spot_img
spot_img

GRAPE CULTIVATION IN UNIVERSITY:ತೋಟದಲ್ಲಿ ನಡೆದಾಡುತ್ತಾ 65 ಬಗೆ ಬಗೆಯ ಹಣ್ಣುಗಳ ರುಚಿ ಸವಿಯಿರಿ!

spot_img
spot_img

Share post:

Hyderabad News:

ಅವಳಿ ನಗರದ ಎಲ್ಲೆಡೆಯಿಂದ GRAPE ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮೈದಾನದೆಲ್ಲಡೆ ಸುತ್ತಾಡಲು ಮತ್ತು ಹಣ್ಣಿನ ಸುವಾಸನೆ ಆನಂದಿಸಲು ಅವಕಾಶ ಕಲ್ಪಿಸಲಾಗಿದೆ. ದೇಶಾದ್ಯಂತ ಈ ವರ್ಷದ GRAPE ಬೆಳೆ ಮಾರುಕಟ್ಟೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಎಲ್ಲೆಂದರಲ್ಲಿ ಎರಡ್ಮೂರು ಬಗೆಯ GRAPEಗಳು ಕಾಣಸಿಗುತ್ತಿವೆ.ಬಹುನಿರೀಕ್ಷಿತ GRAPE ಉತ್ಸವ ಬಂದಿದೆ.

ಹೈದರಾಬಾದ್‌ನ ರಾಜೇಂದ್ರನಗರದ GRAPE ಸಂಶೋಧನ ಕೇಂದ್ರದಲ್ಲಿ GRAPE ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ.ವಿಶೇಷ ಎಂದರೆ ಈ ಗ್ರೇಪ್ಸ್​​ ಫೆಸ್ಟಿವಲ್​​ ನಲ್ಲಿ ವಿಜ್ಞಾನಿಗಳು ಸೃಷ್ಟಿಸಿರುವ 65 ಬಗೆಯ ಹಣ್ಣುಗಳು ಲಭ್ಯವಿದೆ. ಪ್ರವಾಸಿಗರು ರುಚಿ ನೋಡಿದ ನಂತರ ತಮಗಿಷ್ಟವಾದ ಹಣ್ಣುಗಳನ್ನು ಖರೀದಿಸುತ್ತಿದ್ದಾರೆ. GRAPE ಮೇಳ ತುಂಬಾ ಚೆನ್ನಾಗಿ ನಡೆಯುತ್ತಿದೆ ಎಂದು ಇಲ್ಲಿಗೆ ಭೇಟಿ ನೀಡಿದವರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ನಗರದಲ್ಲಿಯೂ ಸಹ GRAPE ತೋಟಗಳು, ಕೃಷಿ ವಿಧಾನ ಮತ್ತು ಹಣ್ಣುಗಳನ್ನು ಬೆಳೆಯಲು ಬಳಸುವ ವಿಧಾನಗಳನ್ನು ನೋಡಿ, ಸಂದರ್ಶಕರು, ರೈತರು, ವೀಕ್ಷಕರು ಆಶ್ಚರ್ಯಚಕಿತರಾದರು.

Crowd of students to see grape festival:ವಾರ್ಷಿಕ GRAPE ಹಬ್ಬವನ್ನು ವೀಕ್ಷಿಸಲು ಮತ್ತು ದ್ರಾಕ್ಷಿಯನ್ನು ಖರೀದಿಸಲು ಉತ್ಸಾಹಿಗಳು ದೂರದ ಸ್ಥಳಗಳಿಂದ ಈ ಉತ್ಸವಕ್ಕೆ ಬರುತ್ತಿದ್ದಾರೆ. ಈ ಮೇಳವು ವಿದ್ಯಾರ್ಥಿಗಳಲ್ಲಿ ಜ್ಞಾನ, ರೈತರಲ್ಲಿ ಜಾಗೃತಿ, ಪೌಷ್ಟಿಕಾಂಶದ ಮೌಲ್ಯ ಮತ್ತು ಹಣ್ಣುಗಳ ಆರೋಗ್ಯ ಪ್ರಯೋಜನಗಳನ್ನು ಹೆಚ್ಚಿಸುವ ಗುರಿ ಹೊಂದಿದೆ. ಜನರಿಂದ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗುತ್ತಿದೆ ಎನ್ನುತ್ತಾರೆ ಸಂಘಟಕರು.

ಹವಾಮಾನ ಬದಲಾವಣೆ ಮತ್ತಿತರ ಕಾರಣಗಳಿಂದ GRAPE ಬೆಳೆ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶ್ರೀಕೊಂಡ ಲಕ್ಷ್ಮಣ್ ತೆಲಂಗಾಣ ತೋಟಗಾರಿಕಾ ವಿಶ್ವವಿದ್ಯಾಲಯವು ರೈತರಲ್ಲಿ ಜಾಗೃತಿ ಮೂಡಿಸಲು ವಿಶೇಷ ಮುತುವರ್ಜಿ ವಹಿಸಿ ಈ ಮೇಳವನ್ನು ಆಯೋಜಿಸುತ್ತಿದೆ.

65 types of fruits:ವೆಚ್ಚದ ಬಗ್ಗೆ ಯಾವುದೇ ಹಿಂಜರಿಕೆ ಇಲ್ಲದೇ ಹಣ್ಣುಗಳನ್ನು ಕೊಂಡು ಅವುಗಳ ರುಚಿಯನ್ನು ಸವಿಯುತ್ತಿದ್ದಾರೆ. 65 ಬಗೆಯ ದ್ರಾಕ್ಷಿ ತಳಿಗಳ ಪ್ರದರ್ಶನ ಮತ್ತು ಮಾರಾಟ ಭರದಿಂದ ಸಾಗುತ್ತಿದೆ. ಜ್ಞಾನ ಮತ್ತು ಆನಂದವನ್ನು ಪಡೆಯಬಯಸುವ ಪ್ರತಿಯೊಬ್ಬರೂ ಈ GRAPE ಹಬ್ಬಕ್ಕೆ ಭೇಟಿ ನೀಡಿ ಅನುಭವವನ್ನು ಸವಿಯಬೇಕು ಎನ್ನುತ್ತಾರೆ ದ್ರಾಕ್ಷಿ ಸಂಶೋಧನಾ ಮುಖ್ಯಸ್ಥ ಡಾ.ಸುರೇಶ್ ಕುಮಾರ್ ರೆಡ್ಡಿ.

ವಾರಾಂತ್ಯದ ರಜೆಯಲ್ಲಿ ನಗರವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ GRAPE ಹಬ್ಬಕ್ಕೆ ಭೇಟಿ ನೀಡಿ ಇನ್ನಷ್ಟು ಸದ್ದು ಮಾಡುತ್ತಾರೆ ಎನ್ನುತ್ತಾರೆ ಸಂಘಟಕರು.ವಿಜ್ಞಾನಿಗಳ ಮೇಲ್ವಿಚಾರಣೆಯಲ್ಲಿ ನೈಸರ್ಗಿಕ ಸಿದ್ಧ GRAPE ಬೇಸಾಯ, ಬಹುವಿಧದ ಹಣ್ಣುಗಳ ಗುಣಮಟ್ಟ ಮತ್ತು ಬಾಳಿಕೆ ಬರುವ ಹಣ್ಣುಗಳನ್ನು ಖರೀದಿಸಲು ನಗರವಾಸಿಗಳು ಪೈಪೋಟಿ ನಡೆಸುತ್ತಿದ್ದಾರೆ.

 

ಇದನ್ನು ಓದಿರಿ :Body Of Missing Hyderabad Medic Fished Out Of Tungabhadra River

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...