WhatsApp Group
Join Now
Telegram Group
Join Now
Instagram Account
Follow Now
Facebook Page
Follow Now
Beijing, China News:
ಇದು ಜನರಲ್ಲಿ ಆತಂಕ ಮೂಡಿಸಿದೆ. ಈ ಕುರಿತು ಚೀನಾದ ಬ್ಯಾಟ್ ವುಮೆನ್ ಎಂದೇ ಖ್ಯಾತಿಯಾಗಿರುವ ವೈರಾಲಾಜಿಸ್ಟ್ ಶಿ ಜೆಂಗಾಲಿ ಅಧ್ಯಯನ ನಡೆಸಿದ್ದಾರೆ. HKU5-CoV-2 ಎಂಬ ವೈರಸ್ ಇದಾಗಿದ್ದು, ಇದು ಕೂಡ ಎಸಿಇ2 ಶ್ವಾಸಕೋಶದ ಪ್ರೋಟಿನ್ ಮೂಲಕ ಮಾನವನ ಕೋಶ ಪ್ರವೇಶಿಸಲಿದೆ.
ಈ ಕುರಿತು ಸೈಂಟಿಫಿಕ್ ಜರ್ನಲ್ ಸೆಲ್ನಲ್ಲಿ ಪ್ರಕಟಿಸಲಾಗಿದೆ.CORONAVIRUS ಜಗತ್ತನ್ನೇ ತಲ್ಲಣಗೊಳಸಿದ್ದು ತಮಗೆಲ್ಲ ಗೊತ್ತೇ ಇದೆ. ಇದೀಗ CORONAVIRUS ರೀತಿ ಮಾನವನ ಉಸಿರಾಟದ ಮೇಲೆ ಪರಿಣಾಮ ಬೀರುವ ಮತ್ತೊಂದು ಹೊಸ ವೈರಸ್ ಪತ್ತೆಯಾಗಿದೆ.ಮಾನವರಿಗೆ ಸೋಂಕು ತಗುಲಿಸುವ ಸಾಮರ್ಥ್ಯದ ಮತ್ತೊಂದು ವೈರಸ್ ಬಾವಲಿಯಲ್ಲಿ ಕಂಡು ಬಂದಿರುವುದಾಗಿ ಚೀನಾ ಸಂಶೋಧಕರು ತಿಳಿಸಿದ್ದಾರೆ.
What is HKU5-CoV-2?:ಪ್ರಯೋಗಾಲಯದ ಪರೀಕ್ಷೆಯಲ್ಲಿ HKU5-CoV-2, ACE2 ಗ್ರಾಹಕಗಳೊಂದಿಗೆ ಮಾನವ ಜೀವಕೋಶಗಳಿಗೆ ಸೋಂಕು ತಗುಲಿತ್ತು. ಈ ವೈರಸ್ ಮನುಷ್ಯರಿಗೆ ಸೋಂಕು ತಗಲುವ ಸಾಮರ್ಥ್ಯವನ್ನು ಹೊಂದಿದ್ದರೂ, ಪ್ರಾಣಿಗಳಿಂದ ಜನರಿಗೆ ಹರಡುವ ಸಾಮರ್ಥ್ಯ ಅರ್ಥಮಾಡಿಕೊಳ್ಳಲು ಇನ್ನೂ ಹೆಚ್ಚಿನ ಸಂಶೋಧನೆ ಅಗತ್ಯವಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
HKU5-CoV-2 ಚೀನಾದ ಬಾವಲಿಗಳಲ್ಲಿ ಪತ್ತೆಯಾಗಿದೆ. ಇದು ಮೆರ್ಬೆಕೊವೈರಸ್ ಉಪಜಾತಿಗೆ ಸೇರಿದ್ದು, ಎಂಇಆರ್ಎಸ್ (ಮಿಡಲ್ ಈಸ್ಟ್ ರೆಸ್ಪಿರೇಟರಿ ಸಿಂಡ್ರೋಮ್) ವೈರಸ್ ಆಗಿದೆ. ಈ ವೈರಸ್ ಫುರಿನ್ ಕ್ಲವೇಜ್ ಸೈಟ್ ಹೊಂದಿದ್ದು, ಇದು ಸಾರ್ಸ್-ಕೋವ್-2 ರೀತಿಯಲ್ಲಿ ಮಾನವನ ಜೀವಕೋಶಗಳಿಗೆ ಪ್ರವೇಶಿಸಲು ಅನುಮತಿ ನೀಡುತ್ತದೆ.
Does HKU5-CoV-2 cause serious consequences?:ಸಾರ್ಸ್-ಕೋವ್-2 ಹೋಲಿಕೆ ಮಾಡಿದಾಗ HKU5-CoV-2 ಮಾನವನ ಎಸಿಇ2 ಶ್ವಾಸಕೋಶದ ಮೇಲೆ ಪರಿಣಾಮ ಬೀರುವ ಸಾಮರ್ಥ್ಯ ಕಡಿಮೆ ಇದೆ. ಇದು ಮಾನವರಲ್ಲಿ ಹರಡುವ ಅಪಾಯ ಕೂಡ ಸಣ್ಣ ಪ್ರಮಾಣದಲ್ಲಿದೆ.
ಇದಕ್ಕೆ ಮೊನೊಕ್ಲೋನಲ್ ಪ್ರತಿಕಾಯಗಳು ಮತ್ತು ವೈರಸ್ಗು ರಿಯಾಗಿಸಲು ಸಹಾಯ ಮಾಡುವ ಆಂಟಿವೈರಲ್ ಔಷಧಗಳನ್ನು ಸಹ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಇದು ಸಾರ್ಕ್-ಕೋವ್-2 ರೀತಿಯಲ್ಲಿಯೇ ಮಾನವ ಜೀವಕೋಶಕ್ಕೆ ಸೋಂಕು ಉಂಟು ಮಾಡುವುದಿಲ್ಲ ಎಂಬುದು ಸಂತಸದ ಸುದ್ದಿಯಾಗಿದೆ.
People are now highly immune to lung viruses:ಮಿನ್ನೇಸೋಟ ವಿಶ್ವವಿದ್ಯಾನಿಲಯದ ಸಾಂಕ್ರಾಮಿಕ ರೋಗ ತಜ್ಞ ಡಾ. ಮೈಕೆಲ್ ಓಸ್ಟರ್ಹೋಮ್ ಹೇಳುವಂತೆ, ಕೋವಿಡ್ಗೆ ಪೂರ್ವಕ್ಕಿಂತ ಹೋಲಿಕೆ ಮಾಡಿದರೆ, ಜನರು ಸಾರ್ಸ್ ರೀತಿಯ ವೈರಸ್ ವಿರುದ್ಧ ಹೆಚ್ಚಿನ ಪ್ರತಿರಕ್ಷಣೆ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಇದು ಮತ್ತೊಂದು ಸಾಂಕ್ರಾಮಿಕ ಅಪಾಯ ಉಂಟು ಮಾಡುವ ಸಾಧ್ಯತೆ ಕಡಿಮೆ ಇದೆ.
This virus does not bind to human lungs:ಚೀನಾದ ಪ್ರಖ್ಯಾತ ವೈರಲಾಜಿಸ್ಟ್ ಹಾಗೂ ವುಹಾನ್ ವೈರಾಲಜಿ ಸಂಸ್ಥೆಯಲ್ಲಿ ತಜ್ಞರಾಗಿದ್ದ ಝೆಂಗಲಿ ಡಬ್ಲ್ಯೂಐವಿ ಇದರ ಥಿಯರಿಯನ್ನು ಕೋವಿಡ್ 10 ಉಗಮಕ್ಕೆ ಜೋಡಿಸಿದೆ ಎಂದಿದ್ದು, ಸೋಂಕು ಲ್ಯಾಬ್ನ ಸೋರಿಕೆ ಎಂಬ ಆರೋಪವನ್ನು ಮತ್ತೊಮ್ಮೆ ಅಲ್ಲಗಳೆದಿದ್ದಾರೆ.ಸಿಯಾಟಲ್‌ನಲ್ಲಿರುವ ವಾಷಿಂಗ್ಟನ್ ವಿಶ್ವವಿದ್ಯಾಲಯ ಮತ್ತು ವುಹಾನ್ ವಿಶ್ವವಿದ್ಯಾಲಯದ ಮತ್ತೊಂದು ಅಧ್ಯಯನದ ಪ್ರಕಾರ, ಬಾವಲಿ ಮತ್ತು ಸಸ್ತನಿಗಳು ಎಸಿಇ2 ಶ್ವಾಸಕೋಶದ ಬಂಧನ ಹೊಂದಿದ್ದರೂ ಇದು ಮಾನವನ ಶ್ವಾಸಕೋಶದಲ್ಲಿ ಬಲವಾದ ಬಂಧವನ್ನು ಹೊಂದಿಲ್ಲ.
ಸೋಂಕುಯುಕ್ತ ರೋಗಗಳ ಹೆಚ್ಚಳದಿಂದಾಗಿ ವಿಜ್ಞಾನಿಗಳು ಪ್ರಾಣಿಗಳಿಂದ ಬರುವ ಹೊಸ ವೈರಸ್ಗಳ ಬಗ್ಗೆ ನಿಕಟವಾದ ಮೇಲ್ವಿಚಾರಣೆ ಮಾಡುತ್ತಿದ್ದಾರೆ. HKU5-CoV-2 ಸದ್ಯ ಯಾವುದೇ ಅಪಾಯವನ್ನು ತೋರುತ್ತಿಲ್ಲ. ಭವಿಷ್ಯದ ಸಾಂಕ್ರಾಮಿಕ ರೋಗಗಳ ತಡೆಗಾಗಿ ಸಂಶೋಧನಾಯಲದಯಲ್ಲಿ ಕಣ್ಗಾವಲು ಇಟ್ಟಿದ್ದು, ಈ ಕುರಿತು ಸಂಶೋಧನೆ ಸಾಗಿದೆ ಎಂದಿದ್ದಾರೆ.
ಇದನ್ನು ಓದಿರಿ :China Discovers New Bat Coronavirus That Can Infect Humans: What You Need to Know