ಕ್ರಿಕೆಟರ್ ಯುಜ್ವೇಂದ್ರ CHAHAL ಮತ್ತು ಧನಶ್ರೀ ವರ್ಮಾ ಪರಸ್ಪರ ವಿಚ್ಛೇದನ ಪಡೆದುಕೊಂಡ ಕುರಿತು ವರದಿಯಾಗಿದ್ದು, ಇದರ ನಡುವೆ ಇಬ್ಬರ ಆಸ್ತಿ ವಿಚಾರ ಬೆಳಕಿಗೆ ಬಂದಿದೆ. ಧನಶ್ರೀ ತಮ್ಮ ಖಾತೆಯಲ್ಲಿ, “ನಾವು ಎದುರಿಸುವ ಕಷ್ಟಗಳನ್ನು ದೇವರು ಕೆಲವು ಸಮಯದ ಬಳಿಕ ಆಶೀರ್ವಾದವಾಗಿ ಪರಿವರ್ತಿಸುತ್ತಾನೆ ಎಂದು ಅರಿತುಕೊಂಡಿದ್ದೇನೆ.
ನಾವು ಒತ್ತಡದಲ್ಲಿದ್ದರೆ ಅಥವಾ ಚಿಂತೆಗೊಳಗಾಗಿದ್ದರೆ ಇದರರ್ಥ ನಮ್ಮ ಜೀವನದಲ್ಲಿ ಮತ್ತೊಂದು ಅವಕಾಶದ ಬಾಗಿಲು ತೆರೆಯಲಿದೆ ಎಂಬುದೇ ಆಗಿರುತ್ತದೆ. ನಮಗೆ ಎದುರಾದ ಕಷ್ಟ ಮತ್ತು ದುಃಖವನ್ನು ಮರೆತು ದೇವರನ್ನು ಪ್ರಾರ್ಥಿಸಬೇಕು. ಆಗ ದೇವರು ಖಂಡಿತವಾಗಿಯೂ ಒಳ್ಳೆಯದನ್ನೇ ಮಾಡುತ್ತಾನೆ” ಎಂದು ಬರೆದುಕೊಂಡಿದ್ದಾರೆ.
Chahal Post: ನಾನು ಎಂಥ ಕಠಿಣ ಪರಿಸ್ಥಿತಿ ಎದುರಿಸುತ್ತಿದ್ದೇನೆ ಎಂದು ತಿಳಿಯುವ ಮುನ್ನವೇ ದೇವರು ಕಣ್ಣು ತೆರೆದಿದ್ದಾನೆ. ನನ್ನನ್ನು ರಕ್ಷಿಸಿದ ಆ ಭಗವಂತನಿಗೆ ತುಂಬು ಹೃದಯದ ಧನ್ಯವಾದ” ಎಂದು ಬರೆದುಕೊಂಡಿದ್ದಾರೆ.ಇದಕ್ಕೂ ಮುನ್ನ CHAHAL ಕೂಡ ಇದೇ ರೀತಿಯ ಪೋಸ್ಟ್ ಶೇರ್ ಮಾಡಿಕೊಂಡಿದ್ದರು. “ದೇವರು ನನ್ನನ್ನು ಸಂಕಷ್ಟದಿಂದ ಹಲವು ಬಾರಿ ಪಾರು ಮಾಡಿದ್ದಾನೆ.
Chahal Property: ಸದ್ಯ, ನಿವ್ವಳ ಆಸ್ತಿ ಮೌಲ್ಯ ₹45 ಕೋಟಿ ರೂ ಆಗಿದೆ. ಬ್ರ್ಯಾಂಡಿಂಗ್ ಪ್ರಮೋಶನ್ ಮೂಲಕವೂ ಉತ್ತಮ ಹಣ ಗಳಿಸುತ್ತಾರೆ. ಇದಲ್ಲದೇ ಹರಿಯಾಣದ ಗುರುಗ್ರಾಮ್‌ನಲ್ಲಿರುವ ಐಷಾರಾಮಿ ನಿವಾಸದಲ್ಲಿ ವಾಸಿಸುತ್ತಿದ್ದಾರೆ. ಟಾಪ್ ಕ್ಲಾಸ್ ಕಾರುಗಳನ್ನು ಹೊಂದಿದ್ದಾರೆ.
ಈ ಸುದ್ದಿಯ ನಡುವೆಯೆ CHAHAL ಆಸ್ತಿ ವಿಚಾರ ಬೆಳಕಿಗೆ ಬಂದಿದೆ. ಪ್ರಸ್ತುತ ಬಿಸಿಸಿಐನ ಕೇಂದ್ರ ಒಪ್ಪಂದದಿಂದ ಹೊರಗುಳಿದಿದ್ದರೂ ಐಪಿಎಲ್ ಮತ್ತು ಜಾಹೀರಾತು ಮೂಲಕ ಸಾಕಷ್ಟು ಹಣ ಸಂಪಾದಿಸುತ್ತಿದ್ದು, ಕೋಟ್ಯಧಿಪತಿ ಆಗಿದ್ದಾರೆ. 2025ರ ಐಪಿಎಲ್ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ CHAHAL ಅವರನ್ನು ದಾಖಲೆಯ 18 ಕೋಟಿ ರೂ.ಗೆ ಖರೀದಿಸಿತ್ತು.ಐಪಿಎಲ್ ನಂತರ ಆಸ್ತಿ ಮತ್ತಷ್ಟು ಹೆಚ್ಚಳಗೊಂಡಿದೆ ಎಂದು ವರದಿಯಾಗಿದೆ.
Car Collection:ಚಹಾಲ್ ಬಳಿ ಪೋರ್ಷೆ ಕಯೆನ್ನೆ ಎಸ್, ಮರ್ಸಿಡಿಸ್-ಬೆನ್ಜ್ ಸಿ-ಕ್ಲಾಸ್, ರೋಲ್ಸ್ ರಾಯ್ಸ್ ಮತ್ತು ಲಂಬೋರ್ಘಿನಿ ಸೆಂಟೆನಾರಿಯೊ ಕಾರುಗಳಿವೆ.
Dhanashree Verma Property:ನೃತ್ಯಗಾರ್ತಿಯಾಗಿರುವ ಧನಶ್ರೀ, ತೆಲುಗು ಚಿತ್ರದ ಮೂಲಕ ಟಾಲಿವುಡ್ಗೆ ಪಾದಾರ್ಪಣೆ ಮಾಡಲು ಮುಂದಾಗಿದ್ದಾರೆ.CHAHAL ಅವರಿಗೆ ಹೋಲಿಸಿದರೆ, ಧನಶ್ರೀ ವರ್ಮಾ ಅವರ ಆಸ್ತಿ ತುಸು ಕಡಿಮೆ. ಇವರು ಒಟ್ಟು 25 ಕೋಟಿ ರೂ. ಆಸ್ತಿಗೆ ಒಡತಿ.
ಇದನ್ನು ಓದಿರಿ :Mumbai Indians Reveal Their Jersey For IPL 2025