Bat Yam News:
ಒಂದೂವರೆ ವರ್ಷಗಳ ಕಾಲ ನಡೆದ ಯುದ್ದದ ಬಳಿಕ ಕದನ ವಿರಾಮಕ್ಕೆ ಹಮಾಸ್, ISRAEL ಒಪ್ಪಿದ್ದು, ಇದರ ಭಾಗವಾಗಿ ಹಸ್ತಾಂತರ ಪ್ರಕ್ರಿಯೆ ಕೂಡ ಮುಂದುವರೆದಿದೆ. ನಿನ್ನೆಯಷ್ಟೇ ಮಗು ಸೇರಿದಂತೆ ನಾಲ್ವರ ಮೃತ ಶರೀರವನ್ನು ಹಮಾಸ್ ISRAELಗೆ ಹಸ್ತಾಂತರಿಸಿದ್ದು, ಈ ದುಃಖದಲ್ಲಿದ್ದ ISRAELನಲ್ಲಿ ಈ ದುರ್ಘಟನೆ ನಡೆದಿದೆ.ಹಮಾಸ್ ಜೊತೆ ಕದನ ವಿರಾಮ ಒಪ್ಪಂದ ನಡೆಸಿರುವ ISRAELನಲ್ಲಿ ಮತ್ತೊಂದು ವಿಧ್ವಂಸಕ ಕೃತ್ಯ ವರದಿಯಾಗಿದೆ.
ರಸ್ತೆ ಬದಿ ನಿಂತಿದ್ದ ಮೂರು ಬಸ್ಗಳು ಸರಣಿ ಸ್ಫೋಟಕ್ಕೆ ಒಳಗಾಗಿದ್ದು, ಇದೊಂದು ಉಗ್ರಗಾಮಿ ಕೃತ್ಯ ಎಂದು ಶಂಕಿಸಲಾಗಿದೆ. ಅದೃಷ್ಟವಶಾತ್, ಯಾವುದೇ ಹಾನಿಯಾಗಿಲ್ಲ.ಟೆಲ್ ಅವೀವ್ನ ಹೊರವಲಯದ ಬ್ಯಾಟ್ ಯಾಮ್ನ ಪಾರ್ಕಿಂಗ್ ಸ್ಥಳದಲ್ಲಿ ಈ ಅನಾಹುತ ಸಂಭವಿಸಿದೆ. ಈ ವೇಳೆ ಸುಟ್ಟುಹೋದ ಮೆಟಲ್ ಶೆಲ್ಗಳು ಲಭ್ಯವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಅನಾಹುತವಾಗಿಲ್ಲ. ಬಸ್ಗಳು ಸಂಚಾರ ಮುಗಿಸಿ ಇಲ್ಲಿ ನಿಂತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ನಗರದ ಮೇಯರ್ ಟ್ಜ್ವಿಕಾ ಬ್ರೋಟ್ ತಿಳಿಸಿದ್ದಾರೆ.
ಸ್ಫೋಟಗೊಂಡ ಎರಡು ಬಸ್ನಲ್ಲಿ ಸ್ಫೋಟಕಗಳು ಕಂಡು ಬಂದಿವೆ. ಆದರೆ, ಇವು ಸ್ಪೋಟಗೊಂಡಿಲ್ಲ. ಈ ವೇಳೆ ಐದು ಬಾಂಬ್ಗಳು ಪತ್ತೆಯಾಗಿದ್ದು, ಅವೆಲ್ಲ ಒಂದೇ ರೀತಿಯಲ್ಲಿದ್ದು, ಇದಕ್ಕೆ ಟೈಮರ್ ಅಳವಡಿಕೆ ಮಾಡಲಾಗಿದೆ. ಇವುಗಳನ್ನು ನಿಷ್ಕ್ರಿಯ ಮಾಡಲಾಗಿದೆ ಎಂದು ಪೊಲೀಸ್ ವಕ್ತಾರ ಅಸಿ ಅಹರೋನಿ ಚಾನೆಲ್ 13 ಟಿವಿಗೆ ತಿಳಿಸಿದ್ದಾರೆ.ಈ ಘಟನೆ ಓರ್ವನ ಕೃತ್ಯವೇ ಅಥವಾ ಅನೇಕರ ಸೇರಿ ಎಸಗಿರುವ ಕೃತ್ಯವೇ ಎಂಬುದನ್ನು ನಾವು ಪತ್ತೆ ಮಾಡಬೇಕಿದೆ. ಇಲ್ಲಿಗೆ ಬಳಕೆಯಾದ ಸ್ಪೋಟಕಗಳು ವೆಸ್ಟ್ ಬ್ಯಾಂಕ್ಗೆ ಬಳಕೆಯಾದ ಸ್ಪೋಟಕವಾಗಿದೆ ಎಂದು ಪೊಲೀಸ್ ವಕ್ತಾರ ಹೈಮ್ ಸರ್ಗ್ರೋಫ್ ತಿಳಿಸಿದ್ದಾರೆ.
2023 ಅಕ್ಟೋಬರ್ 7ರಂದು ಹಮಾಸ್ ISRAEL ಮೇಲೆ ಯುದ್ದ ಆರಂಭಿಸಿದಾಗಿನಿಂದ ISRAEL ಮಿಲಿಟರಿ ವೆಸ್ಟ್ ಬ್ಯಾಂಕ್ ಮೇಲೆ ಪದೇ ಪದೇ ದಾಳಿ ನಡೆಸಿದೆ. ಸ್ಫೋಟದ ಬೆನ್ನಲ್ಲೇ ಬಸ್ ಕಂಪನಿ ತನ್ನ ಇತರ ಬಸ್ಗಳ ತಪಾಸಣೆ ನಡೆಸಿ, ಸಂಚಾರ ಮುಂದುವರೆಸುವಂತೆ ತಿಳಿಸಿದೆ. ಘಟನೆ ಮಾಹಿತಿ ಪಡೆದ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕಚೇರಿ, ಮಿಲಿಟರಿ ಕಾರ್ಯದರ್ಶಿಗಳಿಂದ ಘಟನೆ ಕುರಿತು ಮಾಹಿತಿ ಪಡೆಯುತ್ತಿದ್ದು, ಈ ಕುರಿತು ಆಂತರಿಕ ಭದ್ರತಾ ಸಂಸ್ಥೆ ಶಿನ್ ಬೆಟ್ ತನಿಖೆಗೆ ಮುಂದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿರಿ :Ajith Kumar Faces Second Major Accident in a Month as His Car Flips Over During Race