spot_img
spot_img

TATA STEALTH EDITION:ಟಾಟಾ ಸಫಾರಿಯ 27ನೇ ವರ್ಷಾಚರಣೆಗೆ ಮ್ಯಾಟ್ ಬ್ಲಾಕ್ ಸ್ಟೆಲ್ತ್ ಎಡಿಷನ್ ಬಿಡುಗಡೆ

spot_img
spot_img

Share post:

Hyderabad News:

TATA ಮೋಟಾರ್​ ಹ್ಯಾರಿಯರ್​ ಮತ್ತು ಸಫಾರಿ ಮಾಡೆಲ್​ ವಾಹನದ ಸೀಮಿತ ಆವೃತ್ತಿಯ ಸ್ಟೆಲ್ತ್​ ಎಡಿಷನ್ ಬಿಡುಗಡೆ ಮಾಡಿದ್ದು, ಡಾರ್ಕ್​ ಥೀಮ್​ನಲ್ಲಿ ಈ ಕಾರಿನ ವಿನ್ಯಾಸ ಮಾಡಲಾಗಿದೆ. ​ಈ ಸ್ಟೆಲ್ತ್​ ಎಡಿಷನ್​ನ ಮೊತ್ತೊಂದು ವಿಶೇಷ ಎಂದರೆ TATA ಸಫಾರಿಯ 27ನೇ ವರ್ಷದ ಸಂಭ್ರಮದಲ್ಲಿ ಬಿಡುಗಡೆ ಮಾಡಲಾಗಿದೆ.

TATA ಹ್ಯಾರಿಯರ್​ ಸ್ಟೆಲ್ತ್​ ಎಡಿಷನ್​ 25,09 ಲಕ್ಷದಿಂದ ಆರಂಭವಾದರೆ, TATA ಸಫಾರಿ ಸ್ಟೆಲ್ತ್​ ಎಡಿಷನ್​ 25.74 ಲಕ್ಷದಿಂದ ಪ್ರಾರಂಭವಾಗಲಿದೆ. ಈ ದರಗಳು ದೆಹಲಿಯ ಎಕ್ಸ್​ ಶೋರೂಂ ದರಗಳಾಗಿವೆ.ಎಸ್​ಯುವಿ ಪ್ರಿಯರಿಗೆ TATA ಮೋಟಾರ್ಸ್​ ಹೊಸ ಆವೃತ್ತಿ ವಾಹನಗಳನ್ನು ಬಿಡುಗಡೆ ಮಾಡಿದೆ. ಭಾರತದಲ್ಲಿ TATA ಹ್ಯಾರಿಯರ್​ ಮತ್ತು TATA ಸಫಾರಿ ಮಾಡೆಲ್​ಗಳಿಗಾಗಿ ಸ್ಟೆಲ್ತ್​​ ಎಡಿಷನ್​ನನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಸದ್ಯಕ್ಕೆ ಈ ವಾಹನ ಕೇವಲ 2,700 ಯುನಿಟ್​​ಗೆ ಸೀಮಿತವಾಗಿದೆ.

ಈ ಸೀಮಿತ ಆವೃತ್ತಿಯ ಮಾಡೆಲ್​ಗಳು ಸ್ಟೆಲ್ತ್ ಮ್ಯಾಟ್ ಬ್ಲ್ಯಾಕ್ ಫಿನಿಶ್ ಜೊತೆಗೆ ಅಪ್ಡೇಟೆಡ್​​ ಡಿಸೈನ್​ನಲ್ಲಿ ಲಭ್ಯವಿದೆ. ಇದಲ್ಲದೆ, ಸಫಾರಿ ಸ್ಟೆಲ್ತ್ ಆವೃತ್ತಿಯು 6- 7 ಸೀಟರ್ ಲಭ್ಯವಿದೆ.ಸೀಮಿತ ಆವೃತ್ತಿಯ ಈ ವಾಹನಗಳನ್ನು ಕಂಪನಿಯ ಅಧಿಕೃತ ವೆಬ್​ಸೈಟ್​ ಮೂಲಕ ಮಾತ್ರ ಬುಕ್​ ಮಾಡಬಹುದಾಗಿದೆ. ಭಾರತದಲ್ಲಿ ಗ್ರಾಹಕರು ತಮ್ಮ ಹತ್ತಿರದ TATA ಮೋಟಾರ್​ ಡೀಲರ್​ಶಿಪ್​​ಗೆ ಭೇಟಿ ನೀಡುವ ಮೂಲಕ ಬುಕ್ಕಿಂಗ್ ಮಾಡಬಹುದಾಗಿದೆ.

Stealth Edition Price and Booking:7 ಸೀಟರ್​ನ ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳು ಕ್ರಮವಾಗಿ ರೂ 25.74 ಲಕ್ಷ ಮತ್ತು ರೂ 27.14 ಲಕ್ಷ ರೂ. ಆಗಿದೆ. 6 ಸೀಟರ್​ ಮ್ಯಾನುವಲ್ ಟ್ರಾನ್ಸ್ಮಿಷನ್ ರೂಪಾಂತರದ ಬೆಲೆ ರೂ. 27.24 ಲಕ್ಷ ಆಗಿದೆ.ಮ್ಯಾನುಯಲ್​ TATA  ಹ್ಯಾರಿಯರ್​ ಸ್ಟೆಲ್ತ್​ ಎಡಿಷನ್​ ಬೆಲೆ ₹25.09 ಲಕ್ಷವಾಗಿದ್ದು, ಆಟೋಮೆಟಿಕ್​ ವಾಹನದ ಬೆಲೆ 26.49 ಲಕ್ಷವಾಗಿದೆ.

TATA ಸಫಾರಿ ಸ್ಟೆಲ್ತ್​ ಎಡಿಷನ್​ ಮೂರು ವೇರಿಯಂಟ್​ನಲ್ಲಿ ಲಭ್ಯವಿದೆ.

Tata Health Edition Design:ವಾಹನದ ಒಳಭಾಗದಲ್ಲಿ ಕಾರ್ಬನ್-ನಾಯ್ರ್ ಥೀಮ್‌ನಲ್ಲಿ ವೆಂಟಿಲೇಟೆಡ್​ ಸೀಟ್​ ಹೊಂದಿದೆ. ಹಾಗೇ​​ ಕಪ್ಪು ಲೆಥೆರೆಟ್ ಡ್ಯಾಶ್‌ಬೋರ್ಡ್ ಹೊಂದಿದೆ. TATA ಸಫಾರಿಯಲ್ಲಿ ಮಾತ್ರ ಎರಡನೇ ಸಾಲಿನ ಸೀಟ್​ನಲ್ಲಿ ಕೂಡ ವೆಂಟಿಲೇಟೆಡ್ ವ್ಯವಸ್ಥೆ ಇದೆ.ಟಾಟಾ ಸ್ಟೆಲ್ತ್ ಎಡಿಷನ್​ ಮ್ಯಾಟ್​ ಬ್ಲಾಕ್​ ಬಣ್ಣದ ಜೊತೆಗೆ ಆರ್​19 ಅಲೊಯ್​ ವ್ಹೀಲ್​ ಹೊಂದಿದ್ದು, ಸ್ಟೆಲ್ತ್​ ಲಾಂಛನ ಇದೆ. ಡಾರ್ಕ್​ ಥೀಮ್ ಬ್ಯಾಡ್ಜಿಂಗ್ ಮತ್ತು ಬ್ಲ್ಯಾಕ್ಡ್ ಔಟ್ ಫ್ರಂಟ್ ಗ್ರಿಲ್‌ನೊಂದಿಗೆ ಲಭ್ಯವಾಗಲಿದೆ.

Feature:ಸುರಕ್ಷಿತ ವಿಚಾರದಲ್ಲಿ 7 ಏರ್​ಬ್ಯಾಗ್​ ಹೊಂದಿದ್ದು, 17 ಕಾರ್ಯಾಚರಣೆಯ ಇಎಸ್​ಪಿ, 360 ಡಿಗ್ರಿ ಕ್ಯಾಮರಾ, ಟಿಪಿಎಂಎಸ್​ ಸೇರಿದಂತೆ ಬಹು ವಿಶೇಷತೆಗಳಿಂದ ಕೂಡಿದೆ.ಟಾಟಾ ಸ್ಟೆಲ್ತ್​ ಎಡಿಷನ್​ ಹ್ಯಾರಿಯರ್ ಮತ್ತು ಸಫಾರಿ ಸ್ಟಾಂಡರ್ಡ್​ ಫಿಯರ್​ಲೆಸ್​ ಪ್ಲಸ್​ ಮತ್ತು ಅಕಂಪ್ಲಿಶ್ಡ್​ ಪ್ಲಸ್​ ವೆರಿಯಂಟ್​ನಲ್ಲಿ ಲಭ್ಯವಿದೆ.

ಈ ಸೀಮಿತ ಆವೃತ್ತಿ ವಾಹನದಲ್ಲಿ 12.3 ಇಂಚ್​ ಹರ್ಮಾನ್​ ಟಚ್​ಸ್ಕ್ರೀನ್​ ಇನ್ಫೋಟೈನ್ಮೆಂಟ್​, 10 ಸ್ಪೀಕರ್​ ಜೆಬಿಎಲ್​ ಆಡಿಯೋ ಸಿಸ್ಟಂ ಜೊತೆಗೆ ಆಡಿಯೋವೊರ್ಕಸ್​​, 10.25 ಇಂಚ್​ ಡಿಜಿಟಲ್​ ಸಾಧನದ ಕ್ಲಸ್ಟರ್​, ವೈರಲೆಸ್​ ಚಾರ್ಜಿಂಗ್​ ಪ್ಯಾಡ್​, ಆರ್ಕೆಡ್​ ಆಪ್​ ಸ್ಟೋರ್​, ಅಲೆಕ್ಸಾ ಹೋಮ್​ ಟು ಕಾರ್, ಮ್ಯಾಪ್​ ಮೈ ಇಂಡಿಯಾ ನಾವಿಗೇಷನ್​, ಪನೊರಮಿಕ್​ ಸನ್​ರೂಫ್​, ಅಂಬಿಯೆಂಟ್​ ಲೈಟಿಂಗ್​ ಇದೆ.

ಕ್ರಯೊಟೆಕ್​ 2.0ಎಲ್​ ಬಿಎಸ್​6 ಫೇಸ್​2 ಟರ್ಬೊಚಾರ್ಜಡ್​​ ಎಂಜಿನ್​ ಹಾಗೂ 350ಎನ್​ ಟರ್ಕು ಹಾಗೂ 167.67 ಪಿಎಚ್​ಪಿ ಜನರೇಟೆಡ್​ ಔಟ್​ಪುಟ್​ ಹೊಂದಿದೆ. ಈ ಸೀಮಿತ ಆವೃತ್ತಿ ವಾಹನಗಳು 6 ಸ್ಪೀಡ್​ ಮ್ಯಾನುಯಲ್​ ಮತ್ತು ಆಟೋಮೆಟಿಕ್​ ಆಯ್ಕೆಯಲ್ಲೂ ಇವೆ.

 

ಇದನ್ನು ಓದಿರಿ :Aprilia Tuono 457 Streetfighter Launched In India: Check Price, Delivery Details, Features, And More

Ashok Jotawar
Ashok Jotawar
Hello, I am Ashok Jotawar, The journalist who would like to be being for the saying of truth! and I Am experienced in The field of Journalism. for last 5-6 years and I love saying the truth that to be a for good cause! and right now am owning the Company HSR News! before that I worked in so called named media houses..
spot_img

Related articles

MOTOROLA EDGE 60 FUSION – ಅದ್ಭುತವಾದ ಕ್ಯಾಮೆರಾ ಸೆಟಪ್, ವಾಟರ್ ಪ್ರೊಟೆಕ್ಷನ್ – ಮೊಟೊರೊಲಾದ ಹೊಸ ಫೋನ್ನ ಬೆಲೆ ಕೇವಲ ಇಷ್ಟೇ!

Motorola Edge 60 Fusion: ಬಹುನಿರೀಕ್ಷಿತ ' MOTOROLA EDGE 60 FUSION' ಕೊನೆಗೂ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದೆ. ಕಂಪನಿಯು ಇದನ್ನು ' MOTOROLA EDGE...

RASHMIKA MANDANNA – ‘ನಾನು ಹೈದರಾಬಾದ್ನವಳು’: ರಶ್ಮಿಕಾ ಮಂದಣ್ಣ ಹೇಳಿಕೆ ವಿಚಾರ; ಮುಂದುವರಿದ ಪರ – ವಿರೋಧ ಚರ್ಚೆ

'ನ್ಯಾಷನಲ್ ಕ್ರಶ್' ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ಜನಪ್ರಿಯ ನಟಿ RASHMIKA MANDANNA, ಭಾರತೀಯ ಚಿತ್ರರಂಗದಲ್ಲಿ ಮೋಡಿ ಮಾಡಿದ್ದಾರೆ. ತಮ್ಮ ನಟನಾ ಕೌಶಲ್ಯದಿಂದ ದೇಶಾದ್ಯಂತ ಅಭಿಮಾನಿಗಳ...

IPL SUBSCRIPTION PLANS – ಕೆಲವೇ ದಿನಗಳಲ್ಲಿ IPL ಹವಾ ಶುರು: ಈ ಕಂಪನಿಗಳ ಗ್ರಾಹಕರಿಗೆ ಅಗ್ಗದಲ್ಲಿ ಲಭ್ಯ!

JioHotstar Subscription: ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್‌ ಟೂರ್ನಿ ಮುಗೀತು. ಮುಂದಿನ ಕೆಲವೇ ದಿನಗಳಲ್ಲಿ ಐಪಿಎಲ್​ ಜಾತ್ರೆ ಆರಂಭವಾಗಲಿದೆ. ಇದಕ್ಕಾಗಿ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ತಮ್ಮ...

IPHONE 17 SERIES – ಐಫೋನ್ 17 ಸೀರಿಸ್ ಡಿಟೆಲ್ಸ್ ಲೀಕ್ – ಇದರ ಸ್ಪೆಷಾಲಿಟಿ ಏನ್ ಗೊತ್ತಾ?

iPhone 17 Series: ಟೆಕ್ ದೈತ್ಯ ಆಪಲ್ ತನ್ನ ಹೊಸ ಐಫೋನ್ ಸೀರಿಸ್​ ಅನ್ನು ಪ್ರತಿ ವರ್ಷ ಮಾರುಕಟ್ಟೆಗೆ ಪರಿಚಯಿಸುತ್ತದೆ. ಈ ಕ್ರಮದಲ್ಲಿ ಈ ವರ್ಷವೂ...