WhatsApp Group
Join Now
Telegram Group
Join Now
Instagram Account
Follow Now
Facebook Page
Follow Now
Nargis marriage news:
ಸೂಪರ್ ಹಿಟ್ ರಾಕ್ಸ್ಟಾರ್, ಮೆ ತೇರಾ ಹೀರೋ ಮತ್ತು ಹೌಸ್ಫುಲ್ 3 ಚಿತ್ರಗಳಿಗೆ ಹೆಸರುವಾಸಿಯಾಗಿರುವ ಬಾಲಿವುಡ್ ನಟಿ ನರ್ಗಿಸ್ ಫಕ್ರಿ (Nargis Fakhri), ಅಮೆರಿಕ ಮೂಲದ ಉದ್ಯಮಿ ಟೋನಿ ಬೀಗ್ (Tony Beig) ಅವರೊಂದಿಗೆ ದಾಂಪತ್ಯ ಜೀವನ ಶುರು ಮಾಡಿದ್ದಾರೆ ಎಂದು ವರದಿಯಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ಕಳೆದ ವಾರಾಂತ್ಯದಲ್ಲಿ ಕ್ಯಾಲಿಫೋರ್ನಿಯಾದ ಐಷಾರಾಮಿ ಹೋಟೆಲ್ನಲ್ಲಿ ನಡೆದ ಆತ್ಮೀಯ ಸಮಾರಂಭದಲ್ಲಿ ಮದುವೆಯಾಗಿದ್ದಾರೆ.
ವಿವಾಹವನ್ನು ಗೌಪ್ಯವಾಗಿಡಲಾಗಿದ್ದರೂ, ಸುಳಿವುಗಳು ಆನ್ಲೈನ್ನಲ್ಲಿ ಹರಿದಾಡುತ್ತಿವೆ. ಇದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.ಕಳೆದ ವಾರಾಂತ್ಯದಲ್ಲಿ ಕ್ಯಾಲಿಫೋರ್ನಿಯಾದ ಐಷಾರಾಮಿ ಹೋಟೆಲ್ನಲ್ಲಿ ನಡೆದ ಆತ್ಮೀಯ ಸಮಾರಂಭದಲ್ಲಿ ಬಾಲಿವುಡ್ ನಟಿ NARGIS ಫಕ್ರಿ ಹಾಗೂ ಖ್ಯಾತ ಉದ್ಯಮಿ ಟೋನಿ ಬೀಗ್ ಮದುವೆಯಾಗಿದ್ದಾರೆ.
Who is Tony Begg?ಸಹೋದರ ಜಾನಿ ಬೀಗ್ ಟೆಲಿವಿಷನ್ ಪ್ರೊಡ್ಯೂಸರ್. ಟೋನಿ ಆಸ್ಟ್ರೇಲಿಯಾದ ಮೆಲ್ಬೋರ್ನ್ನಲ್ಲಿರುವ ವಿಕ್ಟೋರಿಯಾ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯಿಂದ ಬ್ಯುಸಿನೆಸ್, ಮ್ಯಾನೇಜ್ಮೆಂಟ್ ಆ್ಯಂಡ್ ಮಾರ್ಕೆಟಿಂಗ್ನಲ್ಲಿ ಎಂಬಿಎ ಪದವಿ ಪಡೆದಿದ್ದಾರೆ.
2005-06ರ ಸಂದರ್ಭ ಯುಎಸ್ ಮೂಲದ ಪ್ರಮುಖ ಬಟ್ಟೆ ಬ್ರ್ಯಾಂಡ್ ಅಲಾನಿಕ್ ಇಂಟರ್ನ್ಯಾಷನಲ್ನ ವ್ಯವಸ್ಥಾಪಕ ನಿರ್ದೇಶಕರಾಗಿ ಅವರ ವೃತ್ತಿಜೀವನ ಪ್ರಾರಂಭವಾಯಿತು.1984ರಲ್ಲಿ ಕಾಶ್ಮೀರದಲ್ಲಿ ಜನಿಸಿದ ಟೋನಿ, ಪ್ರತಿಷ್ಠಿತ ಕುಟುಂಬದಿಂದ ಬಂದವರು. ತಂದೆ ಶಕೀಲ್ ಅಹ್ಮದ್ ಬೀಗ್, ಹಿಂದೆ ಜಮ್ಮು ಮತ್ತು ಕಾಶ್ಮೀರದ ಡೆಪ್ಯೂಟಿ ಇನ್ಸ್ಪೆಕ್ಟರ್ ಜನರಲ್ ಆಗಿ ಸೇವೆ ಸಲ್ಲಿಸಿದ್ದಾರೆ.ಖ್ಯಾತ ಉದ್ಯಮಿ ಟೋನಿ ಬೀಗ್ ಡಿಯೋಜ್ ಗ್ರೂಪ್ನ ಅಧ್ಯಕ್ಷರು.
ಅಲಾನಿಕ್, 8ಹೆಲ್ತ್ ಮತ್ತು ಓಯಸಿಸ್ ಅಪರಲ್ ಸೇರಿದಂತೆ ಹಲವು ಉದ್ಯಮಗಳನ್ನು ನೋಡಿಕೊಳ್ಳುತ್ತಾರೆ. 2006ರಲ್ಲಿ ಅವರ ಉದ್ಯಮ ಪ್ರಯಾಣ ಪ್ರಾರಂಭವಾಯಿತು. ಅಂದಿನಿಂದ, ಗ್ಲೋಬಲ್ ಬ್ಯುಸಿನೆಸ್ ವರ್ಲ್ಡ್ನಲ್ಲಿ ಸಖತ್ ಸ್ಟ್ರಾಂಗ್ ಆಗಿ ಗುರುತಿಸಿಕೊಂಡಿದ್ದಾರೆ.ಭಾರತ, ಆಸ್ಟ್ರೇಲಿಯಾ ಮತ್ತು ಅಮೆರಿಕದಲ್ಲಿ ವಾಸಿಸಿರುವ ಟೋನಿ, ಜಾಗತಿಕ ವ್ಯವಹಾರದಲ್ಲಿ ಪ್ರಭಾವಶಾಲಿಯಾಗಿ ಗುರುತಿಸಿಕೊಂಡಿದ್ದಾರೆ. ಪ್ರೈವೆಸಿಗೆ ಹೆಚ್ಚು ಮಹತ್ವ ಕೊಡುತ್ತಾರಾದರೂ, ನರ್ಗಿಸ್ ಫಕ್ರಿ ಅವರೊಂದಿಗಿನ ಸಂಬಂಧದಿಂದ ಸದ್ಯ ಸಖತ್ ಸುದ್ದಿಯಾಗುತ್ತಿದ್ದಾರೆ.
Dating from 2021-Marriage in 2025: ರೆಡ್ಡಿಟ್ ಪೋಸ್ಟ್ ಒಂದರಲ್ಲಿ ಅವರ ಹೆಸರಿನ ಲೋಗೋವನ್ನು ಹೊಂದಿರುವ, ಸುಂದರವಾಗಿ ಅಲಂಕರಿಸಲ್ಪಟ್ಟ ವೆಡ್ಡಿಂಗ್ ಎಂಟ್ರೆಸ್ನ ಫೋಟೋವನ್ನು ಕಾಣಬಹುದು. ಅವರ ಹೆಸರಿನ ಮೊದಲಕ್ಷರಗಳಿಂದ ಅಲಂಕರಿಸಲ್ಪಟ್ಟ ವೆಡ್ಡಿಂಗ್ ಕೇಕ್ ಅನ್ನೂ ಕಾಣಬಹುದು.ನರ್ಗಿಸ್ ಹಾಗೂ ಟೋನಿ 2021ರ ಅಂತ್ಯದಿಂದ ಡೇಟಿಂಗ್ನಲ್ಲಿದ್ದರು ಎಂದು ವರದಿಯಾಗಿದೆ.
ಕಳೆದ ವಾರಾಂತ್ಯ ಅವರ ವಿವಾಹವು ಬಿಗಿ ಭದ್ರತೆಯಲ್ಲಿ ನಡೆದಿದೆ. ಆಪ್ತ ಸ್ನೇಹಿತರು ಮತ್ತು ಕುಟುಂಬದವರನ್ನು ಮಾತ್ರ ಆಹ್ವಾನಿಸಲಾಗಿತ್ತು. ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಯಿತು. ಆದಾಗ್ಯೂ, ಅವರ ವಿವಾಹದ ಕೆಲ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿವೆ.
Honeymoon in Switzerland: ಆದರೆ ದಂಪತಿ ಇನ್ಸ್ಟಾಗ್ರಾಮ್ನಲ್ಲಿ ಪ್ರವಾಸದ ಮುದ್ದಾದ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ಮದುವೆ ಸುತ್ತಲಿನ ಊಹಾಪೋಹಗಳಿಗೆ ತುಪ್ಪ ಸುರಿದಿದೆ.ನವ ದಂಪತಿಯೀಗ ಹನಿಮೂನ್ಗಾಗಿ ಸ್ವಿಟ್ಜರ್ಲ್ಯಾಂಡ್ನಲ್ಲಿದ್ದಾರೆ ಎಂದು ಹೇಳಲಾಗಿದೆ. ನವ ವಧು ನರ್ಗಿಸ್ ಇನ್ನೂ ಮದುವೆಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.